Get Updates
Get notified of breaking news, exclusive insights, and must-see stories!

ವಿಶ್ವಕಪ್ ಸೋಲಿನ ಬಳಿಕ ಕಿವೀಸ್ ಪ್ರವಾಸ, ರಾಹುಲ್ ಬದಲಿಗೆ ಲಕ್ಷ್ಮಣ್ ಕೋಚ್

ಅಡಿಲೇಡ್, ನ.11: ಟಿ20 ವಿಶ್ವಕಪ್ ಗೆಲ್ಲುವ ಕನಸು ಹೊತ್ತುಕೊಂಡು ಆಸ್ಟ್ರೇಲಿಯಾಕ್ಕೆ ತೆರಳಿದ್ದ ಟೀಂ ಇಂಡಿಯಾ ನಿರಾಶೆ ಮೂಡಿಸಿದೆ. ರೋಹಿತ್ ಶರ್ಮ ನೇತೃತ್ವದ ಬಳಗ ಸೆಮಿಫೈನಲ್ ಹಂತದಲ್ಲಿ ಮುಗ್ಗರಿಸಿದೆ. ಭಾರತ ವಿರುದ್ಧ ಗೆಲುವು ಸಾಧಿಸಿದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧ ಜಯ ದಾಖಲಿಸಿರುವ ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್ ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗಲಿವೆ.

ಇನ್ನು ವಿಶ್ವಕಪ್ ಪಂದ್ಯಾವಳಿಯಲ್ಲಿ ವೈಫಲ್ಯ ಕಂಡಿರುವ ಟೀಂ ಇಂಡಿಯಾ ತನ್ನ ಮುಂದಿನ ಸರಣಿಗೆ ಸಜ್ಜಾಗಲಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಮುಖ್ಯ ಕೋಚ್ ಬದಲಾವಣೆ ಮಾಡಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಣೆ ಹೊರಡಿಸಿದೆ. ಟೀಂ ಇಂಡಿಯಾದ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬದಲಿಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರು ನ್ಯೂಜಿಲೆಂಡ್ ಪ್ರವಾಸದಲ್ಲಿ ತಂಡದ ಜೊತೆಗಿರಲಿದ್ದಾರೆ.

Post T20 World Cup: Dravid rested for NZ tour, Laxman to coach India

ದ್ರಾವಿಡ್ ಹಾಗೂ ಕೋಚಿಂಗ್ ತಂಡಕ್ಕೆ ವಿಶ್ರಾಂತಿ
ಈ ಹಿಂದೆ ಕೂಡಾ ದ್ರಾವಿಡ್ ಬದಲಿಗೆ ಲಕ್ಷ್ಮಣ್ ಟೀಂ ಇಂಡಿಯಾದ ಕೋಚ್ ಸ್ಥಾನವನ್ನು ತುಂಬಿದ್ದರು. ಈಗ ನ್ಯೂಜಿಲೆಂಡ್ ವಿರುದ್ಧದ 6ಟಿ20ಐ ಪಂದ್ಯಗಳ ಸರಣಿಗೆ ಕೋಚ್ ಆಗಲಿದ್ದಾರೆ. ವೆಲ್ಲಿಂಗ್ಟನ್ ನಲ್ಲಿ ನವೆಂಬರ್ 18ರಂದು ಸರಣಿ ಆರಂಭವಾಗಲಿದೆ. ರಾಹುಲ್ ದ್ರಾವಿಡ್ ಅಲ್ಲದೆ ಅವರ ಜೊತೆಗಿನ ಸಹಾಯಕ ಕೋಚಿಂಗ್ ಸಿಬ್ಬಂದಿಗಳಿಗೂ ನ್ಯೂಜಿಲೆಂಡ್ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ಆರಂಭಿಕ ಆಟಗಾರ ಕೆಎಲ್ ರಾಹುಲ್, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಹಾರ್ದಿಕ್ ಪಾಂಡ್ಯ ನಾಯಕ

''ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ಲಕ್ಷ್ಮಣ್ ನೇತೃತ್ವದ ತಂಡ ಕಿವೀಸ್ ಪ್ರವಾಸದಲ್ಲಿ ಕೋಚಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದೆ. ವಿವಿಎಸ್ ಲಕ್ಷ್ಮಣ್(ಮುಖ್ಯ ಕೋಚ್), ಹೃಷಿಕೇಶ್ ಕಾನಿಟ್ಕರ್(ಬ್ಯಾಟಿಂಗ್) ಹಾಗೂ ಸಾಯಿರಾಜ್ ಬಹುತಲೆ (ಬೌಲಿಂಗ್) ತಂಡದ ಜೊತೆಗಿರಲಿದ್ದಾರೆ'' ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ. ಈ ಹಿಂದೆ ಜಿಂಬಾಬ್ವೆ, ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗಳಲ್ಲೂ ಲಕ್ಷ್ಮಣ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.

Post T20 World Cup: Dravid rested for NZ tour, Laxman to coach India

ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಸರಣಿಯಲ್ಲಿ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಹಾಗೂ ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗೆ ನಾಯಕರಾಗಿದ್ದಾರೆ. ಕಿವೀಸ್ ಪ್ರವಾಸಕ್ಕೆ ಅಲಭ್ಯರಾಗಿರುವ ರೋಹಿತ್ ಅವರು ಮುಂಬರುವ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಮರಳಲಿದ್ದಾರೆ. ಡಿಸೆಂಬರ್ 4ರಿಂದ ಮೂರು ಏಕದಿನ ಪಂದ್ಯಗಳು ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಲಿದ್ದು, ಕೊಹ್ಲಿ ಸೇರಿದಂತೆ ಇತರೆ ಹಿರಿಯ ಆಟಗಾರರು ಆ ಸರಣಿಗೆ ಲಭ್ಯರಾಗಲಿದ್ದಾರೆ.

ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಟೀಂ ಇಂಡಿಯಾದ ಬಹುತೇಕ ಆಟಗಾರರು ಭಾರತಕ್ಕೆ ಮರಳುತ್ತಿದ್ದಾರೆ. ಕೊಹ್ಲಿ ಈಗಾಗಲೇ ಅಡಿಲೇಡ್ ತೊರೆದಿದ್ದಾರೆ, ರಾಹುಲ್ ಹಾಗೂ ರೋಹಿತ್ ಸೇರಿದಂತೆ ಇನ್ನಿತರ ಆಟಗಾರರು ಸಿಡ್ನಿ, ಪರ್ತ್ ಮೂಲಕ ಭಾರತಕ್ಕೆ ಮರಳಲಿದ್ದಾರೆ.

Post T20 World Cup: Dravid rested for NZ tour, Laxman to coach India

ನ್ಯೂಜಿಲೆಂಡ್ ಸರಣಿಗೆ ಟೀಂ ಇಂಡಿಯಾ ಟಿ20 ತಂಡ:
ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ(ನಾಯಕ), ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್, ರಿಷಬ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅರ್ಶ್ ದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಜ್, ಉಮ್ರಾನ್ ಮಲೀಕ್, ಯುಜುವೇಂದ್ರ ಚಾಹಲ್.

Post T20 World Cup: Dravid rested for NZ tour, Laxman to coach India

ಏಕದಿನ ಸರಣಿಗೆ ಟೀಂ ಇಂಡಿಯಾ:
ಶಿಖರ್ ಧವನ್ (ನಾಯಕ), ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ಉಪ ನಾಯಕ), ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಾಬಾಜ್ ಅಹ್ಮದ್, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಶ್ ದೀಪ್ ಸಿಂಗ್, ದೀಪಕ್ ಚಾಹರ್, ಕುಲದೀಪ್ ಸೇನ್, ಉಮ್ರಾನ್ ಮಲೀಕ್. (ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+