ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಸಿಐ ಪ್ರಯೋಜಕತ್ವ ವರ್ಗಾವಣೆಗೆ ಪೇಟಿಎಂ ಮನವಿ

|
Google Oneindia Kannada News

ನವದೆಹಲಿ, ಜುಲೈ,22: ಭಾರತೀಯ ಕ್ರಿಕೆಟ್‌ ಆಟಗಾರರ ಜೆರ್ಸಿ ಪಾಯೋಜಕತ್ವ ಪಡೆದಿರುವ ಬೈಜುಸ್‌ 82.21 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ಕೌನ್ಸಿಲ್‌ ಸಭೆಯಲ್ಲಿ ಪ್ರಸ್ತಾಪವಾದ ನಂತರ ಟೈಟಲ್‌ ಪ್ರಯೋಜಕತ್ವದ ಹಕ್ಕುಗಳನ್ನು ಬೇರೆ ಕಂಪೆನಿಗೆ ವರ್ಗಾಯಿಸುವಂತೆ ಬಿಸಿಸಿಐಗೆ ಪೇಟಿಎಂ ಸಂಸ್ಥೆ ಮನವಿ ಮಾಡಿಕೊಂಡಿದೆ.

ಭಾರತದಲ್ಲಿ 2023ರ ಏಕದಿನ ವಿಶ್ವಕಪ್‌ನ ಅಂತ್ಯದವರೆಗೆ ಬೈಜುಸ್‌ ಕಂಪನಿ ಮತ್ತು ಬಿಸಿಸಿಐ ತಮ್ಮ ಪಾಲುದಾರಿಕೆಯನ್ನು ವಿಸ್ತರಿಸಲು ಏಪ್ರಿಲ್‌ನಲ್ಲಿ ಮಾತ್ರ ಒಪ್ಪಿಕೊಂಡಿದ್ದವು. ಈ ವಿಷಯವನ್ನು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಗುರುವಾರ ಚರ್ಚಿಸಿದೆ.

 ಕ್ರಿಕೆಟ್ ನಮ್ಮ ದೇಶದ ಆಟವಲ್ಲ: ಬಾಂಬೆ ಹೈ ಕೋರ್ಟ್ ಹೀಗಂದಿದ್ಯಾಕೆ ಗೊತ್ತಾ? ಕ್ರಿಕೆಟ್ ನಮ್ಮ ದೇಶದ ಆಟವಲ್ಲ: ಬಾಂಬೆ ಹೈ ಕೋರ್ಟ್ ಹೀಗಂದಿದ್ಯಾಕೆ ಗೊತ್ತಾ?

ಇಂದಿನವರೆಗೂ ಬೈಜು ಅವರು ಮಂಡಳಿಗೆ 86.21 ಕೋಟಿ ರೂ. ಬಾಕಿ ಪಾವತಿಸಬೇಕಿದೆ ಎಂದು ಬಿಸಿಸಿಐ ಮೂಲಗಳು ಸಭೆಯ ನಂತರ ಪಿಟಿಐಗೆ ತಿಳಿಸಿದೆ. ಆದರೆ ಬೈಜು ವಕ್ತಾರರು, ನಾವು ಬಿಸಿಸಿಐ ಜೊತೆಗಿನ ಒಪ್ಪಂದವನ್ನು ವಿಸ್ತರಿಸಿದ್ದೇವೆ. ಆದರೆ ಇನ್ನೂ ಸಹಿ ಮಾಡಿಲ್ಲ. ಒಪ್ಪಂದದ ಸಹಿ ಮಾಡಿದ ನಂತರ, ಒಪ್ಪಂದದ ಪಾವತಿ ನಿಯಮಗಳ ಪ್ರಕಾರ ಪಾವತಿಗಳು ನಡೆಯುತ್ತವೆ. ಆದ್ದರಿಂದ ನಮ್ಮಿಂದ ಯಾವುದೇ ಬಾಕಿ ಉಳಿದಿಲ್ಲ ಎಂದು ತಿಳಿಸಿದ್ದಾರೆ.

Paytm Wants to Exit as Title Sponsor of Indian Cricket Team

2019ರಲ್ಲಿ ಮೊಬೈಲ್ ತಯಾರಕ ಒಪ್ಪೋ ಬೈಜು ಸಂಸ್ಥೆಗೆ ಪ್ರಾಯೋಜಕತ್ವದ ಹಕ್ಕುಗಳನ್ನು ವರ್ಗಾಯಿಸಿದಾಗ ಬೈಜು ಮೊದಲ ಬಾರಿಗೆ ಕಣಕ್ಕೆ ಬಂದಿತು. ಫಿನ್‌ಟೆಕ್ ಕಂಪನಿ ಪೇಟಿಎಂ ತಮ್ಮ ಇಂಡಿಯಾ ಹೋಮ್ ಕ್ರಿಕೆಟ್ ಟೈಟಲ್‌ ಹಕ್ಕುಗಳನ್ನು ಮಾಸ್ಟರ್‌ಕಾರ್ಡ್‌ಗೆ ವರ್ಗಾಯಿಸಲು ಬಿಸಿಸಿಐಗೆ ವಿನಂತಿಸಿದೆ ಎಂದು ತಿಳಿದು ಬಂದಿದೆ.

Breaking; ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್, ಫೈನಲ್‌ಗೆ ಚೋಪ್ರಾ Breaking; ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್, ಫೈನಲ್‌ಗೆ ಚೋಪ್ರಾ

ಪೇಟಿಎಂ ಮತ್ತು ಬಿಸಿಸಿಐ ನಡುವಿನ ಪ್ರಸ್ತುತ ಒಪ್ಪಂದವು ಸೆಪ್ಟೆಂಬರ್ 2019 ರಿಂದ ಮಾರ್ಚ್ 31, 2023 ರವರೆಗೆ ಮುಂದುವರಿಯುತ್ತದೆ. ಆದಾಗ್ಯೂ, ಎರಡು ಸಂಸ್ಥೆಗಳ ನಡುವಿನ ದೀರ್ಘಕಾಲದ ಸಂಬಂಧವನ್ನು ಪರಿಗಣಿಸಿ ಬಿಸಿಸಿಐ ಪೇಟಿಎಂನ ವಿನಂತಿಯನ್ನು ಪರಿಗಣಿಸುತ್ತದೆ ಎಂಬ ಸುದ್ದಿ ಇದೆ.

English summary
Paytm has requested the BCCI to transfer the title sponsorship rights to another company after it was proposed in the council meeting that Baijus, which has sponsored the jerseys of the Indian cricket players, has arrears of 82.21 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X