ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟದ ಮೈದಾನದಲ್ಲಿ ಆಡಲು ಶುಲ್ಕ ನಿಗದಿ: ಇಲ್ಲಿದೆ ದರ ಪಟ್ಟಿ

|
Google Oneindia Kannada News

ಬೆಂಗಳೂರು, ಸೆ. 20: ಜಿಲ್ಲೆ ಮತ್ತು ತಾಲೂಕು ಕ್ರೀಡಾಂಗಣಗಳಲ್ಲಿ ಆಟದ ಸೌಲಭ್ಯ ಬಳಕೆಗೆ ಕ್ರೀಡಾಪಟುಗಳು ಹಣ ತೆರಬೇಕಾಗುತ್ತದೆ. ಸ್ಟೇಡಿಯಂಗಳಲ್ಲಿ ಸೌಲಭ್ಯಗಳ ಬಳಕೆಗೆ ರಾಜ್ಯ ಸರಕಾರ ದರಪಟ್ಟಿ ನಿಗದಿ ಮಾಡಿದೆ. ಅದರಂತೆ ಕ್ರಿಕೆಟ್ ಆಡುವ ಕ್ರೀಡಾಪಟುಗಳು ಒಂದು ತಾಸಿಗೆ ಹತ್ತು ರೂ ಶುಲ್ಕ ಪಾವತಿಸಬೇಕಾಗುತ್ತದೆ. ಹೀಗೆ ವಿವಿಧ ಕ್ರೀಡೆಗಳಿಗೆ ಪ್ರತ್ಯೇಕ ಶುಲ್ಕ ನಿಗದಿ ಮಾಡಿ ರಾಜ್ಯ ಸರಕಾರ ಪೇ ಅಂಡ್ ಪ್ಲೇ ಯೋಜನೆಗೆ ಚಾಲನೆ ನೀಡಿದೆ.

ರಾಜ್ಯ ಸರಕಾರದ ಈ ಪೇ ಅಂಡ್ ಪ್ಲೇ ವ್ಯವಸ್ಥೆಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಕ್ರಮದಿಂದ ಕ್ರೀಡಾಪಟುಗಳು ಕ್ರೀಡಾಂಗಣದಿಂದ ದೂರ ಉಳಿಯುತ್ತಾರೆ. ಸರಕಾರ ಕೂಡಲೇ ಈ ವ್ಯವಸ್ಥೆಯನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.

ಇದೇ ವೇಳೆ, ರಾಜ್ಯ ಸರಕಾರ ಈ ಪೇ ಅಂಡ್ ಪ್ಲೇ ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿದೆ. ಈ ರೀತಿಯ ಶುಲ್ಕ ಪಾವತಿ ವ್ಯವಸ್ಥೆಯಿಂದ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಬಹುದು. ಕ್ರೀಡಾಂಗಣ ದುಸ್ಥಿತಿ ತಲುಪದಂತೆ ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂಬುದು ರಾಜ್ಯ ಸರಕಾರದ ವಾದ.

Pay and Play System at District and Taluk Stadiums in Karnataka, Here is Price List

ಗುರುತಿನ ಚೀಟಿ: ಕ್ರೀಡಾಂಗಣವನ್ನು ಬಳಸುವವರಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಇದಕ್ಕೆ 50 ರೂ ಇರಲಿದೆ. ಒಂದು ವರ್ಷದವರೆಗೂ ಗುರುತಿನ ಚೀಟಿ ಮಾನ್ಯ ಇರುತ್ತದೆ. ಗುರುತಿನ ಚೀಟಿ ಇದ್ದರೆ ಕ್ರೀಡಾಂಗಣಕ್ಕೆ ಪ್ರವೇಶ ಸಿಗುತ್ತದೆ. ಕ್ರೀಡಾಂಗಣದಲ್ಲಿ ಆಡಲು ಗಂಟೆಗೆ ಇಷ್ಟು ಎಂದು ಶುಲ್ಕ ಪಾವತಿಸಬೇಕಾಗುತ್ತದೆ. ಒಂದೊಂದು ಕ್ರೀಡೆಗೂ ಪ್ರತ್ಯೇಕ ಶುಲ್ಕ ನಿಗದಿ ಮಾಡಲಾಗಿದೆ.

ಶುಲ್ಕ ವ್ಯತ್ಯಾಸ: ತಾಸಿನ ದರ, ಮಾಸಿಕ ಶುಲ್ಕ, ವಾರ್ಷಿಕ ಶುಲ್ಕದ ಆಯ್ಕೆಗಳಿವೆ. ಜಿಲ್ಲಾ ಕ್ರೀಡಾಂಗಣಗಳ ಸೌಲಭ್ಯಕ್ಕೆ ಪ್ರತ್ಯೇಕ ದರ ಇದೆ. ತಾಲೂಕು ಕ್ರೀಡಾಂಗಣದಲ್ಲಿ ಶುಲ್ಕ ಅರ್ಧದಷ್ಟು ಮಾತ್ರ ಇರಲಿದೆ. 16 ವರ್ಷದೊಳಗಿನ ವಯೋಮಾನದವರಿಗೆ ಮತ್ತು 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಶೇ. 50ರಷ್ಟು ಮಾತ್ರ ಶುಲ್ಕ ಇರುತ್ತದೆ.

ದರಗಳ ಪಟ್ಟಿ:

ಜಿಲ್ಲಾ ಕ್ರೀಡಾಂಗಣಗಳಲ್ಲಿ ವಿವಿಧ ಕ್ರೀಡೆಗಳಿಗೆ ನಿಗದಿಯಾಗಿರುವ ಶುಲ್ಕ ಈ ಕೆಳಕಾಣಿಸಿದಂತಿದೆ.
1) ಈಜು
ತಾಸಿಗೆ: 100 ರೂ
ತಿಂಗಳಿಗೆ: 1200 ರೂ
ವರ್ಷಕ್ಕೆ: 12000 ರೂ

Pay and Play System at District and Taluk Stadiums in Karnataka, Here is Price List

2) ಟೆನಿಸ್
ತಾಸಿಗೆ: 40 ರೂ
ತಿಂಗಳಿಗೆ: 700
ವರ್ಷಕ್ಕೆ: 7000

3) ಸ್ಕ್ವಾಷ್
ತಾಸಿಗೆ: 30 ರೂ
ತಿಂಗಳಿಗೆ: 600 ರೂ
ವರ್ಷಕ್ಕೆ: 6000 ರೂ

4) ಜಿಮ್ (ಪುರುಷರಿಗೆ)
ತಾಸಿಗೆ: 30 ರೂ
ತಿಂಗಳಿಗೆ: 600 ರೂ
ವರ್ಷಕ್ಕೆ: 6000 ರೂ

5) ಜಿಮ್ (ಮಹಿಳೆಯರಿಗೆ)
ತಾಸಿಗೆ: 20 ರೂ
ತಿಂಗಳಿಗೆ: 400 ರೂ
ವರ್ಷಕ್ಕೆ: 400 ರೂ

6) ಬ್ಯಾಡ್ಮಿಂಟನ್
ತಾಸಿಗೆ: 50 ರೂ
ತಿಂಗಳಿಗೆ: 500 ರೂ
ವರ್ಷಕ್ಕೆ: 5000 ರೂ

7) ಟೇಬಲ್ ಟೆನಿಸ್
ತಾಸಿಗೆ: 25 ರೂ
ತಿಂಗಳಿಗೆ: 500 ರೂ
ವರ್ಷಕ್ಕೆ: 5000 ರೂ

8) ಅಥ್ಲೆಟಿಕ್ಸ್
ತಾಸಿಗೆ: 30 ರೂ
ತಿಂಗಳಿಗೆ: 600 ರೂ
ವರ್ಷಕ್ಕೆ: 6000 ರೂ

9) ಹಾಕಿ
ತಾಸಿಗೆ: 10 ರೂ
ತಿಂಗಳಿಗೆ: 100 ರೂ
ವರ್ಷಕ್ಕೆ: 1000 ರೂ

10) ಬ್ಯಾಸ್ಕೆಟ್‌ಬಾಲ್
ತಾಸಿಗೆ: 15 ರೂ
ತಿಂಗಳಿಗೆ: 300 ರೂ
ವರ್ಷಕ್ಕೆ: 3000 ರೂ

11) ಫುಟ್ಬಾಲ್
ತಾಸಿಗೆ: 10 ರೂ
ತಿಂಗಳಿಗೆ: 200 ರೂ
ವರ್ಷಕ್ಕೆ: 2000 ರೂ

12) ಕ್ರಿಕೆಟ್
ತಾಸಿಗೆ: 10 ರೂ
ತಿಂಗಳಿಗೆ: 200 ರೂ
ವರ್ಷಕ್ಕೆ: 2000 ರೂ

13) ಹ್ಯಾಂಡ್ ಬಾಲ್
ತಾಸಿಗೆ: 10 ರೂ
ತಿಂಗಳಿಗೆ: 200 ರೂ
ವರ್ಷಕ್ಕೆ: 2000 ರೂ

14) ವಾಲಿಬಾಲ್
ತಾಸಿಗೆ: 20 ರೂ
ತಿಂಗಳಿಗೆ: 300 ರೂ
ವರ್ಷಕ್ಕೆ: 3000 ರೂ

15) ಕಬಡ್ಡಿ
ತಾಸಿಗೆ: 10 ರೂ
ತಿಂಗಳಿಗೆ: 100 ರೂ
ವರ್ಷಕ್ಕೆ: 1000 ರೂ

16) ಖೋ-ಖೋ
ತಾಸಿಗೆ: 10 ರೂ
ತಿಂಗಳಿಗೆ: 100 ರೂ
ವರ್ಷಕ್ಕೆ: 1000 ರೂ

17) ಜೂಡೋ
ತಾಸಿಗೆ: 10 ರೂ
ತಿಂಗಳಿಗೆ: 100 ರೂ
ವರ್ಷಕ್ಕೆ: 1000 ರೂ

18) ಸ್ಕೇಟಿಂಗ್
ತಾಸಿಗೆ: 15 ರೂ
ತಿಂಗಳಿಗೆ: 300 ರೂ
ವರ್ಷಕ್ಕೆ: 3000 ರೂ

19) ಜಾಗಿಂಗ್
ತಾಸಿಗೆ: 5 ರೂ
ತಿಂಗಳಿಗೆ: 100 ರೂ
ವರ್ಷಕ್ಕೆ: 500 ರೂ

ಈ ಮೇಲಿನವು ಜಿಲ್ಲಾ ಕ್ರೀಡಾಂಗಣಗಳನ್ನು ಬಳಸಲು ಕ್ರೀಡಾಪಟುಗಳಿಗೆ ನಿಗದಿ ಮಾಡಿರುವ ಶುಲ್ಕಗಳಾಗಿವೆ. ತಾಲೂಕು ಕ್ರೀಡಾಂಗಣಗಳಾದರೆ ಶೇ. 50ರಷ್ಟು ದರ ಕಡಿಮೆ ಮಾಡಲಾಗಿದೆ. ಹಿರಿಯ ನಾಗರಿಕರು ಮತ್ತು ಶಾಲಾ ಹಂತದ ಮಕ್ಕಳಿಗೂ ಶೇ. 50ರಷ್ಟು ಶುಲ್ಕ ರಿಯಾಯಿತಿ ಇರುತ್ತದೆ.

ತರಬೇತುದಾರರು ಮತ್ತು ಕ್ರೀಡಾ ಉಪಕರಣಗಳನ್ನು ಬಳಸಿಕೊಂಡು ಅಭ್ಯಾಸ ಮಾಡುವ ಕ್ರೀಡಾಪಟುಗಳಿಗೆ ಶೇ. 50ರಷ್ಟು ಹೆಚ್ಚು ಶುಲ್ಕ ಇರುತ್ತದೆ. ಉದಾಹರಣೆಗೆ, ಈಜು ಅಭ್ಯಾಸಕ್ಕೆ ಮಾಸಿಕ 1200 ರೂ ಇದೆ. ತರಬೇತುದಾರರು ಮತ್ತು ಇತರ ಉಪಕರಣ ಬಳಸಿ ಈಜನ್ನು ಅಭ್ಯಾಸ ಮಾಡಿದರೆ ತಿಂಗಳ ಶುಲ್ಕ 1800 ರೂ ಇರುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Karnataka government has introduced Pay and Play system at district and taluk sports stadiums across the state. Those who want to use the stadium, need to pay certain fees, that is decided by authorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X