ನಮ್ಮವರೇ ಟೀಕಿಸುವಾಗ ಕೊಹ್ಲಿ ಬೆಂಬಲಕ್ಕೆ ನಿಂತ ಪಾಕಿಸ್ತಾನ ಬ್ಯಾಟರ್ ಬಾಬರ್ ಅಜಮ್

ಭಾರತ-ಪಾಕಿಸ್ತಾನ ಅಂದರೆ ಒಂಥರಾ ದುಷ್ಮನ್ ಅನ್ನೋ ತರಾನೆ ನೋಡ್ತಾರೆ. ರಾಜಕೀಯ ಕಾರಣಗಳಿಂದ ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯಗಳು ಆಯೋಜನೆಯಾಗುತ್ತಿಲ್ಲ. ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ನೋಡುವುದು ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬವೇ ಸರಿ.

ರಾಜಕೀಯ ಬಿಕ್ಕಟ್ಟು ಏನೇ ಇದ್ದರು, ವಿಶ್ವಕಪ್, ಏಷ್ಯಾ ಕಪ್, ಚಾಂಪಿಯನ್ಸ್ ಟ್ರೋಫಿಯಂತ ಪಂದ್ಯಾವಳಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾದಾಗ ಆಟಗಾರರು ಮಾತ್ರ ಕ್ರೀಡಾಸ್ಫೂರ್ತಿ ಮೆರೆಯುತ್ತಾರೆ. ಒಬ್ಬರನ್ನೊಬ್ಬರು ಪ್ರೋತ್ಸಾಹಿಸುವ ಗುಣಗಳಿಂದಲೇ ಎರಡೂ ತಂಡಗಳ ಆಟಗಾರರು ಕ್ರೀಡಾಭಿಮಾನಿಗಳ ಮನಗೆದ್ದ ಸಾಕಷ್ಟು ಉದಾಹರಣೆಗಳಿವೆ.

ಮತ್ತೊಂದೆಡೆ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಮತ್ತು ವಿರಾಟ್ ಕೊಹ್ಲಿ ನಡುವೆ ಯಾರು ಶ್ರೇಷ್ಠ ಎನ್ನುವ ವಾದವಂತೂ ಎರಡೂ ದೇಶಗಳ ಕ್ರೀಡಾಭಿಮಾನಿಗಳಿಂದ ಹಿಡಿದು, ವಿಶ್ಲೇಷಕರವರೆಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಸದ್ಯ ಬಾಬರ್ ಅಜಮ್ ಅತ್ಯುತ್ತಮ ಫಾರ್ಮ್‌ನಲ್ಲಿ ಮಿಂಚುತ್ತಿದ್ದರೆ, ವಿರಾಟ್ ಕೊಹ್ಲಿ ರನ್ ಬರ ಎದುರಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಹಲವರು ಟೀಕೆ ವ್ಯಕ್ತಪಡಿಸುತ್ತಿರುವಾಗ, ಹಲವರು ಅವರಿಗೆ ಬೆಂಬಲ ನೀಡಿದ್ದಾರೆ. ಈಗ ಬಾಬರ್ ಅಜಮ್ ಕೂಡ ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.

 ಕೊಹ್ಲಿ ಜೊತೆಗಿನ ಫೋಟೊ ಹಂಚಿಕೊಂಡ ಬಾಬರ್

ಕೊಹ್ಲಿ ಜೊತೆಗಿನ ಫೋಟೊ ಹಂಚಿಕೊಂಡ ಬಾಬರ್

27 ವರ್ಷದ ಬಾಬರ್, ಪ್ರಸ್ತುತ ಏಕದಿನ ಮತ್ತು ಟಿ20 ಮಾದರಿ ಕ್ರಿಕೆಟ್‌ನಲ್ಲಿ ವಿಶ್ವದ ನಂಬರ್ ಒನ್ ಬ್ಯಾಟರ್ ಆಗಿದ್ದು, ವಿರಾಟ್‌ಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಜೊತೆ ಇರುವ ಫೋಟೋವೊಂದನ್ನು ಪೋಸ್ಟ್ ಮಾಡಿರುವ ಬಾಬರ್, "ಈ ಕಷ್ಟದ ಸಮಯ ಕಳೆದುಹೋಗುತ್ತದೆ, ದೃಢವಾಗಿರಿ." ಎಂದು ಟ್ವೀಟ್ ಮಾಡಿದ್ದು ವಿರಾಟ್ ಕೊಹ್ಲಿಯನ್ನು ಟ್ಯಾಗ್ ಮಾಡಿದ್ದಾರೆ.

ಕಪಿಲ್ ದೇವ್, ವಿರೇಂದ್ರ ಸೆಹ್ವಾಗ್, ದ್ಯಾನಿಶ್ ಕನೇರಿಯಾ, ಮೈಕೆಲ್ ವಾನ್ ವಿರಾಟ್ ಕೊಹ್ಲಿ ಪ್ರದರ್ಶನದ ವಿರುದ್ಧ ಟೀಕೆ ಮಾಡುತ್ತಿದ್ದರೆ. ರೋಹಿತ್ ಶರ್ಮಾ, ಸುನಿಲ್ ಗವಾಸ್ಕರ್ ಈಗ ಬಾಬರ್ ಅಜಮ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.

 ಕೊಹ್ಲಿ ಕೊನೆಯ ಶತಕ ಗಳಿಸಿದ್ದು 31 ತಿಂಗಳ ಹಿಂದೆ

ಕೊಹ್ಲಿ ಕೊನೆಯ ಶತಕ ಗಳಿಸಿದ್ದು 31 ತಿಂಗಳ ಹಿಂದೆ

ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಈಗ ಟೀಂ ಇಂಡಿಯಾದ ಚಿಂತೆಗೆ ಕಾರಣವಾಗಿದೆ. ಕಳೆದ 31 ತಿಂಗಳಿನಿಂದ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸಲು ವಿಫಲರಾಗಿದ್ದಾರೆ. 2019ರ ನವೆಂಬರ್‌ನಲ್ಲಿ ಅವರು ಕೋಲ್ಕತ್ತಾದ ಈಡನ್‌ಗಾರ್ಡನ್ಸ್‌ನಲ್ಲಿ ಬಾಂಗ್ಲಾ ವಿರುದ್ಧ ನಡೆದ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದರು.

ರನ್ ಮೆಷಿನ್‌ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ರನ್ ಗಳಿಸಲು ಇತ್ತೀಚಿನ ದಿನಗಳಲ್ಲಿ ಪರದಾಡುತ್ತಿದ್ದಾರೆ. ಏಕದಿನ, ಟೆಸ್ಟ್, ಟಿ20, ಐಪಿಎಲ್‌ನಲ್ಲೂ ಅವರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇದೆಲ್ಲದರ ನಡುವೆಯೇ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ವಿಶ್ರಾಂತಿಯ ನೆಪದಲ್ಲಿ ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ಕೈಬಿಡಲಾಗಿದೆ.

 ಐಪಿಎಲ್‌ನಲ್ಲೂ ಮಿಂಚದ ವಿರಾಟ್ ಕೊಹ್ಲಿ

ಐಪಿಎಲ್‌ನಲ್ಲೂ ಮಿಂಚದ ವಿರಾಟ್ ಕೊಹ್ಲಿ

ಭಾರತ ತಂಡದ ನಾಯಕತ್ವ ತ್ಯಜಿಸಿದ ನಂತರ, ಆರ್‌ಸಿಬಿ ನಾಯಕತ್ವನ ಸ್ಥಾನವನ್ನೂ ತ್ಯಜಿಸಿ ಬ್ಯಾಟಿಂಗ್ ಕಡೆ ಗಮನ ಹರಿಸುವುದಾಗಿ ಕೊಹ್ಲಿ ಹೇಳಿದ್ದರು. ನಾಯಕತ್ವದ ಹೊರೆಯನ್ನು ಇಳಿಸಿದ ಕೊಹ್ಲಿ ಈ ಬಾರಿ ಐಪಿಎಲ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚುತ್ತಾರೆ ಎಂದು ಅಭಿಮಾನಿಗಳು ಆಶಿಸಿದ್ದರು.

ವಿರಾಟ್‌ ಕೊಹ್ಲಿ ಬ್ಯಾಟಿಂಗ್ ಲಯ ಕಂಡುಕೊಳ್ಳುತ್ತಾರೆ ಎನ್ನುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಮೂರು ಬಾರಿ ಗೋಲ್ಡನ್‌ ಡಕ್‌ಗೆ ಔಟಾದ ಕೊಹ್ಲಿ, ಲೀಗ್‌ನಲ್ಲಿ ಎರಡು ಅರ್ಧ ಶತಕಗಳನ್ನು ಮಾತ್ರ ಗಳಿಸಿದರು. ನಾಯಕತ್ವ ತೊರೆದಾಗಿಂದ ಕೊಹ್ಲಿ ಮತ್ತಷ್ಟು ರನ್ ಬರ ಎದುರಿಸುತ್ತಿದ್ದಾರೆ.

 ಇಂಗ್ಲೆಂಡ್ ಸರಣಿಯಲ್ಲೂ ಕೊಹ್ಲಿ ವೈಫಲ್ಯ

ಇಂಗ್ಲೆಂಡ್ ಸರಣಿಯಲ್ಲೂ ಕೊಹ್ಲಿ ವೈಫಲ್ಯ

ಭಾರತ ಆಡಿದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆಡಿರಲಿಲ್ಲ. ಈಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ ಟೆಸ್ಟ್‌, ಟಿ20, ಏಕದಿನ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡಿಲ್ಲದಿರುವುದು ಅವರನ್ನು ಮತ್ತಷ್ಟು ಒತ್ತಡಕ್ಕೆ ತಳ್ಳಿದೆ. ಇದುವರೆಗೆ ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ ವಿರಾಟ್‌ ಕೊಹ್ಲಿ, ಅವರು 11 (19), 20 (40), 1(3), 11(6), 16(25) ರನ್ ಮಾತ್ರ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ (ಜುಲೈ 14) ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ ಕೇವಲ 16 ರನ್‌ಗಳಿಗೆ ಔಟಾದರು, ಭಾರತ 100 ರನ್ ಅಂತರದಿಂದ ಸೋತಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+