ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ರಾಷ್ಟ್ರೀಯ ದಾಖಲೆ ಬರೆದ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ

|
Google Oneindia Kannada News

ನವದೆಹಲಿ, ಜೂನ್ 15: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ದಾಖಲೆ ಬರೆದಿದ್ದ ಜಾವೆಲಿನ್ ಥ್ರೋ ಕ್ರೀಡಾಪಟು ನೀರಜ್ ಚೋಪ್ರಾ ಇದೀಗ ಹೊಸ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಫಿನ್‌ಲೆಂಡ್ ದೇಶದ ಪಾವೋ ನುರ್ಮಿ ಗೇಮ್ಸ್ ಕೂಟದಲ್ಲಿ 89.30 ಮೀಟರ್ ದೂರಕ್ಕೆ ಜಾವೆಲಿನ್ (ಭರ್ಜಿ) ಎಸೆದು ಹಿಂದೆ ತಾವೇ ಸ್ಥಾಪಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ನೀರಜ್ 88.07 ಮೀಟರ್ ದೂರಕ್ಕೆ ಎಸೆದು ದಾಖಲೆ ಬರೆದಿದ್ದರು.

ಫಿನ್ಲೆಂಡ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ರಾಷ್ಟ್ರೀಯ ದಾಖಲೆ ಮುರಿದರೂ ಚಿನ್ನದ ಪದಕ ಗೆಲ್ಲಲಾಗಲಿಲ್ಲ. ತಮ್ಮ ಈ ಸಾಧನೆಗೆ ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಈ ಕ್ರೀಡಾಕೂಟದಲ್ಲಿ ಫಿನ್ಲೆಂಡ್ ದೇಶದ ಸ್ಥಳೀಯ ಜಾವೆಲಿನ್ ಪಟು ಓಲಿವರ್ ಹೆಲಂದರ್ 89.83 ಮೀ ದೂರಕ್ಕೆ ಭರ್ಜಿ ಎಸೆದು ಮೊದಲ ಸ್ಥಾನ ಪಡೆದರು.

ಐಪಿಎಲ್ ಮಾಧ್ಯಮ ಹಕ್ಕು ಸ್ಟಾರ್, ವಯಾಕಾಮ್ 18, ಟೈಮ್ಸ್ ಇಂಟರ್‌ನಟ್‌ ಪಾಲು: 48,390 ಕೋಟಿ ರೂ.ಗೆ ಮಾರಾಟಐಪಿಎಲ್ ಮಾಧ್ಯಮ ಹಕ್ಕು ಸ್ಟಾರ್, ವಯಾಕಾಮ್ 18, ಟೈಮ್ಸ್ ಇಂಟರ್‌ನಟ್‌ ಪಾಲು: 48,390 ಕೋಟಿ ರೂ.ಗೆ ಮಾರಾಟ

ಕಳೆದ ವರ್ಷದ ಟೋಕಿಯೋ ಒಲಿಂಪಿಕ್ಸ್ ಬಳಿಕ ನೀರಜ್ ಚೋಪ್ರಾ ಪಾಲ್ಗೊಂಡ ಮೊದಲ ಕ್ರೀಡಾಕೂಟ ಇದು ಎಂಬುದು ಗಮನಾರ್ಹ. 2021, ಆಗಸ್ಟ್ 7ರಂದು ಅವರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ 87.58 ಮೀಟರ್ ದೂರಕ್ಕೆ ಭರ್ಜಿ ಎಸೆದು ಐತಿಹಾಸಿಕ ಸ್ವರ್ಣ ಸಂಪಾದಿಸಿದ್ದರು.

Olympics Gold Winner Neeraj Chopra Breaks His Own National Record

ಪಾವೊ ನುರ್ಮಿ ಗೇಮ್ಸ್‌ನಲ್ಲಿ 90 ಮೀಟರ್ ದೂರಕ್ಕೆ ಭರ್ಜಿ ಎಸೆದವರಿಗೆ ಫೋರ್ಡ್‌ನ ಒಂದು ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಸಂಘಟಕರು ಘೋಷಣೆ ಮಾಡಿದ್ದರು. ಯಾರೂ ಕೂಡ ಆ ಸಾಧನೆ ಮಾಡಲಾಗಲಿಲ್ಲ.

90 ಮೀಟರ್ ದೂರದ ಸಂಕಲ್ಪ
ಫಿನ್‌ಲೆಂಡ್‌ನ ಪಾವೊ ನುರ್ಮಿ ಕ್ರೀಡಾಕೂಟಕ್ಕೆ ಮುನ್ನ ವಿಶ್ವದ ಪ್ರಮುಖ ಜಾವೆಲಿನ್ ಪಟುಗಳು ವಿವಿಧ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟಗಳಲ್ಲಿ 90 ಮೀಟರ್‌ಗೂ ಹೆಚ್ಚು ದೂರಕ್ಕೆ ಜಾವೆಲಿನ್ ಎಸೆದು ಬಲಪ್ರದರ್ಶನ ತೋರಿದ್ಧಾರೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಚೋಪ್ರಾ 90 ಮೀಟರ್ ಗಡಿ ಮುಟ್ಟುವ ಮಾನಸಿಕ ಒತ್ತಡಕ್ಕೆ ಸಿಲುಕಲಿಲ್ಲ. ಆದರೂ ಅವರು 90 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಸಂಪಲ್ಪ ತೋಡಿಕೊಂಡಿದ್ದರು.

ಮುಸ್ಲಿಂ ಸಮುದಾಯವಲ್ಲ, ಭಾರತವನ್ನು ಪ್ರತಿನಿಧಿಸುತ್ತೇನೆ: ಬಾಕ್ಸರ್ ನಿಖತ್ ಜರೀನ್ಮುಸ್ಲಿಂ ಸಮುದಾಯವಲ್ಲ, ಭಾರತವನ್ನು ಪ್ರತಿನಿಧಿಸುತ್ತೇನೆ: ಬಾಕ್ಸರ್ ನಿಖತ್ ಜರೀನ್

"ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ತೋರುವುದು ಮುಖ್ಯ. ಬೇರೆಯವರು ಏನು ದಾಖಲೆ ಮಾಡಿದ್ದಾರೆ ಎಂದು ತಲೆಕೆಡಿಸಿಕೊಳ್ಳುವುದಿಲ್ಲ. ಇಷ್ಟೇ ದೂರ ಎಸೆಯಬೇಕೆಂಬ ಒತ್ತಡ ಹಾಕಿಕೊಳ್ಳುವುದಿಲ್ಲ. 90 ಮೀಟರ್ ದೂರಕ್ಕೆ ಭರ್ಜಿ ಎಸೆಯುವುದು ನನ್ನ ಕನಸಾಗಿದೆ. ಯಾವುದಾದರೂ ಟೂರ್ನಿಯಲ್ಲಿ ನಾನು ಆ ಸಾಧನೆ ಮಾಡುತ್ತೇನೆ" ಎಂದು ನೀರಜ್ ಚೋಪ್ರಾ ತಮ್ಮ ತರಬೇತಿ ವೇಳೆ ಹೇಳಿಕೊಂಡಿದ್ದರು.

Olympics Gold Winner Neeraj Chopra Breaks His Own National Record

ಜಾಲಿ ಜಾವೆಲಿನ್ ಥ್ರೋ ವಿಶ್ವಚಾಂಪಿಯನ್ ಆಂಡರ್ಸನ್ ಪೀಟರ್ಸ್ ಮತ್ತು ಟೋಕಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಜಾಕುಬ್ ವಾದ್ಲೆಚ್ ಅವರು ಕಳೆದ ತಿಂಗಳು ದೋಹಾದಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಕ್ರಮವಾಗಿ 93.07 ಮೀಟರ್ ಮತ್ತು 90.88 ಮೀಟರ್ ದೂರ ಜಾವೆಲಿನ್ ಎಸೆದಿದ್ದರು. ಕುತೂಹಲವೆಂದರೆ ದೋಹಾದಲ್ಲಿ 93 ಮೀಟರ್ ದೂರ ಜಾವೆಲಿನ್ ಎಸೆದು ಗಮನ ಸೆಳೆದಿದ್ದ ಗ್ರೆನಾಡ ದೇಶದ ಆಂಡರ್ಸನ್ ಪೀಟರ್ಸ್ ಅವರಿ ಫಿನ್‌ಲೆಂಡ್‌ನ ಕೂಟದಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ವಾತಾವರಣ ಮುಖ್ಯ:
ಜಾವೆಲಿನ್ ಪಟುಗಳು ಒಂದೇ ಸೀಸನ್‌ನಲ್ಲಿ ತೀರಾ ಭಿನ್ನವಾದ ಸಾಧನೆಗಳನ್ನು ಮಾಡುವುದು ನಿಮ್ಮ ಗಮನ ಸೆಳೆದಿರಬಹುದು. ಫಿನ್‌ಲೆಂಡ್‌ನ ಪಾವೋ ನುರ್ಮಿ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಓಲಿವರ್ ಹೆಲಂದರ್, ಇದಕ್ಕೆ ಮುನ್ನ ಈ ಸೀಸನ್‌ನಲ್ಲಿ ಅವರದ್ದು ಅತ್ಯುತ್ತಮ ಸಾಧನೆ ಎಂದರೆ 80 ಮೀಟರ್ ಆಗಿತ್ತು. ಆದರೆ, ಚಿನ್ನ ಗೆದ್ದರು. ದೋಹಾದಲ್ಲಿ 93 ಮೀಟರ್ ಎಸೆದಿದ್ದ ಪೀಟರ್ಸ್ ಕೇವಲ 88 ಮೀಟರ್ ದೂರ ಮಾತ್ರ ಎಸೆಯಲು ಶಕ್ಯರಾಗಿದ್ದರು.

ಈ ಬಗ್ಗೆ ವಾಸ್ತವ ಬಿಚ್ಚಿಡುವ 24 ವರ್ಷದ ನೀರಜ್ ಚೋಪ್ರಾ, "ಸ್ಪರ್ಧೆ ಹೆಚ್ಚುತ್ತಾ ಹೋಗುತ್ತಿರುವುದು ನನಗೆ ಗೊತ್ತು. ಆದರೆ, ಸ್ಪರ್ಧೆಯ ದಿನ ಇರುವ ಹವಾಮಾನ ಮತ್ತಿತರ ವಾತಾವರಣ ಹೇಗಿರುತ್ತೆ, ನಾವು ಅದಕ್ಕೆ ಹೇಗೆ ಹೊಂದಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಆ ದಿನದ ಸಾಧನೆ ಅವಲಂಬಿತವಾಗಿರುತ್ತದೆ. ಬೇರೆಯವರ ದಾಖಲೆ ಮುರಿಯುವ ಯೋಚನೆ ನನ್ನಲ್ಲಿ ಇರುವುದಿಲ್ಲ. ಅಂದು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸಾಧನೆ ತೋರುವುದು ನನಗೆ ಮುಖ್ಯ" ಎಂದು ಹೇಳುತ್ತಾರೆ.

Recommended Video

ವಿರಾಟ್ ಕೊಹ್ಲಿ ಮನಸ್ಸನ್ನು ಗೆದ್ರೆ ಟೀಂ ಇಂಡಿಯಾ ಹಾಗೂ RCB ತಂಡದಲ್ಲಿ ಸ್ಥಾನ ಸಿಗುತ್ತೆ! | Oneindia Kannada

ಒಲಿಂಪಿಕ್ಸ್ ಬಳಿಕ ಅಮೆರಿಕ ಮತ್ತು ಟರ್ಕಿ ದೇಶಗಳಲ್ಲಿ ತರಬೇತಿ ಪಡೆದಿದ್ದ ನೀರಜ್ ಚೋಪ್ರಾ ಇದೀಗ ಫಿನ್ಲೆಂಡ್ ದೇಶದಲ್ಲಿ ಟ್ರೈನಿಂಗ್ ಮುಂದುವರಿಸಿದ್ದಾರೆ. ಇದೇ ಶನಿವಾರ (ಜೂನ್ 18) ಅವರು ಮತ್ತೊಂದು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೂನ್ 30ರಂದು ಡೈಮಂಡ್ ಲೀಗ್‌ನ ಸ್ಟಾಕ್‌ಹಾಮ್ ಲೆಗ್ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
India's Javelin thrower Neeraj Chopra Breaks his national record by throwing 89.30 metres at the Paavo Nurmi Games in Finland.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X