Olympics 2024: ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನಿಶಾಂತ್ ದೇವ್
ಈ ವರ್ಷ ಕ್ರೀಡಾ ವರ್ಷ. ಒಂದರ ಬೆನ್ನಲ್ಲೆ ಒಂದು ಕ್ರೀಡಾ ಚಟುವಟಿಕೆಗಳು ನಡೆಯುತ್ತವೆ. ಈಗ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಟಿ20 ವಿಶ್ವಕಪ್ ನಡೆಯುತ್ತಿದೆ. ಇದಾದ ಬಳಿಕ ಜುಲೈನಲ್ಲಿ ಪ್ಯರೀಸ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟಗಳು ಆರಂಭವಾಗಲಿವೆ.
ಭಾರತದ ಕ್ರೀಡಾ ಪಟುಗಳು ಭರ್ಜರಿ ಪ್ರದರ್ಶನ ನೀಡಿ ಒಲಿಂಪಿಕ್ಸ್‌ಗೆ ಕ್ವಾಲಿಫೈ ಆಗುತ್ತಿದ್ದಾರೆ. ಈ ಸಾಲಿಗೆ ಭಾರತದ ಸ್ಟಾರ್ ಬಾಕ್ಸರ್ ನಿಶಾಂತ್ ದೇವ್ ಸೇರಿದ್ದಾರೆ. ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ವಿಶ್ವ ಒಲಿಂಪಿಕ್ ಬಾಕ್ಸಿಂಗ್ ಅರ್ಹತಾ ಟೂರ್ನಿಯ ಸೆಮಿಫೈನಲ್‌ಗೆ ತಲುಪುವ ಮೂಲಕ ನಿಶಾಂತ್ ಭಾರತದ ಪರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಇವರು 71 ಕೆ.ಜಿ ವಿಭಾಗದಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಎಷ್ಟು ಜನ ಕ್ವಾಲಿಫೈ ಆಗಿದ್ದಾರೆ?
ಭಾರತದ ನಾಲ್ಕನೇ ಆಟಗಾರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿದ್ದಾರೆ. ಇದಕ್ಕೂ ಮುನ್ನ ಲೋವ್ಲಿನಾ ಬೊರ್ಗೊಹೈನ್ (ಮಹಿಳೆಯರು 75 ಕೆಜಿ), ನಿಖತ್ ಜರೀನ್ (ಮಹಿಳೆಯರು 50 ಕೆಜಿ) ಮತ್ತು ಪ್ರೀತಿ ಪವಾರ್ (ಮಹಿಳೆಯರು 54 ಕೆಜಿ) ಕಳೆದ ವರ್ಷವೇ ಏಷ್ಯನ್ ಗೇಮ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ಕೋಟಾವನ್ನು ಭದ್ರಪಡಿಸಿದ್ದರು.
ಮೆಗಾ ಈವೆಂಟ್‌ಗೆ ಸ್ಥಾನ ಪಡೆದ ಭಾರತದ ಮೊದಲ ಪುರುಷ ಬಾಕ್ಸರ್ ಆಗಿದ್ದಾರೆ. ಹಿಂದಿನ ಅರ್ಹತಾ ಪಂದ್ಯಗಳಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನ ಕೋಟಾವನ್ನು ಕಳೆದುಕೊಂಡಿದ್ದ ನಿಶಾಂತ್ ದೇವ್ ಈ ಬಾರಿ ಅರ್ಹತಾ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ನಲ್ಲಿ ಮೊಲ್ಡೊವಾದ ವಾಸಿಲ್ ಸೆಬೊಟರಿ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ತಮ್ಮ ಕೋಟಾವನ್ನು ಭದ್ರಪಡಿಸಿಕೊಂಡರು.
ಇನ್ನು ಎರಡು ಸ್ಥಾನ ಪಡೆಯುವ ಅವಕಾಶ
ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಇನ್ನೂ 2 ಕೋಟಾಗಳನ್ನು ಪಡೆಯಲು ಅವಕಾಶವಿದೆ, ಇದರಲ್ಲಿ ಮಹಿಳೆಯರ 66 ಕೆಜಿ ವಿಭಾಗದಲ್ಲಿ ಅರುಂಧತಿ ಚೌಧರಿ ಮತ್ತು ಪುರುಷರ 51 ಕೆಜಿ ವಿಭಾಗದಲ್ಲಿ ಅಮಿತ್ ಪಂಗಲ್ ಎರಡನೇ ಕ್ವಾಲಿಫೈಯರ್‌ನಲ್ಲಿ ತಮ್ಮ ಪಂದ್ಯಗಳನ್ನು ಆಡಲಿದ್ದಾರೆ, ಇದರಲ್ಲಿ ಎಲ್ಲರ ಕಣ್ಣುಗಳು ಖಂಡಿತವಾಗಿ ಈ ಆಟಗಾರರ ಮೇಲೆ ಇರುತ್ತದೆ.
ಆದರೆ 60 ಕೆಜಿ ವಿಭಾಗದಲ್ಲಿ ಅಂಕುಶಿತಾ ಬೊರೊ ಸ್ವೀಡನ್‌ನ ಆಟಗಾರ್ತಿ ವಿರುದ್ಧ 2-3 ಅಂತರದಲ್ಲಿ ಸೋಲನುಭವಿಸಿ ನಿರಾಸೆ ಹೊಂದಿದ್ದಾರೆ. ಇದರಲ್ಲಿ ಅವರು ಒಲಿಂಪಿಕ್ ಕೋಟಾ ಪಡೆಯುವ ಅವಕಾಶವನ್ನು ಕಳೆದುಕೊಂಡರು.












Click it and Unblock the Notifications