Get Updates
Get notified of breaking news, exclusive insights, and must-see stories!

ಸೆಲ್ಫಿಗಾಗಿ ಬಂದ ಸಿಬ್ಬಂದಿಯನ್ನು ತಳ್ಳಿದ ಗಾಯಕ್ವಾಡ್‌: ಆಟಿಟ್ಯೂಡ್ ಒಳ್ಳೆಯದಲ್ಲ ಅಂದ ಫ್ಯಾನ್ಸ್

ಬೆಂಗಳೂರು, ಜೂನ್ 21: ಟೀಮ್ ಇಂಡಿಯಾದಲ್ಲಿ ಈಗಷ್ಟೇ ಅವಕಾಶ ಪಡೆಯುತ್ತಿರುವ ಆರಂಭಿಕ ಆಟಗಾರ ಋತುರಾಜ್​ ಗಾಯಕ್ವಾಡ್ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಸಿಬ್ಬಂದಿಯನ್ನು ಅವಮಾನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಯುವ ಕ್ರಿಕೆಟಿಗನ ಈ ವರ್ತನೆಯನ್ನು ಸರಿಯಾದದ್ದಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.

ಭಾನುವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಪಂದ್ಯ ಮಳೆಯಿಂದ ರದ್ದಾಗುವ ಮುನ್ನ ಋತುರಾಜ್​ ಗಾಯಕ್ವಾಡ್​ ಬ್ಯಾಟಿಂಗ್​ ಡಗ್​ಔಟ್​ನಲ್ಲಿ ಕುಳಿತಿದ್ದರು. ಈ ವೇಳೆ ಸಿಬ್ಬಂದಿಯೊಬ್ಬ ಅವರ ಬಂದು ಗಾಯಕ್ವಾಡ್​ ಜೊತೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಈ ವೇಳೆ ಗಾಯಕ್ವಾಡ್‌ ದೂರ ಸರಿಯುವಂತೆ ಸೂಚಿಸಿದ್ದಾರೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ಪಂದ್ಯ ನಡೆಯುವುದಕ್ಕಾಗಿ ಮೈದಾನದ ಸಿಬ್ಬಂದಿ ಮಳೆಯ ಮಧ್ಯೆಯೂ ಶ್ರಮಿಸಿದ್ದಾರೆ. ಅಂತಹ ವ್ಯಕ್ತಿ ಒಂದು ಸೆಲ್ಫಿ ಕೇಳಲು ಬಂದರೆ ನಿರಾಕರಿಸಿದ್ದಲ್ಲದೆ, ತಳ್ಳಿ ಅವಮಾನಿಸಿದ್ದಕ್ಕೆ ಆಟಗಾರನ ವಿರುದ್ಧ ಟ್ವಿಟರ್‌ನಲ್ಲಿ ಇಂತಹ ದುರಹಂಕಾರ ಒಳ್ಳೆಯದಲ್ಲ ಎಂದು ಕಿಡಿಕಾರಿದ್ದಾರೆ.

Netizens slam Indian Opener Ruturaj Gaikwad for his disrespectful behavior with groundsman

"ಋತುರಾಜ್‌ , ಮೈದಾನ ಸಿಬ್ಬಂದಿಗಳು ರಿಯಲ್ ಹೀರೋಸ್‌, ಅವರ ವಿರುದ್ಧ ನಿಮ್ಮ ನಡೆ ಸ್ವೀಕಾರಾರ್ಹವಲ್ಲ, ನಿಮ್ಮ ಈ ನಾಚಿಕೆಗೇಡಿನ ವರ್ತನೆ ಸಹಿಸಲಾಗುವುದಿಲ್ಲ. ತಂಡದಲ್ಲಿರುವ ಇತರ ಆಟಗಾರರಿಂದ ಕ್ರಿಕೆಟ್‌ನ ಕಾಣದ ಹೀರೋಗಳನ್ನು ಹೇಗೆ ಗೌರವಿಸಬೇಕು ಎಂದು ತಿಳಿದುಕೊಳ್ಳಿ" ಎಂದು ಟ್ವಿಟರ್‌ನಲ್ಲಿ ಅಭಿಮಾನಿಯೊಬ್ಬರು ಧೋನಿ ಮತ್ತು ರೋಹಿತ್ ಶರ್ಮಾ ಮೈದಾನದ ಸಿಬ್ಬಂದಿಯೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ವಿಕಿ ಶಿಂದೆ ಎಂಬ ಟ್ವಿಟರ್ ಬಳಕೆ ದಾರ, ಋತುರಾಜ್ ಗಾಯಕ್ವಾಡ್‌ ಮೈದಾನದ ಸಿಬ್ಬಂದಿಯಗೆ ಅಗೌರವ ತೋರಿದ್ದಾರೆ. ಇಂತಹ ಅಹಂಕಾರ ಮತ್ತು ವರ್ತನೆ ತುಂಬಾ ಕೆಟ್ಟದ್ದು. ಮೊದಲು ನೀವು ಜನರಿಗೆ ಹೇಗೆ ಗೌರವ ಕೊಡಬೇಕೆಂದು ಕಲಿಯಿರಿ ಎಂದು ಬರೆದುಕೊಂಡಿದ್ದಾರೆ.

ಕೆಲವು ಮಂದಿ ಭಾರತೀಯ ಕ್ರಿಕೆಟಿಗನ ಪರವಾಗಿಯೂ ಮಾತನಾಡಿದ್ದಾರೆ. ಬಯೋಬಬಲ್‌ ಇದ್ದಿದ್ದರಿಂದ ಗಾಯಕ್ವಾಡ್‌ ಈ ರೀತಿ ನಡೆದುಕೊಂಡಿರಬಹುದು ಎಂದು ಟ್ವೀಟ್ ಮಾಡಿಕೊಂಡಿದ್ದಾರೆ. ಆದರೆ ಈ ಸರಣಿಯಲ್ಲಿ ಬಯೋಬಬಲ್‌ ಇರಲಿಲ್ಲವೆಂದು ತಿಳಿದುಬಂದಿದೆ.

ಇನ್ನು ಈ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಜಯ ಸಾಧಿಸಿದರೆ, ನಂತರದ ಎರಡು ಪಂದ್ಯಗಳಲ್ಲಿ ಅದ್ಭುತವಾಗಿ ತಿರುಗಿ ಬಿದ್ದು 2-2ಕ್ಕೆ ತಂದು ನಿಲ್ಲಿಸಿತ್ತು. ಆದರೆ ಸರಣಿ ಗೆಲ್ಲಲು ನಿರ್ಣಾಯಕವಾಗಿದ್ದ ಪಂದ್ಯದ ವರುಣನ ಅವಕೃಪೆಗೆ ಒಳಗಾಗಿ ರದ್ಧಾಯಿತು. 2-2ರಲ್ಲಿ ಸರಣಿಯನ್ನು ಎರಡು ತಂಡಗಳು ಹಂಚಿಕೊಂಡವು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+