ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿನಿಂದ ನ್ಯಾಷನಲ್ ಗೇಮ್ಸ್ 2022- 7 ಸಾವಿರ ಕ್ರೀಡಾಪಟುಗಳ ಆಟ

|
Google Oneindia Kannada News

ಅಹ್ಮದಾಬಾದ್, ಸೆ. 29: ಇಂದಿನಿಂದ 12 ದಿನ ಕಾಲ ರಾಷ್ಟ್ರೀಯ ಕ್ರೀಡಾಕೂಟ ಸದ್ದು ಮಾಡಲಿದೆ. ಗುಜರಾತ್‌ನಲ್ಲಿ 36ನೇ ನ್ಯಾಷನಲ್ ಗೇಮ್ಸ್ ಇಂದು ಗುರುವಾರ ಸಂಜೆ ಉದ್ಘಾಟನೆಯಾಗುತ್ತಿದೆ. ಈಗಾಗಲೇ ಕೆಲ ಕ್ರೀಡೆಗಳ ಆಟಗಳು ಚಾಲ್ತಿಯಲ್ಲಿದ್ದರೂ ಇಂದು ನರೇಂದ್ರ ಮೋದಿ ಅಧಿಕೃತವಾಗಿ ಆರಂಭ ಎಂದು ಘೋಷಿಸಲಿದ್ದಾರೆ.

ಎಂಟು ಕೇಂದ್ರಾಡಳಿತ ಪ್ರದೇಶಗಳು ಸೇರಿ 36 ರಾಜ್ಯಗಳಿಂದ 7 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಮಹಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕದಿಂದ 421 ಕ್ರೀಡಾಪಟುಗಳು ಪದಕ ಜಯಿಸಲು ಗುಜರಾತ್‌ನಲ್ಲಿದ್ದಾರೆ.

ನ್ಯಾಷನಲ್ ಗೇಮ್ಸ್ ಉದ್ಘಾಟನೆ: ಆಕರ್ಷಕ ಡ್ರೋನ್ ಶೋ ಬಗ್ಗೆ ಮೋದಿ ಟ್ವೀಟ್ನ್ಯಾಷನಲ್ ಗೇಮ್ಸ್ ಉದ್ಘಾಟನೆ: ಆಕರ್ಷಕ ಡ್ರೋನ್ ಶೋ ಬಗ್ಗೆ ಮೋದಿ ಟ್ವೀಟ್

ಏಳು ವರ್ಷಗಳ ಬಳಿಕ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟವನ್ನು ಗುಜರಾತ್ ಬಹಳ ತ್ವರಿತವಾಗಿ ಆಯೋಜನೆ ಮಾಡಿ ಅಚ್ಚರಿಗೊಳಿಸಿದೆ. ಅಹ್ಮದಾಬಾದ್, ಗಾಂಧಿನಗರ, ಸೂರತ್, ವಡೋದರ, ರಾಜಕೋಟ್ ಮತ್ತು ಭಾವನಗರ್ ನಗರಗಳಲ್ಲಿ ಕ್ರೀಡಾ ಸ್ಪರ್ಧೆಗಳು ಇರಲಿವೆ. ದೆಹಲಿಯಲ್ಲಿ ಸೈಕ್ಲಿಂಗ್ ಸ್ಪರ್ಧೆಗಳು ನಡೆಯುತ್ತವೆ.

National Games 2022 in Gujarat- Important Things To Know

ಲೈವ್ ಎಲ್ಲಿ?

ಅಹ್ಮದಾಬಾದ್‌ನಲ್ಲಿ ಸಂಜೆ 4:30ಕ್ಕೆ ನ್ಯಾಷನಲ್ ಗೇಮ್ಸ್ ಉದ್ಘಾಟನಾ ಸಮಾರಂಭ ನಡೆಯಲಿದೆ. ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಇರಲಿದ್ದಾರೆ.

ಡಿಡಿ ಸ್ಪೋರ್ಟ್ಸ್‌ನಲ್ಲಿ ಲೈವ್ ಪ್ರಸಾರ ಇರುತ್ತದೆ. ಅದೇ ವಾಹಿನಿಯಲ್ಲಿ ನ್ಯಾಷನಲ್ ಗೇಮ್ಸ್ ಅಟಗಳನ್ನು ವೀಕ್ಷಿಸಬಹುದು. ಹಾಗೆಯೇ ಪ್ರಸಾರ್ ಭಾರತಿಯ ಯೂಟ್ಯೂಬ್ ವಾಹಿನಿಯಲ್ಲೂ ನೋಡಬಹುದು.

ಕೆಲ ದಿನಗಳ ಹಿಂದೆಯೇ ಕೆಲ ಕ್ರೀಡೆಗಳ ಸ್ಪರ್ಧೆ ಚಾಲನೆಗೊಂಡಿವೆಯಾದರೂ ಸೆಪ್ಟೆಂಬರ್ 30, ನಾಳೆಯಿಂದ ಹೆಚ್ಚಿನ ಸ್ಪರ್ಧೆಗಳು ಆಯೋಜನೆಗೊಳ್ಳಲಿವೆ.

ನ್ಯಾಷನಲ್ ಗೇಮ್ಸ್ 2022, ಪ್ರಮುಖ ಮಾಹಿತಿ:

* 1924ರಲ್ಲಿ ಮೊದಲ ಬಾರಿಗೆ ನಡೆದಿದ್ದ ನ್ಯಾಷನಲ್ ಗೇಮ್ಸ್ ಈಗ ನಡೆಯುತ್ತಿರುವುದು 36ನೇ ಆವೃತ್ತಿ.
* ನ್ಯಾಷನಲ್ ಗೇಮ್ಸ್ 2022, ಸೆಪ್ಟೆಂಬರ್ 29ರಂದು ಆರಂಭಗೊಂಡು ಅಕ್ಟೋಬರ್ 12ಕ್ಕೆ ಮುಗಿಯುತ್ತದೆ
* 36 ರಾಜ್ಯಗಳಿಂದ 7 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ಧಾರೆ.
* ಒಟ್ಟು 36 ಕ್ರೀಡಾ ಇವೆಂಟ್‌ಗಳು ನಡೆಯಲಿವೆ.
* ಡಿಡಿ ಸ್ಪೋರ್ಟ್ ಟಿವಿ ವಾಹಿನಿ ಮತ್ತು ಪ್ರಸಾರ್ ಭಾರ್ತಿ ಯೂಟ್ಯೂಬ್ ಚಾನಲ್‌ನಲ್ಲಿ ನೇರ ಪ್ರಸಾರ
* ಗುಜರಾತ್‌ನ ಅಹ್ಮದಾಬಾದ್, ಸೂರತ್, ವಡೋದರಾ, ಗಾಂಧಿನಗರ, ರಾಜಕೋಟ್ ಮತ್ತು ಭಾವ್‌ನಗರ್‌ನಲ್ಲಿ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ.
* 2015ರಲ್ಲಿ ಕೇರಳದಲ್ಲಿ ನಡೆದ ಬಳಿಕ ನ್ಯಾಷನಲ್ ಗೇಮ್ಸ್ ನಡೆಯುತ್ತಿರುವುದು ಇದೇ ಮೊದಲು.
* ಗೋವಾದಲ್ಲಿ 36ನೇ ರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸಬೇಕಿತ್ತು. ಆದರೆ ಲಾಜಿಸ್ಟಿಕ್ಸ್ ಕೊರತೆಯಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಗುಜರಾತ್‌ಗೆ ಈ ಹೊಣೆ ಬಿದ್ದಿದೆ.
* ರಾಷ್ಟ್ರೀಯ ಕ್ರೀಡಾಕೂಟ ಸಾಮಾನ್ಯವಾಗಿ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ.
* ಕರ್ನಾಟಕ ಈವರೆಗೆ ಎರಡು ಬಾರಿ ನ್ಯಾಷನಲ್ ಗೇಮ್ಸ್ ಆಯೋಜನೆ ಮಾಡಿದೆ.
* 1997ರಲ್ಲಿ ಕರ್ನಾಟಕ ಅತಿಹೆಚ್ಚು ಪದಕಗಳನ್ನು ಗೆದ್ದು ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿತ್ತು. ಆಗ ಅದು ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದಿತ್ತು.

National Games 2022 in Gujarat- Important Things To Know

ನ್ಯಾಷನಲ್ ಗೇಮ್ಸ್‌ನಲ್ಲಿ ನಿಗದಿಯಾಗಿರುವ ಕ್ರೀಡೆಗಳು

ಜಲಕ್ರೀಡೆ, ಆರ್ಚರಿ, ಭಾರತೀಯ ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಬೀಚ್ ಸ್ಪೋರ್ಟ್ಸ್, ಕ್ಯಾನೋಯಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್ಬಾಲ್, ಗಾಲ್ಫ್, ಜಿಮ್ನಾಸ್ಟಿಕ್ಸ್, ಹಾಕಿ, ಜೂಡೋ, ಕಬಡ್ಡಿ, ಖೋಖೋ, ಲಾನ್ ಬೌಲ್ಸ್, ಮಲ್ಲಕಂಬ, ನೆಟ್‌ಬಾಲ್, ರೋಲರ್ ಸ್ಪೋರ್ಟ್ಸ್, ರೋವಿಂಗ್, ರಗ್‌ಬಿ, ಶೂಟಿಂಗ್, ಸಾಫ್ಟ್ ಟೆನಿಸ್, ಸಾಫ್ಟ್‌ಬಾಲ್, ಸ್ಕ್ವಾಷ್, ಟೇಬಲ್ ಟೆನಿಸ್, ಟ್ರಯಾಥ್ಲಾನ್, ವಾಲಿಬಾಲ್, ವೇಟ್‌ಲಿಫ್ಟಿಂಗ್, ರೆಸ್ಲಿಂಗ್, ವುಶು ಮತ್ತು ಯೋಗಾಸನ.

ಪದಾರ್ಪಣೆ ಮಾಡುತ್ತಿರುವ ತಂಡಗಳು

ಹೊಸದಾಗಿ ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಣೆಯಾಗಿರುವ ಲಡಾಖ್, ದಾದ್ರಾ ನಾಗರ್ ಹವೇಲಿ, ದಮನ್ ಅಂಡ್ ಡಿಯುಗಳು ಸ್ವತಂತ್ರವಾಗಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಈ ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ಇದು ಚೊಚ್ಚಲ ನ್ಯಾಷನಲ್ ಗೇಮ್ಸ್. ದಮನ್ ಮತ್ತು ಡಿಯು ಪ್ರದೇಶ ಈ ಹಿಂದೆ ಗೋವಾ ತಂಡಕ್ಕೆ ಸೇರಿದ್ದವು. ಇನ್ನು ಲಡಾಖ್ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಜೊತೆ ಇತ್ತು.

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತೀಯ ಸೇನಾ ಪಡೆಗಳನ್ನು ಪ್ರತಿನಿಧಿಸುವ ಸರ್ವಿಸಸ್ ತಂಡವೂ ಇರಲಿದೆ. 2020ರಲ್ಲಿ ಬೋಡೋಲ್ಯಾಂಡ್ ಪ್ರದೇಶದ ಒಂದು ಪ್ರತ್ಯೇಕ ತಂಡ ಕಳುಹಿಸಲು ಒಪ್ಪಲಾಗಿತ್ತು. ಆದರೆ, ಬೋಡೋಲ್ಯಾಂಡ್‌ನ ತಂಡವನ್ನು ಕಳುಹಿಸಲಾಗಿಲ್ಲ.

ನ್ಯಾಷನಲ್ ಗೇಮ್ಸ್ ಇತಿಹಾಸ

ಭಾರತದಲ್ಲಿ ರಾಷ್ಟ್ರೀಯ ಕ್ರೀಡಾಕೂಟದ ಇತಿಹಾಸ ಶುರುವಾಗುವುದು 1924ರಲ್ಲಿ. ಇಂಡಿಯನ್ ಒಲಿಂಪಿಕ್ ಗೇಮ್ಸ್ ಎಂದು ಮೊದಲು ಇದನ್ನು ಕರೆಯಲಾಗುತ್ತಿತ್ತು. 1940ರಿಂದ ನ್ಯಾಷನಲ್ ಗೇಮ್ಸ್ ಹೆಸರಿನಲ್ಲಿ ನಡೆಯತೊಡಗಿತು. ಹಾಗೆ ನೋಡಿದರೆ ಮೊದಲ ನ್ಯಾಷನಲ್ ಗೇಮ್ಸ್ 1940ರಲ್ಲಿ ಬಾಂಬೆಯಲ್ಲಿ ಶುರುವಾಯಿತು.

1985ರಲ್ಲಿ ಒಲಿಂಪಿಕ್ಸ್ ಮಾದರಿಯಲ್ಲಿ ರಾಷ್ಟ್ರೀಯ ಕ್ರೀಡಾಕೂಟದ ಸ್ವರೂಪವನ್ನು ಬದಲಾಯಿಸಲಾಯಿತು. ಹೊಸ ಸ್ವರೂಪದ ನ್ಯಾಷನಲ್ ಗೇಮ್ಸ್ 1985ರಲ್ಲಿ ನವದೆಹಲಿಯಲ್ಲಿ ಮೊದಲು ನಡೆಯಿತು.

(ಒನ್ಇಂಡಿಯಾ ಸುದ್ದಿ)

English summary
36th National Games is being held in Gujarat from September 29 to October 12th. More than 7 thousand sportspersons are participating this biggest sporting event of India. From Karnataka over 400 sportspersons are vying for medals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X