Maharaja Trophy Final: ಮಹಾರಾಜ ಟ್ರೋಫಿ ಗೆದ್ದ ಮೈಸೂರು ವಾರಿಯರ್ಸ್
ಮಹರಾಜ ಟ್ರೋಫಿ 2024 ಪಂದ್ಯಾವಳಿಗೆ ತೆರೆ ಬಿದ್ದಿದೆ. ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 45 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡಿದೆ. ಕರುಣ್ ನಾಯರ್, ಎಸ್‌ಯು ಕಾರ್ತಿಕ್ ಮತ್ತು ಮನೋಜ್ ಭಾಂಡಗೆ ಬ್ಯಾಟಿಂಗ್‌ನಲ್ಲಿ ಮಿಂಚಿದರೆ, ವಿದ್ಯಾದರ ಪಾಟೀಲ್ ಮತ್ತು ಕೆ ಗೌತಮ್ ಬೌಲಿಂಗ್‌ನಲ್ಲಿ ಮ್ಯಾಜಿಕ್ ಮಾಡುವ ಮೂಲಕ ಮೈಸೂರಿಗೆ ಪ್ರಶಸ್ತಿ ಗೆದ್ದುಕೊಟ್ಟರು.
ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತು. ಕಾರ್ತಿಕ್ ಸಿಎ 3 ರನ್ ಗಳಿಸಿ ಔಟಾದರು. ಬಳಿಕ ಜೊತೆಯಾದ ನಾಯಕ ಕರುಣ್ ನಾಯರ್ ಮತ್ತು ಎಸ್‌ಯು ಕಾರ್ತಿಕ್ ಎರಡನೇ ವಿಕೆಟ್‌ಗೆ 81 ರನ್ ಕಲೆಹಾಕಿದರು.

ಎಸ್‌ಯು ಕಾರ್ತಿಕ್ 44 ಎಸೆತಗಳಲ್ಲಿ 7 ಬೌಂಡರಿ 3 ಸಿಕ್ಸರ್ ಸಹಿತ 71 ರನ್ ಗಳಿಸಿದರು. ನಾಯಕ ಕರುಣ್ ನಾಯರ್ 45 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಿತ 66 ರನ್ ಗಳಿಸಿದರು. ಮನೋಜ್ ಭಾಂಡಗೆ ಕೊನೆಯಲ್ಲಿ ಅಕ್ಷರಶಃ ಅಬ್ಬರಿಸಿದರು. ಕೇವಲ 13 ಎಸೆತಗಳಲ್ಲಿ 2 ಬೌಂಡರಿ 5 ಭರ್ಜರಿ ಸಿಕ್ಸರ್ ಸಹಿತ ಅಜೇಯ 44 ರನ್ ಗಳಿಸಿದರು. ಅಂತಿಮವಾಗಿ ಮೈಸೂರು ವಾರಿಯರ್ಸ್ 4 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿತು.
ವಿದ್ಯಾಧರ್, ಗೌತಮ್ ಮಿಂಚು
208 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಬೆಂಗಳೂರು ಬ್ಲಾಸ್ಟರ್ಸ್‌ಗೆ ವಿದ್ಯಾಧರ್ ಪಾಟಿಲ್ ಆರಂಭದಲ್ಲೇ ಆಘಾತ ನೀಡಿದರು. ನಾಯಕ ಮಯಾಂಕ್ ಅಗರ್ವಾಲ್ (6 ರನ್), ಭುವನ್ ರಾಜು (1 ರನ್) ವಿಕೆಟ್ ಪಡೆದರು. ಎಲ್‌ಆರ್ ಚೇತನ್ 32 ಎಸೆತಗಳಲ್ಲಿ 51 ರನ್ ಗಳಿಸಿ ಹೋರಾಟ ನೀಡಿದರು, ಉಳಿದ ಬ್ಯಾಟರ್ ಗಳು ಅವರಿಗೆ ಜೊತೆಯಾಗಿ ನಿಲ್ಲಲಿಲ್ಲ. ಅನಿರುದ್ ಜೋಷಿ 18 ರನ್,
ವಿದ್ಯಾಧರ್ ಪಾಟಿಲ್ 4 ಓವರ್ ಗಳಲ್ಲಿ 19 ರನ್ ಬಿಟ್ಟುಕೊಟ್ಟು ಪ್ರಮುಖ ಮೂರು ವಿಕೆಟ್ ಪಡೆದುಕೊಂಡರು. ಕೃಷ್ಣಪ್ಪ ಗೌತಮ್ ಕೂಡ 4 ಓವರ್ ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು.












Click it and Unblock the Notifications