ವಂಚನೆ ಕೇಸ್: ಮಾಜಿ ಕ್ರಿಕೆಟರ್ ನಮನ್ ಓಝಾ ತಂದೆ ಬಂಧನ

ಬೆಟುಲ್(ಮಧ್ಯಪ್ರದೇಶ), ಜೂನ್ 7: ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ನಮಜ್ ಓಝಾ ತಂದೆಯನ್ನು ಸ್ಥಳೀಯ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. 2013ರ ಹಣಕಾಸು ಅವ್ಯವಹಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದರು. ಈ ಸಂಬಂಧ ವಿಚಾರಣೆಗಾಗಿ ನಮನ್ ತಂದೆ ವಿಕೆ ಓಝಾರನ್ನು ಬಂಧಿಸಲಾಗಿದೆ.

ಮಧ್ಯಪ್ರದೇಶದ ಬೆಟುಲ್ ಪ್ರದೇಶ ಝೌಖೆದಾದಲ್ಲಿ 2013ರಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಹಣಕಾಸು ಅವವ್ಯಹಾರ ಆರೋಪ ಕೇಳಿ ಬಂದಿತ್ತು. ಆಗ ಆ ಬ್ಯಾಂಕಿಗೆ ನಮನ್ ಓಝಾ ತಂದೆ ಮ್ಯಾನೇಜರ್ ಆಗಿದ್ದರು.

2014ರಲ್ಲಿ ಮುಲ್ತಾಯಿ ಪಟ್ಟಣದಲ್ಲಿ ಈ ಕುರಿತಂತೆ ದೂರು ದಾಖಲಾಗಿತ್ತು. ಸುಮಾರು 1.2 ಕೋಟಿ ರು ಲೆಕ್ಕ ಸಿಕ್ಕಿರಲಿಲ್ಲ. ಈ ಬಗ್ಗೆ ವಿಕೆ ಓಝಾ ಯಾವುದೇ ಪ್ರತಿಕ್ರಿಯೆ ನೀಡದೆ ನಾಪತ್ತೆಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಮುಲ್ತಾಯಿ ಪಟ್ಟಣ ಠಾಣೆ ಪೊಲೀಸ್ ಅಧಿಕಾರಿ ಸುನಿಲ್ ಲತಾ ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ಎಲ್ಲ ಆರೋಪಿಗಳನ್ನು ಈ ಮೊದಲೇ ಬಂಧಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

MP: Ex-cricketer Naman Ojhas father held in fund embezzlement case

ಬಂಧನದ ನಂತರ, ವಿ ಕೆ ಓಜಾ ಅವರನ್ನು ಸೋಮವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು.

ಏನಿದು ಪ್ರಕರಣ?:

ಬ್ಯಾಂಕ್ ಆಫ್ ಮಹಾರಾಷ್ಟ್ರದ ಶಾಖೆಯಲ್ಲಿ 34 ನಕಲಿ ಖಾತೆಗಳನ್ನು ತೆರೆಯಲಾಗಿತ್ತು. ಬೇನಾಮಿ ಖಾತೆಗಳ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸಾಲದ ಮೊತ್ತವನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪ ಹೊರೆಸಲಾಗಿತ್ತು. ಈ ಆರೋಪದ ಬಗ್ಗೆ ಆಗಿನ ಬ್ಯಾಂಕ್ ಮ್ಯಾನೇಜರ್ ರಿತೇಶ್ ಚತುರ್ವೇದಿ ಅವರು ನೀಡಿದ ದೂರಿನ ಮೇರೆಗೆ ಜೂನ್ 19, 2014 ರಂದು ಎಫ್‌ಐಆರ್ ದಾಖಲಿಸಲಾಗಿದೆ. ನಂತರ ಮೊತ್ತವನ್ನು ಹಿಂಪಡೆಯಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 409 (ಸಾರ್ವಜನಿಕ ಸೇವಕರಿಂದ ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 420 (ವಂಚನೆ), 467 (ಮೌಲ್ಯಯುತ ಭದ್ರತೆಯ ಫೋರ್ಜರಿ), 468 (ವಂಚನೆಯ ಉದ್ದೇಶಕ್ಕಾಗಿ ನಕಲಿ), 471 (ನಕಲಿ ದಾಖಲೆ) ಮತ್ತು 120- ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+