Mohammed Siraj: ಐಪಿಎಲ್‌ನಲ್ಲಿ ಸಖತ್ ಕಮ್‌ಬ್ಯಾಕ್: ಸಿರಾಜ್ ತಕ್ಕ ಉತ್ತರ ಕೊಟ್ಟಿದ್ದು ಯಾರಿಗೆ?
ವೇಗಿ ಮೊಹಮ್ಮದ್ ಸಿರಾಜ್ ಈ ಬಾರಿಯ ಐಪಿಎಲ್‌ನಲ್ಲಿ ಸಖತ್ ಕಮ್ಬ್ಯಾಕ್ ಮಾಡಿದ್ದಾರೆ. ಟೀಮ್ ಇಂಡಿಯಾಗೆ ಬೇಡವಾಗಿದ್ದ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೇಡವಾಗಿದ್ದ ಸಿರಾಜ್, ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಆಟದ ಮೂಲಕ ತಮ್ಮನ್ನು ಕಡೆಗಣಿಸಿದವರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ.
ವೇಗಿ ಮೊಹಮ್ಮದ್ ಸಿರಾಜ್ ಈ ಐಪಿಎಲ್‌ನಲ್ಲಿ ಪಡೆದ ಎರಡು ಮ್ಯಾನ್ ಆಫ್‌ದ ಮ್ಯಾಚ್‌ಗಳು ಆ ಇಬ್ಬರಿಗೆ ಉತ್ತರವಾಗಿತ್ತು. ಒಂದು ಕ್ಯಾಪ್ಟನ್ ರೋಹಿತ್ ಶರ್ಮಾಗೆ ಇನ್ನೊಂದು ಕೋಚ್ ಗೌತಮ್ ಗಂಭೀರ್‌ಗೆ ಹೈದರಾಬಾದ್‌ನ ಸಾಮಾನ್ಯ ಆಟೋ ಡ್ರೈವರ್‌ನ ಮಗ ಅಂದು ಆರ್‌ಸಿಬಿ ತಂಡಕ್ಕೆ ಕಾಲಿಟ್ಟಿದ್ದ. ಆ ವೇಳೆ ಕ್ರಿಕೆಟ್ ಜಗತ್ತಿಗೆ ಇವನು ಯಾರೂ ಅಂತಾನೂ ಗೊತ್ತಿರಲಿಲ್ಲ. ಹಾಗೇ ಈ ಜಗತ್ತು ಹೇಗಿರುತ್ತೆ ಅಂತಾನೂ ಸಿರಾಜ್‌ಗೆ ಗೊತ್ತಿರಲಿಲ್ಲ. ಆದರೆ ಇವತ್ತು ಸಿರಾಜ್ ಏನೇ ಆಗಿದ್ದರೂ ಅದಕ್ಕೆ ಕಾರಣ ಮಾತ್ರ ಆರ್‌ಸಿಬಿ ಅಂದ್ರೆ ತಪ್ಪೇ ಅಲ್ಲ.

ಸುಮಾರು 7 ವರ್ಷಗಳ ಹಿಂದೆ ಸಿರಾಜ್ ಆರ್‌ಸಿಬಿಗೆ ಕಾಲಿಟ್ಟಾಗ ಈತನ ಬೌಲಿಂಗ್‌ನಲ್ಲಿ ಅಂತಹ ವಾವ್ ಫ್ಯಾಕ್ಟರ್ ಏನೂ ಇರಲಿಲ್ಲ. ವಿಕೆಟ್ ಪಡೀತಿದ್ದ ನಿಜ ಆದರೆ ಹಿಗ್ಗಾಮುಗ್ಗ ದಂಡಿಸೋಕೆ ಎದುರಾಳಿಗಳಿಗೆ ಈತ ಫೇವರೆಟ್ ಬೌಲರ್ ಆಗಿದ್ದ. ಇದೇ ಕಾರಣಕ್ಕೆ ಆರ್‌ಸಿಬಿ ಎಷ್ಟೋ ಬಾರಿ ಗೆಲ್ಲುವ ಪಂದ್ಯಗಳನ್ನು ಸೋತಿತ್ತು. ಹೀಗಾಗಿ ಮೊದಲೇ ಕಪ್ ಗೆದ್ದಿಲ್ಲ ಎಂಬ ನೋವಿನಲ್ಲಿರುವ ಆರ್‌ಸಿಬಿ ಅಭಿಮಾನಿಗಳ ಅಸಮಾಧಾನಕ್ಕೆ ಸಿರಾಜ್ ಕೂಡ ಕಾರಣ ಎನ್ನುವಂತಾಗಿತ್ತು.
ಆದರೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಮಾತ್ರ ಈ ಸಿರಾಜ್ ಮೇಲೆ ಎಲ್ಲಿಲ್ಲದ ನಂಬಿಕೆ ಇತ್ತು. ಬೆನ್ನು ತಟ್ಟಿ ಮುನ್ನಡೆಸಿದರೆ ಒಂದಲ್ಲಾ ಒಂದು ದಿನ ತಂಡಕ್ಕೆ ಆಸ್ತಿ ಆಗೇ ಆಗುತ್ತಾನೆ ಅಂತಾ. ಇದೇ ಕಾರಣಕ್ಕೆ ಸಿರಾಜ್ 'ನಾನು ಜೀವನ ಪೂರ್ತಿ ಆರ್‌ಸಿಬಿ ತಂಡಕ್ಕೆ ಋಣಿ ಆಗಿರುತ್ತೇನೆ' ಅಂತಾ ಹೇಳುವುದು.
ವರ್ಷ ಕಳೆದಂತೆ ವಿರಾಟ್ ಕೊಹ್ಲಿ ಇಟ್ಟಿದ್ದ ಆ ನಂಬಿಕೆಯನ್ನು ಸಿರಾಜ್ ಉಳಿಸಿಕೊಂಡಿದ್ದರು. ಕಳೆದ 3-4 ವರ್ಷಗಳಲ್ಲಿ ಆರ್‌ಸಿಬಿ ಪರ ಸ್ಥಿರ ಪ್ರದರ್ಶನ ನೀಡಿರೋ ಬೌಲರ್ ಯಾರಾದರೂ ಇದ್ದರೆ ಅದು ಅಭಿಮಾನಿಗಳ ಪ್ರೀತಿಯ ಸಿರಾಜ್ ಮಿಯಾ ಮಾತ್ರ. ಆದರೆ ಇಂತಹ ಸಿರಾಜ್‌ಗೆ ಬ್ಯಾಡ್ ಟೈಂ ಶುರು ಆಯ್ತು. ಇವನಲ್ಲಿ ಹಳೇ ಚಾರ್ಮ್ ಉಳಿದಿಲ್ಲ ಅಂತಾ ಆರ್‌ಸಿಬಿ ತಂಡದಿಂದ ಕೈ ಬಿಟ್ಟಿತ್ತು. ಅಷ್ಟೇ ಅಲ್ಲ ಚಾಂಪಿಯನ್ಸ್ ಟ್ರೋಫಿಯಿಂದ ಕೂಡಾ ಸಿರಾಜ್‌ನನ್ನು ಕೈಬಿಡಲಾಯಿತು. ಇದಕ್ಕೆ ಕೊಟ್ಟ ಕಾರಣಗಳೆಲ್ಲವೂ ಸಿರಾಜ್‌ನನ್ನು ಘಾಸಿಗೊಳಿಸಿದ್ದವು. ಅಷ್ಟೇ ಅಲ್ಲ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೋಚ್ ಗಂಭೀರ್ ಶಿಷ್ಯ ಹರ್ಷಿತ್ ರಾಣಾನನ್ನು ಆಡಿಸಲು ಸಿರಾಜ್ ಕೈಬಿಟ್ಟರು ಅಂತಾನೂ ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯವಿದೆ.

ಸಿರಾಜ್‌ನ ಸಾಮರ್ಥ್ಯವನ್ನೇ ಪ್ರಶ್ನಿಸಿದ್ದ ಭಾರತ ತಂಡದ ನಾಯಕ.. SIRAJ IS NOT EFFECTIVE WITH OLD BALL ಎಂದು ಬಿಟ್ಟಿದ್ದರು. ಹೌದು ಹೊಸ ಚೆಂಡಿನಲ್ಲಿ ಸಿರಾಜ್ ಅದ್ಭುತ ಬೌಲರ್, ಚೆಂಡು ಸ್ವಲ್ಪ ಸ್ವಿಂಗ್ ಆಗೋ ಪಿಚ್ ಸಿಕ್ರೂ ಸಾಕು ಸಿರಾಜ್ ಸುನಾಮಿ ಮುಂದೆ ಎದುರಾಳಿಗಳ ತರೆಗೆಲೆಗಳಂತೆ ಉದುರಿ ಹೋಗ್ತಾರೆ. ಹಾಗೇ ಹಳೇ ಚೆಂಡಿನಲ್ಲಿ ತಂಡದ ನಾಯಕ ರೋಹಿತ್ ಹೇಳಿದಂತೆ ಪರಿಣಾಮಕಾರಿ ಅಲ್ಲ ನಿಜ, ಆದ್ರೆ ತಂಡದಿಂದ ತೆಗೆದು ಒಗೆಯೋ ಅಷ್ಟು ಕಳಪೆ ಬೌಲರ್ ಕೂಡಾ ಅಲ್ಲ. ಹೊರಗಿನ ಮಾತುಗಳು ಏನೇ ಇರಲಿ ಆದರೆ ಇಂತಹ ಮಾತುಗಳನ್ನು ತನ್ನ ತಂಡದ ನಾಯಕ ಹೇಳಿದ್ರೆ ಮಾತ್ರ ಯಾವ ಕ್ರಿಕಿಟಿಗ ಸಹಿಸಿಕೊಳ್ಳುತ್ತಾನೆ?
ಅವಮಾನದಲ್ಲಿ ಹೊತ್ತಿಕೊಂಡ ಬೆಂಕಿ ಸುಡದೇ ಬಿಡುವುದಿಲ್ಲ ಅಂತಾರೆ, ಹೌದು ಮುಂದೊಂದು ದಿನ ಅವನು ಧಗಧಗಿಸುತ್ತಿದ್ದಾನೆ.. ಹೊತ್ತಿ ಉರಿಯುತ್ತಿದ್ದಾನೆ.. ಅದಕ್ಕೆ ಉತ್ತರವೇ ಮುಂಬೈ ವಿರುದ್ಧ ಪಂದ್ಯದಲ್ಲಿ ತಾನು Effictive ಅಲ್ಲ ಎಂದಿದ್ದ ರೋಹಿತ್ ಶರ್ಮಾನನ್ನು ಕ್ಲೀನ್ ಬೌಲ್ಡ್ ಮಾಡಿರುವುದು ಸಿರಾಜ್ ಉತ್ತರವಾಗಿತ್ತಿ. ಅಷ್ಟೇ ಅಲ್ಲ ತನ್ನಲ್ಲಿ ಹಳೆಯ ಸಾಮರ್ಥ್ಯ ಉಳಿದಿಲ್ಲ ಎಂದಿದ್ದ ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ ಬೆಂಗಳೂರಿನ ಮಣ್ಣಲ್ಲಿ ಬೆಂಗಳೂರಿಗೆ ಮೊದಲ ಸೋಲಿನ ರುಚಿ ತೋರಿಸಿ ಮ್ಯಾನ್ ಆಫ್ ದ ಮ್ಯಾಚ್ ಕೂಡ ಪಡೆದ ಸಿರಾಜ್ ತನ್ನನ್ನು ಕಡೆಗಣಿಸಿದ ಇಬ್ಬರಿಗೂ ತಕ್ಕ ಉತ್ತರ ಕೊಟ್ಟಿದ್ದಾರೆ.
ರನ್ ಹೊಳೆಯೇ ಹರಿಯುವ ಐಪಿಎಲ್‌ನಲ್ಲ ಒಬ್ಬ ಬೌಲರ್ ಸತತ ಎರಡು ಮ್ಯಾನ್ ಆಫ್ ದಿ ಮ್ಯಾಚ್ ಪಡೆಯೋದು ತಮಾಷೆ ಮಾತಲ್ಲ. ತನ್ನದೇ ಊರಾದ ಹೈದ್ರಾಬಾದ್‌ನಲ್ಲಿ ಎಸ್‌ಆರ್‌ಎಚ್ ವಿರುದ್ಧ ಸಿರಾಜ್ ಬೌಲಿಂಗ್ ನೋಡಿದರೆ ಎದುರಾಳಿಗಳ ಎದೆ ನಡುಗಿತ್ತು. ಎದೇಲಿ ಕಿಚ್ಚು ಹೊತ್ತಿಸಿಕೊಂಡವನು ಮಾತ್ರ ಈ ರೀತಿ ಬಿರುಗಾಳಿ ಆಗೋಕೆ ಸಾಧ್ಯ. ಹೌದು ಅವನು ಧಗಧಗಿಸುತ್ತಿದ್ದಾನೆ. ಅವಮಾನದಲ್ಲಿ ಹೊತ್ತಿದ್ದ ಬೆಂಕಿಗೆ ಆತ ಬಿರುಗಾಳಿಯೇ ಆಗಿದ್ದಾನೆ. ತನ್ನನ್ನು ಗಾಯಗೊಳಿಸಿದ್ದ ಎಲ್ಲರನ್ನೂ ಘಾಸಿಗೊಳಿಸುತ್ತಿದ್ದಾನೆ. ತಾನು ಏನೆಂದು ತೋರಿಸೋಕೆ ಎದೆ ತಟ್ಟಿ ನಿಂತಿದ್ದಾನೆ. ಸಿರಾಜ್‌ಗೆ ಈಗಾಗಲೇ ಕ್ರಿಕೆಟ್ ಜೀವನದ ಪಾಠ ಹೇಳಿಕೊಟ್ಟಿದೆ. ಹೀಗಾಗಿ ಈಗಾಗಲೇ ಪಾಠ ಕಲಿತಿರುವ ಸಿರಾಜ್ ತನ್ನನ್ನು ಕಡೆಗಣಿಸಿದ್ದವರಿಗೆ ಪಾಠ ಕಲಿಸುತ್ತಿದ್ದಾನೆ ಎನ್ನುವುದು ಕ್ರಿಕೆಟ್ ಪ್ರಿಯರ ಅಭಿಪ್ರಾಯವಾಗಿದೆ.












Click it and Unblock the Notifications