ಸಿಎಸ್‌ಕೆ ವೇಗಿ ಪತಿರಾನ ಎಂಎಸ್ ಧೋನಿ ಕ್ರಿಕೆಟ್ ಫಾದರ್ ಎಂದಿದ್ದೇಕೆ? ಇಲ್ಲಿದೆ ಕಾರಣ
ಐಪಿಎಲ್ 2025ನೇ ಆವೃತ್ತಿ ಅದ್ಧೂರಿಯಾಗಿ ನಡೆಯುತ್ತಿದೆ. ನಾಳೆ ಅಂದರೆ ಏಪ್ರಿಲ್ 5ರಂದು ಸಿಎಸ್‌ಕೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಮತೀಶ ಪತಿರಾನ ಅವರು ತಂಡದ ಮಾಜಿ ನಾಯಕ ಎಂಎಸ್ ಧೋನಿಯವರ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ಇದು ಇದೀಗ ಭಾರೀ ವೈರಲ್ ಆಗುತ್ತಿದೆ. ಹಾಗಾದ್ರೆ ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ನಾಳೆ ಮಧ್ಯಾಹ್ನ 3.30ಕ್ಕೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಲಿವೆ. ಈಗಾಗಲೇ ಆಡಿರುವ 2 ಪಂದ್ಯಗಳಲ್ಲಿ ಡೆಲ್ಲಿ ಎರಡನ್ನು ಗೆದ್ದಿದೆ. ಇನ್ನು ಚೆನ್ನೂ ಸೂಪರ್ ಕಿಂಗ್ಸ್ ಮೂರು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆದ್ದಿದೆ. ನಾಳೆ ನಾಲ್ಕನೆ ಪಂದ್ಯದಲ್ಲಿ ಗೆಲ್ಲುವ ಭರವಸೆಯಲ್ಲಿದೆ. ಇದಕ್ಕೂ ಮುನ್ನ ಸಿಎಸ್‌ಕೆ ವೇಗಿ ಪತಿರಾನ ಧೋನಿ ಬಗ್ಗೆ ನೀಡಿದ ಹೇಳಿಕೆ ಭಾರೀ ವೈರಲ್ ಆಗುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಮತೀಶ ಪತಿರಾನ ಅವರು ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ನನ್ನ ಕ್ರಿಕೆಟ್ ಫಾದರ್ ಎಂದು ಕರೆದಿದ್ದಾರೆ. ಶ್ರೀಲಂಕಾದ ವೇಗಿ ಮತೀಶ ಪತಿರಾನ ಅವರು 2022ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಅವರು ಐಪಿಎಲ್‌ನಲ್ಲಿ ಮಾತ್ರವಲ್ಲದೆ, ಶ್ರೀಲಂಕಾದ ರಾಷ್ಟ್ರೀಯ ತಂಡದಲ್ಲಿಯೂ ಸಹ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.
ವಿಡಿಯೋವೊಂದರಲ್ಲಿ ಭಾವುಕರಾದ ಪತಿರಣ ಅವರು, ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಎಂಎಸ್ ಧೋನಿ ಅವರು ನನಗೆ ಬೆಂಬಲ, ಮಾರ್ಗದರ್ಶನ ನೀಡಿದ್ದಾರೆ. ಆದ್ದರಿಂದ ಇಷ್ಟರ ಮಟ್ಟಿಗೆ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಅವರು ಅವರು ನನ್ನ ತಂದೆಯಂತೆ ಎಂದು ಹೇಳಿದರು.
ಸಿಎಸ್‌ಕೆಗೆ ಪರ ಪಾದಾರ್ಪಣೆ ಮಾಡಿದಾಗಿನಿಂದ, ಪತಿರಣ ತಂಡದ ಅತ್ಯುತ್ತಮ ವೇಗದ ಬೌಲರ್ ಆಗಿದ್ದಾರೆ. ವಿಕೆಟ್ ಪಡೆಯುವ ವಿಷಯದಲ್ಲಿ, ವಿಶೇಷವಾಗಿ ಡೆತ್ ಓವತರ್‌ಗೆ ಹೇಳಿ ಮಾಡಿಸಿದ ಬೌಲರ್ ಆಗಿದ್ದಾರೆ. ಈಗಾಗಲೇ ಆಡಿರುವ ಪಂದ್ಯಗಳಲ್ಲಿ ಅವರು ಕ್ರಮವಾಗಿ ಅತ್ಯತ್ತಮ ಪ್ರದರ್ಶನ ತೋರಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿಗೆ ಮುಂಚಿತವಾಗಿ ಶ್ರೀಲಂಕಾದ ಈ ವೇಗಿಯನ್ನು 13 ಕೋಟಿ ರೂಪಾಯಿಗೆ ಉಳಿಸಿಕೊಳ್ಳಲಾಯಿತು.
ಕೊಹ್ಲಿ ಬಗ್ಗೆ ಧೋನಿ ಹೇಳಿದ್ದೇನು?: 2008ರಿಂದ ಎಂಎಸ್ ಧೋನಿ ಸಿಎಸ್‌ಕೆ ಮತ್ತು ವಿರಾಟ್ ಕೊಹ್ಲಿ ಆರ್‌ಸಿಬಿಯಲ್ಲೇ ಆಡುತ್ತಿದ್ದಾರೆ. ಈ ಮೂಲಕ ಇದುವರೆಗೂ ನಡೆದ ಎಲ್ಲಾ ಐಪಿಎಲ್ ಸೀಸನ್‌ಗಳಲ್ಲೂ ಒಂದೇ ತಂಡದಲ್ಲಿ ಆಡಿದ ಪಾತ್ರ ಇವರಿಬ್ಬರದ್ದಾಗಿದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ತಂಡ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಈ ಬಾರಿ ರುತುರಾಜ್ ಗಾಯಕ್ವಾಡ್ ಅವರು ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ.
ಇತ್ತೀಚೆಗಷ್ಟೇ ಎಂಎಸ್ ಧೋನಿ ಅವರು ವಿರಾಟ್ ಕೊಹ್ಲಿ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಇಬ್ಬರೂ ಆಟಗಾರರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆರಂಭದಿಂದಲೂ ಐಪಿಎಲ್‌ನಲ್ಲಿ ಒಂದೇ ತಂಡದ ಪರ ಆಡುತ್ತಿರುವ ಆಡುತ್ತಿರುವ ಆಟಗಾರರು ಇವರಾಗಿದ್ದಾರೆ. ಎಂಸ್ ಧೋನಿ ಚೈನ್ನೂ ಸೂಪರ್ ಕಿಂಗ್ಸ್ ತಂಡಲ್ಲೇ ಮುಂದುವರೆದರೆ, ಕಿಂಗ್ ಕೊಹ್ಲಿ ಅವರು ಆರ್‌ಸಿಬಿಯಲ್ಲೇ ಆಡಿಕೊಂಡು ಬಂದಿದ್ದಾರೆ.
ಐಪಿಎಲ್ 2025ರ ಪೂರ್ವದಲ್ಲಿ ಜಿಯೋ ಹಾಟ್‌ಸ್ಟಾರ್ ಜೊತೆಗಿನ ಸಂದರ್ಶನದಲ್ಲಿ ಧೋನಿ ಮಾತನಾಡಿದ್ದು, "ನಾನು ಸಂಬಂಧದ ಬಗ್ಗೆ ಮಾತನಾಡುತ್ತೇನೆ, ಸಂದೇಶದ ಬಗ್ಗೆ ಅಲ್ಲ. ಅದನ್ನು ಹಾಗೆಯೇ ಇಟ್ಟುಕೊಳ್ಳಲು ನಾನು ಇಷ್ಟಪಡುತ್ತೇನೆ. ಅದು ಏನೆಂದರೆ, ಇತರ ಕ್ರಿಕೆಟಿಗರು ನನ್ನ ಬಳಿಗೆ ಬಂದು ಅವರ ಮನಸ್ಸಿನಲ್ಲಿ ಏನಾದರೂ ಇದೆಯೇ ಎಂದು ಕೇಳಲು ಅನುವು ಮಾಡಿಕೊಡುತ್ತದೆ" ಎಂದು ಹೇಳಿದ್ದಾರೆ.












Click it and Unblock the Notifications