ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಸಿಐ ಜೊತೆಗಿನ ಪೇಟಿಎಂ ಒಪ್ಪಂದ ಅಂತ್ಯ: ಮಾಸ್ಟರ್ ಕಾರ್ಡ್ ನೂತನ ಟೈಟಲ್ ಪ್ರಾಯೋಜಕ

|
Google Oneindia Kannada News

ಟೈಟಲ್‌ ಪ್ರಾಯೋಜಕತ್ವದ ಹಕ್ಕುಗಳನ್ನು ಬೇರೆ ಕಂಪೆನಿಗೆ ವರ್ಗಾಯಿಸುವಂತೆ ಬಿಸಿಸಿಐಗೆ ಪೇಟಿಎಂ ಸಂಸ್ಥೆ ಮಾಡಿದ್ದ ಮನವಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪುರಸ್ಕರಿಸಿದೆ. ಭಾರತದಲ್ಲಿ ನಡೆಯಲಿರುವ ದೇಸೀ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಿಗೆ ಇನ್ನು ಮುಂದೆ ಮಾಸ್ಟರ್ ಕಾರ್ಡ್ ಟೈಟಲ್ ಪ್ರಾಯೋಜಕರಾಗಲಿದ್ದಾರೆ.

ಪೇಟಿಎಂ ಸಂಸ್ಥೆ ತನ್ನ ಬಳಿ ಇದ್ದ ಪ್ರಾಯೋಜಕತ್ವ ಹಕ್ಕನ್ನು ಮಾಸ್ಟರ್‌ ಕಾರ್ಡ್‌ಗೆ ವರ್ಗಾಯಿಸಿದ್ದು, ಮಾಸ್ಟರ್ ಕಾರ್ಡ್ ಇನ್ಮುಂದೆ ಶೀರ್ಷಿಕೆ ಪ್ರಾಯೋಜಕತ್ವ ಹೊಂದಲಿದೆ. ಈ ಹಿಂದಿನಂತೆಯೇ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ 3.8 ಕೋಟಿ ರುಪಾಯಿ ಪಾವತಿಯಾಗಲಿದೆ.

ಬಿಸಿಸಿಐ ಪ್ರಯೋಜಕತ್ವ ವರ್ಗಾವಣೆಗೆ ಪೇಟಿಎಂ ಮನವಿಬಿಸಿಸಿಐ ಪ್ರಯೋಜಕತ್ವ ವರ್ಗಾವಣೆಗೆ ಪೇಟಿಎಂ ಮನವಿ

ಕಳೆದ 7 ವರ್ಷಗಳಿಂದ ಭಾರತದ ಕ್ರಿಕೆಟ್ ತಂಡಕ್ಕೆ ಶೀರ್ಷಿಕೆ ಪ್ರಾಯೋಜಕರಾಗಿದ್ದ ಪೇಟಿಎಂ ಆರ್ಥಿಕ ಸಂಕಷ್ಟದ ಕಾರಣ ನೀಡಿ ಪ್ರಾಯೋಜಕತ್ವವನ್ನು ಕೊನೆಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿದೆ. ಸೆಪ್ಟಂಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಟೀಂ ಇಂಡಿಯಾ ಹೊಸ ಪ್ರಾಯೋಜಕತ್ವದೊಂದಿಗೆ ಆಡಲಿದೆ.

ಭಾರತದಲ್ಲಿ 2023ರ ಏಕದಿನ ವಿಶ್ವಕಪ್‌ನ ಅಂತ್ಯದವರೆಗೆ ಬೈಜುಸ್‌ ಕಂಪನಿ ಮತ್ತು ಬಿಸಿಸಿಐ ತಮ್ಮ ಪಾಲುದಾರಿಕೆಯನ್ನು ವಿಸ್ತರಿಸಲು ಏಪ್ರಿಲ್‌ನಲ್ಲಿ ಒಪ್ಪಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತದಲ್ಲಿ ಕ್ರಿಕೆಟ್ ಪ್ರಸಾರ ಮಾಡಲು ಡಿಸ್ನಿ ಸ್ಟಾರ್‌ನೊಂದಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಂದಭಾರತದಲ್ಲಿ ಕ್ರಿಕೆಟ್ ಪ್ರಸಾರ ಮಾಡಲು ಡಿಸ್ನಿ ಸ್ಟಾರ್‌ನೊಂದಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಂದ

''ನಾವು ಬಿಸಿಸಿಐ ಜೊತೆಗಿನ ಒಪ್ಪಂದವನ್ನು ವಿಸ್ತರಿಸಿದ್ದೇವೆ. ಆದರೆ ಇನ್ನೂ ಸಹಿ ಮಾಡಿಲ್ಲ. ಒಪ್ಪಂದದ ಸಹಿ ಮಾಡಿದ ನಂತರ, ಒಪ್ಪಂದದ ಪಾವತಿ ನಿಯಮಗಳ ಪ್ರಕಾರ ಪಾವತಿಗಳು ನಡೆಯುತ್ತವೆ. ಆದ್ದರಿಂದ ನಮ್ಮಿಂದ ಯಾವುದೇ ಬಾಕಿ ಉಳಿದಿಲ್ಲ'' ಎಂದು ಬೈಜುಸ್‌ ಕಂಪನಿ ವಕ್ತಾರರು ತಿಳಿಸಿದ್ದರು.

 7 ವರ್ಷದ ಒಪ್ಪಂದಕ್ಕೆ ಅಂತ್ಯ ಹಾಡಿದ ಪೇಟಿಎಂ

7 ವರ್ಷದ ಒಪ್ಪಂದಕ್ಕೆ ಅಂತ್ಯ ಹಾಡಿದ ಪೇಟಿಎಂ

2015ರಲ್ಲಿ ಪೇಟಿಎಂ ಮೊದಲನೇ ಬಾರಿಗೆ ಭಾರತೀಯ ಕ್ರಿಕೆಟ್‌ನ ಶೀರ್ಷಿಕೆ ಪ್ರಾಯೋಜಕರಾದರು. ಆಗ ಪ್ರತಿ ಪಂದ್ಯಕ್ಕೆ 2.4 ಕೋಟಿ ರುಪಾಯಿ ಪಾವತಿಸುತ್ತಿದ್ದರು. ನಂತರ 2019ರಲ್ಲಿ ಪೇಟಿಎಂ 326.80 ಕೋಟಿ ರುಪಾಯಿಗಳ ಒಪ್ಪಂದಕ್ಕೆ ಬಿಸಿಸಿಐ ಜೊತೆ ಸಹಿ ಹಾಕಿತ್ತು. ಒಪ್ಪಂದವು 2023 ರವರೆಗೆ ಮುಂದುವರೆಯಬೇಕಿತ್ತು. ಒಪ್ಪಂದದಂತೆ ಪ್ರತಿ ಪಂದ್ಯಕ್ಕೆ 3.80 ಕೋಟಿ ಪಾವತಿ ಮಾಡಬೇಕಿತ್ತು. ಈಗ ಅವಧಿಗೂ ಮುನ್ನವೇ ಪ್ರಾಯೋಜಕತ್ವ ತೊರೆಯಲು ನಿರ್ಧರಿಸಿದೆ.

"ಅವರು ಹಕ್ಕುಗಳನ್ನು ಹಸ್ತಾಂತರ ಮಾಡಲು ಪೇಟಿಎಂ ವಿನಂತಿಯನ್ನು ಕಳುಹಿಸಿದ್ದರು. ಮೂರನೇ ವ್ಯಕ್ತಿಗೆ ಹಕ್ಕುಗಳನ್ನು ನಿಯೋಜಿಸಲು ಅವಕಾಶವಿದೆ ಎಂಬುದು ಸರಿಯಾಗಿದೆ. ಹೊಸ ಪ್ರಾಯೋಜಕರೊಂದಿಗಿನ ಒಪ್ಪಂದಗಳು ಎರಡು ವಾರಗಳಲ್ಲಿ ಪೂರ್ಣಗೊಳ್ಳುತ್ತವೆ. ಮಾಸ್ಟರ್‍‌ ಕಾರ್ಡ್ 2023 ರವರೆಗೆ ಪಾಲುದಾರರಾಗಿ ಮುಂದುವರಿಯುತ್ತಾರೆ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಪ್ರಾಯೋಜಕರು ಬಿಸಿಸಿಐ ಒಪ್ಪಂದಗಳನ್ನು ಮಧ್ಯದಲ್ಲಿ ತೊರೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಒಪ್ಪೊ (OPPO) ತನ್ನ ಭಾರತೀಯ ತಂಡದ ಜೆರ್ಸಿಯ ಪ್ರಾಯೋಜಕತ್ವದ ಒಪ್ಪಂದವನ್ನು ಮಧ್ಯದಲ್ಲೇ ರದ್ದು ಮಾಡಿಕೊಂಡಿತ್ತು, ಮತ್ತು ಹಕ್ಕುಗಳನ್ನು ಬೈಜುಸ್‌ಗೆ ವರ್ಗಾಯಿಸಲಾಯಿತು. ವಿವೊ (VIVO) ಕೂಡ ಇತ್ತೀಚೆಗೆ ಐಪಿಎಲ್‌ ಒಪ್ಪಂದವನ್ನು ಮಧ್ಯದಲ್ಲಿಯೇ ಬಿಟ್ಟಿತ್ತು ಹಕ್ಕುಗಳನ್ನು ಟಾಟಾ ಗ್ರೂಪ್‌ಗೆ ವರ್ಗಾಯಿಸಲಾಯಿತು.

 ಒಪ್ಪಂದ ಕೊನೆಗೊಳಿಸಲು ಅಪ್‌ಸ್ಟಾಕ್ಸ್, ಅನ್‌ಅಕಾಡೆಮಿ ನಿರ್ಧಾರ?

ಒಪ್ಪಂದ ಕೊನೆಗೊಳಿಸಲು ಅಪ್‌ಸ್ಟಾಕ್ಸ್, ಅನ್‌ಅಕಾಡೆಮಿ ನಿರ್ಧಾರ?

ಐಪಿಎಲ್‌ನ ಪ್ರಾಯೋಕತ್ವ ಹೊಂದಿರುವ ಅಪ್‌ಸ್ಟಾಕ್ಸ್, ಅನ್‌ಅಕಾಡೆಮಿ ಕೂಡ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ಯೋಚಿಸಿವೆ ಎಂದ ಬಿಸಿಸಿಐ ಮೂಲಗಳು ತಿಳಿಸಿವೆ. ಅಪ್‌ಸ್ಟಾಕ್ಸ್ ಮತ್ತು ಅನಾಕಾಡೆಮಿಯ ಪಾಲುದಾರಿಕೆಯು ಐಪಿಎಲ್ 2023 ರವರೆಗೆ ಅಂದರೆ ಐಪಿಎಲ್‌ನ 16 ನೇ ಋತುವಿನವರೆಗೆ ಇದೆ.
ಇಬ್ಬರು ಐಪಿಎಲ್ ಪ್ರಾಯೋಜಕರು ವಿಶ್ವದ ಅತ್ಯಂತ ಲಾಭದಾಯಕ ಕ್ರಿಕೆಟ್ ಲೀಗ್‌ನೊಂದಿಗೆ ತಮ್ಮ ಒಪ್ಪಂದಗಳನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಐಪಿಎಲ್‌ನ ಮುಖ್ಯ ಪ್ರಾಯೋಜಕರಾದ ಅನ್‌ಅಕಾಡೆಮಿ ಮತ್ತು ಅಪ್‌ಸ್ಟಾಕ್ ಅವರು ಪ್ರಾಯೋಜಕತ್ವವನ್ನು ಸ್ಥಗಿತಗೊಳಿಸಲು ಬಯಸುತ್ತಾರೆ ಎಂದು ಮಂಡಳಿಗೆ ತಿಳಿಸಿದ್ದಾರೆ.

 ಇತರೆ ಕಂಪನಿಗಳಿಗಾಗಿ ಹುಡುಕಾಟ

ಇತರೆ ಕಂಪನಿಗಳಿಗಾಗಿ ಹುಡುಕಾಟ

ಅಪ್‌ಸ್ಟಾಕ್ಸ್, ಅನಾಕಾಡೆಮಿ ಪ್ರಾಯೋಜಕತ್ವದ ಹಕ್ಕುಗಳನ್ನು ಬೇರೆ ಕಂಪನಿಗೆ ವರ್ಗಾಯಿಸಲು ಬಯಸುತ್ತವೆ ಎಂದು ಬಿಸಿಸಿಐಗೆ ವಿನಂತಿಸಿವೆ. ಎರಡೂ ಬ್ರಾಂಡ್‌ಗಳ ಪ್ರತಿನಿಧಿ ಏಜೆನ್ಸಿಗಳು ಒಂದು ವರ್ಷದ ಅವಧಿಗೆ ಐಪಿಎಲ್‌ ಪ್ರಾಯೋಜಕತ್ವವನ್ನು ಖರೀದಿಸಲು ಸಿದ್ಧರಿರುವ ಕಂಪನಿಗಳನ್ನು ಹುಡುಕುತ್ತಿವೆ.

ಬಿಸಿಸಿಐ ಪ್ರಯೋಜಕತ್ವದ ಒಪ್ಪಂದದಲ್ಲಿ ಇದಕ್ಕೆ ಅವಕಾಶ ಇದೆ. ಅಸ್ತಿತ್ವದಲ್ಲಿರುವ ಪಾಲುದಾರಿಕೆಯನ್ನು ಹೊಂದಿರುವ ಬ್ರ್ಯಾಂಡ್ ತನ್ನ ಪ್ರಾಯೋಜಕತ್ವದ ಹಕ್ಕುಗಳನ್ನು ಬೇರೆ ಕಂಪನಿಗೆ ಮಾರಾಟ ಮಾಡಲು ಅದು ಅನುಮತಿ ನೀಡುತ್ತದೆ. ಪ್ರಾಯೋಜಕತ್ವದ ಹಕ್ಕುಗಳನ್ನು ವರ್ಗಾಯಿಸಲು ಪಡೆದರೆ ಅವರು ವರ್ಗಾವಣೆ ಶುಲ್ಕವಾಗಿ ಬಿಸಿಸಿಐಗೆ ಶೇಕಡ 5 ರಷ್ಟು ಪಾವತಿಸಬೇಕಾಗುತ್ತದೆ.

 ಭಾರತ-ಆಸ್ಟ್ರೇಲಿಯಾ ಏಕದಿನ, ಟಿ20 ಸರಣಿ

ಭಾರತ-ಆಸ್ಟ್ರೇಲಿಯಾ ಏಕದಿನ, ಟಿ20 ಸರಣಿ

ಸೆಪ್ಟಂಬರ್ 20 ರಂದು ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲೇ ಪಂದ್ಯವನ್ನಾಡಲಿದೆ. ಸೆಪ್ಟಂಬರ್ 23 ರಂದು ನಾಗ್ಪುರದಲ್ಲಿ, ಸೆಪ್ಟಂಬರ್ 25ರಂದು ಹೈದರಾಬಾದ್‌ನಲ್ಲಿ ಏಕದಿನ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಏಕದಿನ ಸರಣಿಯ ನಂತರ ಮೂರು ಪಂದ್ಯಗಳ ಟಿ 20 ಸರಣಿಯನ್ನು ಆಯೋಜಿಸಲಾಗಿದೆ. ಸೆಪ್ಟಂಬರ್ 28 ರಂದು ಮೊದಲನೇ ಟಿ 20 ಪಂದ್ಯ ತಿರುವನಂತಪುರದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಗುವಾಹಟಿಯಲ್ಲಿ ಅಕ್ಟೋಬರ್ 1ರಂದು ನಡೆಯಲಿದ್ದು, ಸರಣಿಯ ಕೊನೆಯ ಪಂದ್ಯ ಅಕ್ಟೋಬರ್ 3ರಂದು ಇಂದೋರ್ ನಲ್ಲಿ ನಡೆಯಲಿದೆ.

ಈ ಸರಣಿಯ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಈ ಎಲ್ಲಾ ಸರಣಿಗಳ ಶೀರ್ಷಿಕೆ ಹಕ್ಕುಗಳನ್ನು ಈಗ ಪೇಟಿಎಂನಿಂದ ಮಾಸ್ಟರ್‌ಕಾರ್ಡ್‌ಗೆ ರವಾನಿಸಲಾಗುತ್ತದೆ.

English summary
Mastercard Will Be The New Title Sponsor For Team India After PayTM Quit The BCCI Sponsorship. BCCI has confirmed that PayTM has decided to QUIT the sponsorship deal with Indian cricket mid-way. The series against World Champion Australia in September will be Mastercard’s 1st series as Title Sponsor of the BCCI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X