Ind Vs Pak: ದೇಶಕ್ಕಿಂತ ಕ್ರಿಕೆಟ್ ಮುಖ್ಯವಾಯ್ತಾ? ಭಾರತ-ಪಾಕಿಸ್ತಾನ ಪಂದ್ಯ ಬಹಿಷ್ಕಾರ ಆಗ್ಬೇಕಷ್ಟೇ: ನೆಟ್ಟಿಗರು ಹೇಳೋದೇನು?
Ind Vs Pak: ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ಅಂದ್ರೆ ಸಾಕು ಸ್ಟೇಡಿಯಂ ತುಂಬಿ ತುಳುಕುತ್ತಿತ್ತು. ಈ ಎರಡು ತಂಡಗಳ ನಡುವಿನ ಪಂದ್ಯ ವೀಕ್ಷಣೆ ಮಾಡಲು ಅಷ್ಟರ ಮಟ್ಟಿಗೆ ಸಾಗರೋಪಾದಿಯಲ್ಲಿ ಅಭಿಮಾನಿಗಳ ದಂಡೇ ಆಗಮಿಸುತ್ತಿತ್ತು. ಆದರೆ, ಇದೀಗ ಇಂದು (ಸೆಪ್ಟೆಂಬರ್ 14) ದುಬೈನಲ್ಲಿ ನಡೆಯಲಿರುವ ಎರಡು ತಂಡಗಳ ಮ್ಯಾಚ್ ವೀಕ್ಷಣೆಗೆ ಹಿಂದೇಟು ಹಾಕುವುದಲ್ಲದೆ, ಈ ಪಂದ್ಯ ನಡೆಯವಾರದು ಎಂದು ಬಹುತೇಕ ಮಂದಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.
ಹೌದು.. ಕಳೆದ ಏಪ್ರಿಲ್‌ನಲ್ಲಿ ಪಹಲ್ಗಾಂನಲ್ಲಿ ಭೀಕರ ಉಗ್ರ ದಾಳಿ ಬಳಿಕ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡುವ ಬಗ್ಗೆ ಭಾರೀ ಚರ್ಚೆ ಆಗಿತ್ತು. ಪಾಕ್ ಜೊತೆಗಿನ ಎಲ್ಲಾ ರೀತಿ ಸಂಬಂಧ ಕೊನೆಗೊಳಿಸಲು ಒತ್ತಾಯಗಳು ಕೇಳಿಬಂದಿದ್ದವು. ಆದರೆ, ಇದೀಗ ಕೇಂದ್ರ ಸರ್ಕಾರದ ಅನುಮತಿಯಿಂದ ಪಾಕಿಸ್ತಾನದ ವಿರುದ್ಧ ಭಾರತ ಪಂದ್ಯವಾಡಲು ಸಜ್ಜಾಗಿದೆ. ಇದಕ್ಕೆ ವ್ಯಾಪಕ ಆಕ್ರೋಶಗಳು ಬುಗಿಲೆದ್ದಿದ್ದು, ಟಿಕೆಟ್‌ಗಳೇ ಸೋಲ್ಡ್ ಆಗಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ. ಹಾಗಾದ್ರೆ, ನೆಟ್ಟಿಗರು ಹೇಳೋದೇನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ತಿಳಿಯಿರಿ.

ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ಕಾಳಗ ವೀಕ್ಷಣೆ ಮಾಡಲು ಭಾರತ ಸೇರಿದಂತೆ ಇಡೀ ವಿಶ್ವವೇ ಕಾತರದಿಂದ ಕಾಯುತಿರುತ್ತಿತ್ತು. ಆದರೆ, ಇದು ಇದೀಗ ಉಲ್ಟಾ ಆಗಿದೆ. ಇಂದು ದುಬೈನಲ್ಲಿ ನಡೆಯುವ ಇಂಡಿಯಾ-ಪಾಕಿಸ್ತಾನ ಪಂದ್ಯಕ್ಕೆ ಭಾರೀ ವಿರೋಧಗಳು ವ್ಯಕ್ತವಾಗಿದ್ದು, ಪಂದ್ಯ ರದ್ದುಪಡಿಸುವಂತೆ ವ್ಯಾಪಕವಾಗಿ ಕೂಗುಗಳು ಎದ್ದಿವೆ. ಅಲ್ಲದೆ, ಬಾಯ್ಕಟ್ ಎಂಬ ಹ್ಯಾಷ್‌ಟ್ಯಾಗ್ ಮೂಲಕ ಬಿಸಿಸಿಐ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುಗತ್ತಿದ್ಧಾರೆ.
ದುಬೈನಲ್ಲಿ ಇಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಭಾರಿ ಟೀಕೆಗಳು ಹಾಗೂ ಬಹಿಷ್ಕಾರದ ಕೂಗುಗಳು ಕೇಳಿಬರುತ್ತಿವೆ. ಅಭಿಮಾನಿಗಳು ಪಹಲ್ಗಾಮ್ ಭಯೋತ್ಪಾದಕ ದಾಳಿ ಉಲ್ಲೇಖಿಸುವ ಮೂಲಕ ಈ ತಂಡಗಳ ನಡುವೆ ನಡೆಯಲಿರುವ ಪಂದ್ಯ ರದ್ದು ಮಾಡಬೇಕೆಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಹಿನ್ನೆಲೆ ಇಂದಿನ ಪಂದ್ಯ ವೀಕ್ಷಣೆಯ ಟಿಕೆಟ್ ಮಾರಾಟವಾಗದೇ ಉಳಿದಿವೆ. ಹೆಚ್ಚಿನ ಪ್ರಚಾರದ ಹೊರತಾಗಿಯೂ ಕ್ರೀಡಾಂಗಣದ ಅರ್ಧದಷ್ಟು ಆಸನಗಳ ಟಿಕೆಟ್‌ಗಳು ಮಾರಾಟ ಆಗಿಲ್ಲ ಎಂದು ತಿಳಿದುಬಂದಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಭಾರತ-ಪಾಕ್ ಕ್ರಿಕೆಟ್ ಪಂದ್ಯದ ಬಗ್ಗೆ ಭಾರಿ ಟೀಕೆ ವ್ಯಕ್ತವಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಇದನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳು ಮತ್ತು ಪ್ರಾಣ ತ್ಯಾಗ ಮಾಡಿದ ಭಾರತೀಯ ಸೈನಿಕರಿಗೆ ಮಾಡಿದ ಅವಮಾನ ಎಂದು ಕರೆದಿದ್ದಾರೆ.
ಅಲ್ಲದೆ, #BoycottIndvsPak ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಹಾಕುತ್ತಿದ್ದು, ಈ ಮೂಲಕ ಇಂದಿನ ಪಂದ್ಯವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು, ಹಲವು ಮಾಜಿ ಕ್ರಿಕೆಟಿಗರು ಒತ್ತಾಯಿಸುತ್ತಿದ್ದಾರೆ. ಇದರಿಂದ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಮಾರಾಟ ನಿಧಾನವಾಗಿದೆ.
ಮಾರಾಟ ಆರಂಭವಾಗಿ ಹತ್ತು ದಿನಗಳಾದರೂ, ಕ್ರೀಡಾಂಗಣದಲ್ಲಿ ಅರ್ಧಕ್ಕೂ ಹೆಚ್ಚು ಕುರ್ಚಿಗಳು ಖಾಲಿಯೇ ಉಳಿದಿವೆ. ಟಿಕೆಟ್ ದರವು 99 ಅಮೇರಿಕನ್ ಡಾಲರ್‌ನಿಂದ ಪ್ರಾರಂಭ ಆಗಿದ್ದು, ಪ್ರೀಮಿಯಂ ಪ್ಯಾಕೇಜ್‌ಗಳು 4 ಲಕ್ಷ ರೂಪಾಯಿಗೂ ಹೆಚ್ಚಿವೆ. ಇನ್ನು ಅನೇಕರು ಪಂದ್ಯ ವೀಕ್ಷಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಜರಾಗಲು ಹಿಂಜರಿಯುತ್ತಾರೆ.
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ: "ಏಷ್ಯಾ ಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವೇ ನಡೆಯಬಾರದು. ಕೆಲವೇ ದಿನಗಳ ಹಿಂದೆ ಅಮಾಯಕ ಭಾರತೀಯರು ಹುತಾತ್ಮರಾದರು... ರಾಷ್ಟ್ರ ಹಿತದ ಬಗ್ಗೆ ಮಾತನಾಡುವವರು ಈಗ ಏಕೆ ಮೌನವಾಗಿದ್ದಾರೆ? ಕ್ರಿಕೆಟ್ ಮತ್ತು ಹಣವೇ ಅಷ್ಟು ಮುಖ್ಯವೇ? ಪಾಕಿಸ್ತಾನದ ಹೇಡಿತನದ ಕೃತ್ಯವನ್ನು ಅವರು ಇಷ್ಟು ಬೇಗ ಮರೆತಿರುವರೇ?," ಎಂದು ನೆಟ್ಟಿಗರೊಬ್ಬರು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಪಂದ್ಯದ ಬಹಿಷ್ಕಾರಕ್ಕೆ ಬೆಂಬಲ: ಇನ್ನೊಬ್ಬ ಟ್ವಿಟರ್ ಬಳಕೆದಾರು, "ಪಹಲ್ಗಾಂ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸುತ್ತಾ ಮತ್ತು ನನ್ನ ಭಾರತೀಯ ಸಹೋದರ, ಸಹೋದರಿಯರೊಂದಿಗೆ ನಿಂತುಕೊಳ್ಳುತ್ತೇನೆ. ಈ ಹಿನ್ನೆಲೆ ಭಾರತ-ಪಾಕಿಸ್ತಾನ ಪಂದ್ಯದ ಬಹಿಷ್ಕರಿಸುವುದನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ನೀವು ಸಹ ಒಪ್ಪಿದರೆ, ಈ ಟ್ರೆಂಡ್‌ಗೆ ಸೇರಿ ಹಾಗೂ ರೀಟ್ವೀಟ್ ಮಾಡಿ," ಎಂದು ಬರೆದುಕೊಂಡಿದ್ದಾರೆ.
ದೇಶಕ್ಕಾಗಿ ನಾವು ಒಟ್ಟಾಗಬೇಕೆಂಬ ಕರೆ: ಮೂರನೇಯ ಬಳಕೆದಾರರು "ನಾವು ಒಂದು ರಾಷ್ಟ್ರವಾಗಿ ಏಷ್ಯಾ ಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಒಟ್ಟಾಗಿ ಬಹಿಷ್ಕರಿಸಲಾರವೇ? ಬಿಸಿಸಿಐ ಅದನ್ನು ಮಾಡಲಾಗದಿದ್ದರೆ, ನಾವು ಒಂದು ರಾಷ್ಟ್ರವಾಗಿ ಮಾಡಬಹುದು. ಜಯ ಹಿಂದ್," ಎಂದು ಬರೆದುಕೊಂಡಿದ್ದಾರೆ. ಇನ್ನು ನಾಲ್ಕನೇ ಬಳಕೆದಾರರು "ನಿಮ್ಮ ಮನೆಗಳಲ್ಲಿ ಟಿವಿಗಳನ್ನು ಆನ್ ಮಾಡಬೇಡಿ. ಅವರಿಗೆ ಸಂಖ್ಯೆಗಳನ್ನು ನೀಡಬೇಡಿ. ಈ ಪಂದ್ಯವನ್ನು ಬಹಿಷ್ಕರಿಸಿ" ಎಂದು ಸಲಹೆ ನೀಡಿದರು.
ಐಶಾನ್ಯಾ ದ್ವಿವೇದಿ ಆಕ್ರೋಶ: ಇತ್ತೀಚಿನ ಪಹಲ್ಗಾಂ ಉಗ್ರ ದಾಳಿಯಲ್ಲಿ ಹುತಾತ್ಮರಾದವರ ಪತ್ನಿಯಾದ ಐಶಾನ್ಯಾ ದ್ವಿವೇದಿ, 2025ರ ಏಷ್ಯಾ ಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಖಂಡಿಸಿ. ಎಲ್ಲಾ ಪಾಲುದಾರರು ಪಂದ್ಯವನ್ನು ಬಹಿಷ್ಕರಿಸುವಂತೆ ಮನವಿ ಮಾಡಿದರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯನ್ನು ಟೀಕಿಸಿದ ಅವರು, 26 ಜನರು ಬಲಿಯಾದ ತ್ಯಾಗವನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಬರೆದುಕೊಳ್ಳುವ ಮೂಲಕ ಆಕ್ರೋಶ ಹೊರಹಾಕಿದರು.
#BoycottAsiaCup #BoycottINDvPAK
— jayaa 💜🩵 (@Jayaa2012) September 12, 2025
Can we, as a nation, collectively boycott the India vs Pakistan match in the Asia Cup?
If BCCI cannot do it, but as a nation we can
Jay Hind🫡🇮🇳 pic.twitter.com/a9EC06jSai
ಬಿಸಿಸಿಐಗೆ ಯಾವುದೇ ಭಾವನಾತ್ಮಕತೆ ಇಲ್ಲ: "ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಬಿಸಿಸಿಐ ಒಪ್ಪಿಕೊಳ್ಳಬಾರದಿತ್ತು. ಆ 26 ಕುಟುಂಬಗಳ ಬಗ್ಗೆ ಬಿಸಿಸಿಐಗೆ ಯಾವುದೇ ಭಾವನಾತ್ಮಕತೆ ಇಲ್ಲ ಎಂದು ನಾನು ಭಾವಿಸುತ್ತೇನೆ. ನಮ್ಮ ಕ್ರಿಕೆಟಿಗರು ಏನು ಮಾಡುತ್ತಿದ್ದಾರೆ? ಕ್ರಿಕೆಟಿಗರನ್ನು ರಾಷ್ಟ್ರಭಕ್ತರೆಂದು ಹೇಳಲಾಗುತ್ತದೆ..1-2 ಆಟಗಾರರನ್ನು ಹೊರತುಪಡಿಸಿ, ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ನಾವು ಬಹಿಷ್ಕರಿಸಬೇಕೆಂದು ಹೇಳಲು ಯಾರೂ ಮುಂದೆ ಬಂದಿಲ್ಲ", ಎಂದು ಎನ್‌ಐಗೆ ತಿಳಿಸಿದ್ದಾರೆ.
ಪಂದ್ಯದ ಆದಾಯ ಯಾವುದಕ್ಕೆ ಬಳಕೆ?: "ಈ ಪಂದ್ಯದ ಆದಾಯವನ್ನು ಯಾವುದಕ್ಕೆ ಬಳಸಲಾಗುತ್ತದೆ? ಪಾಕಿಸ್ತಾನ ಇದನ್ನು ಕೇವಲ ಭಯೋತ್ಪಾದನೆಗೆ ಬಳಸುತ್ತದೆ... ನನಗೆ ಇದು ಅರ್ಥವಾಗುತ್ತಿಲ್ಲ," ಎಂದು ಪ್ರಾಯೋಜಕರು ಮತ್ತು ಪ್ರಸಾರಕರ ವಿರುದ್ಧ ಆಕ್ರೋಶ ಹೊರಹಾಕಿದರು. ಅಲ್ಲದೆ, ಹುತಾತ್ಮದವರ ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲುವಂತೆ ಆಟಗಾರರು ಮತ್ತು ಅಧಿಕಾರಿಗಳನ್ನು ದ್ವಿವೇದಿ ಅವರು ಒತ್ತಾಯಿಸಿದರು. ಹೀಗೆ ನಮ್ಮ ದೇಶದ ಅಮಾಯಕ ಜನರನ್ನು ಬಲಿ ಪಡೆದುಕೊಂಡಿರುವ ಉಗ್ರ ರಾಷ್ಟದ ತಂಡದ ವಿರುದ್ಧ ಕ್ರಿಕೆಟ್ ಆಡಿಸಲು ಒಪ್ಪಿರುವ ಕೇಂದ್ರ ಹಾಗೂ ಬಿಸಿಸಿಐ ನಿಲುವು ಸರಿಯಿಲ್ಲ ಎನ್ನುವ ಆಕ್ರೋಶಗಳು ಭುಗಿಲೆದ್ದಿವೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications