Gautam Gambhir: ಗೌತಮ್ ಗಂಭೀರ್ ಜಾಗ ಖಾಲಿ ಮಾಡಿಸಲು ಬಿಸಿಸಿಐ ಚಿಂತನೆ?
ಭಾರತ ಕ್ರಿಕೆಟ್ ತಂಡದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ, ಕ್ರಿಕೆಟ್ ಲೋಕದಲ್ಲಿ ಭಾರತವೇ ಕೇಂದ್ರ ಸ್ಥಾನ ಪಡೆದಿದ್ದು ಇಡೀ ಜಗತ್ತಿನಾದ್ಯಂತ ಭಾರತೀಯ ಆಟಗಾರರು ಹೆಸರು ಮಾಡಿದ್ದಾರೆ. ಇನ್ನೊಂದು ಕಡೆ ಕ್ರಿಕೆಟ್ ಇಡೀ ಜಗತ್ತಿನಾದ್ಯಂತ ಸದ್ದು ಮಾಡಲು ಭಾರತೀಯರ ಬೆಂಬಲ ಕೂಡ ಅಷ್ಟೇ ಅಗತ್ಯವಾಗಿದೆ. ಇಷ್ಟೆಲ್ಲದರ ನಡುವೆಯೇ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾದ ನಂತರ ಕಿರಿಕ್ ಜೋರಾಗಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅಭಿಮಾನಿಗಳು ಗೌತಮ್ ಗಂಭೀರ್ ವಿರುದ್ಧ ರೊಚ್ಚಿಗೆದ್ದಿದ್ದಾರೆ...
ಹೌದು, ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಬಂದ ನಂತರ ಭಾರತೀಯ ಕ್ರಿಕೆಟ್ ತಂಡದ ಒಳಗೆ ಕಾವು ಹೆಚ್ಚಾಗಿದೆ. ಪ್ರಮುಖವಾಗಿ ಗೌತಮ್ ಗಂಭೀರ್ ವರ್ತನೆಯ ಪರಿಣಾಮ ತಂಡದಲ್ಲಿ ಸರಿ ಮಾಡಲಾಗದಷ್ಟು ಹಾನಿಯಾಗಿದೆ, ಗಂಭೀರ್ ಕಾರಣಕ್ಕೆ ವಿರಾಟ್ ಕೊಹ್ಲಿ ಏಕದಿನ & ಟೆಸ್ಟ್ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಇಷ್ಟೆಲ್ಲಾ ಒತ್ತಡದ ನಡುವೆ ಗೌತಮ್ ಗಂಭೀರ್ ಮುಖ್ಯ ಕೋಚ್ ಹುದ್ದೆ ಬಿಟ್ಟು ಹೊರಗೆ ಹೋಗಲಿ ಎಂಬ ಒತ್ತಾಯ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಕೇಳಿ ಬರುತ್ತಲೇ ಇತ್ತು. ಈಗ ಗೌತಮ್ ಗಂಭೀರ್ ಕೋಚ್ ಹುದ್ದೆ ಭವಿಷ್ಯದ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ.

ಗಂಭೀರ್ ಕೋಚ್ ಹುದ್ದೆ ಭವಿಷ್ಯದ ಬಗ್ಗೆ...
ಅಂದಹಾಗೆ ಗೌತಮ್ ಗಂಭೀರ್ ಭಾರತೀಯ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಬಂದ ನಂತರ ಸಾಲು ಸಾಲು ದೊಡ್ಡ ಸೋಲುಗಳೇ ಎದುರಾಗಿವೆ. ಅದರಲ್ಲೂ ಭಾರತ ತಂಡ ತವರಿನಲ್ಲೇ ಭಾರಿ ಹೀನಾಯ ಸೋಲು ಕಂಡಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಟೆಸ್ಟ್ ಸರಣಿಯಲ್ಲಿ, ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ತಂಡ ತವರಿನಲ್ಲೇ 0-2 ಅಂತರದ ಸೋಲು ಕಂಡಿತ್ತು.
ಅಲ್ಲದೆ ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಆರೋಪ ಕೂಡ ಸಂಚಲನ ಸೃಷ್ಟಿ ಮಾಡಿತ್ತು. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ಅಭಿಮಾನಿಗಳು ಗಂಭೀರ್ ಮನೆಗೆ ಹೋಗಲಿ ಅಂತಾ ಆಗ್ರಹ ಮಾಡುತ್ತಿದ್ದರು. ಈ ಬಗ್ಗೆ ಇದೀಗ ಬಿಸಿಸಿಐ ಸ್ಪಷ್ಟನೆ ನೀಡಿದ್ದು, ಗೌತಮ್ ಗಂಭೀರ್ ಹುದ್ದೆಗೆ ಬೇರೆ ಕೋಚ್ ಎಂಟ್ರಿ ಆಗುತ್ತಾ? ಮುಂದೆ ಓದಿ.
ಗೌತಮ್ ಗಂಭೀರ್ ಜಾಗ ಖಾಲಿ?
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಇದೀಗ ಗೌತಮ್ ಗಂಭೀರ್ ಅವರ ಹೆಡ್ ಕೋಚ್ ಹುದ್ದೆಯ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿ ಗೌತಮ್ ಗಂಭೀರ್ ಬದಲಿಗೆ, ಹೊಸಬರಿಗೆ ಹೆಡ್ ಕೋಚ್ ಹುದ್ದೆ ನೀಡಲು ಚಿಂತನೆ ನಡೆಸಿದೆ ಎಂಬ ಗಾಳಿ ಸುದ್ದಿಗಳಿಗೆ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ. ಗೌತಮ್ ಗಂಭೀರ್ ಅವರ ಮುಖ್ಯ ಕೋಚ್ ಹುದ್ದೆ ಕುರಿತು ಮಾಧ್ಯಮಗಳ ಮೂಲಕ ಹರಡುತ್ತಿರುವ ಊಹಾಪೋಹಕ್ಕೆ ನಾನು ಸ್ಪಷ್ಟನೆಯನ್ನ ನೀಡುವೆ. ಈಗಾಗಲೇ ಗೌತಮ್ ಗಂಭೀರ್ ಅವರನ್ನು ತೆಗೆದುಹಾಕುವ ಅಥವಾ ಭಾರತಕ್ಕೆ ಹೊಸ ಮುಖ್ಯ ಕೋಚ್ ತರುವ ಯಾವುದೇ ಯೋಜನೆ ಇಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ (ದೇವಜಿತ್ ಸೈಕಿಯಾ) ಸ್ಪಷ್ಟವಾಗಿ ಹೇಳಿದ್ದಾರೆ... ಎಂದು ಹೇಳುವ ಮೂಲಕ ಗೌತಮ್ ಗಂಭೀರ್ ಸದ್ಯಕ್ಕೆ ಸೇಫ್ ಎಂಬುದನ್ನು ರಾಜೀವ್ ಶುಕ್ಲಾ ಈಗ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications