RCB Vs SRH: ಆರ್‌ಸಿಬಿ ತಂಡದ ಮಾಲೀಕತ್ವ ಬದಲಾಗಲಿ; ಟೆನಿಸ್ ತಾರೆ ಮಹೇಶ್ ಭೂಪತಿ ಆಕ್ರೋಶ

ಐಪಿಎಲ್ 2024ರಲ್ಲಿ ಹೊಸ ಅಧ್ಯಾಯ ಆರಂಭ ಆಗುತ್ತೆ ಎಂದು ಕಾಯುತ್ತಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಹೊಸ ಹೊಸ ಆಘಾತಗಳು ಎದುರಾಗುತ್ತಿವೆ. ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೂಡ 25 ರನ್‌ಗಳಿಂದ ಸೋಲನುಭವಿಸಿತು.

ಆರ್‌ಸಿಬಿ ಪ್ರದರ್ಶನ ಕಂಡು ಖ್ಯಾತ ಟೆನಿಸ್ ತಾರೆ ಮಹೇಶ್ ಭೂಪತಿ ತಂಡದ ಮಾಲೀಕತ್ವದ ವಿರುದ್ಧದವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಆರ್‌ಸಿಬಿ ವಿರುದ್ಧ 20 ಓವರ್ ಗಳಲ್ಲಿ 287 ರನ್ ಕಲೆಹಾಕಿದ ಬಳಿಕ, ಎಕ್ಸ್‌ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಮಹೇಶ್ ಭೂಪತಿ, ತಂಡದ ಮಾಲೀಕತ್ವ ಬದಲಾಗಬೇಕು ಎಂದು ಹೇಳಿದ್ದಾರೆ.

Mahesh Bhupathi Criticizes RCB Management over Disastrous Showing Against SRH

ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, "ಕ್ರೀಡೆ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರರ ಹಿತದೃಷ್ಟಿಯಿಂದ ಬಿಸಿಸಿಐ ಆರ್‌ಸಿಬಿ ಮಾಲೀಕರಿಗೆ ತಂಡವನ್ನು ಮಾರಾಟ ಮಾಡುವಂತೆ ಒತ್ತಾಯಿಸಬೇಕು, ಹೊಸ ಮಾಲೀಕರು ತಂಡವನ್ನು ಇತರ ತಂಡಗಳ ಮಾದರಿಯಲ್ಲಿ ಕ್ರೀಡಾ ಫ್ರಾಂಚೈಸಿ ಮಾಡುವಲ್ಲಿ ಕಾಳಜಿಯನ್ನಾದರೂ ವಹಿಸುತ್ತವೆ" ಎಂದು ಹೇಳಿದ್ದಾರೆ.

ಸೋಲಿನಲ್ಲೂ ದಾಖಲೆ ಬರೆದ ಆರ್ ಸಿಬಿ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಆರ್‌ಸಿಬಿ ಸೋಲನುಭವಿಸಿದ್ದರೂ ಹೊಸ ದಾಖಲೆ ನಿರ್ಮಾಣವಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿತು.

ಟ್ರಾವಿಸ್ ಹೆಡ್ 41 ಎಸೆತಗಳಲ್ಲಿ 102 ರನ್ ಗಳಿಸಿದರು. ಹೆನ್ರಿಕ್ ಕ್ಲಾಸೆನ್ 31 ಎಸೆತಗಳಲ್ಲಿ 67 ರನ್ ಗಳಿಸಿದರು. ಅಬ್ದುಲ್ ಸಮದ್ 10 ಎಸೆತಗಳಲ್ಲಿ 37 ರನ್ ಗಳಿಸಿದರು. ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಿದರೂ ಆರ್‌ಸಿಬಿ ದುರಾದೃಷ್ಟ ಮಾತ್ರ ಸರಿಹೋಗಲಿಲ್ಲ.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್‌ಸಿಬಿ ಹೋರಾಟ ನೀಡಿದರೂ ಗೆಲುವು ಸಾಧಿಸಲು ಆಗಲಿಲ್ಲ. 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 262 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಫಾಫ್ ಡುಪ್ಲೆಸಿಸ್ 28 ಎಸೆತಗಳಲ್ಲಿ 62 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 20 ಎಸೆತಗಳಲ್ಲಿ 42 ರನ್ ಗಳಿಸಿದರು. ದಿನೇಶ್ ಕಾರ್ತಿಕ್ 35 ಎಸೆತಗಳಲ್ಲಿ 83 ರನ್ ಗಳಿಸುವ ಮೂಲಕ ಹೋರಾಟ ನೀಡಿದರು.

ಚೇಸಿಂಗ್ ಮಾಡುವಾಗ ಅತ್ಯಧಿಕ ಮೊತ್ತ ಕಲೆಹಾಕಿದ ತಂಡ ಎನ್ನುವ ದಾಖಲೆಯನ್ನು ಆರ್ ಸಿಬಿ ಬರೆಯಿತು. ಒಂದೇ ಪಂದ್ಯದಲ್ಲಿ 38 ಸಿಕ್ಸರ್ ದಾಖಲಾಗಿದ್ದು ಕೂಡ ಹೊಸ ದಾಖಲೆ. ಪಂದ್ಯದಲ್ಲಿ ಒಟ್ಟು 549 ರನ್‌ಗಳು ದಾಖಲಾಗಿದ್ದು ಟಿ20 ಕ್ರಿಕೆಟ್‌ನಲ್ಲೇ ಇದು ಹೊದ ದಾಖಲೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+