ಡೆಲ್ಲಿ ಕ್ಯಾಪಿಟಲ್ ಬಸ್ ಮೇಲೆ ಎಂಎನ್ಎಸ್ ಕಾರ್ಯಕರ್ತರ ದಾಳಿ ಏಕೆ?
ಮುಂಬೈ, ಮಾರ್ಚ್ 16: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳಿಗೆ ಆಟಗಾರರನ್ನು ಕರೆದೊಯ್ಯಲು ನಿಂತಿದ್ದ ಬಸ್ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಮುಂದಿನ ವಾರ ಶುರುವಾಗಲಿದೆ.
ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಪಂಚತಾರಾ ಹೋಟೆಲ್‌ನ ಹೊರಗೆ ನಿಲ್ಲಿಸಿದ್ದ ಐಷಾರಾಮಿ ಬಸ್‌ಗಳ ಗಾಜುಗಳನ್ನು ಒಡೆದಿದ್ದಾರೆ ಎಂದು ಅಧಿಕಾರಿಗಳು ಬುಧವಾರ ಮುಂಜಾನೆ ಇಲ್ಲಿ ತಿಳಿಸಿದ್ದಾರೆ. ಘಟನೆ ಬಳಿಕ ಕೊಲಾಬಾ ಪೊಲೀಸರು, ಹಲ್ಲೆಕೋರರನ್ನು ಪತ್ತೆ ಹಚ್ಚಿದ್ದು, ಕನಿಷ್ಠ ಐದು ಮಂದಿಯನ್ನು ಬಂಧಿಸಿದ್ದಾರೆ. ಎಂಎನ್‌ಎಸ್ ಕಾರ್ಯಕರ್ತರ ಮೇಲೆ ಐಪಿಎಸ್ ಸೆಕ್ಷನ್ 143,147,149, 427 ಅನ್ವಯ ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ಹಾಕಲಾಗಿದೆ.
Mumbai | An FIR has been registered against 5-6 unknown persons under sections 143,147,149,427 of IPC for allegedly attacking the Delhi Capital IPL team parked bus, police said pic.twitter.com/aED8Z1Hd5G
— ANI (@ANI) March 16, 2022
ಎಂಎನ್‌ಎಸ್-ವಾಹತುಕ್ ಸೇನಾ (ಸಾರಿಗೆ ವಿಭಾಗ) ದ ಸುಮಾರು ಆರು ಮಂದಿ ಕಾರ್ಯಕರ್ತರು ಮಧ್ಯರಾತ್ರಿಯ ನಂತರ ಹೋಟೆಲ್ ಮುಂದೆ ಬಂದಿದ್ದಾರೆ. ಮೊದಲು ಬಸ್‌ನ ಬಳಿ ನುಸುಳಿ, ಬಸ್‌ನ ಮುಂಭಾಗದಲ್ಲಿ ತಮ್ಮ ಬೇಡಿಕೆಗಳ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ, ನಂತರ ಜೈ ಮಹಾರಾಷ್ಟ್ರ ಎಂದು ಘೋಷಣೆಗಳನ್ನು ಕೂಗಿ, ಬಸ್ ಗಾಜುಗಳನ್ನು ಒಡೆಯಲು ಪ್ರಾರಂಭಿಸಿದ ಘಟನೆ ನಡೆದಿದೆ.

ಬಳಿಕ ಮಾತನಾಡಿದ ಎಂಎನ್ಎಸ್ ಕಾರ್ಯಕರ್ತ ಸಂಜಯ್ ನಾಯ್ಕ್, ಹೊರ ರಾಜ್ಯಗಳ ಬಸ್‌ಗಳನ್ನು ಬಾಡಿಗೆಗೆ ಪಡೆದು ಬಳಸಲಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ವಂಚನೆಯಾಗುತ್ತಿದೆ, ಹೀಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದಿದ್ದಾರೆ.
"ನಮ್ಮ ಪ್ರತಿಭಟನೆಗಳ ಹೊರತಾಗಿಯೂ, ಅವರು ದೆಹಲಿ ಮತ್ತು ಇತರ ಭಾಗಗಳಿಂದ ಇಲ್ಲಿಗೆ ಹಲವಾರು ಬಸ್‌ಗಳು ಮತ್ತು ಇತರ ಸಣ್ಣ ವಾಹನಗಳನ್ನು ಅನುಮತಿಸಿದ್ದಾರೆ, ಇದು ಸ್ಥಳೀಯ ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ" ಎಂದು ನಾಯಕ್ ಐಎಎನ್‌ಎಸ್‌ಗೆ ತಿಳಿಸಿದರು.












Click it and Unblock the Notifications