
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಎರಡನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ: ನೇರಪ್ರಸಾರ, ಪಂದ್ಯಾವಳಿ ಬಗ್ಗೆ ವಿವರ ತಿಳಿಯಿರಿ
ಬಹು ನಿರೀಕ್ಷಿತ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಎರಡನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ ಮತ್ತು ಸ್ಥಳಗಳನ್ನು ಸಂಘಟಕರು ಮಂಗಳವಾರ ಪ್ರಕಟಿಸಿದ್ದಾರೆ. ಸೆಪ್ಟೆಂಬರ್ 16 ರಿಂದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಆರಂಭವಾಗಲಿದ್ದು, ದೇಶದ ಪ್ರಮುಖ ಆರು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.
ಕೋಲ್ಕತ್ತಾ, ನವದೆಹಲಿ, ಕಟಕ್, ಲಕ್ನೋ ಮತ್ತು ಜೋಧ್‌ಪುರದಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಪ್ಲೇ-ಆಫ್‌ಗಳ ಸ್ಥಳವನ್ನು ನಂತರ ಪ್ರಕಟಿಸಲಾಗುವುದು ಎಂದು ಹೇಳಿದೆ.
ಕೊಹ್ಲಿಯ ಭವಿಷ್ಯವೇನು ಎನ್ನುವ ಅಭಿಮಾನಿಯ ಪ್ರಶ್ನೆಗೆ ಶಾಹಿದ ಅಫ್ರಿದಿ ಕೊಟ್ಟ ಉತ್ತರ ಏನು ಗೊತ್ತಾ?
ಭಾರತದ ಸ್ವಾತಂತ್ರ್ಯದ 75 ನೇ ವರ್ಷದ ನೆನಪಿಗಾಗಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತೀಯ ಮಹಾರಾಜ ಮತ್ತು ವರ್ಲ್ಡ್ ಜೈಂಟ್ಸ್ ನಡುವೆ ವಿಶೇಷ ಪಂದ್ಯ ಆಯೋಜಿಸಲಾಗಿದೆ. ಭಾರತ ತಂಡದ ಮಾಜಿ ನಾಯಕ ಮತ್ತು ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಭಾರತ ಮಹಾರಾಜ ತಂಡದ ನಾಯಕತ್ವ ವಹಿಸಲಿದ್ದಾರೆ.
ಜೋಧ್‌ಪುರ ಮತ್ತು ಲಕ್ನೋ ನಗರಗಳಲ್ಲಿ ಎರಡು ಪಂದ್ಯಗಳನ್ನು ಆಯೋಜಿಸಿದ್ದರೆ. ಉಳಿದ ಮೈದಾನಗಳಲ್ಲಿ ತಲಾ ಮೂರು ಪಂದ್ಯಗಳನ್ನು ಆಯೋಜಿಸಲಾಗಿದೆ.
ಶುಭ್ಮನ್ ಗಿಲ್ ಭರ್ಜರಿ ಶತಕ: ಜಿಂಬಾಬ್ವೆ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

ಶೀಘ್ರದಲ್ಲೇ ಟಿಕೆಟ್ ಮಾರಾಟ
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಮನ್ ರಹೇಜಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ, "ನಮ್ಮ ಅಭಿಮಾನಿಗಳು ಮತ್ತು ವೀಕ್ಷಕರಿಗೆ ಕಾಯುವಿಕೆ ಮುಗಿದಿದೆ. ವೇಳಾಪಟ್ಟಿಯನ್ನು ಘೋಷಣೆ ಮಾಡಲಾಗಿದೆ. ಪಂದ್ಯಗಳಿಗೆ ಸಾಕ್ಷಿಯಾಗುವ ಬಗ್ಗೆ ಅಭಿಮಾನಿಗಳು ಇನ್ನು ಚಿಂತಿಸಬಹುದು. ಶೀಘ್ರದಲ್ಲೇ ದಿನಾಂಕದ ಜೊತೆಗೆ ಟಿಕೆಟಿಂಗ್ ಪಾಲುದಾರರ ಬಗ್ಗೆ ಘೋಷಣೆ ಮಾಡಲಾಗುವುದು." ಎಂದರು.
"ಹೊಸ ಸ್ವರೂಪದಲ್ಲಿ 10 ರಾಷ್ಟ್ರಗಳ ಐಕಾನಿಕ್ ಆಟಗಾರರ ತಂಡದೊಂದಿಗೆ, ಅಭಿಮಾನಿಗಳು ಈ ವರ್ಷ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಲಿದ್ದಾರೆ, ಈ ಬಾರಿ ಪಂದ್ಯಾವಳಿ ಮತ್ತಷ್ಟು ಉತ್ತಮವಾಗಿರುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಆಟಗಾರರಿಗೆ ಅವಕಾಶವಿಲ್ಲ
"ಮುಂಬರುವ ಋತುವಿನಲ್ಲಿ ನಾವು ಪಾಕಿಸ್ತಾನದಿಂದ ಯಾವುದೇ ಆಟಗಾರರನ್ನು ಪಡೆಯುತ್ತಿಲ್ಲ. ನಾವು ಶೀಘ್ರದಲ್ಲೇ ಡ್ರಾಫ್ಟ್‌ಗೆ ಇನ್ನೂ ಕೆಲವು ಅಂತರರಾಷ್ಟ್ರೀಯ ಆಟಗಾರರನ್ನು ಸೇರಿಸುತ್ತೇವೆ. ಮತ್ತು ನಮ್ಮ ಎಲ್ಲಾ ಲೆಜೆಂಡ್‌ಗಳು ನಮ್ಮೊಂದಿಗೆ ಪೂರ್ಣ ಪಂದ್ಯಾವಳಿಯನ್ನು ಆಡುತ್ತಾರೆ ಮತ್ತು ಯಾವುದೇ ಇತರ ಲೀಗ್ ಅಥವಾ ಕೆಲಸದ ಕಾರಣ ನೀಡಿ ಯಾವುದೇ ಪಂದ್ಯಗಳನ್ನು ತಪ್ಪಿಸಿಕೊಳ್ಳುವುದಿಲ್ಲ." ಎಂದು ಸ್ಪಷ್ಟನೆ ನೀಡಿದ್ದಾರೆ.
ಫೈನಲ್ ಪಂದ್ಯವನ್ನು ಡೆಹ್ರಾಡೂನ್ ಅಲ್ಲಿ ಆಯೋಜಿಸಲು ನೋಡುತ್ತಿದ್ದೇವೆ ಎಂದು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಮನ್ ರಹೇಜಾ ಮಾಹಿತಿ ನೀಡಿದ್ದಾರೆ.

ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯ ಭರವಸೆ
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಕಮಿಷನರ್ ರವಿಶಾಸ್ತ್ರಿ ಮಾತನಾಡಿ, "ನಾವು ಈ ಅದ್ಭುತ ಕ್ರಿಕೆಟ್ ಮೈದಾನಗಳಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಲು ಬರುತ್ತಿದ್ದೇವೆ. ಈ ಹಬ್ಬದ ಸಮಯದಲ್ಲಿ ನಾವು ಮೊದಲ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪ್ರಶಸ್ತಿಗಾಗಿ ಸ್ಪರ್ಧಿಸುವ ಟಾಪ್ ಲೆಜೆಂಡ್‌ಗಳೊಂದಿಗೆ ಕ್ರಿಕೆಟ್ ಉತ್ಸವವನ್ನು ಆಯೋಜಿಸುತ್ತಿದ್ದೇವೆ" ಎಂದು ಹೇಳಿದರು.
ಭಾರತದ ಸ್ವಾತಂತ್ರ್ಯದ 75 ನೇ ವರ್ಷದ ನೆನಪಿಗಾಗಿ ವಿಶೇಷ ಪಂದ್ಯವನ್ನು ಏರ್ಪಡಿಸಿರುವುದು ಹೆಮ್ಮೆಯ ವಿಚಾರ ಎಂದು ರವಿಶಾಸ್ತ್ರಿ ಸಂತಸ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಪಂದ್ಯಗಳ ವೇಳಾಪಟ್ಟಿ
ಸೆಪ್ಟೆಂಬರ್ 16 ರಿಂದ 18ರವರೆಗೆ ಕೋಲ್ಕತ್ತಾದಲ್ಲಿ ಮೂರು ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 21 ರಿಂದ 22ರವರೆಗೆ ಲಕ್ನೋದಲ್ಲಿ ಎರಡು ಪಂದ್ಯಗಳು ನಡೆಯಲಿವೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೆಪ್ಟೆಂಬರ್ 24 ರಿಂದ 26 ರವರೆಗೆ ಮೂರು ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ. ಕಟಕ್‌ನಲ್ಲಿ ಸೆಪ್ಟೆಂಬರ್ 27 ರಿಂದ 30ರವರೆಗೆ ಮೂರು ಪಂದ್ಯಗಳು ನಡೆಯಲಿದ್ದು, ಜೋಧಪುರದಲ್ಲಿ ಅಕ್ಟೋಬರ್ 1 ಮತ್ತು 3 ರಂದು ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ.
ಅಕ್ಟೋಬರ್ 5 ಮತ್ತು 7ರಂದು ಫ್ಲೇ ಆಫ್ ಪಂದ್ಯಗಳು ನಡೆಯಲಿದ್ದು ಸ್ಥಳ ಇನ್ನೂ ನಿಗದಿಯಾಗಿಲ್ಲ. ಅಕ್ಟೋಬರ್ 8 ರಂದು ಫೈನಲ್ ಪಂದ್ಯ ನಡೆಯಲಿದ್ದು, ಸ್ಥಳವನ್ನು ಶೀಘ್ರದಲ್ಲಿ ನಿರ್ಣಯಿಸಲಾಗುವುದು ಎಂದು ಹೇಳಿದೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಲೈವ್ ಸ್ಟ್ರೀಮಿಂಗ್ ಒಟಿಟಿ ಪ್ಲಾಟ್‌ಫಾರ್ಮ್ ಸೋನಿ ಲೈವ್ ನಲ್ಲಿ ವೀಕ್ಷಿಸಬಹುದಾಗಿದೆ.