RCB vs KKR: ಮೊದಲ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಆಡದಿರಲು ಇದೇ ಕಾರಣ
ಐಪಿಎಲ್ 2025ರ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಆರ್ ಸಿಬಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಈ ಬಾರಿ ಆವೃತ್ತಿಯಲ್ಲಿ ಮೊದಲ ಪಂದ್ಯ ದೇವರಿಗೆ ಬಿಡದೆ ತಾನೇ ಗೆದ್ದುಕೊಂಡಿದೆ. ಮೊದಲ 10 ಓವರ್ ಗಳಲ್ಲಿ ಬೌಲಿಂಗ್ ವಿಫಲವಾದರೂ ಬಳಿಕ ವಾಪಸಾತಿ ಮಾಡಿದ್ದು ಮಾತ್ರ ಅಭಿಮಾನಿಗಳಿಗೂ ಅಚ್ಚರಿ ಮೂಡಿಸಿತು. ತಂಡದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಇಲ್ಲದೇ ಇರುವುದು ಆರಂಭದಲ್ಲಿ ಸಾಕಷ್ಟು ಹಿನ್ನಡೆಗೆ ಕಾರಣವಾಯಿತು.
ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಕೈಬಿಟ್ಟು ರಸಿಕ್ ಸಲಾಮ್ ದಾರ್ ಅವರನ್ನು ಆಡಿಸಲಾಯಿತು. ಮೊದಲ ಓವರ್ ನಲ್ಲಿ ಆರ್ ಸಿಬಿ ವಿಕೆಟ್ ಪಡೆದರು, ಬಳಿಕ ರಹಾನೆ ಮತ್ತು ಸುನಿಲ್ ನರೈನ್ ಅಬ್ಬರಿಸಿದರು. ಈ ಸಂದರ್ಭದಲ್ಲಿ ಭುವನೇಶ್ವರ್ ಕುಮಾರ್ ಇರಬೇಕಿತ್ತು ಎಂದು ಆರ್ ಸಿಬಿ ಅಭಿಮಾನಿಗಳು ಅಂದುಕೊಂಡರು.

ಭುವನೇಶ್ವರ್ ಕುಮಾರ್ ಯಾಕೆ ಆಡಲಿಲ್ಲ?
ಮೂಲಗಳ ಪ್ರಕಾರ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಆಡದೇ ಇರಲಿ ಗಾಯದ ಸಮಸ್ಯೆ ಕಾರಣವಾಗಿದೆ. ಸಣ್ಣ ಗಾಯದ ಸಮಸ್ಯೆಯಿಂದ ಭುವನೇಶ್ವರ್ ಕುಮಾರ್ ಬಳಲುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಅವರಿಗೆ ಮೊದಲ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದೆ. ಜ್ವರ ಕೂಡ ಇತ್ತು ಎಂದು ಮೂಲಗಳು ತಿಳಿಸಿವೆ, ಸಿಎಸ್‌ಕೆ ವಿರುದ್ಧದ ಮುಂದಿನ ಪಂದ್ಯದ ವೇಳೆಗೆ ಅವರು ಫಿಟ್ ಆಗಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ.
ಕೆಕೆಆರ್ ವಿರುದ್ಧ ಭರ್ಜರಿ ಗೆಲುವು
ಭುವನೇಶ್ವರ್ ಕುಮಾರ್ ಅನುಪಸ್ಥಿತಿ ನಡುವೆಯೂ ಆರ್ ಸಿಬಿ ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಕೃನಾಲ್ ಪಾಂಡ್ಯ, ಜೋಶ್ ಹೇಜಲ್‌ವುಡ್ ಒಟ್ಟಾರೆ 5 ವಿಕೆಟ್ ಪಡೆಯುವ ಜೊತೆಗೆ ಕೆಕೆಆರ್ ರನ್ ಗಳಿಕೆಗೆ ಕಡಿವಾಣ ಹಾಕಿದರು. ಯಶ್ ದಯಾಳ್, ಸುಯಾಶ್ ಶರ್ಮಾ, ರಸಿಕ್ ದಾರ್ ಕೂಡ ಒಂದೊಂದು ವಿಕೆಟ್ ಪಡೆದುಕೊಂಡರು. ಕೆಕೆಆರ್ 20 ಒವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಕೆಲಹಾಕಿತು.
175 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ 16.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 177 ರನ್ ಗಳಿಸುವ ಮೂಲಕ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅಮೋಘ ಅರ್ಧಶತಕ ಸಿಡಿಸುವ ಮೂಲಕ ಆರ್ ಸಿಬಿ ಗೆಲುವನ್ನು ಸುಲಭವಾಗಿಸಿದರು.
ಆರ್ ಸಿಬಿ ಮುಂದಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಸಿಎಸ್‌ಕೆ ತಂಡವನ್ನು ಎದುರಿಸಲಿದೆ. ಮಾರ್ಚ್ 28ರಂದು ಶುಕ್ರವಾರ ಚೆನ್ನೈನಲ್ಲಿ ಈ ಪಂದ್ಯ ನಡೆಯಲಿದ್ದು, ಆರ್ ಸಿಬಿ ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.












Click it and Unblock the Notifications