• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಅನುಮತಿ ಯಾಕಿಲ್ಲ ಗೊತ್ತಾ?

|
Google Oneindia Kannada News

ಎಲ್ಲಾ ದೇಶದ ಕ್ರಿಕೆಟ್ ಆಟಗಾರರಿಗೆ ನಮ್ಮ ಐಪಿಎಲ್‌ ಟೂರ್ನಿಯಲ್ಲಿ ಭಾಗವಹಿಸುವುದು ಪ್ರತಿಷ್ಠಯ ವಿಚಾರವಾಗಿದೆ. ಹಲವು ಅಂತಾರಾಷ್ಟ್ರೀಯ ಆಟಗಾರರಿಗೆ ಐಪಿಎಲ್‌ ಸಾಕಷ್ಟು ಹಣ ಮತ್ತು ಹೆಸರು ತಂದುಕೊಟ್ಟಿದೆ. ಬೇರೆ ಯಾವುದೇ ಲೀಗ್ ಯಾವುದೇ ಆಟಗಾರನಿಗೆ ಇಷ್ಟು ಕಡಿಮೆ ಅವಧಿಗೆ ಹೆಚ್ಚಿನ ಬೆಲೆ ನೀಡುವುದಿಲ್ಲ.

ಎಲ್ಲಾ ದೇಶದ ಆಟಗಾರರು ನಮ್ಮ ದೇಶದ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುತ್ತಾರೆ, ಆದರೆ ನಮ್ಮ ದೇಶದ ಕ್ರಿಕೆಟಿಗರು ಮಾತ್ರ ಯಾಕೆ ಬೇರೆ ದೇಶಗಳಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸುವುದಿಲ್ಲ ಗೊತ್ತಾ?.

ಸೌರವ್ ಗಂಗೂಲಿ ನಾಯಕತ್ವದಲ್ಲಿ ವರ್ಲ್ಡ್ ಜೈಂಟ್ಸ್ ತಂಡದ ವಿರುದ್ಧ ಐತಿಹಾಸಿಕ ಕ್ರಿಕೆಟ್ ಪಂದ್ಯಸೌರವ್ ಗಂಗೂಲಿ ನಾಯಕತ್ವದಲ್ಲಿ ವರ್ಲ್ಡ್ ಜೈಂಟ್ಸ್ ತಂಡದ ವಿರುದ್ಧ ಐತಿಹಾಸಿಕ ಕ್ರಿಕೆಟ್ ಪಂದ್ಯ

ಭಾರತೀಯ ಕ್ರಿಕೆಟಿಗರು ವಿದೇಶದ ಟಿ20 ಟೂರ್ನಿಗಳಲ್ಲಿ ಭಾಗವಹಿಸಲು ಅನುಮತಿ ನೀಡಬೇಕೆಂದು ಹಲವು ವರ್ಷಗಳಿಂದ ಒತ್ತಾಯ ಕೇಳಿ ಬಂದಿದೆ. ಆದರೆ, ನಮ್ಮ ದೇಶದ ಕ್ರಿಕಟ್ ಆಟಗಾರರು ವಿದೇಶಿ ಟಿ20 ಟೂರ್ನಿಗಳಲ್ಲಿ ಆಡಲು ಬಿಸಿಸಿಐ ಯಾವುದೇ ಕಾರಣಕ್ಕೂ ಅನುಮತಿ ಕೊಡುವುದಿಲ್ಲ. ಅದಕ್ಕೆ ಹಲವು ಕಾರಣಗಳನ್ನು ಬಿಸಿಸಿಐ ನೀಡುತ್ತದೆ.

ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಬೇಕೆನ್ನುವ ಕಾರಣ ನೀಡಿರುವ ನ್ಯೂಜಿಲೆಂಡ್‌ನ ಪ್ರಮುಖ ವೇಗಿ ಟ್ರೆಂಟ್‌ ಬೌಲ್ಟ್‌ ರಾಷ್ಟ್ರೀಯ ತಂಡದ ಗುತ್ತಿಗೆಯಿಂದ ಬಿಡುಗಡೆ ಪಡೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಕ್ರಿಕೆಟ್ ಜಗತ್ತಿನಲ್ಲಿ ಹಣವೇ ಮುಖ್ಯವಾಯಿತಾ ಎನ್ನುವ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ.

ಲೀಗ್‌ಗಳಿಗಾಗಿ ರಾಷ್ಟ್ರೀಯ ತಂಡದ ಕಡೆಗಣನೆ

ಲೀಗ್‌ಗಳಿಗಾಗಿ ರಾಷ್ಟ್ರೀಯ ತಂಡದ ಕಡೆಗಣನೆ

ವಿಶ್ವ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಆಟಗಾರರಿಗೆ ಸಾಕಷ್ಟು ಬೇಡಿಕೆ ಇದೆ. ದೈತ್ಯರಾದ ಇವರು, ತಮ್ಮ ಸ್ಫೋಟಕ ಆಟ ಮತ್ತು ವರ್ತನೆಗೆ ಪ್ರಸಿದ್ಧರಾದವರು. ಆದರೆ ಇತ್ತೀಚಿನ ದಿನಗಳಲ್ಲಿ ವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಭಾಗವಹಿಸಲು, ರಾಷ್ಟ್ರೀಯ ತಂಡವನ್ನೇ ಕಡೆಗಣಿಸಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಹಲವು ಪ್ರಮುಖ ಆಟಗಾರರು ದೇಶಕ್ಕಾಗಿ ಕ್ರಿಕೆಟ್ ಆಡುವುದಕ್ಕಿಂತ ಹೆಚ್ಚಿನ ಹಣ ತಂದುಕೊಂಡುವ ಲೀಗ್‌ಗಳಲ್ಲಿ ಆಡಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಐಪಿಎಲ್‌ ಪಂದ್ಯಾವಳಿಯಲ್ಲಿ ಆಡಲು ವೆಸ್ಟ್ ಇಂಡೀಸ್ ಆಟಗಾರರು ವೆಸ್ಟ್‌ ಇಂಡೀಸ್‌ನ ಪ್ರಮುಖ ಪಂದ್ಯಗಳನ್ನೇ ಕೈಬಿಟ್ಟಿದ್ದಾರೆ.

ಜಿಂಬಾಬ್ವೆ ಪ್ರವಾಸ: ನಾಯಕನಾಗಿ ಭಾರತ ತಂಡಕ್ಕೆ ಮರಳಿದ ಕನ್ನಡಿಗ ಕೆಎಲ್ ರಾಹುಲ್ಜಿಂಬಾಬ್ವೆ ಪ್ರವಾಸ: ನಾಯಕನಾಗಿ ಭಾರತ ತಂಡಕ್ಕೆ ಮರಳಿದ ಕನ್ನಡಿಗ ಕೆಎಲ್ ರಾಹುಲ್

ವಿದೇಶಿ ಟೂರ್ನಿಗಳ ತಂಡಗಳ ಖರೀದಿ

ವಿದೇಶಿ ಟೂರ್ನಿಗಳ ತಂಡಗಳ ಖರೀದಿ

ಐಪಿಎಲ್‌ನ ಯಶಸ್ಸು ಫ್ರಾಂಚೈಸಿಗಳ ಮಾಲೀಕರು ಇತರ ವಿಶ್ವದ ಇತರೆ ಲೀಗ್‌ಗಳಿಗೆ ಪ್ರವೇಶಿಸಲು ಸಹಾಯ ಮಾಡಿದೆ. ಮುಂಬರುವ ಸಿಎಸ್‌ಎ ಟಿ20 ಲೀಗ್ ಅಖಿಲ ಭಾರತ ವ್ಯವಹಾರವಾಗಿದೆ.

ಐಪಿಎಲ್ ತಂಡದ ಮಾಲೀಕರು ಲೀಗ್‌ನಲ್ಲಿ ಆರು ತಂಡಗಳನ್ನು ಹೊಂದಿದ್ದಾರೆ, ಮುಂದಿನ ವರ್ಷ ಈ ಟೂರ್ನಿ ಪ್ರಾರಂಭವಾಗಲಿದೆ. ಐಪಿಎಲ್ ತಂಡದ ಮಾಲೀಕರು ಇತರ ಕೆಲವು ಲೀಗ್‌ಗಳಲ್ಲಿಯೂ ತಮ್ಮ ತಂಡಗಳನ್ನು ಹೊಂದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಮಾಲೀಕತ್ವ ಪಡೆದುಕೊಂಡಿದ್ದಾರೆ.

ಬಿಸಿಸಿಐ ಯಾಕೆ ಅವಕಾಶ ನೀಡುತ್ತಿಲ್ಲ

ಬಿಸಿಸಿಐ ಯಾಕೆ ಅವಕಾಶ ನೀಡುತ್ತಿಲ್ಲ

ಭಾರತೀಯ ಫ್ರಾಂಚೈಸಿಗಳೇ ವಿದೇಶಿ ಲೀಗ್‌ಗಳಲ್ಲಿ ತಂಡವನ್ನು ಖರೀದಿಸಿರುವಾಗ ಭಾರತೀಯ ಆಟಗಾರರು ಈ ಲೀಗ್‌ಗಳಲ್ಲಿ ಆಡುತ್ತಾರೆಯೇ ಎನ್ನುವ ಚರ್ಚೆ ಹುಟ್ಟುಹಾಕಿದೆ. ಆದರೆ, ಬಿಸಿಸಿಐ ಮಾತ್ರ ಇದಕ್ಕೆಲ್ಲ ಇಲ್ಲ ಎಂದೇ ಉತ್ತರಿಸುತ್ತದೆ. ಎಂದಿಗೂ ತನ್ನ ನಿರ್ಧಾರವನ್ನು ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದೆ. ಬಿಸಿಸಿಐ ತನ್ನ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಏಕೆ ಅವಕಾಶ ನೀಡುವುದಿಲ್ಲ?

ಪ್ರತಿಯೊಬ್ಬ ಭಾರತೀಯ ಆಟಗಾರನು ತನ್ನ ಬ್ರಾಂಡ್ ಮೌಲ್ಯವನ್ನು ಹೊಂದಿದ್ದಾನೆ ಮತ್ತು ಅವನು ಆಡುವ ಪ್ರತಿಯೊಂದು ಲೀಗ್ ಅಥವಾ ಪಂದ್ಯಾವಳಿಗೆ ಆ ಬ್ರಾಂಡ್ ಮೌಲ್ಯವನ್ನು ತಂದುಕೊಡುತ್ತಾನೆ ಎಂಬುದರಲ್ಲಿ ಸಂದೇಹವಿಲ್ಲ.

ವಿಶ್ವದ ಯಾವುದೇ ಲೀಗ್‌ನಲ್ಲಿ ಭಾರತೀಯ ಆಟಗಾರರು ಭಾಗವಹಿಸಿದರೆ, ಆ ಟೂರ್ನಿಯ ಜನಪ್ರಿಯತೆ ಹೆಚ್ಚಾಗುತ್ತದೆ ಮತ್ತು ಐಪಿಎಲ್‌ಗೆ ಇರುವ ಮಹತ್ವ ಕಡಿಮೆಯಾಗುತ್ತದೆ ಎನ್ನುವುದು ಇದರ ಹಿಂದಿರುವ ಉದ್ದೇಶ. ಐಪಿಎಲ್‌ನಲ್ಲಿ ಸಕ್ರಿಯವಾಗಿರುವ ಯಾವ ಭಾರತೀಯ ಆಟಗಾರನಿಗೂ ವಿದೇಶದ ನೆಲದಲ್ಲಿ ಬೇರೆ ಟಿ20 ಆಡಲು ಅನುಮತಿ ಸಿಗುವುದಿಲ್ಲ.

ಮಹಿಳಾ ಕ್ರಿಕಟ್ ಆಟಗಾರರಿಗೆ ಅವಕಾಶ

ಮಹಿಳಾ ಕ್ರಿಕಟ್ ಆಟಗಾರರಿಗೆ ಅವಕಾಶ

ಭಾರತೀಯ ಪುರುಷ ಆಟಗಾರರಿಗೆ ಕೌಂಟಿ ಕ್ರಿಕೆಟ್ ಮತ್ತು ಲಿಸ್ಟ್ ಎ ಪಂದ್ಯಗಳನ್ನು ಆಡಲು ಅನುಮತಿಸಲಾಗಿದೆ. ಆದರೆ ಅವರಿಗೆ ಟಿ 20 ಕ್ರಿಕೆಟ್ ಆಡಲು ಅನುಮತಿ ನೀಡಿಲ್ಲ.

ಅಂತರಾಷ್ಟ್ರೀಯ ಕ್ರಿಕೆಟ್, ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಆಟಗಾರನು ಯಾವುದೇ ವಿದೇಶಿ ಲೀಗ್‌ನಲ್ಲಿ ಆಡಲು ಅವಕಾಶವಿದೆ. ಭಾರತದಲ್ಲಿ ಮಹಿಳಾ ಕ್ರಿಕೆಟ್ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ಕಾರಣ ಮಹಿಳಾ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ನೀಡಲಾಗಿದೆ.

English summary
The Indian players' participation in foreign leagues. The BCCI has always said a no in response and the board is in no mood to change its stance. Why BCCI doesn't allow its players to participate in foreign leagues? Know Why.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X