Get Updates
Get notified of breaking news, exclusive insights, and must-see stories!

ಶೂ ಕೊಳ್ಳಲೂ ಆಗದ ರ್‍ಯಾನ್ ಬರ್ಲ್ ಬಾಂಗ್ಲಾ ವಿರುದ್ಧ ಒಂದೇ ಓವರ್‌ನಲ್ಲಿ ಚಚ್ಚಿದ್ದು 34 ರನ್!

ಭಾರತದಲ್ಲಿ ಕ್ರಿಕೆಟ್‌ ಶ್ರೀಮಂತ ಕ್ರೀಡೆ, ಟೀಂ ಇಂಡಿಯಾದ ಎಲ್ಲಾ ಆಟಗಾರರೂ ಕೋಟಿಗಟ್ಟಲೆ ಹಣ ಗಳಿಸುತ್ತಾರೆ. ಐಪಿಎಲ್ ಅಂತೂ ಆಟಗಾರರಿಗೆ ಹಣದ ಹೊಳೆಯನ್ನೇ ಹರಿಸುತ್ತದೆ. ಆದರೆ, ಜಿಂಬಾಬ್ವೆ ಕ್ರಿಕೆಟ್ ತಂಡಕ್ಕೆ ಶೂ ಕೊಳ್ಳುವುದು ಕೂಡ ದುಸ್ತರವಾಗಿತ್ತು. ಆದರೆ, ಇಂದು ಅದೇ ಜಿಂಬಾಬ್ವೆ ತಂಡದ ಆಟಗಾರ ಬಾಂಗ್ಲಾ ವಿರದ್ಧದ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ 34 ರನ್ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಆಗಸ್ಟ್ 2 ರಂದು ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ಬ್ಯಾಟರ್ ರ್‍ಯಾನ್ ಬರ್ಲ್ ಒಂದೇ ಓವರ್‍ ನಲ್ಲಿ 34 ರನ್ ಗಳಿಸಿ ದಾಖಲೆ ಬರೆದರು. ಭಾರತದ ಯುವರಾಜ್ ಸಿಂಗ್‌, ವೆಸ್ಟ್ ಇಂಡೀಸ್‌ನ ಕೀರನ್ ಪೊಲಾರ್ಡ್‌ ಬಳಿಕ ಟಿ20 ಮಾದರಿ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎನ್ನುವ ದಾಖಲೆ ಬರೆದರು.

ಬಾಂಗ್ಲಾ-ಜಿಂಬಾಬ್ವೆ ನಡುವೆ ಮೂರು ಪಂದ್ಯಗಳ ಟಿ20 ಸರಣಿಯನ್ನು ಜಿಂಬಾಬ್ವೆ ತಂಡ 2-1 ಅಂತರದಿಂದ ಗೆದ್ದಿದೆ. ಈ ಮೂಲಕ ಬಾಂಗ್ಲಾ ವಿರುದ್ಧ ಜಿಂಬಾಬ್ವೆ ಮೊದಲ ಬಾರಿ ಸರಣಿ ಜಯಿಸಿ ಸಂಭ್ರಮಿಸಿದೆ.

 ಹರಿದ ಶೂನಲ್ಲೇ ಕ್ರಿಕೆಟ್ ಆಡುತ್ತಿದ್ದ ರ್‍ಯಾನ್ ಬರ್ಲ್‌

ಹರಿದ ಶೂನಲ್ಲೇ ಕ್ರಿಕೆಟ್ ಆಡುತ್ತಿದ್ದ ರ್‍ಯಾನ್ ಬರ್ಲ್‌

ಹೌದು, ಜಿಂಬಾಬ್ವೆ ತಂಡದ ಆಟಗಾರರು, ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಶ್ರೀಮಂತವಲ್ಲ, ಆದರೆ ಅವರ ಕ್ರಿಕೆಟ್ ಪ್ರೇಮಕ್ಕೆ ಮಾತ್ರ ಯಾವತ್ತೂ ಬಡತನ ಬಂದಿಲ್ಲ. ಹರಿದ ಶೂ ನಲ್ಲಿಯೇ ದೇಶಕ್ಕಾಗಿ ಕ್ರಿಕೆಟ್ ಆಡಿದ್ದಾರೆ. ಈ ಕುರಿತು ಜಿಂಬಾಬ್ವೆ ಆಟಗಾರ ರ್‍ಯಾನ್ ಬರ್ಲ್‌ ಟ್ವೀಟ್ ಮಾಡಿದ್ದರು. 2021ರ ಮೇ ವೇಳೆಯಲ್ಲಿ ಅವರು ತಮ್ಮ ಹರಿದ ಶೂಗಳ ಚಿತ್ರವನ್ನು ಟ್ವೀಟ್ ಮಾಡಿದ್ದರು.


ಹರಿದು ಹೋಗಿರುವ ಶೂಗಳನ್ನು ಹೊಲೆದುಕೊಂಡು ಧರಿಸಿ ಕ್ರಿಕೆಟ್ ಆಡುತ್ತಿದ್ದೇವೆ. ಶೂಗಳನ್ನು ಕೊಳ್ಳಲು ನಮಗೆ ಶಕ್ತಿ ಇಲ್ಲ, ಯಾರಾದರು ನಮಗೆ ಸಹಾಯ ಮಾಡಬಾರದ ಎಂದು ಕೇಳಿಕೊಂಡಿದ್ದರು.

 ಇಡೀ ಜಿಂಬಾಬ್ವೆ ತಂಡಕ್ಕೆ ಶೂ ಕಳುಹಿಸಿಕೊಟ್ಟ ಪುಮಾ

ಇಡೀ ಜಿಂಬಾಬ್ವೆ ತಂಡಕ್ಕೆ ಶೂ ಕಳುಹಿಸಿಕೊಟ್ಟ ಪುಮಾ

ರ್‍ಯಾನ್ ಬರ್ಲ್‌ ಟ್ವೀಟ್ ಮಾಡುತ್ತಿದ್ದಂತೆ ಜಿಂಬಾಬ್ವೆಯ ತಂಡದ ಆಟಗಾರರ ಪರಿಸ್ಥಿತಿ ಬಗ್ಗೆ ಎಲ್ಲರೂ ಮರುಗಿದರು. ಜಗತ್ತಿನ ಪ್ರಸಿದ್ಧ ಶೂ ತಯಾರಿಕಾ ಕಂಪನಿಗಳಲ್ಲಿ ಒಂದಾದ ಪುಮಾ ಜಿಂಬಾಬ್ವೆ ತಂಡದ ಎಲ್ಲಾ ಆಟಗಾರರಿಗೆ ಶೂ ಕೊಡುವುದಾಗಿ ಹೇಳಿತ್ತು.

ಕೊಟ್ಟ ಮಾತಿನಂತೆ ಜಿಂಬಾಬ್ವೆ ತಂಡದ ಎಲ್ಲಾ ಆಟಗಾರರಿಗೆ ಶೂ ಕಳುಹಿಸಿಕೊಟ್ಟಿತ್ತು. ಶೂ ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ ಎಂದು ಕೆಲವರು ಮಾತನಾಡಿಕೊಂಡರು. ಆ ಶೂಗಳು ಜಿಂಬಾಬ್ವೆ ಆಟಗಾರರ ಉತ್ಸಾಹವನ್ನು ನೂರ್ಮಡಿಗೊಳಿಸಿದ್ದವು.

 ಬಾಂಗ್ಲಾ ವಿರುದ್ಧ ಮೊದಲ ಸರಣಿ ಗೆದ್ದ ಜಿಂಬಾಬ್ವೆ

ಬಾಂಗ್ಲಾ ವಿರುದ್ಧ ಮೊದಲ ಸರಣಿ ಗೆದ್ದ ಜಿಂಬಾಬ್ವೆ

ಮೊದಲ ಬಾರಿಗೆ ಬಾಂಗ್ಲಾ ವಿರುದ್ಧ ಟಿ20 ಸರಣಿಯನ್ನು ಗೆದ್ದ ಜಿಂಬಾಬ್ವೆ ಇತಿಹಾಸ ಸೃಷ್ಟಿಸಿತು. ಮೊದಲ ಎರಡು ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ ಒಮ್ಮೆ ಜಯ ಸಾಧಿಸಿದ್ದವು. ಆಗಸ್ಟ್ 2ರಂದು ನಡೆದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಜಿಂಬಾಬ್ವೆ 10 ರನ್‌ಗಳ ಜಯ ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 13 ಓವರ್ ಗಳಲ್ಲಿ 67ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು ಆದರೆ ನಂತರ ಕ್ರೀಸ್‌ಗೆ ಬಂದ ರ್‍ಯಾಲ್ ಬರ್ನ್ 28 ಎಸೆತಗಳಲ್ಲಿ 54 ರನ್ ಗಳಿಸುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಇವರಿಗೆ ಸಾಥ್ ನೀಡಿ ಜೊಂಗ್ವೆ 35 ರನ್ ಗಳಿಸಿದರು.

15ನೇ ಓವರ್ ನಲ್ಲಿ ಬಾಂಗ್ಲಾದ ನಸುಮ್ ಅಹಮದ್ ಬೌಲಿಂಗ್‌ನಲ್ಲಿ ಕ್ರಮವಾಗಿ 6,6,6,6,4,6 ಗಳಿಸುವ ಮೂಲಕ ಒಂದೇ ಓವರ್ ನಲ್ಲಿ 34 ರನ್ ಗಳಿಸುವ ಮೂಲಕ ರ್‍ಯಾನ್ ಬರ್ಲ್ ದಾಖಲೆ ಬರೆದರು. ಉತ್ತಮ ಪ್ರದರ್ಶನ ನೀಡುತ್ತಿರುವ ರ್‍ಯಾನ್‌ ಬರ್ಲ್ ಒಮ್ಮೆ ಐಪಿಎಲ್‌ನಲ್ಲಿ ಆಡುವ ಮಹದಾಸೆಯನ್ನು ಹೊಂದಿದ್ದಾರೆ.

 ವಿಶ್ವಕಪ್ ಫೈನಲ್‌ಗೆ ಜಿಂಬಾಬ್ವೆ ಲಗ್ಗೆ

ವಿಶ್ವಕಪ್ ಫೈನಲ್‌ಗೆ ಜಿಂಬಾಬ್ವೆ ಲಗ್ಗೆ

ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಜಿಂಬಾಬ್ವೆ ಅರ್ಹವಾಗಿಯೇ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಲು ಪ್ರವೇಶ ಪಡೆದುಕೊಂಡಿದೆ. ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಾವಳಿಯಲ್ಲಿ ಜಿಂಬಾಬ್ವೆ ತಂಡ ಅದ್ಭುತ ಪ್ರದರ್ಶನ ನೀಡಿತ್ತು. ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್ ತಂಡಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿವೆ.

ಇನ್ನು ಬಾಂಗ್ಲಾ ತಂಡ ಜಿಂಬಾಬ್ವೆ ವಿರುದ್ಧ ಸೋತಿರುವುದಕ್ಕೆ ಬಾಂಗ್ಲಾ ತಂಡದ ನಿರ್ದೇಶಕ ಖಲೀದ್ ಮಹಮ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾ ಜಿಂಬಾಬ್ವೆ ವಿರುದ್ಧ ಸೋಲುವಂತ ಕೆಟ್ಟ ತಂಡವಲ್ಲ ಎಂದಿರುವ ಅವರು, ತಮ್ಮ ತಂಡದ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+