K.L.Rahul: ಸಿಎಸ್‌ಕೆ ವಿರುದ್ಧ ಕೆಎಲ್ ರಾಹುಲ್ ಹೊಸ ಸಾಧನೆ
K.L.Rahul: ಐಪಿಎಲ್ 2025ನೇ ಆವೃತ್ತಿಯ 17ನೇ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಇತಿಹಾಸ ನಿರ್ಮಿಸಿದೆ. ಇದೇ ಪಂದ್ಯದಲ್ಲಿ ಡೆಲ್ಲಿ ಪರ ಆಡಿದ ಕನ್ನಡಿಗ ಕೆಎಲ್ ರಾಹುಲ್ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಹಾಗಾದ್ರೆ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ 15 ವರ್ಷಗಳ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಸಿಎಸ್‌ಕೆ ವಿರುದ್ಧ ಗೆದ್ದು ಇತಿಹಾಸ ನಿರ್ಮಾಣ ಮಾಡಿದೆ. ಅಲ್ಲದೆ, ಕೆಎಲ್ ರಾಹುಲ್ ಅವರು ಕೂಡ ಇಂದಿನ ಪಂದ್ಯದಲ್ಲಿ ಸಿಎಸ್‌ಕೆ ಬೌಲರ್‌ಗಳನ್ನು ಬೆಂಡೆತ್ತುವ ಮೂಲಕ ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ ಅತೀ ಹೆಚ್ಚು ಅರ್ಧ ಶತಕ ಸಿಡಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.

ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ ಅತೀ ಹೆಚ್ಚು ಅರ್ಧಶತಕಗಳ ಸಿಡಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇದಕ್ಕೂ ಮೊದಲು ಗೌತಮ್ ಗಂಭೀರ್ ಸಹ ಚೆನ್ನೈ ವಿರುದ್ಧ 6 ಅರ್ಧಶತಕ ಗಳಿಸಿ ಸಾಧನೆ ಮಾಡಿದ್ದರು.
ಇದೀಗ ಸಿಎಸ್‌ಕೆ ವಿರುದ್ಧ ಕೆಎಲ್ ರಾಹುಲ್ ಅವರು ಇಂದು 77 ರನ್‌ಗಳನ್ನು ಕಲೆಹಾಕಿ 6ನೇ ಅರ್ಧಶತಕ ಸಿಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ಇದು ಅವರ 4ನೇ ಅತೀ ಹೆಚ್ಚು 50 ಪ್ಲಸ್ ಸ್ಕೋರ್ ಮಾಡಿದ ಸಾಧನೆಯಾಗಿದೆ. ಅಲ್ಲದೆ, ಅವರು ಗಂಭೀರ್ ಅವರ ದಾಖಲೆಯನ್ನು ಸರಿಗಟ್ಟಿದರು.
ಯಾರೆಲ್ಲಾ ಈ ದಾಖಲೆ ಪಟ್ಟಿಯಲ್ಲಿದ್ದಾರೆ?: ಡೇವಿಡ್ ವಾರ್ನರ್ 9 ಅರ್ಧಶತಕ, ಹಾಗೂ 1 ಶತಕ, ಶಿಖರ್ ಧವನ್ 8 ಅರ್ಧಶತಕ ಹಾಗೂ 1 ಶತಕ, ವಿರಾಟ್ ಕೊಹ್ಲಿ 9 ಅರ್ಧಶತಕ, ಕೆಎಲ್ ರಾಹುಲ್ 6 ಅರ್ಧಶತಕ ಹಾಗೂ ಗೌತಮ್ ಗಂಭೀರ್ ಸಹ 6 ಅರ್ಧಶತಕ ಗಳಿಸಿ ಸಾಧನೆಗೈದಿದ್ದಾರೆ.
ಸಿಎಸ್‌ಕೆ ಬೌಲರ್‌ಗಳ ಬೆವರಿಳಿಸಿದ ರಾಹುಲ್: ಚೆಪಾಕ್‌ನಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 183 ರನ್‌ಗಳನ್ನು ಕಲೆಹಾಕಿತು. ದೆಹಲಿ ತಂಡದಲ್ಲಿ ಫಾಫ್ ಡು ಪ್ಲೆಸಿಸ್ ಗಾಯದ ಹಿನ್ನೆಲೆ ಹೊರಗುಳಿದ ಹಿನ್ನೆಲೆ ಈ ಬಾರಿ ಕೆ.ಎಲ್.ರಾಹುಲ್ ಆರಂಭಿಕರಾಗಿ ಆಡಬೇಕಾಯಿತು.
ಇದೇ ಒಳ್ಳೇ ಅವಕಾಶ ಎಂದುಕೊಂಡ ಕನ್ನಡಿಗ ಕೆಎಲ್ ರಾಹುಲ್ ಅವರು ಅರ್ಧಶತಕ ಸಿಡಿಸಿದರು. ಕೇವಲ 51 ಎಸೆತಗಳಲ್ಲಿ 77 ರನ್ ಕಲೆಹಾಕುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಇನ್ನು ಕಳೆದ 6 ವರ್ಷಗಳ ಚೆನ್ನೈನ ದಾಖಲೆಯನ್ನು ಗಮನಿಸಿದರೆ, ಡೆಲ್ಲಿ ನೀಡಿದ 183 ರನ್ ಗುರಿಯನ್ನು ಮುಟ್ಟುವುದು ಸಿಎಸ್‌ಕೆ ತಂಡಕ್ಕೆ ಕಬ್ಬಿಣದ ಕಡಲೆಯಂತೆ ತುಂಬಾ ಕಷ್ಟವಾಯಿತು. ಉಆಕಂದ್ರೆ, 2019ರಿಂದ, ಚೆನ್ನೈ ತಂಡವು ಐಪಿಎಲ್‌ನಲ್ಲಿ 180 ರನ್‌ಗಳಿಗಿಂತ ಹೆಚ್ಚಿನ ಗುರಿಯನ್ನು ಮುಟ್ಟಿದ ಇತಿಹಾಸವಿಲ್ಲ. ಈ ಬಾರಿಯೂ ಕೂಡ ಅದೇ ಮುಂದುವರೆದುಕೊಂಡು ಬಂದಿದೆ.












Click it and Unblock the Notifications