• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಂಬಾಬ್ವೆ ಪ್ರವಾಸ: ನಾಯಕನಾಗಿ ಭಾರತ ತಂಡಕ್ಕೆ ಮರಳಿದ ಕನ್ನಡಿಗ ಕೆಎಲ್ ರಾಹುಲ್

|
Google Oneindia Kannada News

ಮುಂಬೈ, ಆಗಸ್ಟ್‌ 11: ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗುರುವಾರ 16 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಕನ್ನಡಿಗ ಕೆ. ಎಲ್. ರಾಹುಲ್‌ ನಾಯಕನಾಗಿ, ಶಿಖರ್‌ ಧವನ್‌ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

ಕೆಲವು ತಿಂಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಗಾಯಗೊಂಡಿ ಸರಣಿಯಿಂದ ಹೊರಬಿದ್ದಿದ್ದ ರಾಹುಲ್, ನಂತರ ಇಂಗ್ಲೆಂಡ್ , ಐರ್ಲೆಂಡ್ ಪ್ರವಾಸದಿಂದ ಹೊರಬಿದ್ದಿದ್ದರು. ನಂತರ ಗಾಯದಿಂದ ಚೇತರಿಸಿಕೊಂಡಿದ್ದ ವಿಕೆಟ್ ಕೀಪರ್, ಬ್ಯಾಟರ್ ವೆಸ್ಟ್ ಇಂಡೀಸ್ ಪ್ರವಾಸಕ್ಖೂ ಮುನ್ನ ಕೋವಿಡ್‌ 19 ಪಾಸಿಟಿವ್ ಕಾಣಿಸಿಕೊಂಡ ಹಿನ್ನಲೆ ಆ ಸರಣಿಯನ್ನು ಮಿಸ್ ಮಾಡಿಕೊಂಡಿದ್ದರು. ಇದೀಗ ಫಿಟ್‌ನೆಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಜಿಂಬಾಬ್ವೆ ಸರಣಿಯಲ್ಲಿ ತಂಡದ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಎರಡು ಹೊಸ ಎಂಐ ಟಿ20 ಫ್ರಾಂಚೈಸಿ ಘೋಷಿಸಿದ ರಿಲಯನ್ಸ್‌ಎರಡು ಹೊಸ ಎಂಐ ಟಿ20 ಫ್ರಾಂಚೈಸಿ ಘೋಷಿಸಿದ ರಿಲಯನ್ಸ್‌

ಬಿಸಿಸಿಐ ವೈದ್ಯಕೀಯ ತಂಡ ಕೆ. ಎಲ್. ರಾಹುಲ್‌ರ ಫಿಟ್‌ನೆಸ್‌ ಮೌಲ್ಯಮಾಪನ ಮಾಡಿದ್ದು, ಮುಂಬರುವ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆಡುವುದಕ್ಕೆ ಅನುಮತಿಸಿದೆ. ಆಲ್ ಇಂಡಿಯಾ ಸೆಲೆಕ್ಸನ್ ಕಮಿಟಿ ಅವರನ್ನು ಭಾರತ ತಂಡದ ನಾಯಕನಾಗಿ, ಅವರಿಗೆ ಜೊತೆಗೆ ಶಿಖರ್‌ ಧವನ್‌ರನ್ನು ಉಪನಾಯಕನಾಗಿ ನೇಮಕ ಮಾಡಿದೆ ಎಂದು ಗುರುವಾರ ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.

ರಾಹುಲ್‌ ಇದಕ್ಕೂ ಮುನ್ನ ಏಷ್ಯಾಕಪ್‌ ತಂಡಕ್ಕೂ ಆಯ್ಕೆಯಾಗಿದ್ದಾರೆ. ಹಾಗಾಗಿ ಫಿಟ್‌ನೆಸ್‌ಗೆ ಮರಳಿರುವಂತೆಯೇ ಸಾಮರ್ಥ್ಯ ಪರೀಕ್ಷೆಗೂ ಈ ಸರಣಿ ನಿರ್ಣಾಯಕವಾಗಲಿದೆ. ಏಷ್ಯಾಕಪ್‌ ಸೆಪ್ಟೆಂಬರ್‌ 27ರಿಂದ ಯುಎಇಯಲ್ಲಿ ಆರಂಭವಾಗಲಿದೆ.

India Squad for Asia Cup 2022: ಏಷ್ಯಾಕಪ್‌ಗೆ ತಂಡ ಪ್ರಕಟ, ಕೊಹ್ಲಿ, ರಾಹುಲ್ ವಾಪಸ್India Squad for Asia Cup 2022: ಏಷ್ಯಾಕಪ್‌ಗೆ ತಂಡ ಪ್ರಕಟ, ಕೊಹ್ಲಿ, ರಾಹುಲ್ ವಾಪಸ್

ಇನ್ನೂ ಜಿಂಬಾಬ್ವೆ ವಿರುದ್ಧ ಘೋಷಿಸಿರುವ ತಂಡದಲ್ಲಿ ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾರಿಗೆ ವಿಶ್ರಾಂತಿ ನೀಡಲಾಗಿದೆ. 2022ರ ಐಪಿಎಲ್ ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಪರ 14 ಪಂದ್ಯಗಳಿಂದ 413 ರನ್‌ಗಳಿಸಿದ್ದ ರಾಹುಲ್ ತ್ರಿಪಾಠಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಲ್‌ರೌಂಡರ್‌ ವಾಷಿಂಗ್ಟನ್ ಸುಂದರ್, ವೇಗಿ ದೀಪಕ್ ಚಾಹರ್ ಗಾಯದಿಂದ ಚೇತರಿಸಿಕೊಂಡಿದ್ದು ತಂಡಕ್ಕೆ ಮರಳಿದ್ದಾರೆ.

KL Rahul Named as Captain Against Zimbabwe, Dhawan Named His Deputy

ಆಗಸ್ಟ್ 18, 20 ಹಾಗೂ 22 ರಂದು ಪಂದ್ಯಗಳು ನಡೆಯಲಿವೆ. ಮೂರೂ ಪಂದ್ಯಗಳೂ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿವೆ.

ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸಾಮ್ಸನ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್ , ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್.

English summary
The BCCI Announced 16 member Squad for upcoming three-match ODI series in Zimbabwe. KL Rahul named set to lead team india and Shikhar Dhawan Named His Deputy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X