ಇದೇ ವರ್ಷ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಮದುವೆ?

ಬೆಂಗಳೂರು, ಜುಲೈ 12: ಕನ್ನಡಿಗ ಕೆಎಲ್ ರಾಹುಲ್, ಬಾಲಿವುಡ್‌ನ ಸ್ಟಾರ್ ನಟ, ಕನ್ನಡಿಗ ಸುನೀಲ್ ಶೆಟ್ಟಿ ಮಗಳ ಆಥಿಯಾ ಶೆಟ್ಟಿ ಮದುವೆ ಬಗ್ಗೆ ಮತ್ತೆ ಸುದ್ದಿ ಹಬ್ಬಿದೆ.ಈ ಇಬ್ಬರು ಪ್ರಣಯಪಕ್ಷಿಗಳು ವರ್ಷಗಳಿಂದ ಡೇಟಿಂಗ್‌ನಲ್ಲಿರುವ ಸುದ್ದಿ ಹೊಸದೇನಲ್ಲ. ರಾಹುಲ್-ಅಥಿಯಾ ಜೋಡಿ ಎಲ್ಲೇ ಓಡಾಡಿದರೂ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಇಬ್ಬರು ಬೆಸ್ಟ್ ಫ್ರೆಂಡ್ಸ್ ಅಷ್ಟೆ ಎಂಬ ಮಾತಿನಿಂದ ಈಗ ಪ್ರೇಮ, ಮದುವೆ ಮಾತುಕತೆ ತನಕ ಬಂದಿದೆ. ಸದ್ಯ ಗಾಯಾಳುವಾಗಿರುವ ರಾಹುಲ್ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ವಿಶ್ವಕಪ್ ವೇಳೆಗೆ ಟೀಂ ಇಂಡಿಯಾಕ್ಕೆ ಮರಳುವ ವಿಶ್ವಾಸ ಹೊಂದಿದ್ದಾರೆ.

ಇಂಡಿಯಾಟುಡೇ ವರದಿಯ ಪ್ರಕಾರ, ಅಥಿಯಾ ಮತ್ತು ಕೆಎಲ್ ರಾಹುಲ್ ಮುಂದಿನ ಮೂರು ತಿಂಗಳಲ್ಲಿ ಮದುವೆಯಾಗಲಿದ್ದಾರೆ. ಸ್ಟಾರ್ ದಂಪತಿಗಳ ಕುಟುಂಬಗಳು ಇತ್ತೀಚೆಗೆ ಭೇಟಿಯಾಗಿ ಈ ಕುರಿತಂತೆ ಆರಂಭಿಕ ಹಂತದ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಮದುವೆಗೆ ಭವ್ಯವಾದ ಸಿದ್ಧತೆಗಳು ಆರಂಭವಾಗಿವೆ ಎಂದು ಕುಟುಂಬದ ಆಪ್ತರಿಂದ ತಿಳಿದು ಬಂದಿದೆ. ಎರಡೂ ಕುಟುಂಬಗಳಿಗೆಈ ಮದುವೆ ಅದ್ಧೂರಿ ಆಚರಣೆಯಾಗಲಿದೆ ಮತ್ತು ಮದುವೆಯ ಪ್ರತಿಯೊಂದು ವಿವರವನ್ನು ವಧು ಸ್ವತಃ ನೋಡಿಕೊಳ್ಳುತ್ತಿದ್ದಾರೆ ಎಂದು ಮೂಲವೊಂದು ಸುದ್ದಿ ಪೋರ್ಟಲ್‌ಗೆ ತಿಳಿಸಿದೆ.

ಐಪಿಎಲ್ 2022ರ ಸೀಸನ್‌ನಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದ ಕೆ.ಎಲ್ ರಾಹುಲ್, ನಂತರ ಇಂಗ್ಲೆಂಡ್ ಸರಣಿಗೂ ತಂಡದಿಂದ ಹೊರಗುಳಿದಿದ್ದರು. ಸದ್ಯ ಜರ್ಮನಿಯಲ್ಲಿ ಸರ್ಜರಿ ಯಶಸ್ವಿಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

KL Rahul and Athiya Shetty Likely to Get Married Soon

ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿಯೊಂದಿಗೆ ಬಹುಕಾಲದಿಂದ ಪ್ರೀತಿಯಲ್ಲಿರುವ ರಾಹುಲ್‌ ಇತ್ತೀಚಿನ ದಿನಗಳಲ್ಲಿ ಮುಕ್ತವಾಗಿಯೇ ಅಥಿಯಾ ಶೆಟ್ಟಿ ಮತ್ತು ತನ್ನ ನಡುವೆ ಪ್ರೀತಿ ಇದೆ ಎಂಬ ವಿಷಯವನ್ನು ಭಿನ್ನ ವಿಭಿನ್ನ ಫೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಆಥಿಯಾ ಶೆಟ್ಟಿ ಕೂಡ ರಾಹುಲ್ ಜೊತೆಗಿನ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನು ಬಾಲಿವುಡ್‌ನಲ್ಲಿ ಮದುವೆ ಸಂಭ್ರಮ ಮುಂದುವರೆದಿದೆ. ಫರ್ಹಾನ್ ಅಖ್ತರ್-ಶಿಬಾನಿ ದಾಂಡೇಕರ್, ರಣಬೀರ್ ಕಪೂರ್-ಆಲಿಯಾ ಭಟ್ ಅವರ ವಿವಾಹದ ನಂತರ, ಈಗ ಅತಿಯಾ ಶೆಟ್ಟಿ-ಕೆಎಲ್ ರಾಹುಲ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು. ದಂಪತಿಗಳು ತಮ್ಮ ಪ್ರೀತಿಯ ಬಗ್ಗೆ ಬಹಳ ಸಮಯದಿಂದ ಹೆಚ್ಚು ಮಾತನಾಡಿಲ್ಲ, ಆದರೆ ಅವ್ರ Instagram ಚಿತ್ರಗಳು ಈ ಬಗ್ಗೆ ಹೆಚ್ಚು ಹೇಳಿವೆ. ಎರಡು ಮೂರು ವರ್ಷಕ್ಕಿಂತ ಹೆಚ್ಚು ಕಾಲ ಪ್ರೇಮ ಲೋಕದಲ್ಲಿರುವ ಇಬ್ಬರು ವರ್ಷಾಂತ್ಯದೊಳಗೆ ಮದುವೆಯಾಗುತ್ತಾರೆ ಎಂಬ ಸುದ್ದಿ ಬಂದಿದೆ.

KL Rahul and Athiya Shetty Likely to Get Married Soon

ಇತ್ತೀಚೆಗೆ ಕೆಎಲ್ ರಾಹುಲ್ ಹುಟ್ಟುಹಬ್ಬಕ್ಕೆ ಅತಿಯಾ ವಿಶ್ ಮಾಡಿ, ಪರಸ್ಪರ ಒರಗಿಕೊಂಡಿರುವ ಸೆಲ್ಫಿ ಹಾಕಿದ್ದರು. ""Anywhere with you, happy birthday" ಎಂದು ಬರೆದುಕೊಂಡಿದ್ದರು. ಸುನೀಲ್ ಶೆಟ್ಟಿ, ಅತಿಯಾ ಐಪಿಎಲ್ ಮ್ಯಾಚ್ ನೋಡಲು ಬಂದಾಗ ಡಕ್ ಔಟ್ ಆಗಿದ್ದ ರಾಹುಲ್ ನಂತರ ಮ್ಯಾಚಲ್ಲಿ ಸೆಂಚುರಿ ಬಾರಿಸಿ ಸಂಭ್ರಮಿಸಿದ್ದರು. ಕ್ರಿಕೆಟ್ ಲೋಕದಲ್ಲಿ ಛಲಗಾರ ಎಂದೆನಿಸಿಕೊಂಡಿರುವ ಕುಡ್ಲ ಮೂಲದ ರಾಹುಲ್ ಹಾಗೂ ಅತಿಯಾ ಮದುವೆಯನ್ನು ಮಂಗಳೂರು ಸಂಪ್ರದಾಯ ಶೈಲಿಯಲ್ಲೇ ನೆರವೇರಿಸಲು ಎರಡು ಕಡೆ ಕುಟುಂಬ ಮುಂದಾಗಿದೆ. ಮುಲ್ಕಿ ಮೂಲದ ಸುನೀಲ್ ಶೆಟ್ಟಿ ಬಾಲಿವುಡ್ ರಂಗದಲ್ಲಿ ದೊಡ್ಡ ಹೆಸರು ಗಳಿಸಿದರೂ ಮೂಲ ಮನೆಯನ್ನು ಮರೆತ್ತಿಲ್ಲ. ದೇವರು ನೇಮ ನಿಷ್ಠೆ ಎಂದರೆ ಊರಿಗೆ ಕಡೆಗೆ ಪಯಣಿಸುತ್ತಾರೆ.

ಇಬ್ಬರ ಮದುವೆ ಡಿಸೆಂಬರ್ ತಿಂಗಳಲ್ಲಿ ನಡೆಯಬಹುದು ಎಂದು ಎಕಾನಾಮಿಕ್ಸ್ ಟೈಮ್ಸ್ ಈ ಹಿಂದೆ ವರದಿ ಮಾಡಿತ್ತು. ತಮ್ಮ ಪುತ್ರ ಅಹನ್ ಶೆಟ್ಟಿಯ ತಡಪ್ ಚಿತ್ರಕ್ಕೆ ಶುಭ ಹಾರೈಸಿ ಮಾತನಾಡಿದ್ದ ಸುನೀಲ್ ಶೆಟ್ಟಿ, ತಮ್ಮ ಮಕ್ಕಳ ಮದುವೆ ಬಗ್ಗೆ ಸುಳಿವು ನೀಡಿದ್ದರು. ಮಗ ಅಥವಾ ಮಗಳು ಇಬ್ಬರು ನಮ್ಮ ಜವಾಬ್ದಾರಿ, ಅವರ ಇಷ್ಟದಂತೆ ಮದುವೆ ನೆರವೇರಿಸುತ್ತೇವೆ ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+