CK Nayudu Trophy: ವಿದರ್ಭ ವಿರುದ್ಧ 278 ರನ್‌ಗಳ ಭರ್ಜರಿ ಗೆಲುವು ; ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

ನಾಗ್ಪುರದ ವಿಸಿಎ ಕಲಮ್ನ ಕ್ರೀಡಾಂಗಣದಲ್ಲಿ ನಡೆದ ಕರ್ನಲ್ ಸಿಕೆ ನಾಯುಡು ಟ್ರೋಫಿ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ.

ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಆದರೆ ಸಿಕೆ ನಾಯುಡು ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಆಟಗಾರರು ಈ ತಪ್ಪು ಮಾಡಲಿಲ್ಲ.

Karnataka s Victory Over Vidarbha in Semifinal Secures Final Spot in Col C K Nayudu Trophy

ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 466 ರನ್‌ಗಳಿಗೆ ಆಲೌಟ್ ಆಯಿತು. ಅನೀಶ್ ಕೆ.ವಿ. 143 ರನ್ ಗಳಿಸಿದರೆ, ಸಮರನ್ 194 ರನ್ ಗಳಿಸಿದರು. ಇವರಿಬ್ಬರ ಅಮೋಘ ಶತಕ ಕರ್ನಾಟಕ ತಂಡ ದೊಡ್ಡ ಮೊತ್ತ ಕಲೆಹಾಕಲು ಕಾರಣವಾಯಿತು. ಇವರಿಬ್ಬರ ಜೊತೆಗೆ ಯಶೋವರ್ಧನ್ ಅಜೇಯ 54 ರನ್ ಗಳಿಸಿ ಕೊನೆ ಹಂತದಲ್ಲಿ ತಂಡಕ್ಕೆ ನೆರವಾದರು.

73 ರನ್‌ಗಳಿಗೆ ಆಲೌಟ್ ಆದ ವಿದರ್ಭ

ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ವಿದರ್ಭ ಕೇವಲ 73 ರನ್‌ಗಳಿಗೆ ಆಲೌಟ್ ಆಯಿತು. ಎಂಡಿ ಫೈಯಾಝ್ 17 ರನ್ ಗಳಿಸಿದ್ದೇ ತಂಡದ ಪರ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ.

ಕರ್ನಾಟಕದ ಪರ ಮಾರಕ ಬೌಲಿಂಗ್ ಮಾಡಿದ ಮೊಹ್ಸಿನ್ ಖಾನ್ 5 ವಿಕೆಟ್ ಪಡೆದರೆ, ಪರಾಸ್ ಆರ್ಯ 4 ವಿಕೆಟ್ ಪಡೆದುಕೊಂಡರು. ಯಶೋವರ್ಧನ್ ಒಂದು ವಿಕೆಟ್ ಪಡೆದರು.

ಬೃಹತ್ ಮುನ್ನಡೆ ಪಡೆದ ಕರ್ನಾಟಕ

ಮೊದಲ ಇನ್ನಿಂಗ್ಸ್‌ನಲ್ಲಿ 393 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡ ಕರ್ನಾಟಕ ಎರಡನೇ ಇನ್ನಿಂಗ್ಸ್‌ನಲ್ಲಿ 141 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಈ ಮೂಲಕ ವಿದರ್ಭ ತಂಡಕ್ಕೆ 535 ರನ್‌ಗಳ ಬೃಹತ್ ಗುರಿ ನೀಡಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಕರ್ ಚತುರ್ವೇದಿ 26 ರನ್ ಗಳಿಸಿದರೆ, ಕೃತಿಕ್ ಕೃಷ್ಣ ಮತ್ತು ಅನೀಶ್ ಕೆವಿ ತಲಾ 21 ರನ್ ಗಳಿಸಿದರು. ವಿದರ್ಭ ಪರವಾಗಿ ಪ್ರವೀಣ್ 5 ವಿಕೆಟ್ ಪಡೆದರು.

256 ರನ್‌ಗಳಿಗೆ ಆಲೌಟ್ ಆದ ವಿದರ್ಭ

535 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ವಿದರ್ಭ ತಂಡ 256 ರನ್‌ಗಳಿಗೆ ಆಲೌಟ್ ಆಗುವ ಮೂಲಕ 278 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಪರಸ್ ಆರ್ಯ 6 ವಿಕೆಟ್ ಪಡೆದು ವಿದರ್ಭ ತಂಡಕ್ಕೆ ಆಘಾತ ನೀಡಿದರು. ಮೊಹ್ಸಿನ್ ಖಾನ್ ಮತ್ತು ಧೀರಜ್ ಗೌಡ ತಲಾ ಎರಡು ವಿಕೆಟ್ ಪಡೆದರು.

ಸಿಕೆ ನಾಯ್ಡು ಟ್ರೋಫಿ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ಮತ್ತು ಮುಂಬೈ ಸೆಣೆಸುತ್ತಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಕರ್ನಾಟಕ ಫೈನಲ್ ಪಂದ್ಯದಲ್ಲಿ ಸೆಣೆಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+