• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೆಂಡ್‌ ODI, T20 ತಂಡಕ್ಕೆ ಜಾಸ್‌ ಬಟ್ಲರ್ ನಾಯಕ

|
Google Oneindia Kannada News

ಲಂಡನ್, ಜೂನ್ 30: ಇಯಾನ್‌ ಮಾರ್ಗನ್‌ ದಿಢೀರ್ ನಿವೃತ್ತಿ ಹೊಂದಿದ ಹಿನ್ನೆಲೆ , ಇಂಗ್ಲೆಂಡ್‌ ಸೀಮಿತ ಓವರ್‌ಗಳ ನಾಯಕತ್ವಕ್ಕೆ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟರ್‌ ಜಾಸ್ ಬಟ್ಲರ್‌ ನೇಮಕವಾಗಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿರುವ ಅವರಿಗೆ ಬ್ಯಾಟಿಂಗ್, ವಿಕೆಟ್‌ ಕೀಪಿಂಗ್ ಜವಾಬ್ದಾರಿಯಗಳ ಜೊತೆಗೆ ಇದೀಗ ನಾಯಕತ್ವದ ಹೊರೆಯನ್ನು ಹೊರಿಸಲಾಗಿದೆ.

ಇಂಗ್ಲೆಂಡ್ ಸೀಮಿತ ಓವರ್‌ ಕ್ರಿಕೆಟ್‌ನ ಯಶಸ್ವಿ ನಾಯಕ ಹಾಗೂ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಏಕೈಕ ನಾಯಕರಾಗಿದ್ದ ಇಯಾನ್​ ಮಾರ್ಗನ್‌​ ಇದೇ ಜೂನ್ 28ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋ‍ಷಿಸಿದ್ದರು. ಮಾರ್ಗನ್‌ ನಿವೃತ್ತಿಗೂ ಮುನ್ನ ಜಾಸ್​ ಬಟ್ಲರ್​ರನ್ನು ಎರಡೂ ತಂಡಳಿಗೂ ಉಪನಾಯಕನಾಗಿದ್ದರು. ಇದೀಗ ಅವರನ್ನೇ ನಾಯಕನ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ. ಮುಂಬರುವ ಭಾರತದ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೂಲಕ ಬಟ್ಲರ್ ಆಂಗ್ಲ ತಂಡದ ಪೂರ್ಣಾವಧಿ ನಾಯಕರಾಗಿ ಕಣಕ್ಕಿಳಿಯಲಿದ್ದಾರೆ.

ಕಪಿಲ್ ದೇವ್ ಬಳಿಕ ಭಾರತ ಟೆಸ್ಟ್ ತಂಡಕ್ಕೆ ನಾಯಕನಾದ 2ನೇ ವೇಗಿ ಬುಮ್ರಾ ಕಪಿಲ್ ದೇವ್ ಬಳಿಕ ಭಾರತ ಟೆಸ್ಟ್ ತಂಡಕ್ಕೆ ನಾಯಕನಾದ 2ನೇ ವೇಗಿ ಬುಮ್ರಾ

ಜಾಸ್ ಬಟ್ಲರ್​ ಈಗಾಗಲೇ ಇಂಗ್ಲೆಂಡ್ ಪರ 14 ಪಂದ್ಯಗಳಲ್ಲಿ ನಾಯಕನಾಗಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಕಳೆದ ವಾರ ನೆದರ್​ಲ್ಯಾಂಡ್​ ಪ್ರವಾಸದಲ್ಲಿ ಮಾರ್ಗನ್ ಗಾಯಗೊಂಡಾಗ ಬಟ್ಲರ್‌ ತಂಡವನ್ನು ಮುನ್ನಡೆಸಿದ್ದರು. ಅದೇ ಸರಣಿಯಲ್ಲಿ ಬಟ್ಲರ್ ಮೊದಲ ಏಕದಿನ ಪಂದ್ಯದಲ್ಲಿ 70 ಎಸೆತಗಳಲ್ಲಿ ಬರೋಬ್ಬರಿ 162 ರನ್‌ ಸಿಡಿಸಿ ವಿಶ್ವದಾಖಲೆಯ 498 ರನ್‌ ಸಿಡಿಸಲು ನೆರವಾಗಿದ್ದರು. ಅದಕ್ಕೂ ಮುನ್ನ ಅವರೂ ಐಪಿಎಲ್‌ನಲ್ಲೂ 4 ಶತಕಗಳ ಸಹಿತ 800 ಕ್ಕೂ ಹೆಚ್ಚು ರನ್‌ ಸಿಡಿಸಿ ಆರೆಂಜ್ ಕ್ಯಾಪ್ ಗಿಟ್ಟಿಸಿಕೊಂಡಿದ್ದರು.

31 ವರ್ಷದ ಜಾಸ್ ಬಟ್ಲರ್​ ಇಂಗ್ಲೆಂಡ್​ ಸೀಮಿತ ಓವರ್‌ಗಳ ತಂಡದ ಯಶಸ್ವಿ ನಾಯಕನಾಗಲಿದ್ದಾರೆ ಎಂದು ಮಾಜಿ ನಾಯಕ ಇಯಾನ್​ ಹೇಳಿದ್ದಾರೆ. ನಾನು ನಾಯಕನಾಗಿದ್ದಾಗ ಅವರಲ್ಲಿನ ಮುಂದಾಳತ್ವದ ಗುಣವನ್ನು ಕಂಡಿದ್ದೇನೆ. ಅವರು ತಂಡದ ಚುಕ್ಕಾಣಿ ಹಿಡಿಯಬೇಕು ಎಂದು ಬಯಸಿದ್ದೆ. ಈಗ ಅದು ನೆರವೇರಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

 ದಕ್ಷಿಣ ಆಫ್ರಿಕಾ ತಂಡಕ್ಕೆ 6 ವರ್ಷಗಳ ನಂತರ ಮರಳಿದ ರಿಲೀ ರೋಸೋ ದಕ್ಷಿಣ ಆಫ್ರಿಕಾ ತಂಡಕ್ಕೆ 6 ವರ್ಷಗಳ ನಂತರ ಮರಳಿದ ರಿಲೀ ರೋಸೋ

ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳುತ್ತಿರುವ ಬಟ್ಲರ್‌, ತಾವೂ ಇಂಗ್ಲೆಂಡ್‌ನ ಶ್ರೇಷ್ಠ ನಾಯಕ ಮಾರ್ಗನ್‌ ನಂತರ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದು ದೊಡ್ಡ ಗೌರವ ಎಂದು ಬಣ್ಣಿಸಿದ್ದಾರೆ. ಹೊಸ ಸವಾಲನ್ನು ಎದುರಿಸಲು ತಾವೂ ಉತ್ಸುಕತೆಯಿಂದ ಇರುವುದಾಗಿ ಹೇಳಿಕೊಂಡಿದ್ದಾರೆ.

Jos Buttler Named Englands New White Ball Captain

ಇಂಗ್ಲೆಂಡ್ ತಂಡ ಮುಂದಿನ ವಾರ ಭಾರತದ ವಿರುದ್ಧ ಮತ್ತು ಜುಲೈ ಕೊನೆ ವಾರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಗಳನ್ನಾಡಲಿದೆ. ಬಟ್ಲರ್‌ 151 ಏಕದಿನ ಪಂದ್ಯಗಳನ್ನಾಡಿದ್ದು, 10 ಶತಕ ಮತ್ತು 21 ಅರ್ಧಶತಕಗಳ ಸಹಿತ ​ 4120 ರನ್​ , 57 ಟೆಸ್ಟ್‌ ಪಂದ್ಯಗಳಿಂದ 2 ಶತಕ, 18 ಅರ್ಧಶತಕ , 88 ಟಿ20 ಪಂದ್ಯಗಳಿಂದ 1 ಶತಕ ಹಾಗೂ 15 ಅರ್ಧಶತಕಗಳ ಸಹಿತ 2140 ರನ್‌ಗಳಿಸಿದ್ದಾರೆ.

English summary
Wicket keeper batter Jos Buttler named news white ball captain for England follow the eoin Morgan retirement: Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X