IPL Rajasthan Royals New Coach: ರಾಜಸ್ಥಾನ ರಾಯಲ್ಸ್ ತಂಡಕ್ಕೆ ನೂತನ ಕೋಚ್‌..

IPL Rajasthan Royals New Coach: ಐಪಿಎಲ್‌ 2025 ಮುಗಿದಿದ್ದು, 19ನೇ ಆವೃತ್ತಿಗೆ ಕೆಲವೇ ತಿಂಗಳುಗಳು ಬಾಕಿಯಿವೆ. ಇದಕ್ಕೂ ಮುನ್ನವೇ ರಾಜಸ್ಥಾನ ರಾಯಲ್ಸ್‌ ತಂಡದ ಹೆಡ್‌ಕೋಚ್‌ ಹುದ್ದೆಯಿಂದ ಇತ್ತೀಚೆಗಷ್ಟೇ ರಾಹುಲ್‌ ದ್ರಾವಿಡ್‌ ಕೆಳಗಿಳಿದಿದ್ದರು. ಈ ತಂಡಕ್ಕೆ ಇದೀಗ ನೂತನ ಕೋಚ್‌ ಆಯ್ಕೆ ಆಗಿದ್ದಾರೆ. ಹಾಗಾದ್ರೆ ಅವರು ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಐಪಿಎಲ್‌ 19ನೇ ಆವೃತ್ತಿ ಆರಂಭವಾಗುವ ಮುನ್ನ ರಾಜಸ್ಥಾನ ರಾಯಲ್ಸ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ರಾಹುಲ್ ದ್ರಾವಿಡ್‌ ಅವರು ರಾಜೀನಾಮೆ ನೀಡಿದ್ದರು. ಈ ಸ್ಥಾನಕ್ಕೆ ಆರ್‌ಆರ್ ತಂಡ ಇದೀಗ ಹೊಸಬರನ್ನು ನೇಮಕ ಮಾಡಿದೆ. ಅವರು ಬೇರೆ ಯಾರೂ ಅಲ್ಲ, 2021ರಿಂದ ಆರ್‌ಆರ್ ತಂಡದ ನಿರ್ದೇಶಕರಾಗಿದ್ದ ಶ್ರೀಲಂಕಾದ ಕ್ರಿಕೆಟ್‌ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರು ಹೆಡ್ ಕೋಚ್ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

IPL Kumar Sangakkara Appointed as Rajasthan Royals New Head Coach

ಕರ್ನಾಟಕದ ರಾಹುಲ್‌ ದ್ರಾವಿಡ್‌ ಅವರು ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದ ನಂತರ, ಐಪಿಎಲ್ 2025ನೇ ಆವೃತ್ತಿಗಿಂತ ಮುನ್ನ ಆರ್‌ಆರ್‌ ತಂಡದ ಮುಖ್ಯ ಕೋಚ್ ಆಗಿ ನೇಮಕ ಆದರು. ಆದರೆ, ಕೇವಲ ಒಂದು ಆವೃತ್ತಿಯ ನಂತರ, ಅವರು ಮುಖ್ಯ ಕೋಚ್‌ ಹುದ್ದೆಯಿಂದ ಕೆಳಗಿಳಿದರು.

ಮಾಹಿತಿ ಪ್ರಕಾರ, ಸಂಜು ಸ್ಯಾಮ್ಸನ್ ತಂಡದಿಂದ ಬಿಡುಗಡೆಗೊಳಿಸುವಂತೆ ಕೋರಿದ ನಂತರ, ಆರ್‌ಆರ್‌ಗೆ ಮುಂದಿನ ನಾಯಕ ಯಾರು ಎಂಬುದನ್ನು ನಿರ್ಧರಿಸುವುದು ಸಂಗಕ್ಕಾರ ಅವರ ಮುಂದಿರುವ ದೊಡ್ಡ ಸವಾಲಾಗಿದೆ. ತಂಡವು ವಿಕ್ರಮ್ ರಾಥೋಡ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಸಲಿದ್ದು, ಶೇನ್ ಬಾಂಡ್ ಬೌಲಿಂಗ್ ಕೋಚ್ ಆಗಿ ಮುಂದುವರೆಸಲಿದೆ ಎಂದು ಎನ್ನುವ ಮಾಹಿತಿ ಲಭ್ಯವಾಗಿದೆ.

ಆರ್‌ಆರ್ ಫ್ರಾಂಚೈಸಿಯಲ್ಲಿ ಆಗಸ್ಟ್‌ನಲ್ಲಿ ರಾಹುಲ್‌ ದ್ರಾವಿಡ್‌ಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ, ಅವರು ಅದನ್ನು ತಿರಸ್ಕರಿಸಿದರು ಎಂದು ಆರ್‌ಆರ್ ಟ್ವೀಟ್‌ ಮೂಲಕ ಹಂಚಿಕೊಡಿತ್ತು. ಅಲ್ಲದೆ, ತಂಡದ ಸದಸ್ಯರು ಮತ್ತು ಅಭಿಮಾನಿಗಳ ಪರ ತಂಡಕ್ಕೆ ನೀಡಿದ ಸೇವೆಗಳಿಗಾಗಿ ರಾಹುಲ್‌ ದ್ರಾವಿಡ್‌ ಅವರಿಗೆ ಕೃತಜ್ಞತೆಯನ್ನೂ ಸಹ ಸಲ್ಲಿಸಿತು.

ಇನ್ನು ರಾಹುಲ್‌ ದ್ರಾವಿಡ್‌ ರಾಜೀನಾಮೆ ಬಗ್ಗೆ ಆರ್‌ಆರ್‌ ಇನ್ಸ್ಟಾದಲ್ಲಿ, ಅವರು ಹಲವು ವರ್ಷಗಳಿಂದ ತಂಡದ ಪ್ರಯಾಣದ ಕೇಂದ್ರಬಿಂದು ಆಗಿದ್ದಾರೆ. ಅವರ ನಾಯಕತ್ವವು ಒಂದು ಪೀಳಿಗೆಯ ಆಟಗಾರರ ಮೇಲೆ ಪ್ರಭಾವ ಬೀರಿದೆ. ತಂಡದೊಳಗೆ ಬಲವಾದ ಮೌಲ್ಯಗಳನ್ನು ನಿರ್ಮಿಸಿದೆ. ಅವರಿಗೆ ದೊಡ್ಡ ಹುದ್ದೆಯನ್ನು ನೀಡಲು ನಿರ್ಧರಿಸಲಾಗಿತ್ತು. ಆದರೆ, ಆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸಿರು ಎಂದು ಫ್ರಾಂಚೈಸಿ ತಿಳಿಸಿತ್ತು.

ರಾಹುಲ್ ದ್ರಾವಿಡ್ ಕಳೆದ ವರ್ಷವಷ್ಟೇ ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸಿದ್ದರು. 2024ರ ಟಿ-20 ವಿಶ್ವಕಪ್ ಬಳಿಕ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಗುಡ್‌ ಬೈ ಹೇಳಿದ್ದ ರಾಹುಲ್‌ ದ್ರಾವಿಡ್, ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡರು. ಇದಕ್ಕೂ ಮುಂಚೆ ಅವರು 2011ರಿಂದ 2013ರ ವರೆಗೆ ಆಟಗಾರನಾಗಿ ಈ ತಂಡದ ಭಾಗ ಆಗಿದ್ದರು. ಬಳಿಕ 2015ರ ವರೆಗೆ ಆರ್‌ಆರ್‌ ತಂಡದ ಮುಖ್ಯ ಕೋಚ್‌ ಆಗಿ ಕರ್ಯವ್ಯ ನಿರ್ವಹಿಸಿದ್ದರು. ಆದರೆ ಬಳಿಕ ಇದೇ ವರ್ಷ ದಿಢೀರ್ ರಾಜೀನೇಮೆ ಘೋಷಿಸಿ ಅಚ್ಚರಿ ಮೂಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+