
ಪಂಜಾಬ್ ಕಿಂಗ್ಸ್ ಕೋಚ್ ಹುದ್ದೆ ತೊರೆಯಲು ಸಜ್ಜಾದ ಅನಿಲ್ ಕುಂಬ್ಳೆ
ಬೆಂಗಳೂರು, ಆಗಸ್ಟ್ 19: ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ತಂಡಗಳಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಇತ್ತೀಚೆಗೆ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಹೊಸ ಕೋಚ್ ನೇಮಕವಾದ ಸುದ್ದಿ ಓದಿರಬಹುದು. ಈಗ ಪಂಜಾಬ್ ಕಿಂಗ್ಸ್ ತಂಡ ಕೂಡಾ ತನ್ನ ಮುಖ್ಯ ಕೋಚ್ ಬದಲಾಯಿಸಲು ಮುಂದಾಗಿರುವ ಸುದ್ದಿ ಬಂದಿದೆ. ಸತತ ವೈಫಲ್ಯ ಕಂಡಿರುವ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮುಂದಿನ ಸೀಸನ್ ನಲ್ಲಿ ಪಂಜಾಬ್ ತಂಡದಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ.
ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಅವರು ಪಂಜಾಬ್ ತಂಡದ ಮುಖ್ಯ ಕೋಚ್ ಆಗಿ ಮೂರು ವರ್ಷಗಳ ಅವಧಿಗೆ ನೇಮಕವಾಗಿದ್ದರು. ಈ ಅವಧಿ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಮುಕ್ತಾಯವಾಗಲಿದ್ದು, ಮತ್ತೊಂದು ಅವಧಿಗೆ ಗುತ್ತಿಗೆ ವಿಸ್ತರಣೆ ಮಾಡುವ ಸಾಧ್ಯತೆ ಕಡಿಮೆ.
ಐಸಿಸಿ ಎಫ್ಟಿಪಿ ಪಟ್ಟಿ ಬಿಡುಗಡೆ: ಐದು ವರ್ಷಗಳಲ್ಲಿ 141 ಕ್ರಿಕೆಟ್ ಪಂದ್ಯಗಳನ್ನಾಡಲಿರುವ ಟೀಂ ಇಂಡಿಯಾ
ಮಾಧ್ಯಮಗಳ ವರದಿ ಪ್ರಕಾರ, ಪಂಜಾಬ್ ತಂಡದ ಮ್ಯಾನೇಜ್ಮೆಂಟ್ ಈಗಾಗಲೇ ಹೊಸ ಕೋಚ್ ಗಾಗಿ ಹುಡುಕಾಟ ಆರಂಭಿಸಿದೆ, 2019ರಿಂದ ಪಂಜಾಬ್ ತಂಡದ ಕೋಚ್ ಆಗಿರುವ ಕುಂಬ್ಳೆ ಹಿನ್ನೆಡೆಯನ್ನು ಕಂಡಿದ್ದರು. ಪಂದ್ಯದ ವೇಳೆ ಕಣಕ್ಕಿಳಿಯುವ ತಂಡದ ಆಯ್ಕೆ ಬಗ್ಗೆಯೂ ಅಪಸ್ವರ ಕೇಳಿ ಬಂದಿತ್ತು. ಕುಂಬ್ಳೆ ಪಾಲಿಸುವ ಶಿಸ್ತು, ತಂಡದ ಆಯ್ಕೆ ಬಗ್ಗೆ ಸ್ಥಳೀಯ ಮಾಜಿ ಆಟಗಾರರಿಂದ ಟೀಕೆ ಕೇಳಿ ಬಂದಿತ್ತು. ಪ್ಲೇ ಆಫ್ ಕೂಡಾ ತಲುಪಲು ತಂಡಕ್ಕೆ ಸಾಧ್ಯವಾಗಿರಲಿಲ್ಲ. ಎರಡು ಹೊಸ ತಂಡಗಳ ಸೇರ್ಪಡೆ ನಂತರ ಸ್ಪರ್ಧೆ ತೀವ್ರಗೊಂಡಿತ್ತು.
ಹೊಸ ಕೋಚ್ ಯಾರಾಗಬಹುದು?
ಲಭ್ಯ ಮಾಹಿತಿಯಂತೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಯಾನ್ ಮಾರ್ಗನ್ ರೇಸಿನಲ್ಲಿ ಮುಂದಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಕೂಡಾ ಮಾರ್ಗನ್ ಅವರಿಗೆ ಕೋಚ್ ಆಗುವಂತೆ ಆಫರ್ ನೀಡಿದೆ. 35 ವರ್ಷ ವಯಸ್ಸಿನ ಮಾರ್ಗನ್ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ನೂತನ ಮುಖ್ಯ ಕೋಚ್ ಆಗಿ ಚಂದ್ರಕಾಂತ್ ಪಂಡಿತ್ ನೇಮಕ
ಮಾರ್ಗನ್ ಅಲ್ಲದೆ ಇಂಗ್ಲೆಂಡಿನ ಮಾಜಿ ಕೋಚ್ ಟ್ರೆವರ್ ಬೇಲಿಸ್ ಕೂಡಾ ರೇಸಿನಲ್ಲಿದ್ದಾರೆ. ಈ ಹಿಂದೆ 2012 ಹಾಗೂ 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಆಗಿದ್ದರು.
ಐಪಿಎಲ್ ಟ್ರೋಫಿ ಎತ್ತಿ ಹಿಡಿದ ತಂಡದ ಭಾಗವಾಗಿದ್ದರು. ಇಂಗ್ಲೆಂಡ್ ಕೋಚ್ ಆಗಿ ಕೂಡಾ 2019ರ ವಿಶ್ವಕಪ್ ನಲ್ಲಿ ಉತ್ತಮ ಕಾರ್ಯ ನಿರ್ವಹಣೆ ತೋರಿದ್ದರು. ಐಪಿಎಲ್ ನಲ್ಲಿ 2020 ಹಾಗೂ 2021ರಲ್ಲಿ ಹೈದರಾಬಾದ್ ತಂಡ ಕೋಚಿಂಗ್ ಪಡೆ ಸೇರಿಕೊಂಡಿದ್ದರು.
ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಜೊತೆ ಜಗನ್ ಮಾತಾಡಿದ್ದೇನು?
ಒಟ್ಟಾರೆ 2022ರಲ್ಲಿ ಹೊಸ ಕೋಚಿಂಗ್ ತಂಡವನ್ನು ಕಟ್ಟಲು ಪಂಜಾಬ್ ಮುಂದಾಗಿರುವ ಸುದ್ದಿಯನ್ನು ಖಚಿತವಾಗಿದೆ. ಕಳೆದ ಸೀಸನ್ ನಲ್ಲಿ ಏಳು ಗೆಲುವು ಮಾತ್ರ ಸಾಧಿಸಿದ್ದ ಪಂಜಾಬ್ ತಂಡ ಹೊಸ ಹುರುಪಿಗಾಗಿ ಕಾದಿದೆ. 2014ರ ನಂತರ ಪ್ಲೇ ಆಫ್ ಹಂತಕ್ಕೇರಿಲ್ಲ, ಹೀಗಾಗಿ ಹೊಸ ಕೋಚ್ ನೇಮಕಕ್ಕೆ ಮುಂದಾಗಿದೆ.
ಮಾರ್ಗನ್, ಬೇಲಿಸ್ ಅಲ್ಲದೆ, ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲೆಸ್ಪಿ, ಭಾರತ ಮೂಲದ ಮಾಜಿ ಆಟಗಾರರೊಬ್ಬರನ್ನು ಕೋಚ್ ಸ್ಥಾನಕ್ಕೆ ಪಂಜಾಬ್ ಪರಿಗಣಿಸುತ್ತಿದೆ.