IPL 2026 Trade: ಸಂಜು ಸ್ಯಾಮ್ಸನ್ ಸಿಎಸ್‌ಕೆ, ಜಡೇಜಾ ಹಾಗೂ ಸ್ಯಾಮ್ ಕರನ್ ಆರ್‌ಆರ್‌ಗೆ ಸೇರ್ಪಡೆ
IPL 2026 Trade: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿಯು ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚೊಚ್ಚಲ ಟ್ರೋಫಿ ಗೆದ್ದುಕೊಂಡಿತು. ಇದೀಗ ಎಲ್ಲರ ಚಿತ್ತ 2026ರ ಆವೃತ್ತಿಯತ್ತ ನೆಟ್ಟಿದೆ. ರಿಟೈನ್ ಆಟಗಾರರ ಪಟ್ಟಿ ಪ್ರಕಟಕ್ಕೂ ಮುನ್ನ ಮಹತ್ವದ ಬದಲಾವಣೆಗಳಾಗಿದೆ. ರವೀಂದ್ರ ಜಡೇಜಾ ಅವರು ಆರ್‌ಆರ್ ಬಳಗ ಸೇರಿದರೆ, ಸಂಜು ಸ್ಯಾಮ್ಸನ್ ಸಿಎಸ್‌ಕೆ ಬರಮಾಡಿಕೊಂಡಿದೆ. ಹಾಗಾದ್ರೆ, ಇನ್ನೂ ಯಾರೆಲ್ಲಾ ಯಾವ ಟೀಂ ಸರ್ಪಡೆಯಾಗಿದ್ದಾರೆ ಹಾಗೂ ಮೊತ್ತ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ 2026ರ ರಿಟೇನ್ಗೂ ಮುಂಚಿತವಾಗಿ ಸಿಎಸ್‌ಕೆ ಆಲ್‌ರೌಂಡರ್‌ಗಳಾಗಿದ್ದ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ರಾಜಸ್ಥಾನ್ ರಾಯಲ್ಸ್‌ಗೆ ಬಿಟ್ಟುಕೊಟ್ಟಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಆಟಗಾರನಾಗಿದ್ದ ಸಂಜು ಸ್ಯಾಮ್ಸನ್ ಅವರು ಸಿಎಸ್‌ಕೆಗೆ ಬಳಗ ಸೇರಿಕೊಂಡಿದ್ದಾರೆ. ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಅಧಿಕೃತವಾಗಿ ಘೋಷಣೆ ಮಾಡಿವೆ.

ಐಪಿಎಲ್ ಟ್ರೇಡಿಂಗ್ ಯಾವಾಗ ಆಗುತ್ತದೆ ಎನ್ನುವ ಕುತೂಹಲ ಬಹುತೇಕ ಕ್ರೀಡಾಭಿಮಾನಿಗಳಿಗಿತ್ತು. ಇದೀಗ ಬಹುತೇಕ ತಂಡಗಳು ಆಟಗಾರರನ್ನು ಬಿಟ್ಟುಕೊಟ್ಟಿವೆ. ಅದರಂತೆಯೇ ಇದೀಗ ರಿಟೈಲ್ ಆಟಗಾರರ ಪಟ್ಟಿ ಪ್ರಕಟಕ್ಕೂ ಮುನ್ನ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ಸೇರಿದರೆ, ಸಿಎಸ್‌ಕೆ ತಂಡದ ಸ್ಫೋಟಕ ಆಟಗಾರರಾಗಿದ್ದ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಆರ್‌ಆರ್ ಸೇರ್ಪಡೆಯಾಗಿದ್ದಾರೆ. ಸಂಜು ಸ್ಯಾಮ್ಸನ್ ಸಿಎಸ್‌ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ತುಂಬಾ ದಿನಗಳಿಂದ ಹರಿದಾಡುತ್ತಿದ್ದು, ಇದೀಗ ಇದು ನಿಜ ಆದಂತಾಗಿದೆ.
ತುಂಬಾ ದಿನಗಳ ಹಿಂದೆಯೇ ಸಂಜು ಸ್ಯಾಮ್ಸನ್ ಸಿಎಸ್‌ಕೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಗದ್ದಲ ಸೃಷ್ಟಿಸಿದ್ದವು. ಇದೀಗ ಇದು ನಿಜ ಆಗಿದ್ದು, ಕೊನೆಗೂ ಅವರು ಧೋನಿ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ಇನ್ನೂ ಕಳೆದ ಸೀಸನ್ ಅಂತ್ಯದವರರಗೂ ಋತುರಾಜ್ ಗಾಯಕ್ವಾಡ್ ಅವರು ನಾಯಕತ್ವ ವಹಿಸಿಕೊಂಡಿದ್ದು, ಕೊನೆಯಲ್ಲಿ ಮಹೇಂದ್ರ ಸಿಂಗ್ ಅವರಿಗೆ ನಾಯಕತ್ವ ಕೊಡಲಾಯಿತು. ಇದೀಗ ಅನುಭವಿ ಸಂಜು ಬಂದಿದ್ದು, ಅವರಿಗೆ ಈ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನೂ ಸಂಜು ಸ್ಯಾಮ್ಸಮ್‌ಗೆ ರಿಟೇನ್ ಬೆಲೆ 18,00,00,000 ರೂಪಾಯಿಯನ್ನೇ ಸಿಎಸ್ಕೆ ನೀಡಿದೆ. ಆದರೆ, ಜಡೇಜಾ ಅವರ ಮೊತ್ತ ಕಮೆಮೆಯಾಗಿದೆ. 2025ರ ಮೆಗಾ ಹರಾಜಿನಲ್ಲಿ ಸಿಎಸ್ಕೆ 18,00,00,000 ಕೋಟಿ ನೀಡಿ ಅವರನ್ನು ರಿಟೈನ್ ಮಾಡಿಕೊಂಡಿತ್ತು. ಆದರೆ, ಇದೀಗ ಅವರನ್ನ ರಾಜಸ್ಥಾನ್ ರಾಯಲ್ 14,00,00,000 ರೂಪಾಯಿಗೆ ಟ್ರೇಡ್ ಮಾಡಿಕೊಂಡಿದೆ. ಈ ಮೂಲಕ ಸಿಎಸ್ಕೆ 4,00,00,000 ರೂಪಾಯಿ ಉಳಿಸಿಕೊಂಡಿದೆ. ಇದರಿಂದ ಜಡೇಜಾಗೆ ಮೊತ್ತ ಕಡಿಮೆಯಾದಾಗಿದೆ. ಮತ್ತೊಂದೆಡೆ ಸ್ಯಾಮ್ ಕರನ್ ಸಿಎಸ್ಕೆ ನೀಡಿದ್ದ 2.4 ಕೋಟಿ ರೂಪಾಯಿಗೆ ಇದೀಗ ಆರ್‌ಆರ್ ಸೇರ್ಪಡೆ ಆಗಿದ್ದಾರೆ.
ಈ ಮೂಲಕ ಇಬ್ಬರು ಹಳದಿ ಬಣ್ಣದ ಜೆರ್ಸಿಯ ಆಲ್‌ರೌಂಡರ್ ಆಟಗಾರರಾದ ಜಡೇಜಾ ಹಾಗೂ ಸ್ಯಾಮ್ ಕರನ್ ಪಿಂಕ್ ಕಲರ್ ಜೆರ್ಸಿಗೆ ಸೇರ್ಪಡೆಯಾಗಿದ್ದು, ಮತ್ತೊಂದೆಡೆ ಪಿಂಕ್ ಜೆರ್ಸಿಯ ಸ್ಫೋಟಕ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಸಂಜು ಅದೇ ಬೃಹತ್ ಮೊತ್ತಕ್ಕೆ ಹಳದಿ ಬಳದ ಜೆರ್ಸಿ ಬಳಗಕ್ಕೆ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದಾರೆ.












Click it and Unblock the Notifications