RCB Vs RR Toss: ಟಾಸ್ ಗೆದ್ದ ಆರ್‌ಸಿಬಿ ಹೊಸ ದಾಖಲೆ: ಬೌಲಿಂಗ್ ಆಯ್ಕೆ
RCB Vs RR Toss: ಐಪಿಎಲ್ 2025ರ 28ನೇ ಪಂದ್ಯದಲ್ಲಿ ಆರ್‌ಸಿಬಿಯು ಆರ್‌ಆರ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಅದರಂತೆಯೇ ಆರ್‌ಆರ್ ಮೊದಲು ಬ್ಯಾಟ್ ಮಾಡಲಿದೆ. ಇಂದಿನ ಪಂದ್ಯದಲ್ಲಿ ಗ್ರೀನ್ ಜೆರ್ಸಿ ಧರಿಸಿ ಆರ್‌ಸಿಬಿ ಕಣಕ್ಕಿಳಿದಿದ್ದು, ತಮ್ಮ ಮೇಲೆ ಇರುವ ಹಸಿರು ಶಾಪ ಎಂಬ ಭವಿಷ್ಯವನ್ನು ಸುಳ್ಳು ಮಾಡಲು ಸಜ್ಜಾಗಿದೆ.
ಇಂದಿನ ಪಂದ್ಯ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಆರ್‌ಸಿಬಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದು, ಇದೇ ಇದೀಗ ಅಭಿಮಾನಿಗಳ ಆತಂಕ್ಕೆ ಕಾರಣವಾಗಿದೆ. ಮತ್ತೊಂದೆಡೆ ನೋಡೋದಾದ್ರೆ ಆರ್‌ಸಿಬಿ ಮತ್ತೆ 2023ರಂತೆ ಆರ್‌ಆರ್ ವಿರುದ್ಧ ಗೆಲವು ಸಾಧಿಸಲು ಪಣ ತೊಟ್ಟು ನಿಂತಿದೆ.

ಈ ಹಿಂದೆ ಅಂದರೆ ತವರಲ್ಲೇ ಇದೇ ಜೆರ್ಸಿ ತೊಟ್ಟು ಆರ್‌ಸಿಬಿಯು ಆರ್‌ಆರ್ ವಿರುದ್ಧ ಗೆಲುವು ಸಾಧಿಸಿದೆ. ಇಂದು ಸಹ ಇದು ಜೈಪುರದಲ್ಲಿಯೂ ಮುಂದುವರೆದರೂ ಆಶ್ಚರ್ಯವಿಲ್ಲ. ಯಾಕೆಂದ್ರೆ ಆರ್‌ಸಿಬಿ ಈ ಬಾರಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಪ್ರಬಲವಾಗಿದೆ. ಇನ್ನು ಈ ಆವೃತ್ತಿಯಲ್ಲಿ ಟಾಸ್ ಗೆದ್ದಿರುವುಕ್ಕಿಂತ ಸೋತಿರುವುದೇ ಹೆಚ್ಚು. ಆದರೆ, ಟಾಸ್ ಸೋತ ಪಂದ್ಯಗಳಲ್ಲಿ ಗೆದ್ದಿದೆ.
ಈವರೆಗೂ ಸತತವಾಗಿ ಟಾಸ್ ಸೋತುಕೊಂಡು ಬಂದಿದ್ದ ಆರ್‌ಸಿಬಿ ಇಂದು ಕೊನೆಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಾಸ್ ಗೆದ್ದು ಹೊಸ ದಾಖಲೆಯನ್ನೇ ಮಾಡಿದೆ. ಹಾಗೆಯೇ ಇಂದಿನ ಪಂದ್ಯವನ್ನು ಕೂಡ ತನ್ನದಾಗಿಸಿಕೊಳ್ಳುವ ಭರವಸೆಯಲ್ಲಿ ಆರ್‌ಸಿಬಿ ಇದೆ.












Click it and Unblock the Notifications