DC Vs vs RR: ಸೂಪರ್ ಓವರ್ನಲ್ಲಿ ಆರ್‌ಆರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು

DC Vs vs RR: ಐಪಿಎಲ್‌ 2025ನೇ ಆವೃತ್ತಿಯ ಸೂಪರ್ ಓವರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿದೆ.ಈ ಮೂಲಕ ಇದುವಗೂ ಆಡಿದ 6ರಲ್ಲಿ 5 ಪಂದ್ಯಗಳನ್ನು ಗೆದ್ದು 10 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿದೆ.

ಟಾಸ್‌ ಗೆದ್ದ ಆರ್‌ಆರ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟಿಂಗ್‌ ಮಾಡಿದ ಡಿಸಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 188 ರನ್‌ ಕಲೆಹಾಕಿತ್ತು. ಈ ಮೂಲಕ ರಾಜಸ್ಥಾನ್‌ ರಾಯಲ್ಸ್‌ಗೆ 189 ಟಾರ್ಗೆಟ್‌ ನೀಡಿತ್ತು. ಈ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 188 ರನ್‌ಗಳಿಸಿ ಸೂಪರ್ ಓವರ್‌ವರೆಗೂ ಬಂದಿತು.

IPL 2025 Delhi Capitals win the Super over against RR

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್ ತಂಡವು 5 ಬಾಲ್‌ಗೆ 2 ವಿಕೆಟ್‌ ಕಳೆದುಕೊಂಡು 11 ರನ್‌ಗಳನ್ನು ಕಲೆಹಾಕುವ ಮೂಲಕ 12 ರನ್‌ಗಳ ಟಾರ್ಗೆಟ್‌ ನೀಡಿತು. ಈ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 4 ಬಾಲ್‌ಗೆ ಯಾವುದೇ ವಿಕೆಟ್‌ ಇಲ್ಲದೆ 13 ರನ್‌ ಕಲೆಹಾಕುವ ಮೂಲಕ ಗೆಲುವು ಸಾಧಿಸಿತು.

ಡೆಲ್ಲಿ ಬ್ಯಾಟಿಂಗ್‌: ಟಾಸ್‌ ಸೋತು ಮೊದಲು ಡೆಲ್ಲಿ ಮೊದಲು ಬ್ಯಾಟ್‌ ಮಾಡಿತು. ಜೇಕ್ ಪ್ರೇಸರ್ ಮೆಕ್​ಗರ್ಕ್ ಕೇವಲ 9 ರನ್​ಗಳಿಸಿ ಜೋಫ್ರಾ ಆರ್ಚರ್​ ಬೌಲಿಂಗ್​​ನಲ್ಲಿ ಜೈಸ್ವಾಲ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಕರುಣ್ ನಾಯರ್ ಒಂದೂ ರನ್​ಗಳಿಸದೇ ರನ್ ​ಔಟ್ ಆಗಿ ಪೆವಿಲಿಯನ್​​ ಸೇರಿಕೊಂಡರು. 3ನೇ ವಿಕೆಟ್​ಗೆ ಅಭಿಷೇಕ್ ಪೊರೆಲ್ ಹಾಗೂ ಕೆಎಲ್ ರಾಹುಲ್ 63 ರನ್​ಗಳಿಸಿದರು.

ಪೊರೆಲ್ 37 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 49 ರನ್​ಗಳಿಸಿ ಔಟ್ ಆದರು. ಕೆಎಲ್‌ ರಾಹುಲ್ 32 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್​ಗಳ ಸಹಿತ 38 ರನ್​ಗಳಿಸಿ ಆರ್ಚರ್​ಗೆ ವಿಕೆಟ್ ಒಪ್ಪಿಸಿದರು. ನಾಯಕ ಅಕ್ಷರ್ ಪಟೇಲ್ 14 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 32, ಟ್ರಿಸ್ಟಾನ್ ಸ್ಟಬ್ಸ್ 18 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಸಹಿತ ಅಜೇಯ 32, ಅಶುತೋಷ್ ಶರ್ಮಾ 11 ಎಸೆತಗಳಲ್ಲಿ ಅಜೇಯ 15 ರನ್​ಗಳಿಸಿ ತಂಡದ ಮೊತ್ತವನ್ನ 180ರ ಗಡಿ ದಾಟಿಸಿದರು.

ಇನ್ನು ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್​ 2, ವನಿಂದು ಹಸರಂಗ 1, 1 ವಿಕೆಟ್ ಪಡೆದು ಮಿಂಚಿದರು. ಇನ್ನು 189ರನ್​ಗಳ ಗುರಿಯನ್ನ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಭರ್ಜರಿ ಆರಂಭ ಪಡೆದುಕೊಂಡಿತು. ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಮೊದಲ ವಿಕೆಟ್​ಗೆ 63 ರನ್​ಗಳ ಜೊತೆಯಾಟ ಆಡಿದರು. 19 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್​ ಸಹಿತ 31 ರನ್​ಗಳಿಸಿದ್ದ ಸಂಜು ಸ್ಯಾಮ್ಸನ್ ರಿಟೈರ್ಟ್ ಹರ್ಟ್ ತೆಗೆದುಕೊಂಡರು. ನಂತರ ಬಂದ ರಿಯಾನ್ ಪರಾಗ್ 11 ಎಸೆತಗಳಲ್ಲಿ ಕೇವಲ 8 ರನ್​ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್​​ನಲ್ಲಿ ಕ್ಲೀನ್‌ ಬೌಲ್ಡ್ ಆದರು.

3ನೇ ವಿಕೆಟ್​ಗೆ ನಿತೀಶ್ ರಾಣಾ ಮತ್ತು ಜೈಸ್ವಾಲ್ ಜೊತೆಯಾಟ ಆಡಿ 36 ರನ್ ಕಲೆಹಾಕಿದರು. ಜೈಸ್ವಾಲ್ 37 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್​ಗಳ ಸಹಿತ 51 ರನ್​ಗಳಿಸಿ ಔಟ್ ಆದರು. ನಿತೀಶ್ ರಾಣಾ 28 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ಗಳ ಸಹಿತ 51 ಸಿಡಿಸಿದರು. ಇನ್ನು ನಿತೀಶ್ ರಾಣ ಔಟ್ ಆಗುವ ಮುನ್ನ ಧ್ರುವ್ ಜುರೆಲ್ ಜೊತೆ 26 ಎಸೆತಗಳಲ್ಲಿ 49 ರನ್​ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟ ಆಡಿದರು.

ನಂತರ ಧ್ರುವ್​ ಜುರೆಲ್ ಹಾಗೂ ಹೆಟ್ಮೆಯರ್ 14 ಎಸೆತಗಳಲ್ಲಿ 27 ರನ್​ ಜೊತೆಯಾಟ ನಡೆಸಿ ಪಂದ್ಯವನ್ನ ಡ್ರಾ ಮಾಡಿದರು. ಕೊನೆಯ ಓವರ್‌ಲ್ಲಿ ರಾಜಸ್ಥಾನ್ ಗೆಲುವಿಗೆ 9 ರನ್​ಗಳ ಅಗತ್ಯ ಇತ್ತು. ಆದರೆ ಸ್ಟಾರ್ಕ್​ ಒಂದೂ ಬೌಂಡರಿ ಕೊಡದೆ ಕೇವಲ 8 ರನ್​ ಮಾತ್ರ ಬಿಟ್ಟುಕೊಡುವ ಮೂಲಕ ಪಂದ್ಯ ಟೈ ಆಗಲು ಕಾರಣರಾದರು. ಜುರೆಲ್ 17 ಎಸೆತಗಳಲ್ಲಿ 26, ಶಿಮ್ರಾನ್ ಹೆಟ್ಮೆಯರ್ 9 ಎಸೆತಗಳಲ್ಲಿ 15 ರನ್​ಗಳಿಸಿ ಅಜೇಯರಾಗಿ ಉಳಿದರು. ಕೊನೆಯ ಎಸೆತದಲ್ಲಿ 2 ರನ್​ಗಳ ಅಗತ್ಯವಿತ್ತು. ಜುರೆಲ್ ಕೇವಲ 1 ರನ್​ಗಳಿಸಿ ರನ್​ಔಟ್ ಆಗಿ ಪೆವಿಲಿಯನ್‌ನತ್ತ ತೆರಳಿದರು.

ಡೆಲ್ಲಿ ಕ್ಯಾಪಿಟಲ್ಸ್: ಜೇಕ್ ಫ್ರೇಸರ್-ಮೆಕ್‌ಗರ್ಕ್, ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆಎಲ್ ರಾಹುಲ್ (ವಿ.ಕೀ), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ಮೋಹಿತ್ ಶರ್ಮಾ

ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ವಿ.ಕೀ.), ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+