RCB vs LSG: ಇವ್ರದ್ದು ಬರೀ ಬಿಲ್ಡಪ್! ಆರ್‌ಸಿಬಿ ಬ್ಯಾಟಿಂಗ್ ಬಗ್ಗೆ ಸೆಹ್ವಾಗ್ ಟೀಕೆ
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 28 ರನ್‌ಗಳಿಂದ ಸೋಲನುಭವಿಸಿದ್ದು ಈ ಐಪಿಎಲ್ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ಐಪಿಎಲ್ ಆವೃತ್ತಿಯಲ್ಲಿ ತವರಿನಲ್ಲಿ ಸತತವಾಗಿ ಎರಡು ಪಂದ್ಯಗಳನ್ನು ಸೋತ ಮೊದಲ ತಂಡ ಎನ್ನುವ ಕೆಟ್ಟ ದಾಖಲೆ ಕೂಡ ಮಾಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದರೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 182 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ವಿಫಲವಾಗಿದೆ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ತಂಡ ಎನಿಸಿಕೊಂಡಿದ್ದರೂ, ಬ್ಯಾಟರ್ ಗಳು ವಿಫಲವಾದರು. ಆರ್‌ಸಿಬಿ ತಂಡದ ಪ್ರದರ್ಶನ ನೋಡಿ ಅಭಿಮಾನಿಗಳು ಕೂಡ ಕಿಡಿ ಕಾರಿದ್ದಾರೆ.

ಆರ್‌ಸಿಬಿ ಪರವಾಗಿ ಮಹಿಪಾಲ್ ಲೊಮ್ರೋರ್ ಮಾತ್ರ 13 ಎಸೆತಗಳಲ್ಲಿ 33 ರನ್ ಗಳಿಸಿ ಹೋರಾಟ ಕೊಟ್ಟರು, ಆದರೆ ಉಳಿದ ಬ್ಯಾಟರ್ ಗಳು ರನ್ ಗಳಿಸುವಲ್ಲಿ ವಿಫಲವಾಗಿದ್ದು ತಂಡದ ಸೋಲಿಗೆ ಕಾರಣವಾಯಿತು.
ವೀರೇಂದ್ರ ಸೆಹ್ವಾಗ್ ಟೀಕೆ
ಆರ್‌ಸಿಬಿಯ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡುತ್ತಾ, ಭಾರತದ ಮಾಜಿ ಬ್ಯಾಟರ್ ಮನೋಜ್ ತಿವಾರಿ ಮಧ್ಯಮ ಕ್ರಮಾಂಕದ ವೈಫಲ್ಯವು ತಂಡವು ದಂತಕಥೆ ಎಬಿ ಡಿವಿಲಿಯರ್ಸ್ ಅವರನ್ನು ಮಿಸ್ ಮಾಡಿಕೊಂಡಂತೆ ತೋರಿಸುತ್ತಿದೆ ಎಂದರು.
ಆರ್ ಸಿಬಿ ಈ ಮೊತ್ತವನ್ನು ಬೆನ್ನಟ್ಟಬೇಕಿತ್ತು. ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯು ಈಗ ತಂಡವನ್ನು ಕಾಡುತ್ತಿದೆ. ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಉದಯೋನ್ಮುಖ ಆಟಗಾರರಾಗಿದ್ದು, ಅವರು ಆಸ್ಟ್ರೇಲಿಯಾಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಆದರೆ ಆರ್ ಸಿಬಿ ತಂಡಕ್ಕಾಗಿ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ ಎಂದರು.
ಕಳೆದ ಪಂದ್ಯದಲ್ಲಿ ರಜತ್ ಪಾಟಿದಾರ್ ಅವರನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಲಾಯಿತು. ಆದರೆ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಗ್ರೀನ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ವಿಫಲವಾಗಿದ್ದಾರೆ. ಎಲ್ಲಾ 14 ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡದಿದ್ದರೂ, ಕನಿಷ್ಠ 7-8 ಪಂದ್ಯಗಳಲ್ಲಾದರೂ ತಂಡವನ್ನು ಗೆಲ್ಲಿಸುವ ಪ್ರದರ್ಶನ ನೀಡಬೇಕು ಎಂದು ತಿವಾರಿ ಹೇಳಿದ್ದಾರೆ.
ಚರ್ಚೆಯ ಭಾಗವಾಗಿದ್ದ ಭಾರತದ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರು ಕೂಡ ಆರ್ ಸಿಬಿ ಬ್ಯಾಟಿಂಗ್ ಅನ್ನು ಟೀಕಿಸಿದರು. ವಿರಾಟ್ ಕೊಹ್ಲಿ ಕೂಡ 7-8 ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಲು ಸಾಧ್ಯವಿಲ್ಲ. ಆಟಗಾರರು ಕನಿಷ್ಠ 2-3 ಪಂದ್ಯಗಳಲ್ಲಿ ದೊಡ್ಡ ಇನ್ನಿಂಗ್ಸ್ ಆಡುತ್ತಾರೆ. ಆಟಗಾರನು 2-3 ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರೆ, ಅದು ಬಹಳ ದೊಡ್ಡ ಸಾಧನೆಯಾಗಿದೆ ಎಂದರು. ಇದು ನೋಡಲು ಬಲಿಷ್ಠ ಬ್ಯಾಟಿಂಗ್ ಪಡೆಯಂತೆ ಕಂಡರೂ ನಿರೀಕ್ಷಿತ ಪ್ರದರ್ಶನ ಬಂದಿಲ್ಲ ಎಂದರು.












Click it and Unblock the Notifications