RCB vs RR: ಬಲಿಷ್ಠ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಗೆಲುವಿಗೆ ಕಾರಣವಾದ 3 ಅಂಶಗಳು!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಆರ್‌ಸಿಬಿ ಅಭಿಮಾನಿಗಳಿಗೆ ರಸದೌತಣ ದೊರೆತಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅಭಿಮಾನಿಗಳು ಭರಪೂರ ಮನರಂಜನೆ ಪಡೆದುಕೊಂಡಿದ್ದಾರೆ. ರೋಚಕವಾಗಿ ನಡೆದ ಈ ಕಾದಾಟದಲ್ಲಿ ಆರ್‌ಸಿಬಿ ತಂಡ 7 ರನ್‌ಗಳ ಅಂತರದ ಗೆಲುವು ಸಾಧಿಸಿ ಬೀಗಿದೆ. ಈ ಮೂಲಕ ಆರ್‌ಸಿಬಿ ಆಡಿದ 7 ಪಂದ್ಯಗಳಲ್ಲಿ 4ನೇ ಗೆಲುವು ಸಾಧಿಸಿದ್ದು ಆತ್ಮಿಶ್ವಾಸ ಹೆಚ್ಚಿಸಿಕೊಂಡಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಎಲ್ಲಾ ವಿಭಾದಲ್ಲಿಯೂ ಬಲಿಷ್ಠ ಆಟಗಾರರನ್ನು ಹೊಂದಿದ್ದು ಒಟ್ಟಾರೆಯಾಗಿ ಸಮತೋಲಿತ ತಂಡವಾಗಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದೆ. ಹೀಗಾಗಿ ಈ ಪಂದ್ಯದಲ್ಲಿ ಆರ್‌ಸಿಬಿಗೆ ಕಠಿಣ ಸವಾಲು ಎದುರಾಗುವುದು ನಿಶ್ಚಿತವಾಗುತ್ತು. ಹಾಗಿದ್ದರೂ ಆರ್‌ಸಿಬಿ ಈ ಪಂದ್ಯದಲ್ಲಿ ಅಮೋಗ ಪ್ರದರ್ಶನ ನೀಡಿದ್ದು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಹಾಗಿದ್ದರೆ ತವರಿನಲ್ಲಿ ಸಾಧಿಸಿದ ಈ ರೋಚಕ ಜಯಕ್ಕೆ ಕಾರಣವಾದ ಪ್ರಮುಖ ಅಂಶಗಳು ಯಾವುದು? ಆ ಮೂರು ವಿಚಾರಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..
RCB vs RR: ಫಾಫ್-ಮ್ಯಾಕ್ಸ್‌ವೆಲ್ ಜೋಡಿಗಿಲ್ಲ ತಡೆ: CSK ವಿರುದ್ಧ ಬರೆದಿದ್ದ ತಮ್ಮದೇ ದಾಖಲೆ ಮುರಿದ ಜೋಡಿ
ಫಾಫ್-ಮ್ಯಾಕ್ಸ್‌ವೆಲ್ ಜೋಡಿಯ ಅಬ್ಬರ
ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಜೋಡಿಯ ಅಬ್ಬರದ ಬ್ಯಾಟಿಂಗ್ ಪ್ರದರ್ಶನ. ತಂಡದ ಮೊದಲ ಎರಡು ವಿಕೆಟ್‌ಗಳನ್ನು ಆರ್‌ಸಿಬಿ ಅಲ್ಪ ಮೊತ್ತಕ್ಕೆ ಕಳೆದುಕೊಂಡಿತ್ತು. ಅದರಲ್ಲೂ ಇನ್‌ಫಾರ್ಮ್ ಆಟಗಾರ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಮೊದ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದ್ದರು.
ನಂತರ ಜೊತೆಯಾದ ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಜೋಡಿ 127ರನ್‌ಗಳ ಜೊತೆಯಾಟ ನೀಡಿತು. ಇವರಿಬ್ಬರು ಆರ್‌ಸಿಬಿ ತಂಡವನ್ನು ಸಂಕಷ್ಟದಿಂದ ಪಾರುಮಾಡಿದ್ದಲ್ಲದೆ ಬೃಹತ್ ಮೊತ್ತಕ್ಕೆ ಕಾರಣವಾದರು. ಗ್ಲೆನ್ ಮ್ಯಾಕ್ಸ್‌ವೆಲ್ 44 ಎಸೆತಗಳಲ್ಲಿ 77 ರನ್‌ಗಳನ್ನು ಸಿಡಿಸಿ ಅಬ್ಬರಿಸಿದರೆ ನಾಯಕ ಫಾಫ್ ಡು ಪ್ಲೆಸಿಸ್ 39 ಎಸೆತಗಳನ್ನು ಎದುರಿಸಿ 62 ರನ್ ಬಾರಿಸಿದ್ದಾರೆ. ಈ ಇಬ್ಬರು ಆಟಗಾರರಿ ವಿಕೆಟ್ ಕಳೆದುಕೊಂಡ ಬಳಿಕ ಆರ್‌ಸಿಬಿ ತಂಡದ ಇತರ ಬ್ಯಾಟರ್‌ಗಳು ರನ್‌ಗಳಿಸಲು ಪರದಾಡಿದರು.
IPL 2023: ಕೆಎಲ್ ರಾಹುಲ್ ತಂಡದ ಬ್ಯಾಟಿಂಗ್‌ಗೆ ಹಿಗ್ಗಾಮುಗ್ಗ ಜಾಡಿಸಿದ ವೆಂಕಟೇಶ್ ಪ್ರಸಾದ್
ಸಿರಾಜ್- ಹರ್ಷಲ್ ಬೌಲಿಂಗ್ ಕಮಾಲ್!
ಇನ್ನು ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿಗೆ ಕಾರಣವಾದ ಮತ್ತೊಂದಯ ಅಂಶವೆಂದರೆ ತಂಡದ ಬೌಲಿಂಗ್ ದಾಳಿ. ಅದರಲ್ಲೂ ಮೊಹಮ್ಮದ್ ಸಿರಾಜ್ ಹಾಗೂ ಹರ್ಷಲ್ ಪಟೇಲ್ ಅವರ ಅದ್ಭುತ ಪ್ರದರ್ಶನ. ಮೊಹಮ್ಮದ್ ಸಿರಾಜ್ ಈ ಪಂದ್ಯದಲ್ಲಿಯೂ ಮೊದಲ ಓವರ್‌ನ್ಲಲಿಯೇ ಆರ್‌ಸಿಬಿ ತಂಡಕ್ಕೆ ದೊಡ್ಡ ಯಶಸ್ಸು ನೀಡಿದರು. ಅಪಾಯಕಾರಿ ಜೋಟ್ ಬಟ್ಲರ್ ಯಾವುದೇ ರನ್‌ಗಳಿಸದೆ ಸಿರಾಜ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ದೊಡ್ಡ ಮೇಲುಗೈಗೆ ಖಾರಣವಾದರು.
ಇನ್ನು ಈ ಆವೃತ್ತಿಯಲ್ಲಿ ಸಾಕಷ್ಟು ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟು ಲಯ ಕಳೆದುಕೊಂಡವರಂತೆ ಕಾಣಿಸಿದ್ದ ಹರ್ಷಲ್ ಪಟೇಲ್ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ನಾಲ್ಕು ಓವರ್‌ಗಳ ಬೌಲಿಂಗ್ ದಾಳಿಯಲ್ಲಿ 32 ರನ್‌ಗಳನ್ನು ನೀಡಿದ ಹರ್ಷಲ್ 3 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಕೊನೆಯ ಓವರ್‌ನಲ್ಲಿಯೂ ಅದ್ಭುತ ನಿಯಂತ್ರಣ ಸಾಧಿಸಿ ಗೆಲುವಿಗೆ ಕಾರಣವಾದರು
ಶಿಮ್ರಾನ್ ಹೇಟ್ಮೇಯರ್ ರನೌಟ್
ಆರ್‌ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವ ಮತ್ತೊಂದು ಅಂಶವೆಂದರೆ ಒಂದು ರನೌಟ್. ರಾಜಸ್ಥಾನ್ ರಾಯಲ್ಸ್ ತಂಡದ ಅಪಾಯಕಾರಿ ಆಟಗಾರ ಶಿಮ್ರಾನ್ ಹೇಟ್ಮೇಯರ್ ಎಂಥಾ ಪರಿಸ್ಥಿತಿಯಲ್ಲಿಯೂ ಪಂದ್ಯವನ್ನು ಏಕಾಂಗಿಯಾಗಿ ತಮ್ಮ ತಮಡದ ಪರವಾಗಿ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರ. ಆದರೆ ಈ ಪಂದ್ಯದಲ್ಲಿ ಆರ್‌ಸಿಬಿ ಬೌಲಿಂಗ್ ದಾಳಿಗೆ ರನ್‌ಗಳಿಸಲು ಪರದಾಡುತ್ತಿದ್ದರು ಹೇಟ್ಮೇಯರ್. ಈ ಸಂದರ್ಭದಲ್ಲಿ ಒಂಟಿ ರನ್ ಕದಿಯುವ ಪ್ರಯತ್ನ ಮಾಡಿದ ಹೇಟ್ಮೇಯರ್ ಆರ್‌ಸಿಬಿ ಆಟಗಾರ ಸುಯೇಶ್ ಪ್ರಭುದೇಸಾಯಿ ಎಸೆದ ಮಿಂಚಿನಂಥಾ ಎಸೆತಕ್ಕೆ ರನೌಟ್ ಆಗಿ ಫೆವಿಲಿಯನ್ ಸೇರಿಕೊಳ್ಳಬೇಕಾಯಿತು. ಆರ್‌ಸಿಬಿ ತಂಡದ ಗೆಲುವಿನಲ್ಲಿ ಈ ರನೌಟ್ ಕೂಡ ನಿರ್ಣಾಯಕ ಪಾತ್ರವಹಿಸಿದೆ.












Click it and Unblock the Notifications