IPL 2023: 'ಇಂಪ್ಯಾಕ್ಟ್ ಪ್ಲೇಯರ್' ನಿಯಮದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ

IPL 2023: RCB Director of Cricket Mike Hesson Supports Impact Player Rule in IPL

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. 2023ರ ಐಪಿಎಲ್‌ನಲ್ಲಿ ಬಿಸಿಸಿಐ 'ಇಂಪ್ಯಾಕ್ಟ್ ಪ್ಲೇಯರ್' ಎನ್ನುವ ಹೊಸ ನಿಯಮವನ್ನು ಜಾರಿ ಮಾಡಿದೆ. ಇದರಿಂದಾಗಿ ಹಲವು ಆಟಗಾರರಿಗೆ ಅವಕಾಶ ಸಿಗಲಿದೆ ಎಂದು ಹೇಳಲಾಗಿದೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್‌ನ ನಿರ್ದೇಶಕ ಮೈಕ್ ಹೆಸ್ಸನ್ ಸ್ವಾಗತಿಸಿದ್ದಾರೆ. ಈ ನಿಯಮದಿಂದಾಗಿ ಆಲ್‌ರೌಂಡರ್‌ಗಳು ಪಂದ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಅವರು ನಿರೀಕ್ಷೆ ಮಾಡಿದ್ದಾರೆ. ಇಂಪ್ಯಾಕ್ಟ್ ನಿಯಮದ ಪ್ರಕಾರ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟರ್ ಅಥವಾ ಬೌಲರ್ ಅನ್ನು ಆಟದ ಮಧ್ಯದಲ್ಲಿ ಬದಲಾಯಿಸಬಹುದು, ಇದರಿಂದಾಗಿ ಪಂದ್ಯ ಮತ್ತಷ್ಟು ರೋಮಾಂಚಕವಾಗಲಿದೆ.

"ಹರಾಜಿಗೆ ಮುನ್ನ ನಾವು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ತಿಳಿದುಕೊಂಡಿದ್ದೇವೆ, ಅದನ್ನು ಗಮನದಲ್ಲಿಟ್ಟುಕೊಂಡೇ ಆಟಗಾರರನ್ನು ಖರೀದಿ ಮಾಡಲಾಗಿದೆ. ಈ ನಿಯಮವನ್ನು ಪಂದ್ಯದಲ್ಲಿ ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎನ್ನುವುದರ ಕುರಿತು ಯೋಚಿಸಿದ್ದೇವೆ, ಆಲ್‌ರೌಂಡರ್‌ಗೆ ದೊಡ್ಡ ಪಾತ್ರವನ್ನು ವಹಿಸುವ ಸಾಮರ್ಥ್ಯವಿರುತ್ತದೆ. ಈ ನಿಯಮದಿಂದ ಆಲ್‌ರೌಂಡರ್ ಗಳಿಗೆ ಮತ್ತಷ್ಟು ಉತ್ತೇಜನ ಸಿಗುತ್ತದೆ" ಎಂದು ಹೆಸ್ಸನ್ ಹೇಳಿದ್ದಾರೆ.

IPL 2023: RCB Director of Cricket Mike Hesson Supports Impact Player Rule in IPL

ಅತ್ಯುತ್ತಮ ನಿಯಮ ಎಂದ ಹೆಸನ್

ಆರ್‌ಸಿಬಿ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಮಾತನಾಡಿರುವ ಹೆಸ್ಸನ್, "ಈ ಹೊಸ ನಿಯಮವನ್ನು ನಾನು ಇಷ್ಟಪಡುತ್ತೇನೆ. ಈ ನಿಯಮದ ಪ್ರಕಾರ ಯಾವಾಗ ಬೇಕಾದರೂ ಹೊಸ ಆಟಗಾರನನ್ನು ಪರಿಚಯಿಸಬಹುದು. ಟಾಸ್ ಸಂದರ್ಭದಲ್ಲಿ ಎರಡು ವಿಭಿನ್ನ ಪ್ಲೇಯಿಂಗ್ ಇಲೆವೆನ್ ಹೆಸರಿಸುವುದು ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಹೊಂದುತ್ತದೆ" ಎಂದು ಹೇಳಿದರು.

"ಇದು ಬದಲೀ ಆಟಗಾರನ ನಿಯಮ, ನೀವು ಮೊದಲು ಬ್ಯಾಟ್ ಮಾಡಿದರೆ ಬ್ಯಾಟರ್ ಅನ್ನು ಬದಲಾಯಿಸುತ್ತೀರಿ ಮತ್ತು ಹೆಚ್ಚುವರಿ ಬೌಲರ್ ಅನ್ನು ತರುತ್ತೀರಿ. ಆದ್ದರಿಂದ ಟಾಸ್ ನಂತರ, ನೀವು ಅವರಿಗೆ ನಿಮ್ಮ ಬ್ಯಾಟಿಂಗ್ 11 ಮತ್ತು ಬೌಲಿಂಗ್ 11 ನೀಡಿ. ಇದು ಬದಲೀ ಆಟಗಾರನ ನಿಯಮ" ಎಂದು ಹೇಳಿದರು.

IPL 2023: RCB Director of Cricket Mike Hesson Supports Impact Player Rule in IPL

ವೈಡ್, ನೋಬಾಲ್ ನಿಯಮಕ್ಕೂ ಮೇಲ್ಮನವಿ ಸಲ್ಲಿಸಬಹುದು

ಐಪಿಎಲ್‌ನಲ್ಲಿ ಜಾರಿಗೆ ಬರುತ್ತಿರುವ ವೈಡ್ ಮತ್ತು ನೋಬಾಲ್‌ ತೀರ್ಪನ್ನು ಮರುಶೀಲಿಸುವ ನಿಯಮವನ್ನು ಕೂಡ ಹೆಸನ್ ಸ್ವಾಗತಿಸಿದ್ದಾರೆ. "ಈ ನಿಯಮವನ್ನು ಈಗಾಗಲೇ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಬಳಸಲಾಗಿದೆ. ಇದು ಉತ್ತಮ ನಿಯಮ ಎಂದು ನನಗೆ ಅನಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಈ ನಿರ್ಧಾರಗಳು ಪಂದ್ಯದ ಫಲಿತಾಂಶವನ್ನೇ ಬದಲಾಯಿಸುತ್ತವೆ" ಎಂದು ಹೇಳಿದರು.

"ಸೊಂಟಕ್ಕಿಂತ ಎತ್ತರದ ಎಸೆತಗಳು ನೋ ಬಾಲ್ ಆಗಿದೆಯೇ ಅಥವಾ ಫ್ಲಿಕ್ ಮಾಡಿದಾಗ ವೈಡ್ ಎಂದು ಕರೆಯಬಹುದೇ ಎನ್ನುವ ಗೊಂದಲಕ್ಕೆ ಬಹುತೇಕ ತೆರೆಬೀಳಲಿದೆ. ಅಂಪೈರ್ ಗಳು ಕೂಡ ಇನ್ನು ಮುಂದೆ ತೀರ್ಪು ನೀಡುವಾಗ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ." ಎಂದು ಹೇಳಿದರು.

ನಿಗದಿತ ಸಮಯಕ್ಕೆ 19ನೇ ಓವರ್ ಪೂರ್ಣಗೊಳಿಸದಿದ್ದರೆ, ಫೀಲ್ಡಿಂಗ್‌ನಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಹೆಚ್ಚುವರಿ ಫೀಲ್ಡರ್ ಅನ್ನು 30 ಯಾರ್ಡ್ ವೃತ್ತದೊಳಗೆ ನಿಲ್ಲಿಸಬೇಕಾಗುತ್ತದೆ. ಇದರೊಂದಿಗೆ ಔಟ್‌ ಫೀಲ್ಡ್‌ನಲ್ಲಿ ಕೇವಲ 4 ಫೀಲ್ಡರ್ ಗಳು ಮಾತ್ರ ಇರುತ್ತಾರೆ.

ಈ ನಿಯಮ ಪ್ರಪಂಚದಾದ್ಯಂತದ ಇತರ ಪಂದ್ಯಾವಳಿಗಳಲ್ಲಿ ಜಾರಿಯಲ್ಲಿದೆ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಜಾರಿಗೆ ತರಲಾಗುತ್ತಿದೆ, ಈ ನಿಯಮ ಜಾರಿಯಾದ ಬಳಿಕ ಬ್ಯಾಟರ್ ಮತ್ತು ಬೌಲರ್ ನಡುವೆ ಹೆಚ್ಚು ಚರ್ಚೆಗಳು ನಡೆಯುವುದಿಲ್ಲ ಎಂದು ಮೈಕ್ ಹೆಸನ್ ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+