LSG vs KKR: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ಈ ಆಟಗಾರರನ್ನು ಆರಿಸಿ

IPL 2023: Kolkata Knight Riders vs Lucknow Super Giants dream team prediction

ಕಳೆದ ಮಾರ್ಚ್ ತಿಂಗಳಿನಲ್ಲಿ ಆರಂಭವಾದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ನಾಳೆಗೆ ( ಮೇ 21 ) ಕೊನೆಗೊಳ್ಳಲಿವೆ. ಇಂದು ಹಾಗೂ ನಾಳೆ ದಿನಕ್ಕೆ ಎರಡು ಪಂದ್ಯಗಳು ಆಯೋಜನೆಯಗೊಂಡಿದ್ದು, ಈ ನಾಲ್ಕೂ ಪಂದ್ಯಗಳೂ ಸಹ ಅತಿ ಮುಖ್ಯದ್ದಾಗಿದೆ.

ಹೌದು, ಇಲ್ಲಿಯವರೆಗೂ ಕೇವಲ ಗುಜರಾತ್ ಟೈಟನ್ಸ್ ತಂಡ ಮಾತ್ರ ಪ್ಲೇಆಫ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದು, ಇನ್ನುಳಿದ ಮೂರು ಸ್ಥಾನಗಳಿಗೆ ಯಾವ ತಂಡಗಳು ಅರ್ಹತೆ ಗಿಟ್ಟಿಸಿಕೊಳ್ಳಲಿವೆ ಎಂಬುದು ಇಂದು ಹಾಗೂ ನಾಳೆ ನಡೆಯುವ ಪಂದ್ಯಗಳ ಫಲಿತಾಂಶದಿಂದ ತಿಳಿದು ಬರಲಿದೆ.

ಇಂದು ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ vs ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯಗಳು ಜರುಗಿದರೆ, ನಾಳೆ ಸನ್ ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟನ್ಸ್ ಪಂದ್ಯಗಳು ಜರುಗಲಿವೆ.

ಪ್ಲೇಆಫ್ ರೇಸ್‌ನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಪ್ರವೇಶಿಸುವ ಅವಕಾಶ ಪಡೆದುಕೊಳ್ಳಲಿವೆ. ಹೀಗೆ ಈ ನಾಲ್ಕೂ ಪಂದ್ಯಗಳೂ ಸಹ ಅತಿಮುಖ್ಯದ ಹಣಾಹಣಿಗಳಾಗಿ ಪರಿಣಮಿಸಿವೆ.

ಇನ್ನು ಲಕ್ನೋ ಸೂಪರ್ ಜೈಂಟ್ಸ್ vs ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯ ಇಂದು ( ಮೇ 20 ) ಸಂಜೆ 7.30 ಕ್ಕೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟೂರ್ನಿಯಲ್ಲಿ ಇಲ್ಲಿಯವರೆಗೂ 13 ಪಂದ್ಯಗಳನ್ನಾಡಿ 7 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತು ಒಂದು ಪಂದ್ಯದಲ್ಲಿ ಫಲಿತಾಂಶ ಕಾಣದೇ ಇರುವ ಲಕ್ನೋ ಸೂಪರ್ ಜೈಂಟ್ಸ್ ತಂಡ 15 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, ಈ ಪಂದ್ಯದಲ್ಲಿ ಗೆದ್ದರೆ 17 ಅಂಕಗಳನ್ನು ಪಡೆದುಕೊಂಡು ಪ್ಲೇಆಫ್‌ಗೆ ಲಗ್ಗೆ ಇಡಲಿದೆ.

ಇನ್ನು 13 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಗೆದ್ದು 7 ಪಂದ್ಯಗಳಲ್ಲಿ ಸೋಲನ್ನು ಕಂಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 12 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು, ಈ ಪಂದ್ಯವನ್ನು ಗೆದ್ದರೂ ಸಹ ಪ್ಲೇಆಫ್ ಅನುಮಾನವಾಗಿದೆ. ಆದರೆ ಈ ಪಂದ್ಯದಲ್ಲಿ ಕೆಕೆಆರ್ ಗೆದ್ದರೆ ಲಕ್ನೋ ತಂಡದ ಪ್ಲೇಆಫ್ ಆಸೆ ಮಣ್ಣಾಗುವುದಂತೂ ಪಕ್ಕಾ.

ಹೀಗೆ ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ಕುತೂಹಲ ಒಂದೆಡೆಯಾದರೆ, ಮತ್ತೊಂದೆಡೆ ಈ ಪಂದ್ಯಕ್ಕಾಗಿ ಫ್ಯಾಂಟಸಿ ಕ್ರಿಕೆಟ್ ಪ್ರಿಯರು ಡ್ರೀಮ್ ಟೀಮ್ ರಚಿಸುತ್ತಿದ್ದು, ಉತ್ತಮ ಪ್ರದರ್ಶನ ನೀಡಬಹುದಾದ ಆಟಗಾರರನ್ನು ಆರಿಸುವಲ್ಲಿ ನಿರತರಾಗಿದ್ದಾರೆ.

ಹೀಗೆ ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಪ್ರಿಯರು ಈ ಕೆಳಕಂಡಂತೆ ತಂಡಗಳನ್ನು ರಚಿಸಿದರೆ ಹೆಚ್ಚಿನ ಅಂಕಗಳನ್ನು ಗಳಿಸಿ ಉತ್ತಮ ಫಲಿತಾಂಶ ಪಡೆಯಬಹುದಾದ ಸಾಧ್ಯತೆಗಳಿವೆ.

ಡ್ರೀಮ್ ಟೀಮ್ 1:

ವಿಕೆಟ್ ಕೀಪರ್ - ಕ್ವಿಂಟನ್ ಡಿ ಕಾಕ್, ರಹಮಾನುಲ್ಲಾ ಗುರ್ಬಾಜ್

ಬ್ಯಾಟ್ಸ್‌ಮನ್‌ಗಳು - ಜೇಸನ್ ರಾಯ್, ನಿತೀಶ್ ರಾಣಾ (ನಾಯಕ), ಕೈಲ್ ಮೇಯರ್ಸ್ (ಉಪನಾಯಕ)

ಆಲ್ ರೌಂಡರ್‌ಗಳು - ಆಂಡ್ರೆ ರಸೆಲ್, ಸುನಿಲ್ ನರೈನ್, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ

ಬೌಲರ್‌ಗಳು - ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್

ಡ್ರೀಮ್ ಟೀಮ್ 2:

ವಿಕೆಟ್ ಕೀಪರ್ - ಕ್ವಿಂಟನ್ ಡಿ ಕಾಕ್, ರಹಮಾನುಲ್ಲಾ ಗುರ್ಬಾಜ್

ಬ್ಯಾಟ್ಸ್‌ಮನ್‌ಗಳು - ಜೇಸನ್ ರಾಯ್ (ಉಪನಾಯಕ), ನಿತೀಶ್ ರಾಣಾ

ಆಲ್ ರೌಂಡರ್‌ಗಳು - ಆಂಡ್ರೆ ರಸೆಲ್ (ನಾಯಕ), ಸುನಿಲ್ ನರೈನ್, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ

ಬೌಲರ್‌ಗಳು - ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+