ಸ್ಟಾರ್ ಆಟಗಾರ ಕೆಎಲ್ ರಾಹುಲ್ ಮದ್ವೆ ಬಗ್ಗೆ ಮತ್ತೆ ಗುಸುಗುಸು ಪಿಸುಪಿಸು

ಬೆಂಗಳೂರು, ಏಪ್ರಿಲ್ 20: ಕನ್ನಡಿಗ ಕೆಎಲ್ ರಾಹುಲ್, ಬಾಲಿವುಡ್ ನ ಸ್ಟಾರ್ ನಟ, ಕನ್ನಡಿಗ ಸುನೀಲ್ ಶೆಟ್ಟಿ ಮಗಳ ಜೊತೆ ಡೇಟಿಂಗ್, ಲವ್ ನಲ್ಲಿರುವ ಸುದ್ದಿ ಹೊಸದೇನಲ್ಲ. ಪ್ರೇಮಪಕ್ಷಿಗಳಾದ ನಟಿ ಅತಿಯಾ ಶೆಟ್ಟಿ ಮತ್ತು ರಾಹುಲ್ ಇಬ್ಬರು ಒಟ್ಟಿಗೆ ಓಡಾಡುತ್ತಿರುವ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಆದರೆ ಈ ಬಗ್ಗೆ ಕೇಳಿದರೆ ಇಬ್ಬರು ಬೆಸ್ಟ್ ಫ್ರೆಂಡ್ಸ್ ಅಷ್ಟೆ ಎಂದು ಹೇಳಿಕೊಳ್ಳುತ್ತಿದ್ದವರು. ಈಗ ಪ್ರೇಮ, ಮದುವೆ ಬಗ್ಗೆ ಮಾತುಕತೆ ಮಾಡುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಮತ್ತೊಮ್ಮೆ ಐಪಿಎಲ್ ಸಂದರ್ಭದಲ್ಲೇ ಇಬ್ಬರ ಮದುವೆ ಬಗ್ಗೆ ಗುಸುಗುಸು ಪಿಸುಪಿಸು ಜೋರಾಗಿದೆ.

ಐಪಿಎಲ್ 2022ರ ಸೀಸನ್‌ನಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿರುವ ಕೆ.ಎಲ್ ರಾಹುಲ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗಷ್ಟೇ ತಮ್ಮ 100ನೇ ಐಪಿಎಲ್‌ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಸಾಧನೆಯನ್ನು ಮಾಡಿದ್ದಾರೆ.

ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿಯೊಂದಿಗೆ ಬಹುಕಾಲದಿಂದ ಪ್ರೀತಿಯಲ್ಲಿರುವ ರಾಹುಲ್‌ ಇತ್ತೀಚಿನ ದಿನಗಳಲ್ಲಿ ಮುಕ್ತವಾಗಿಯೇ ಅತಿಯಾ ಶೆಟ್ಟಿ ಮತ್ತು ತನ್ನ ನಡುವೆ ಪ್ರೀತಿ ಇದೆ ಎಂಬ ವಿಷಯವನ್ನು ಭಿನ್ನ ವಿಭಿನ್ನ ಫೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಆಥಿಯಾ ಶೆಟ್ಟಿ ಕೂಡ ರಾಹುಲ್ ಜೊತೆಗಿನ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

IPL 2022: Athiya Shetty And KL Rahul to Get Married Soon: Reports

ಪ್ರಸಕ್ತ ಸೀಸನ್‌ನಲ್ಲಿ ಏಪ್ರಿಲ್ 20ರಂತೆ ಆಡಿರುವ 7ಪಂದ್ಯಗಳಲ್ಲಿ 141 ಸ್ಟ್ರೈಕ್ ರೇಟ್ ನಂತೆ ಬ್ಯಾಟ್ ಬೀಸಿರುವ ಕೆ.ಎಲ್ ರಾಹುಲ್ ಒಂದು ಶತಕ ಸೇರಿದಂತೆ 265 ರನ್ ಕಲೆಹಾಕಿದ್ದಾರೆ.

ಇನ್ನು ಬಾಲಿವುಡ್‌ನಲ್ಲಿ ಮದುವೆ ಸಂಭ್ರಮ ಮುಂದುವರೆದಿದೆ. ಫರ್ಹಾನ್ ಅಖ್ತರ್-ಶಿಬಾನಿ ದಾಂಡೇಕರ್, ರಣಬೀರ್ ಕಪೂರ್-ಆಲಿಯಾ ಭಟ್ ಅವರ ವಿವಾಹದ ನಂತರ, ಈಗ ಅತಿಯಾ ಶೆಟ್ಟಿ-ಕೆಎಲ್ ರಾಹುಲ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು. ದಂಪತಿಗಳು ತಮ್ಮ ಪ್ರೀತಿಯ ಬಗ್ಗೆ ಬಹಳ ಸಮಯದಿಂದ ಹೆಚ್ಚು ಮಾತನಾಡಿಲ್ಲ, ಆದರೆ ಅವ್ರ Instagram ಚಿತ್ರಗಳು ಈ ಬಗ್ಗೆ ಹೆಚ್ಚು ಹೇಳಿವೆ. ಎರಡು ಮೂರು ವರ್ಷಕ್ಕಿಂತ ಹೆಚ್ಚು ಕಾಲ ಪ್ರೇಮ ಲೋಕದಲ್ಲಿರುವ ಇಬ್ಬರು ವರ್ಷಾಂತ್ಯದೊಳಗೆ ಮದುವೆಯಾಗುತ್ತಾರೆ ಎಂಬ ಸುದ್ದಿ ಬಂದಿದೆ.

IPL 2022: Athiya Shetty And KL Rahul to Get Married Soon: Reports

ಇತ್ತೀಚೆಗೆ ಕೆಎಲ್ ರಾಹುಲ್ ಹುಟ್ಟುಹಬ್ಬಕ್ಕೆ ಅತಿಯಾ ವಿಶ್ ಮಾಡಿ, ಪರಸ್ಪರ ಒರಗಿಕೊಂಡಿರುವ ಸೆಲ್ಫಿ ಹಾಕಿದ್ದರು. ""Anywhere with you, happy birthday" ಎಂದು ಬರೆದುಕೊಂಡಿದ್ದರು. ಸುನೀಲ್ ಶೆಟ್ಟಿ, ಅತಿಯಾ ಐಪಿಎಲ್ ಮ್ಯಾಚ್ ನೋಡಲು ಬಂದಾಗ ಡಕ್ ಔಟ್ ಆಗಿದ್ದ ರಾಹುಲ್ ನಂತರ ಮ್ಯಾಚಲ್ಲಿ ಸೆಂಚುರಿ ಬಾರಿಸಿ ಸಂಭ್ರಮಿಸಿದ್ದರು. ಕ್ರಿಕೆಟ್ ಲೋಕದಲ್ಲಿ ಛಲಗಾರ ಎಂದೆನಿಸಿಕೊಂಡಿರುವ ಕುಡ್ಲ ಮೂಲದ ರಾಹುಲ್ ಹಾಗೂ ಅತಿಯಾ ಮದುವೆಯನ್ನು ಮಂಗಳೂರು ಸಂಪ್ರದಾಯ ಶೈಲಿಯಲ್ಲೇ ನೆರವೇರಿಸಲು ಎರಡು ಕಡೆ ಕುಟುಂಬ ಮುಂದಾಗಿದೆ. ಮುಲ್ಕಿ ಮೂಲದ ಸುನೀಲ್ ಶೆಟ್ಟಿ ಬಾಲಿವುಡ್ ರಂಗದಲ್ಲಿ ದೊಡ್ಡ ಹೆಸರು ಗಳಿಸಿದರೂ ಮೂಲ ಮನೆಯನ್ನು ಮರೆತ್ತಿಲ್ಲ. ದೇವರು ನೇಮ ನಿಷ್ಠೆ ಎಂದರೆ ಊರಿಗೆ ಕಡೆಗೆ ಪಯಣಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+