Get Updates
Get notified of breaking news, exclusive insights, and must-see stories!

ಐಸಿಸಿ ವಿಶ್ವಕಪ್: ಭಾರತವನ್ನು ಕೆಣಕುತ್ತಿದ್ದ ಶ್ರೀಲಂಕಾ ತಂಡ ಕ್ರಿಕೆಟ್ ಜಗತ್ತಿನಿಂದಲೇ ಬ್ಯಾನ್! ಲಂಕನ್ನರು ಕ್ರಿಕೆಟ್ ಆಡಂಗಿಲ್ಲ

ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ನೀಯತ್ತಾಗಿ ಆಟ ಆಡಲು ಬರದೇ ಇದ್ರೂ, ಕ್ರಿಕೆಟ್ ಮೈದಾನ ಬಿಟ್ಟು ರಾಜಕೀಯ ಮಾಡುವುದು ಚೆನ್ನಾಗಿ ಗೊತ್ತು. ಅದ್ರಲ್ಲೂ ಲಂಕಾ ಕ್ರಿಕೆಟ್ ಮಂಡಳಿ, ಪದೇ ಪದೆ ಭಾರತ ವಿರೋಧಿಯಂತೆ ಹೇಳಿಕೆ ನೀಡಿ ಅಭಿಮಾನಿಗಳಿಂದ ಉಗಿಸಿಕೊಂಡಿತ್ತು. ಹೀಗಿದ್ದಾಗಲೇ ನೇರ 'ಐಸಿಸಿ' ಇದೀಗ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಹೈವೋಲ್ಟೇಜ್ ಶಾಕ್ ಕೊಟ್ಟಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿನಿಂದಲೇ ಬ್ಯಾನ್ ಮಾಡಿದೆ.

ಐಸಿಸಿ ರೂಲ್ಸ್ ಅಂದ್ರೆ ರೂಲ್ಸ್, ಹೀಗೆ ಐಸಿಸಿ ನಿಯಮ ಮೀರುವ ಯಾವುದೇ ತಂಡವನ್ನೂ ಮುಖ ಮೂತಿ ನೋಡದೆ ಬ್ಯಾನ್ ಮಾಡುತ್ತದೆ ಐಸಿಸಿ. ಅಷ್ಟಕ್ಕೂ ಈ ಐಸಿಸಿ ಎನ್ನುವುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಉಸ್ತುವಾರಿ ನೋಡಿಕೊಳ್ಳುವ ಸಂಸ್ಥೆ. ಪ್ರಪಂಚದ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡ ಐಸಿಸಿ ಅಡಿಯಲ್ಲಿ ಕೆಲಸ ಮಾಡುತ್ತೆ. ಆದರೆ ಈಗ ಐಸಿಸಿ ತನ್ನ ರೂಲ್ಸ್ ಬಿಗಿ ಮಾಡಿದೆ. ತಪ್ಪು ಮಾಡುವ ಯಾವುದೇ ತಂಡವನ್ನ ಕೂಡ ಶಿಕ್ಷಿಸದೆ ಬಿಡುವುದಿಲ್ಲ. ಇದೀಗ ಶ್ರೀಲಂಕಾ ತಂಡ ಕೂಡ ಅದೇ ರೀತಿ ಲಾಕ್ ಆಗಿದೆ.

International Cricket Council Suspends Sri Lankan Cricket Board

ಶ್ರೀಲಂಕಾಗೆ ಶಾಕ್ ಮೇಲೆ ಶಾಕ್!

ಅಂದಹಾಗೆ, ಈಗಾಗಲೇ 2023ರ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ತೋರಿಸಿ ಮನೆಗೆ ಹೋಗಿರುವ ಶ್ರೀಲಂಕಾ ಕ್ರಿಕೆಟ್ ಆಟಗಾರರಿಗೆ ದಿಢೀರ್ ಆಘಾತ ಸಿಕ್ಕಿದೆ. ತವರಿಗೆ ಮರಳಿದ ತಕ್ಷಣ ಇನ್ನುಮುಂದೆ ಕ್ರಿಕೆಟ್ ಆಡಂಗಿಲ್ಲ ಎಂಬ ಆದೇಶ ಕೂಡ ಹೊರಬಿದ್ದಿದೆ. ಲೀಗ್ ಹಂತದಲ್ಲೇ ಮನೆಗೆ ಹೋದ ಶ್ರೀಲಂಕಾ ತಂಡವನ್ನು 'ಐಸಿಸಿ' ಈಗ, ಬ್ಯಾನ್ ಮಾಡಿಬಿಟ್ಟಿದೆ. ಹಾಗಾದರೆ ಹೀಗೆ ಐಸಿಸಿ ಲಂಕಾ ತಂಡದ ಮೇಲೆ ನಿಷೇಧ ಹೇರಲು ಪ್ರಮುಖ ಕಾರಣ ಏನು? ಮುಂದೆ ಓದಿ.

ಸರ್ಕಾರದ ಹಸ್ತಕ್ಷೇಪಕ್ಕೆ ತಕ್ಕ ಶಿಕ್ಷೆ

ಅಷ್ಟಕ್ಕೂ ಈಗ ಐಸಿಸಿ ಶ್ರೀಲಂಕಾ ಕ್ರಿಕೆಟ್ ತಂಡವನ್ನು ಬ್ಯಾನ್ ಮಾಡಿರುವುದು ಯಾಕಪ್ಪಾ ಅಂದ್ರೆ, ಕರ್ತವ್ಯ ನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ತಡೆಯಲು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ವಿಫಲವಾಗಿದೆ ಅಂತಾ. ಈ ಕಾರಣಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ, ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ಪೂರ್ಣಾವಧಿ ಸದಸ್ಯ ಸ್ಥಾನದಿಂದ ಅಮಾನತು ಮಾಡುತ್ತಿರುವುದಾಗಿ 'ಐಸಿಸಿ' ಹೇಳಿದೆ. ಹೀಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ನೀಡಿರುವ ಆದೇಶ ಶ್ರೀಲಂಕಾ ಕ್ರಿಕೆಟ್ ಆಟಗಾರರಿಗೆ ಮಾತ್ರವಲ್ಲ ಅಭಿಮಾನಿಗಳಿಗೂ ದೊಡ್ಡ ಆಘಾತ ನೀಡಿದೆ.

International Cricket Council Suspends Sri Lankan Cricket Board

ಮಾಡಬಾರದ್ದು ಮಾಡಿದರೆ, ಆಗಬಾರದ್ದು...

ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಸಾಕಷ್ಟು ಸಮಸ್ಯೆ ಇತ್ತು. ಅದರಲ್ಲೂ ಮಂಡಳಿಯಲ್ಲೇ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ರಾಜೀನಾಮೆ ನೀಡಲು ಮಂಡಳಿ ಪದಾಧಿಕಾರಿಗಳಿಗೆ ಶ್ರೀಲಂಕಾ ಸಂಸತ್ತು ಸೂಚಿಸಿತ್ತು. ಅಲ್ಲದೆ ಈ ಕುರಿತು ಶ್ರೀಲಂಕಾ ಸಂಸತ್ ಸರ್ವಾನುಮತದ ನಿರ್ಣಯ ಕೈಗೊಂಡಿತ್ತು. ಹೀಗಿದ್ದಾಗ 'ಐಸಿಸಿ' ಕೂಡ ಶ್ರೀಲಂಕಾ ತಂಡದ ವಿರುದ್ಧ ಅಮಾನತು ಶಿಕ್ಷೆ ವಿಧಿಸಿದೆ.

ಎಗರಾಡಿದ್ದ ಆಯ್ಕೆ ಸಮಿತಿ ಮುಖ್ಯಸ್ಥ!

1996ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿದ್ದ ಲಂಕಾ, ಈ ಬಾರಿ ಸಣ್ಣಪುಟ್ಟ ಟೀಂ ಎದುರು ಕೂಡ ಸೋತು ಸುಣ್ಣವಾಗಿದೆ. ಹೀನಾಯವಾಗಿ ಸೊತು ನಿನ್ನೆ ತವರಿಗೆ ಮರಳಿತ್ತು ಶ್ರೀಲಂಕಾ ಟೀಂ. ಹೀಗಿದ್ದಾಗ ಶ್ರೀಲಂಕಾದ ಮುಖ್ಯ ಆಯ್ಕೆಗಾರ ಪ್ರಮೋದಯ ವಿಕ್ರಮಸಿಂಘೆ, ಲಂಕಾ ಸೋಲಿಗೆ 'ಬಾಹ್ಯ ಪಿತೂರಿ'ಯೇ ಕಾರಣ ಎಂದು ದೂರಿದ್ದರು. ಹೀಗೆ ಪರೋಕ್ಷವಾಗಿ, ಭಾರತದ ವಿರುದ್ಧ ಪ್ರಮೋದಯ ವಿಕ್ರಮಸಿಂಘೆ ವಿಷ ಕಾರಿದ್ದರು. ಈಗ ನೋಡಿದರೆ ಇಡೀ ಶ್ರೀಲಂಕಾ ತಂಡವೇ ಬ್ಯಾನ್ ಆಗೋಗಿದೆ. ಹೀಗೆ ಭಾರತದ ವಿರುದ್ಧ ಸುಖಾಸುಮ್ಮನೆ ಕಿರಿಕ್ ತೆಗೆದಿದ್ದ ಶ್ರೀಲಂಕಾ ತಂಡಕ್ಕೆ ತಕ್ಕ ಶಾಸ್ತಿಯಾಗಿದೆ ಅಂತಿದ್ದಾರೆ ಫ್ಯಾನ್ಸ್.

International Cricket Council Suspends Sri Lankan Cricket Board

ಕಿರಿಕ್ ಮಾಡಿದವರಿಗೆ ಬ್ಯಾನ್ ಶಿಕ್ಷೆ

ಹಾಗೇ ನಿನ್ನೆ ತನ್ನ ಮಾತನ್ನು ಮುಂದುವರಿಸಿದ್ದ ಪ್ರಮೋದಯ ವಿಕ್ರಮಸಿಂಘೆ, ನನಗೆ 2 ದಿನ ಸಮಯ ಕೊಡಿ ಎಲ್ಲವನ್ನು ಬಯಲು ಮಾಡುತ್ತೇನೆ. ಇದು ಹೊರಗಿನ ಪಿತೂರಿಯ ಫಲಿತಾಂಶ ಆಗಿದೆ. ಇದು ದುಃಖದ ವಿಚಾರ ಮತ್ತು ನಾನೇ ಸೋಲಿನ ಸಂಪೂರ್ಣ ಜವಾಬ್ದಾರಿ ಹೊರುತ್ತೇನೆ ಅಂತಾ ಹೇಳಿದ್ರು. ಈ ರೀತಿ ಬಾಯಿಗೆ ಬಂದಂತೆ ಲಂಕಾದ ಮಾಜಿ ಆಟಗಾರ ಕಂ ಹಾಲಿ ಆಯ್ಕೆ ಸಮಿತಿ ಮುಖ್ಯಸ್ಥ ಮಾತನಾಡಿದ್ದು, ಕ್ರಿಕೆಟ್ ಜಗತ್ತಿನಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಇಷ್ಟೆಲ್ಲದರ ನಡುವೆ ಈಗ ಐಸಿಸಿ ನೇರವಾಗಿ ಶ್ರೀಲಂಕಾ ತಂಡವನ್ನೇ ಬ್ಯಾನ್ ಮಾಡಿದೆ.

ವಿಶ್ವಕಪ್ ಕ್ರಿಕೆಟ್ 2023 ಶುರುವಾಗುವುದಕ್ಕೆ ಮೊದಲು, ಲಂಕಾ ಟೀಂ ಟೂರ್ನಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಒಂದಾಗಿತ್ತು. ಆದ್ರೆ ನೋಡ ನೋಡುತ್ತಲೇ, ಶ್ರೀಲಂಕಾ ತಂಡ ಹೀನಾಯವಾಗಿ ಪ್ರದರ್ಶನ ನೀಡಿ ಕುಸಿದು ಬಿತ್ತು. ಅದ್ರಲ್ಲೂ ಭಾರತದ ವಿರುದ್ಧ ಸೋತು ಹೋದ ಪಂದ್ಯ ಇಡೀ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲುಗಳ ಪೈಕಿ ಒಂದು ಎಂಬ ಕುಖ್ಯಾತಿ ಪಡೆದಿದೆ. ಹೀಗೆ ಎಲ್ಲಾ ರೀತಿಯಲ್ಲೂ ಹೀನಾಯ ಪ್ರದರ್ಶನ ನೀಡಿದ್ದ ಶ್ರೀಲಂಕಾಗೆ ಇನ್ನು ಮುಂದೆ ಕ್ರಿಕೆಟ್ ಆಡದಂತೆ ನಿಷೇಧ ಹೇರಲಾಗಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಭ್ರಷ್ಟ ಆಡಳಿತ ಇಡೀ ದೇಶದ ಕ್ರಿಕೆಟ್ ಜಗತ್ತನ್ನೇ ಆಹುತಿ ಪಡೆದಿದೆ ಎಂದು ಫ್ಯಾನ್ ರೊಚ್ಚಿಗೆದ್ದು ಆಕ್ರೋಶ ಹೊರಹಾಕುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+