ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆಸ್ ವಿಶ್ವಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್‌ಗೆ ಮತ್ತೊಮ್ಮೆ ಶಾಕ್ ಕೊಟ್ಟ ಪ್ರಜ್ಞಾನಂದ

|
Google Oneindia Kannada News

ನವದೆಹಲಿ, ಮೇ 21: ವಿಶ್ವನಾಥನ್ ಆನಂದ್ ಅವರಂಥ ದಿಗ್ಗಜರಿಗೆ ಸೋಲಿಸಲು ಕಬ್ಬಿಣದ ಕಡಲೆಯಾಗಿರುವ ವಿಶ್ವ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್‌ಗೆ ಭಾರತದ 16 ವರ್ಷದ ಪ್ರತಿಭೆಯೊಬ್ಬ ಎರಡೆರಡು ಬಾರಿ ಸೋಲಿನ ಆಘಾತ ನೀಡಿದ್ದಾನೆ. ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ರಮೇಶ್ ಬಾಬು (R Praggnanandha) ಚೆಸಬಲ್ ಮಾಸ್ಟರ್ಸ್ (Chessable Masters) ಆನ್‌ಲೈನ್ ರ್‍ಯಾಪಿಡ್ ಚೆಸ್ ಟೂರ್ನಿಯ ಐದನೇ ಸುತ್ತಿನಲ್ಲಿ ನಾರ್ವೇ ದೇಶದ ವಿಶ್ವ ನಂಬರ್ ಒನ್ ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದರು.

ಇದು ಈ ವರ್ಷದಲ್ಲಿ ಆರ್ ಪ್ರಜ್ಞಾನಂದಗೆ ಕಾರ್ಲ್ಸನ್ ಎದುರು ಸಿಕ್ಕ ಎರಡನೇ ಗೆಲುವಾಗಿದೆ. ಮೂರೇ ತಿಂಗಳ ಅಂತರದಲ್ಲಿ ನಂಬರ್ ಒನ್ ಆಟಗಾರನಿಗೆ ಸೋಲಿನ ಆಘಾತ ಕೊಟ್ಟ ಶ್ರೇಯಸ್ಸು ಆರ್ ಪ್ರಜ್ಞಾನಂದಗೆ ಸಿಕ್ಕಿದಂತಾಗಿದೆ.

ಯುಎಸ್‌ ಟಿ20 ಲೀಗ್‌; ಸತ್ಯ ನಾದೆಲ್ಲಾ, ಶಂತನು ನಾರಾಯಣ್ ಹೂಡಿಕೆಯುಎಸ್‌ ಟಿ20 ಲೀಗ್‌; ಸತ್ಯ ನಾದೆಲ್ಲಾ, ಶಂತನು ನಾರಾಯಣ್ ಹೂಡಿಕೆ

ಆರ್ ಪ್ರಜ್ಞಾನಂದ ಮತ್ತು ಮ್ಯಾಗ್ನಸ್ ಕಾರ್ಲ್ಸನ್ ನಡುವಿನ ಐದನೇ ಸುತ್ತಿನ ಪಂದ್ಯ ನೀರಸ ಡ್ರಾನತ್ತ ಸಾಗುತ್ತಿತ್ತು ಈ ವೇಳೆ, ವಿಶ್ವಚಾಂಪಿಯನ್ ಆಟಗಾರ ಒಂದು ಕೆಟ್ಟ ನಡೆ ಇಟ್ಟರು. ಇದನ್ನು ಸರಿಯಾಗಿ ಉಪಯೋಗಿಸಿಕೊಂಡು ಪ್ರಜ್ಞಾನಂದ ಜಾಣ್ಮೆಯ ನಡೆ ಇಟ್ಟು ಗೆಲುವು ಪಡೆದರು.

Indian Chess Prodigy Praggnanandhaa Stuns No 1 Magnus Carlsen Second Time This Year

ಗೆಲುವು ಹೇಗೇ ಬರಲಿ, ವಿಶ್ವ ಚಾಂಪಿಯನ್‌ನನ್ನು ಸೋಲಿಸಿದ್ದು ಯಾರಿಗಾದರೂ ಸಂತಸ ತರಬೇಕು. ಆದರೆ, ಪ್ರಜ್ಞಾನಂದಗೆ ಈ ಗೆಲುವು ಸಮಾಧಾನ ತರಲಿಲ್ಲವಂತೆ. ಕಾರ್ಲ್ಸನ್‌ನ ಕೆಟ್ಟ ನಡೆಯಿಂದ ತನಗೆ ಗೆಲುವು ಸಿಕ್ಕಿತೇ ಹೊರತು ತಾನು ಜಾಣ್ಮೆಯಿಂದ ಗೆಲುವು ಪಡೆಯಲಾಗಲಿಲ್ಲವಲ್ಲ ಎಂಬ ಕೊರಗು ಈ 16 ವರ್ಷದ ಪೋರನದ್ದು.

ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಿಖತ್ ಜರೀನ್‌ಗೆ ಚಿನ್ನ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಿಖತ್ ಜರೀನ್‌ಗೆ ಚಿನ್ನ

"ನನಗೆ ಈ ರೀತಿಯ ಗೆಲುವು ಬೇಕಿಲ್ಲ" ಎಂದು ಈ ಹುಡುಗ ನೇರವಾಗಿ ಹೇಳುತ್ತಾನೆ. "ನಮ್ಮ ಆಟದ ಗುಣಮಟ್ಟದ ಬಗ್ಗೆ ಸಮಾಧಾನ ಇಲ್ಲ. ಕೆಲ ತಂತ್ರಗಳನ್ನು ಬಳಸಲು ಸಾಧ್ಯವಾಗಲಿಲ್ಲ. ನಾನು ಇನ್ನಷ್ಟು ಚುರುಕಾಗಿರಬೇಕು" ಎಂದನ್ನುತ್ತಾನೆ. ಅಚ್ಚರಿ ಎಂದರೆ, ಈ ಆನ್‌ಲೈನ್ ಚೆಸ್ ಟೂರ್ನಿ ಆಡಾಡುತ್ತಲೇ ಈ ಬಾಲಕ ತನ್ನ ಶಾಲಾ ಪರೀಕ್ಷೆಗಳನ್ನೂ ಬರೆದನಂತೆ. ಹಾಗಂತ ಸಂದರ್ಶನವೊಂದರಲ್ಲಿ ಆತ ಹೇಳಿಕೊಂಡಿದ್ದಾನೆ.

Indian Chess Prodigy Praggnanandhaa Stuns No 1 Magnus Carlsen Second Time This Year

ಐದನೇ ಸುತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ಇಂಗ್ಲೆಂಡ್‌ನ ಗೆವೇನ್ ಜೋನ್ಸ್ ಅವರನ್ನೂ ಪ್ರಜ್ಞಾನಂದ ಸೋಲಿಸಿದರು. ಏಳನೇ ಸುತ್ತಿನಲ್ಲಿ ಭಾರತದ ಪಿ ಹರಿಕೃಷ್ಣ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡರು. ಏಳು ಸುತ್ತುಗಳ ಬಳಿಕ ಈ ಟೂರ್ನಿಯಲ್ಲಿ ಪ್ರಜ್ಞಾನಂದ 12 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಫೆಬ್ರವರಿಯಲ್ಲೂ ಕಾರ್ಲ್ಸನ್‌ಗೆ ಸೋಲುಣಿಸಿದ್ದ ಪ್ರಜ್ಞಾನಂದ:
ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಆನ್‌ಲೈನ್‌ನಲ್ಲಿ ನಡೆದಿದ್ದ ಏರ್‌ಥಿಂಗ್ಸ್ ಮಾಸ್ಟರ್ಸ್ (Airthings Masters) ಚೆಸ್ ಟೂರ್ನಿಯಲ್ಲಿ ಆರ್ ಪ್ರಜ್ಞಾನಂದ ಎಂಟನೇ ಸುತ್ತಿನ ಪಂದ್ಯವೊಂದರಲ್ಲಿ ಮ್ಯಾಗ್ನಸ್ ಕಾರ್ಲ್ಸನ್‌ರನ್ನು ಸೋಲಿಸಿದ್ದರು. ಆವರೆಗೆ ಸತತ ಮೂರು ಗೆಲುವು ಸಾಧಿಸಿ ಅಪಾಯಕಾರಿ ಎನಿಸಿದ್ದ ಕಾರ್ಲ್ಸನ್ ಕೇವಲ 39 ನಡೆಗಳಲ್ಲಿ ಸೋಲಪ್ಪಿದ್ದರು.

ಕಾರ್ಲ್ಸನ್ ಸಾಮಾನ್ಯನಲ್ಲ:
31 ವರ್ಷದ ಮ್ಯಾಗ್ನಸ್ ಕಾರ್ಲ್ಸನ್ ಕಳೆದ 11 ವರ್ಷಗಳಿಂದಲೂ ವಿಶ್ವದ ನಂಬರ್ ಒನ್ ಚೆಸ್ ಆಟಗಾರನಾಗಿ ಉಳಿದಿದ್ದಾರೆ. ಕೇವಲ 14ನೇ ವಯಸ್ಸಿನಲ್ಲಿ ಚೆಸ್ ಗ್ರ್ಯಾಂಡ್ ಮಾಸ್ಟರ್ ಆದ ಕಾರ್ಲ್ಸನ್ ಕೇವಲ 19ನೇ ವಯಸ್ಸಿನಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದರು. ಅತಿ ಕಿರಿಯ ವಯಸ್ಸಿನಲ್ಲಿ ನಂಬರ್ ಒನ್ ಚೆಸ್ ಆಟಗಾರನಾದ ದಾಖಲೆ ಅವರದ್ದು. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಚೆಸ್‌ನಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಅವರದ್ದು.

Indian Chess Prodigy Praggnanandhaa Stuns No 1 Magnus Carlsen Second Time This Year

ಅವರು ಒಮ್ಮೆ 2882 ಇಲೋ ರೇಟಿಂಗ್ ಗಡಿ ಮುಟ್ಟಿದ್ದರು. ಚೆಸ್ ಇತಿಹಾಸದಲ್ಲಿ ಯಾರೂ ಕೂಡ ಇಷ್ಟು ರೇಟಿಂಗ್ ಪಡೆದಿರಲಿಲ್ಲ. ವಿಶ್ವದ ಅನಭಿಷಿಕ್ತ ಚೆಸ್ ದೊರೆ ಎನಿಸಿದ್ದ ಗ್ಯಾರಿ ಕ್ಯಾಸ್ಪರೋವ್‌ಗೂ ಇದು ಸಾಧ್ಯವಾಗಿರಲಿಲ್ಲ. 2013ರಲ್ಲಿ ಭಾರತದ ವಿಶ್ವನಾಥನ್ ಆನಂದ್ ಅವರನ್ನು ಸೋಲಿಸುವ ಮೂಲಕ ವಿಶ್ವ ಚೆಸ್ ಚಾಂಪಿಯನ್ ಎನಿಸಿದರು. ಮುಂದಿನ ವರ್ಷವೂ ಆನಂದ್‌ರನ್ನು ಸೋಲಿಸಿ ಮತ್ತೆ ಚಾಂಪಿಯನ್ ಪಟ್ಟ ಉಳಿಸಿಕೊಂಡರು. ಒಟ್ಟು ಐದು ಬಾರಿ ಅವರು ವರ್ಲ್ಡ್ ಚೆಸ್ ಚಾಂಪಿಯನ್ ಎನಿಸಿದ್ದಾರೆ.

ಆದರೆ ಕಳೆದ ಒಂದು ವರ್ಷದಿಂದ ಕಾರ್ಲ್ಸನ್ ಅಷ್ಟೇನೂ ಉತ್ತಮ ಫಾರ್ಮ್‌ನಲ್ಲಿಲ್ಲ. ಗೋಲ್ಡ್ ಮನಿ ಏಷ್ಯನ್ ರ್‍ಯಾಪಿಡ್ ಚೆಸ್ ಟೂರ್ನಿಯಲ್ಲಿ ಅವರು ಸತತ ಮೂರು ಗೇಮ್‌ಗಳನ್ನು ಸೋತಿದ್ದರು. ಈ ವರ್ಷದಲ್ಲಿ ಅವರು ಪ್ರಜ್ಞಾನಂದಗೆ ಎರಡು ಬಾರಿ ಸೋಲಪ್ಪಿದ್ದಾರೆ.ಇದು ಅವರ ವಿಶ್ವ ನಂಬರ್ ಒನ್ ಪಟ್ಟಕ್ಕೆ ಕುತ್ತು ತರುತ್ತದಾ ನೋಡಬೇಕು.

(ಒನ್ಇಂಡಿಯಾ ಸುದ್ದಿ)

English summary
16-year-old Indian Grandmaster R Praggnanandhaa stunned World Champion Magnus Carlsen again in the space of three months at the Chessable Masters online rapid chess tournament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X