Get Updates
Get notified of breaking news, exclusive insights, and must-see stories!

Ind vs WI T20: ನೀನೊಬ್ಬ ಸ್ವಾರ್ಥಿ ! ಹಾರ್ದಿಕ್‌ ಪಾಂಡ್ಯ ವಿರುದ್ಧ ಸಿಡಿದ ಅಭಿಮಾನಿಗಳು

ವೆಸ್ಟ್ ಇಂಡೀಸ್‌ ವಿರುದ್ದದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋತಿದ್ದ ಭಾರತ ಮೂರನೇ ಪಂದ್ಯದಲ್ಲಿ ತಿರುಗಿಬಿದ್ದಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸರಣಿ ಗೆಲ್ಲುವ ಉತ್ಸಾಹದಲ್ಲಿದ್ದು ವೆಸ್ಟ್ ಇಂಡೀಸ್‌ಗೆ ತಿರುಗೇಟು ನೀಡಿದೆ.

ಸದ್ಯ ವೆಸ್ಟ್ ಇಂಡೀಸ್ 2-1 ಅಂತರದಲ್ಲಿ ಮುಂದಿದೆ. ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದು ಒಂದು ಪಂದ್ಯ ಗೆದ್ದರೆ ಸರಣಿ ವೆಸ್ಟ್ ಇಂಡೀಸ್ ವಶವಾಗಲಿದ್ದು, ಭಾರತ ಸರಣಿ ಗೆಲ್ಲಬೇಕೆಂದರೆ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

ind-vs-wi-t20

ಮೂರನೇ ಟಿ20 ಪಂದ್ಯವನ್ನು ಗೆದ್ದ ಬಳಿಕವೂ ಅಭಿಮಾನಿಗಳು ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಕೋಪಗೊಂಡಿದ್ದಾರೆ. ನೀನೊಬ್ಬ ಸ್ವಾರ್ಥಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಸಿಕ್ಸರ್ ಹೊಡೆದು ಪಂದ್ಯ ಗೆಲ್ಲಿಸಿದರೂ ಅಭಿಮಾನಿಗಳಿಗೆ ಕೋಪ ಬಂದಿದ್ಯಾಕೆ ಗೊತ್ತಾ?

ಅರ್ಧಶತಕ ವಂಚಿತ ತಿಲಕ್ ವರ್ಮಾ

160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಆಸರೆಯಾದರು. ಯಶಸ್ವಿ ಜೈಸ್ವಾಲ್ 1, ಶುಭಮನ್ ಗಿಲ್ 6 ರನ್ ಗಳಿಸಿ ಔಟಾದ ನಂತರ ಜೊತೆಯಾದ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ 87 ರನ್‌ಗಳ ಜೊತೆಯಾಟ ಆಡಿದರು. ಸೂರ್ಯಕುಮಾರ್ ಯಾದವ್ 44 ಎಸೆತಗಳಲ್ಲಿ 10 ಬೌಂಡರಿ 4 ಭರ್ಜರಿ ಸಿಕ್ಸರ್ ಸಹಿತ 83 ರನ್ ಗಳಿಸಿ ಮಿಂಚಿದರು. ಭಾರತ ತಂಡದ ಮೊತ್ತ 121 ಆಗಿದ್ದಾಗ ಸೂರ್ಯಕುಮಾರ್ ಯಾದವ್ ಔಟಾದರು.

ನಂತರ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತದ ಗೆಲುವಿಗೆ ಎರಡು ರನ್ ಅಗತ್ಯವಿದ್ದಾಗ ಒಂದು ಕಡೆಯಲ್ಲಿ ತಿಲಕ್ ವರ್ಮಾ 49 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು, ಆದರೆ ಪಾಂಡ್ಯ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು ತಿಲಕ್ ವರ್ಮಾ ಅರ್ಧಶತಕ ಗಳಿಸುವ ಅವಕಾಶ ಕಳೆದುಕೊಂಡರು.

ಹಾರ್ದಿಕ್ ಪಾಂಡ್ಯ ಸ್ವಾರ್ಥಿ ಎಂದ ಅಭಿಮಾನಿಗಳು

ಹಾರ್ದಿಕ್ ಪಾಂಡ್ಯ ತಿಲಕ್ ವರ್ಮಾ ಅವರಿಗೆ ಅರ್ಧಶತಕ ಗಳಿಸಲು ಅವಕಾಶ ಮಾಡಿಕೊಡದೇ ಇರುವುದು ಟೀಕೆಗೆ ಕಾರಣವಾಗಿದೆ. ನೆಟ್ಟಿಗರು ಪಾಂಡ್ಯರನ್ನು ತರಾಟೆಗೆ ತೆಗೆದುಕೊಂಡಿದ್ದು, ಸಹ ಆಟಗಾರನಿಗೆ ಅರ್ಧಶತಕ ಗಳಿಸಲು ಅವಕಾಶ ಮಾಡಿಕೊಡದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಂಡ್ಯ ಸ್ವಾರ್ಥಿ ಎಂದು ಹಲವರು ಟೀಕಿಸಿದರೆ, ಇನ್ನೂ ಕೆಲವರು ವಿರಾಟ್ ಕೊಹ್ಲಿ, ಧೋನಿ, ಸಂಜು ಸ್ಯಾಮ್ಸನ್ ಅವರ ನಡವಳಿಕೆಗಳನ್ನು ನೆನಪಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಪಂದ್ಯವನ್ನು ಪೂರ್ಣಗೊಳಿಸಲು ಧೋನಿ ಉದ್ದೇಶಪೂರ್ವಕವಾಗಿ ಡಾಟ್ ಬಾಲ್ ಆಡಿದ ಘಟನೆ ನೆನಪಿಸಿದ್ದಾರೆ. ಸಂಜು ಸ್ಯಾಮ್ಸನ್ ಕೂಡ ಆರ್ ಆರ್ ತಂಡದ ಜೈಸ್ವಾಲ್ ಅವರಿಗೆ ಶತಕ ಗಳಿಸಲು ಡಾಟ್ ಬಾಲ್ ಆಡಿದ ಘಟನೆ ನೆನಪಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+