Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ ಹಗಲು ರಾತ್ರಿ ಟೆಸ್ಟ್ ಪಂದ್ಯ, ಮೈದಾನದ ಒಳ-ಹೊರಗಿನ ಸುದ್ದಿ

ಬೆಂಗಳೂರು, ಮಾರ್ಚ್ 13: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವೆ ಹಗಲು ರಾತ್ರಿ ಟೆಸ್ಟ್ ಪಂದ್ಯ ಹಲವು ವಿಶೇಷ ಘಟನೆಗಳಿಗೆ ಸಾಕ್ಷಿಯಾಯಿತು.ಕ್ರಿಕೆಟ್ ದಿಗ್ಗಜರ ಸಮಾಗಮ, ಪುಸ್ತಕ ಬಿಡುಗಡೆ, ಐಪಿಎಲ್ ತಂಡ ರಾಯಲ್ ಚಾಲೆಂಜರ್ಚ್ ಬೆಂಗಳೂರು ತಂಡದ ಹೊಸ ನಾಯಕನ ಆಯ್ಕೆ,ಜರ್ಸಿ ಬಿಡುಗಡೆ, ಮೈದಾನದಲ್ಲಿ ಸತತವಾಗಿ ಉದುರಿದ ವಿಕೆಟ್ಸ್, ಕೊಹ್ಲಿ ಆರ್ ಸಿಬಿ ಪ್ರೀತಿ. ಪುನೀತ್ ರಾಜ್ ಕುಮಾರ್ ಹಾಡಿನ ಗುನುಗು. ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಕೋವಿಡ್ 19 ಮಾರ್ಗಸೂಚಿಯಂತೆ ಪಂದ್ಯ ನಡೆಯುತ್ತಿದ್ದರೂ, ಮೈದಾನದಲ್ಲಿ ಪ್ರೇಕ್ಷಕರಿಗೆ ಪಂದ್ಯ ವೀಕ್ಷಣೆಗೆ ಅವಕಾಶ ನೀಡುವ ಮೂಲಕ ಟೆಸ್ಟ್ ಕ್ರಿಕೆಟ್ ಪಂದ್ಯದ ಮಜಾ ಹೆಚ್ಚಿಸಿದ ಬಿಸಿಸಿಐ,ಕೆಎಸ್ ಸಿಎಗೆ ಫ್ಯಾನ್ಸ್ ಥ್ಯಾಂಕ್ಸ್ ಎಂದು ಹೇಳಿದರು.

Recommended Video

      ಬೆಂಗಳೂರಲ್ಲಿ ರೊಹಿತ್ ಸಿಕ್ಸರ್ ಶಾಟ್ ಗೆ ಅಭಿಮಾನಿಯ ಮೂಗು ಮುರಿತ | Oneindia Kannada
      Ind vs SL Test: Rohit Sharma’s Six Injures Spectator, Parking Banned Around Chinnaswamy Stadium

      ಮೈದಾನದಲ್ಲಿ ಆರ್ ಸಿಬಿಯ ನೆಚ್ಚಿನ ಆಟಗಾರ, ಮಾಜಿ ನಾಯಕ ವಿರಾಟ್ ಕೊಹ್ಲಿ ಬೂಮ್ರಾ ಬೌಲಿಂಗ್ ನಕಲು ಮಾಡಿದ್ದು, ಆರ್ ಸಿಬಿ ಫ್ಯಾನ್ಸ್ ಗೆ ಹಾರ್ಟ್ ಇಮೋಜಿ ತೋರಿಸಿ, ಆರ್ ಸಿಬಿ ದಿರಿಸು ಸದಾ ಧರಿಸುತ್ತೇನೆ ಎಂದು ಬಿಳಿ ಜರ್ಸಿ ತೆಗೆದು ತೋರಿಸಿದ್ದು, ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟುವಂತೆ ಮಾಡಿತ್ತು.

      Rohit Sharma

      ಡಿಆರ್ ಎಸ್ ತೆಗೆದುಕೊಳ್ಳುವಂತೆ ನಾಯಕ ರೋಹಿತ್ ಶರ್ಮರಿಗೆ ವಿಕೆಟ್ ಕೀಪರ್ ಪಂತ್ ಮನವರಿಕೆ ಮಾಡಿಕೊಟ್ಟ ರೀತಿ, ಬೂಮ್ರಾ ಬೌಲಿಂಗ್, ಮಯಾಂಕ್ ರನೌಟ್ ಆದ ರೀತಿ, ಶ್ರೇಯಸ್ ಬಿರುಸಿನ ಬ್ಯಾಟಿಂಗ್ ಎಲ್ಲವೂ ಹೈಲೇಟ್ ಆಗಿತ್ತು.

      Fans

      ರೋಹಿತ್ ಶರ್ಮ ಸಿಕ್ಸ್, ಯುವಕನಿಗೆ ಪೆಟ್ಟು

      ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಹೊಡೆದ ಸಿಕ್ಸರ್ ಪ್ರೇಕ್ಷಕರೊಬ್ಬರ ಮೂಗು ಮುರಿದ ಘಟನೆ ನಡೆಯಿತು. 22 ವರ್ಷ ವಯಸ್ಸಿನ ಗೌರವ್ ವಿಕಾಸ್ ಪರ್ವಾರ್ ಎಂಬ ಫ್ಯಾನ್ ಪೆಟ್ಟು ತಿಂದು ಸಮೀಪದ ಹೊಸ್ಮಟ್ ಆಸ್ಪತ್ರೆಗೆ ಸೇರಬೇಕಾಯಿತು. ಮೂಗಿನ ಮೂಳೆ ಮುರಿತ, ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೇರ್ ಲೈನ್ ಫ್ರಕ್ಚರ್ ಆಗಿದ್ದು, ಸರ್ಜರಿ ಅಗತ್ಯವಿಲ್ಲ ಎಂದು ಘಟನೆ ನಡೆದಾಗ ಮೈದಾನದಲ್ಲೇ ಇದ್ದ ಹೊಸ್ಮಟ್ ಆಸ್ಪತ್ರೆಯ ಮೆಡಿಕಲ್ ನಿರ್ದೇಶಕ ಡಾ. ಅಜಿತ್ ಬೆನೆಡಿಕ್ಟ್ ರಾಯನ್ ಪ್ರತಿಕ್ರಿಯಿಸಿದ್ದಾರೆ. ಪಂದ್ಯದ ಲೈವ್ ಸ್ಕೋರ್ ಕಾರ್ಡ್

      *****

      ಪಾರ್ಕಿಂಗ್ ನಿರ್ಬಂಧ

      ಭಾರತ ಹಾಗೂ ಶ್ರೀಲಂಕಾ ಪಂದ್ಯ ನಡೆಯುತ್ತಿದ್ದು, ಮಾರ್ಚ್ 12 ರಿಂದ 16ರ ತನಕ ಸ್ಟೇಡಿಯಂ ಸುತ್ತಮುತ್ತಾ ವಾಹನ ನಿಲುಗಡೆ ನಿಷೇಧಿಸಿದ್ದಾರೆ. ರಾಜಭವನ ರಸ್ತೆ, ಟಿ ಚೌಡಯ್ಯ ರಸ್ತೆ, ಎಂಜಿ ರಸ್ತೆ ಎರಡು ಬಡಿ, ಕ್ವೀನ್ ರಸ್ತೆ ಜಂಕ್ಷನ್ ನಿಂದ ಕಾವೇರಿ ಎಂಪೋರಿಯಂ ಜಂಕ್ಷನ್ ಬಳಿ ವಾಹನ ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ತಿಳಿಸಿದ್ದಾರೆ.

      ಸೈಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಸೈಂಟ್ ಜೋಸೆಫ್ ಯುರೋಪಿಯನ್ ಸ್ಕೂಲ್(ಮ್ಯೂಸಿಯಂ ರಸ್ತೆ), ಶಿವಾಜಿನಗರ ಬಸ್ ನಿಲ್ದಾಣ ಬಳಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ.

      ಇದರ ಜೊತೆಗೆ ಪಂದ್ಯ ಮುಗಿದ ನಂತರ ಸುರಕ್ಷಿತವಾಗಿ ಮನೆಗೆ ತೆರಳಲು ಬಿಎಂಟಿಸಿ, ಮೆಟ್ರೋ ರೈಲು ಸೇವೆ ಅವಧಿಯನ್ನು ವಿಸ್ತರಿಸಲಾಗಿದೆ.
      **

      ಕ್ರಿಕೆಟ್ ದಿಗ್ಗಜ ಗುಂಡಪ್ಪ ವಿಶ್ವನಾಥ್ ಅವರ ಕ್ರಿಕೆಟ್ ಬದುಕಿನ ಕಥನ Wrist Assured ಪುಸ್ತಕವನ್ನು ದಿಗ್ಗಜರಾದ ಕಪಿಲ್ ದೇವ್, ಸೌರವ್ ಗಂಗೂಲಿ, ನಟ ಕಿಚ್ಚ ಸುದೀಪ್, ಕೃತಿ ಸಹ ಲೇಖಕ ಕೌಶಿಕ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್, ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಕರ್ನಾಟಕ ತಂಡದ ಹಿರಿ ಕಿರಿ ಆಟಗಾರರು ಫ್ಯಾನ್ಸ್ ಗಳಾಗಿ ಜಿಆರ್ ವಿ ಅವರ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

      GR vishwanath

      ಜಿಆರ್ ವಿ ನನ್ನ ಮೊದಲ ಹೀರೋ ಎಂದು ಕಪಿಲ್ ದೇವ್ ಹೇಳಿದರೆ, ಇಂದು ಗವಾಸ್ಕರ್, ಕಪಿಲ್, ಜಿಆರ್ ವಿ ರಂಥ ದಿಗ್ಗಜರ ಸಮಾಗಮದಲ್ಲಿ ನಾನು ಭಾಗಿ ಆಗಿರುವುದು ಧನ್ಯತೆಯ ಕ್ಷಣ ಎಂದು ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಹೇಳಿದರು.

      ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸ್ಮರಣೆಗೂ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಯಿತು. ನೀನೆ ರಾಜಕುಮಾರ..ಸೇರಿದಂತೆ ಅಪ್ಪು ಚಿತ್ರದ ಹಾಡುಗಳಿಗೆ ಪ್ರೇಕ್ಷಕರು ಕೋರಸ್ ನೀಡಿ, ಕ್ರೇಜ್ ಹೆಚ್ಚಿಸಿದರು.

      ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ''ಧನ್ಯವಾದಗಳು ಬೆಂಗಳೂರು'' ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದು, 12ನೇ ಆಟಗಾರರ ಆರ್ಮಿಗೆ ಡಬ್ಬಲ್ ಖುಷಿ ತಂದಿದೆ.

      ಇದಕ್ಕೂ ಮುನ್ನ ಆರ್ ಸಿಬಿ ತಂಡದ ನಾಯಕರಾಗಿ ದಕ್ಷಿಣ ಆಫ್ರಿಕಾದ ಆಟಗಾರ ಫಾಪ್ ಡುಪ್ಲೆಸಿಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಾಯಿತು. ಜೊತೆಗೆ ಆರ್ ಸಿಬಿಯ ಹೊಸ ಜರ್ಸಿ ಅನಾವರಣ ಮಾಡಲಾಯಿತು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+