KL Rahul: ಕನ್ನಡಿಗ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಆಡಿದರೆ ಬೆಸ್ಟ್
ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸಣಿಗೂ ಮುನನ್ನ ಟೀಮ್ ಇಂಡಿಯಾ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ರೋಹಿತ್ ಶರ್ಮ ಅವರಿಂದ ತೆರವಾದ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆ ಇದ್ಭವಿಸಿದ್ದು, ಇದಕ್ಕೆ ಮಾಜಿ ಆಟಗಾರರ ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ಸಾಬಾ ಕರಿಮ್ ಅವರು ವಿರಾಟ್ ಕೊಹ್ಲಿಅವರಿಂದ ತೆರವಾದ ಸ್ಥಾನದಲ್ಲಿ ಯಾರು ಆಡಿದರೆ ಸೂಕ್ತ ಎನ್ನುವುದನ್ನು ತಿಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಲ್ಕನೇ ಕ್ರಮಾಮದಂಲ್ಲಿ ಶುಭಮನ್ ಗಿಲ್ ಅಲ್ಲ, ಈ ಪ್ಲೇಯರ್ ಆಡಬೇಕು ಎಂದು ಹೇಳಿದ್ದಾರೆ.

ಸಾಬಾ ಕರಿಮ್ ಅವರ ಪ್ರಕಾರ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ ಸೂಕ್ತ. ರಾಹುಲ್ ಈ ಸ್ಥಾನಕ್ಕೆ ಪರ್ಫೆಕ್ಟ್ ಆಗಿ ಸೂಟ್ ಆಗುವ ಆಟಗಾರ ಎಂದು ಟೀಮ್ ಇಂಡಿಯಾ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ತಿಳಿಸಿದ್ದಾರೆ.
ಈ ಕ್ರಮಾಂಕದಲ್ಲಿ ರಾಹುಲ್ ಆಡಲಿ
"ಕೊಹ್ಲಿ ಅನುಪಸ್ಥಿತಿಯಲ್ಲಿ ರಾಹುಲ್ ಅವರಿಗೆ ಬ್ಯಾಟಿಂಗ್‌ನಲ್ಲಿ ದೊಡ್ಡ ಜವಾಬ್ದಾರಿ ಇದೆ. ನಾನು ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಲ್ಲ ಬ್ಯಾಟರ್ ರೀತಿ ನೋಡ್ತಾ ಇದ್ದೇನೆ. ಬೇರೆಯವರು ಬೇರೆ ಕ್ರಮಾಂಕದಲ್ಲಿ ರಾಹುಲ್ ಬ್ಯಾಟ್ ಮಾಡಬೇಕು ಎಂದು ತಿಳಿಸುತ್ತಾರೆ. ಆದರೆ ನಾನು ಮಾತ್ರ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿ ಎಂದು ಹೇಳುತ್ತೇನೆ. ಒಂದು ವೇಳೆ ಆರಂಭದಲ್ಲಿ ವಿಕೆಟ್‌ಗಳು ಪಟಪಟನೇ ಬಿದ್ದಲಿ, ರಾಹುಲ್ ಈ ಆಘಾತದಿಂದ ತಂಡವನ್ನು ಮೇಲೆತ್ತುವಲ್ಲಿ ಕಾರಣಿಕರ್ತರಾಗುತ್ತಾರೆ. ಇನ್ನು ಟಾಪ್ ಆರ್ಡರ್ ಬ್ಯಾಟರ್‌ಗಳು ಭದ್ರ ಬುನಾದಿಯನ್ನು ಹಾಕಿಕೊಟ್ಟಲ್ಲಿ ಇನಿಂಗ್ಸ್ ಬೆಳೆಸುವ ಕ್ಷಮತೆ ಹೊಂದಿದ್ದಾರೆ. ಇವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಸರಿಯಾದ ತಂತ್ರಗಾರಿಕೆ ಇದೆ ಎಂದು ಸಾಬಾ ತಿಳಿಸಿದ್ದಾರೆ.

ರಾಹುಲ್ ಅವರಲ್ಲಿ ಮೆಚ್ಯೂರಿಟಿ ಚೆನ್ನಾಗಿದೆ. ಇದರಿಂದ ಇವರು ಇಂಗ್ಲೆಂಡ್ ತಂಡವನ್ನು ಕಾಡಬಹುದಾಗಿದೆ. ಕಳೆದ ಕೆಲವು ಟೆಸ್ಟ್ ಪಂದ್ಯಗಳಲ್ಲಿ ರಾಹುಲ್ ತೋರಿಸಿದ ಧೈರ್ಯವನ್ನು ನೋಡಿದ ಬಳಿಕ ಇವರಿಗೆ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಸೂಚಿಸುತ್ತಿರುವೆ ಎಂದು ಸಾಬಾ ಕರಿಮ್ ಹೇಳಿದ್ದಾರೆ.
ಕೆಎಲ್ ರಾಹುಲ್ ಈಗಾಗಲೇ ನಾಲ್ಕನೇ ಕ್ರಮಾಂಕದಲ್ಲಿ ಎರಡು ಬಾರಿ ಮಾತ್ರ ಆಡಿದ್ದಾರೆ. ಆದರೆ ಇವರು ಬೌನ್ಸಿ ಪಿಚ್‌ಗಳಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ರನ್ ಮಹಲ್ ಕಟ್ಟಿದ್ದಾರೆ. ಹೀಗಾಗಿ ಮುಂಬರುವ ಇಂಗ್ಲೆಂಡ್ ಸರಣಿಯಲ್ಲಿ ಇವರ ಬ್ಯಾಟಿಂಗ್ ತಂಡಕ್ಕೆ ಆಧಾರವಾಗಲಿದೆ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ರಾಹುಲ್ ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಈಗ ಇಂಗ್ಲೆಂಡ್‌ನಲ್ಲಿ ತಮ್ಮ ಸ್ಥಿರ ಬ್ಯಾಟಿಂಗ್‌ನಿಂದ ತಂಡಕ್ಕೆ ಆಧಾರವಾಗಬಲ್ಲ ಸೂಚನೆ ನೀಡಿದ್ದಾರೆ. ಈಗಾಗಲೇ ಭಾರತ "ಎ" ಪರ ಬ್ಯಾಟ್ ಮಾಡುವಾಗ ರಾಹುಲ್ ಶತಕ ಸಿಡಿಸಿ ಮಿಂಚಿದ್ದಾರೆ.












Click it and Unblock the Notifications