Ind vs Eng: ಚರ್ಚೆಗೆ ಕಾರಣವಾದ ಡಿಆರ್‌ಎಸ್: ಅಚ್ಚರಿಗೊಂಡ ಆನ್‌ಫೀಲ್ಡ್ ಅಂಪೈರ್
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ 4 ನೇ ದಿನದಂದು ಭಾರತ ತಂಡವು ಅಪಾಯಕಾರಿ ಆಟಗಾರ ಝಾಕ್ ಕ್ರಾಲಿಯನ್ನು ಔಟ್ ಮಾಡಿದಾಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಕುಲದೀಪ್ ಯಾದವ್ ಸಖತ್ ಸಂಭ್ರಮಾಚರಣೆ ಮಾಡಿದ್ದರು.
ಝಾಕ್ ಕ್ರಾಲಿ 73 ರನ್ ಅತ್ಯಂತ ಅಪಾಯಕಾರಿ ಇಂಗ್ಲೆಂಡ್ ಬ್ಯಾಟರ್ ಆಗಿದ್ದರು. ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಕಾಟ ಕೊಡುತ್ತಿದ್ದ ಝಾಕ್ ಕ್ರಾಲಿಯನ್ನು ಕೊನೆಗೂ ಕುಲದೀಪ್ ಯಾದವ್ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು.

ಆದರೆ ಅದು ಝಾಕ್ ಕ್ರಾಳಿ ವಿಕೆಟ್ ಪಡೆಯುವುದು ಸರಳವಾಗಿರಲಿಲ್ಲ. ಅಂಪೈರ್ ಟೀಮ್ ಇಂಡಿಯಾದ ಮನವಿಯನ್ನು ತಿರಸ್ಕರಿಸಿದರೆ, ಕುಲದೀಪ್ ನಾಯಕ ರೋಹಿತ್ ಅವರನ್ನು ಡಿಆರ್ ಎಸ್ ತೆಗೆದುಕೊಳ್ಳುವಂತೆ ಒಪ್ಪಿಸುವಲ್ಲಿ ಯಶಸ್ವಿಯಾದರು.
ಚೆಂಡು ಲೆಗ್ ಕೆಳಗೆ ಹೋಗುತ್ತಿರುವಂತೆ ತೋರುತ್ತಿತ್ತು ಆದರೆ ಡಿಆರ್‌ಎಸ್ ವಿಭಿನ್ನ ಪಥವನ್ನು ತೋರಿಸಿತು. ಈ ಟೆಸ್ಟ್‌ನಲ್ಲಿ ಡಿಆರ್‌ಎಸ್ ಕರೆಗಳಿಗೆ ಬಂದಾಗ ಕುಲದೀಪ್ ಅವರೊಂದಿಗೆ ಚರ್ಚೆ ಮಾಡಿದ ರೋಹಿತ್, ಡಿಆರ್‌ಎಸ್ ತೆಗೆದುಕೊಳ್ಳಲು ಒಪ್ಪಿಕೊಂಡರು ಮತ್ತು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಆದರೆ ಡಿಆರ್ ಎಸ್ ತಂತ್ರಜ್ಞಾನದ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತು. ಚಂಡು ಸ್ಟಂಪ್‌ನಿಂದ ಆಚೆ ಹೋಗುತ್ತಿರುವಂತೆ ಕಂಡರೂ, ಡಿಆರ್ ಎಸ್‌ನಲ್ಲಿ ಅದು ವಿಕೆಟ್‌ಗೆ ಬಡಿಯುವಂತೆ ತೋರಿತು, ಇದರಿಂದ ಕ್ರಾಲಿ ಜೊತೆ ಆನ್‌ಫೀಲ್ಡ್ ಅಂಪೈರ್ ಕೂಡ ಅಚ್ಚರಿಗೊಂಡರು.
ಸುಲಭ ಗೆಲುವು ಸಾಧಿಸಿದ ಭಾರತ
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡವು 106 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಸರಣಿಯು 1-1 ರಲ್ಲಿ ಸಮಬಲಗೊಂಡಿದೆ.
ಸರಣಿಯ ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15 ರಿಂದ 19ರವರೆಗೆ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಬಿಸಿಸಿಐ ಇನ್ನೂ ಭಾರತ ತಂಡವನ್ನು ಘೋಷಣೆ ಮಾಡಿಲ್ಲ.
ಫೆಬ್ರವರಿ 6ರಂದು ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಕೆಎಲ್ ರಾಹುಲ್ ಫಿಟ್ ಆಗಿದ್ದು ಮೂರನೇ ಟೆಸ್ಟ್‌ಗೆ ಮರಳಲು ಸಿದ್ದವಾಗಿದ್ದಾರೆ. ವಿರಾಟ್ ಕೊಹ್ಲಿ ಅವರು ತಂಡಕ್ಕೆ ವಾಪಸ್ ಬರುವ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಮೂಲಗಳ ಪ್ರಕಾರ ಬಿಸಿಸಿಐ ವಿರಾಟ್ ಕೊಹ್ಲಿ ಅವರ ಲಭ್ಯತೆಗಾಗಿ ಕಾಯುತ್ತಿದೆ ಎನ್ನಲಾಗಿದೆ.












Click it and Unblock the Notifications