ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಟಿಂಗ್ ಮೂಲಕವೇ ವಿರಾಟ್ ಕೊಹ್ಲಿ ಟೀಕಾಕಾರರ ಬಾಯಿ ಮುಚ್ಚಿಸಲಿದ್ದಾರೆ: ರವಿಶಾಸ್ತ್ರಿ

|
Google Oneindia Kannada News

ಏ‌ಪ್ಯಾಕಪ್‌ ಟೂರ್ನಿಯ ಭಾರತ-ಪಾಕಿಸ್ತಾನ ನಡುವಣ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಿದರೆ ಅವರ ಫಾರ್ಮ್ ಬಗ್ಗೆ ಟೀಕೆ ಮಾಡುತ್ತಿರುವವರ ಬಾಯಿಗೆ ಬೀಗ ಬೀಳಲಿದೆ ಎಂದು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ ಆಕ್ರಮಣಕಾರಿ ಆಟವನ್ನು ಮುಂದುವರಿಸಬೇಕು ಎಂದು ರವಿಶಾಸ್ತ್ರಿ ಸಲಹೆ ನೀಡಿದ್ದಾರೆ. ವಿಶ್ರಾಂತಿ ಬಳಿಕ ವಾಪಸಾಗುತ್ತಿರುವ ವಿರಾಟ್ ಕೊಹ್ಲಿ ಮೊದಲಿಗಿಂತ ಹೆಚ್ಚು ಶಾಂತವಾಗಿದ್ದಾರೆ, ಅವರ ಮೇಲೆ ಯಾವುದೇ ಹೆಚ್ಚು ಹೊರೆಯಿಲ್ಲ ಎಂದು ಹೇಳಿದರು.

ಭಾರತ-ಪಾಕಿಸ್ತಾನ ಕ್ರಿಕೆಟ್: ಮರೆಯಲಾಗದ 5 ಕಿರಿಕ್ ಘಟನೆಗಳುಭಾರತ-ಪಾಕಿಸ್ತಾನ ಕ್ರಿಕೆಟ್: ಮರೆಯಲಾಗದ 5 ಕಿರಿಕ್ ಘಟನೆಗಳು

ಭಾರತ-ಪಾಕಿಸ್ತಾನ ನಡುವೆ ನಡೆಯಲಿರುವ ಪಂದ್ಯ ವಿರಾಟ್ ಕೊಹ್ಲಿ ಆಡಲಿರುವ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ. ತಮ್ಮ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡುತ್ತಿರುವುದು ವಿಶೇಷ, ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ರನ್ ಬರವನ್ನು ಕಳೆದುಕೊಳ್ಳಲಿದ್ದಾರೆ ಎಂದು ರವಿಶಾಸ್ತ್ರಿ ಕೊಹ್ಲಿಗೆ ಬೆಂಬಲ ಸೂಚಿಸಿದ್ದಾರೆ.

ಏಪ್ರಿಲ್ 28ರಂದು ಏಷ್ಯಾಕಪ್ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಈಗಾಗಲೇ ಪಂದ್ಯದ ಬಗ್ಗೆ ಚರ್ಚೆ ಕಾವೇರಿದೆ. ಎರಡೂ ತಂಡಗಳ ಅಭಿಮಾನಿಗಳು ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

ರಾಹುಲ್ ದ್ರಾವಿಡ್‌ಗೆ ಕೊರೊನಾ ಪಾಸಿಟಿವ್: ಏಷ್ಯಾಕಪ್‌ನಲ್ಲಿ ವಿವಿಎಸ್‌ ಲಕ್ಷ್ಮಣ್ ಮಾರ್ಗದರ್ಶನರಾಹುಲ್ ದ್ರಾವಿಡ್‌ಗೆ ಕೊರೊನಾ ಪಾಸಿಟಿವ್: ಏಷ್ಯಾಕಪ್‌ನಲ್ಲಿ ವಿವಿಎಸ್‌ ಲಕ್ಷ್ಮಣ್ ಮಾರ್ಗದರ್ಶನ

ಯಾವುದನ್ನೂ ಜನ ಹೆಚ್ಚು ದಿನ ನೆನಪಿಟ್ಟುಕೊಳ್ಳಲ್ಲ

ಯಾವುದನ್ನೂ ಜನ ಹೆಚ್ಚು ದಿನ ನೆನಪಿಟ್ಟುಕೊಳ್ಳಲ್ಲ

ವಿರಾಟ್ ಕೊಹ್ಲಿ ಅಗ್ರೆಸಿವ್‌ನೆಸ್ ಈಗ ಕಡಿಮೆಯಾಗಿದೆ ಅವರು ಎಂದಿಗಿಂತ ಈಗ ಹೆಚ್ಚು ಶಾಂತವಾಗಿದ್ದಾರೆ. ಶಾಂತವಾದ ಮನಸ್ಥಿತಿಯಲ್ಲಿ ಕಮ್‌ಬ್ಯಾಕ್ ಮಾಡಲಿದ್ದಾರೆ. ಏಷ್ಯಾಕಪ್‌ನ ಮೊದಲ ಪಂದ್ಯದಲ್ಲೇ ಅವರು ಅರ್ಧಶತಕ ಗಳಿಸಿದರೂ ಸಾಕು ಟೀಕಾಕಾರರು ಬಾಯಿಮುಚ್ಚಲಿದ್ದಾರೆ ಎಂದರು.

ಹಿಂದೆ ಆಗಿರುವುದೆಲ್ಲಾ ಇತಿಹಾಸ, ಜನರ ಸ್ಮರಣಾ ಶಕ್ತಿ ಕಡಿಮೆ ಇದೆ. ಎಲ್ಲವೂ ಮರೆತುಹೋಗುತ್ತದೆ. ಇದು ಎರಡೂ ರೀತಿಯೂ ಕೆಲಸ ಮಾಡುತ್ತದೆ. ನಿಮ್ಮ ಕೆಟ್ಟ ದಿನಗಳನ್ನೂ ಕೂಡ ಮರೆಯುತ್ತಾರೆ, ವಿರಾಟ್ ಕೊಹ್ಲಿಗೆ ಈಗ ಅವಕಾಶ ಇದೆ, ತಮ್ಮ ಶಾಂತತೆಯನ್ನು ಕಾಪಾಡಿಕೊಂಡು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕಿದೆ ಎಂದು ಹೇಳಿದರು.

ಟೀಂ ಇಂಡಿಯಾ ಆಕ್ರಮಣಕಾರಿ ಆಟವಾಡಬೇಕು

ಟೀಂ ಇಂಡಿಯಾ ಆಕ್ರಮಣಕಾರಿ ಆಟವಾಡಬೇಕು

ಭಾರತ ತಂಡ ಟಿ20 ಮಾದರಿ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಆಟವಾಡಬೇಕು ಎಂದು ಹೇಳಿದ್ದಾರೆ. ಆಕ್ರಮಣಕಾರಿ ಆಟವನ್ನು ಬಿಟ್ಟರೆ ಟಿ20 ಪಂದ್ಯಗಳಲ್ಲಿ ಗೆಲವು ಸಾಧಿಸುವುದು ಕಷ್ಟವಾಗುತ್ತದೆ. ನಾನು ಕೋಚ್‌ ಆಗಿದ್ದಾಗಲೂ ಇದೇ ತಂತ್ರವನ್ನು ಉಪಯೋಗಿಸುತ್ತಿದ್ದೆವು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

"ಆಕ್ರಮಣಕಾರಿ ವಿಧಾನ ಸರಿಯಾಗಿದೆ, ಕೆಲವು ಪಂದ್ಯಗಳಲ್ಲಿ ನೀವು ಸೋಲಬಹುದು. ಆದರೆ ಈ ವಿಧಾನದಲ್ಲಿ ನೀವು ಗೆಲ್ಲಲು ಪ್ರಾರಂಭಿಸಿದರೆ, ದೊಡ್ಡ ಪಂದ್ಯಗಳಲ್ಲಿ ವಿಶ್ವಾಸವನ್ನು ಪಡೆದುಕೊಂಡು ಅದೇ ತಂತ್ರವನ್ನು ಬಳಸಬಹುದು" ಎಂದು ರವಿಶಾಸ್ತ್ರಿ ಹೇಳಿದರು.

ರಾಹುಲ್ ಮತ್ತು ಕೊಹ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಬಹುದು

ರಾಹುಲ್ ಮತ್ತು ಕೊಹ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಬಹುದು

ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಗಾಯದ ಸಮಸ್ಯೆಯಿಂದ ಹೊರಗುಳಿದು ವಾಪಸ್ ಆಗಿರುವ ಕೆ.ಎಲ್. ರಾಹುಲ್ ಆಕ್ರಮಣಶೀಲತೆಯನ್ನು ತೋರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಇಬ್ಬರು ಆಟಗಾರರು ಕಿರಿಯ ಆಟಗಾರರಂತೆ ಆಕ್ರಮಣಕಾರಿಯಾಗಿ ಆಡಬಹುದು, ಎಂದು ಹೇಳಿದ್ದಾರೆ.

"ಅವರು ಸಾಕಷ್ಟು ಐಪಿಎಲ್ ಮತ್ತು ಟಿ20 ಗಳನ್ನು ಆಡಿದ್ದಾರೆ ಮತ್ತು ಅವರಿಗೆ ಆಟಕ್ಕೆ ಹೊಂದಿಕೊಳ್ಳುವುದು ಕಠಿಣವಾಗಬಾರದು. ಅಗ್ರ ಕ್ರಮಾಂಕದ ಆಟಗಾರರು ಔಟಾದರೂ, ಭಾರತದ ಇನ್ನಿಂಗ್ಸ್ ಕಟ್ಟಲು, ರಿಷಬ್, ಹಾರ್ದಿಕ್, ಜಡೇಜಾ ಅವರೊಂದಿಗೆ ಮಧ್ಯಮ ಮತ್ತು ಕೆಳ ಕ್ರಮಾಂಕದಲ್ಲಿ ಸಾಕಷ್ಟು ಬ್ಯಾಟಿಂಗ್ ಬಲವಿದೆ" ಎಂದು ಹೇಳಿದರು.

 ದ್ರಾವಿಡ್ ಶೀಘ್ರ ಗುಣಮುಖರಾಗಲಿದ್ದಾರೆ

ದ್ರಾವಿಡ್ ಶೀಘ್ರ ಗುಣಮುಖರಾಗಲಿದ್ದಾರೆ

ಕೋವಿಡ್-19 ಪಾಸಿಟಿವ್‌ ವರದಿ ಬಂದ ನಂತರ ಅವರು ಏಷ್ಯಾಕಪ್‌ನಲ್ಲಿ ಭಾರತ ತಂಡದ ಸೇವೆಗೆ ಅಲಭ್ಯರಾಗುವ ಬಗ್ಗೆ ಪ್ರತಿಕ್ರಿಯೆ ನೀಡಿದ ರವಿಶಾಸ್ತ್ರಿ, ಅದು ಸಣ್ಣ ಜ್ವರ ಅಷ್ಟೆ, ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆಗೆ ರಾಹುಲ್‌ ದ್ರಾವಿಡ್ ವಾಪಸಾಗಲಿದ್ದಾರೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಬುಮ್ರಾ, ಹರ್ಷಲ್ ಪಟೇಲ್ ಅವರಂತಹ ಅನುಭವಿ ಬೌಲರ್ ಅನುಪಸ್ಥಿತಿ ನಡುವೆಯೂ ಭಾರತ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದ್ದಾರೆ.

Recommended Video

ರಾಹುಲ್ ಪ್ರಿಯಾಂಕಾ ಜೊತೆ ಸೋನಿಯಾ ಇಟಲಿಗೆ..? | Oneindia Kannada

English summary
Virat Kohli will come back with a calmer mind because the heat is off. He gets a fifty in the very first game, mouths will be shut for the rest of the tournament. Former India coach Ravi Shastri said about Virat kohli's Form. Kohli, who is approaching his 100th T20I, was also backed by Shastri to end his lean patch of form in the upcoming Asia Cup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X