Suryakumar Yadav: ಅಂದು ನಾಯಕ, ಉಪನಾಯಕ: ಇಂದು ಕೋಚ್, ನಾಯಕ
ಟೀಮ್ ಇಂಡಿಯಾದ ನಾಯಕತ್ವವನ್ನು ಟಿ20ಯಲ್ಲಿ ಯಾರು ಮುಂದುವರೆಸುತ್ತಾರೆ ಎಂಬ ಪ್ರಶ್ನೆಗೆ ಆರಂಭಿಕ ಉತ್ತರ ಸಿಕ್ಕಿದೆ. ಹಾರ್ದಿಕ್ ಪಾಂಡ್ಯ ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎಂಬ ಸುದ್ದಿಗೆ ಬ್ರೇಕ್ ಬಿದ್ದಿದೆ. ಟೀಮ್ ಇಂಡಿಯಾ ದ್ವೀಪ ರಾಷ್ಟ್ರದ ಪ್ರವಾಸ ಬೆಳಸಲಿದ್ದು, ಈ ವೇಳೆ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ಇದರಿಂದ ಹಾರ್ದಿಕ್ ಪಾಂಡ್ಯ ಅವರಿಗೆ ಆರಂಭಿಕ ಆಘಾತವಾಗಿದೆ.
ಟೀಮ್ ಇಂಡಿಯಾ ಅಳೆದು ತೂಗಿ ಶ್ರೀಲಂಕಾ ಪ್ರವಾಸಕ್ಕೆ ಆಟಗಾರರನ್ನು ಆಯ್ಕೆ ಮಾಡಿದೆ. ಇದರಲ್ಲಿ ಅನುಭವಿ ಮಿಡ್ಲ್ ಆರ್ಡರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬಾಜಿ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಅನುಭವಿ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಹಿಂದಿಕ್ಕಿ ಸೂರ್ಯಕುಮಾರ್ ಯಾದವ್ ಭಾಜಿ ಗೆದ್ದಿರುವುದು ಹೇಗೆ ಎಂಬ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಉತ್ತರ ಇಲ್ಲಿದೆ.

ಗೌತಮ್ ಗಂಭೀರ್ ಅವರು ಮೊದಲಿನಿಂದಲೂ ಅಚ್ಚರಿಯ ಆಟಗಾರರಿಗೆ ಮಣೆ ಹಾಕುತ್ತಾರೆ. ಅಲ್ಲದೆ ಉತ್ತಮ ಆಟಗಾರರಿಗೆ ಮನ್ನಣೆ ನೀಡುತ್ತಾರೆ. ಇವರೊಂದಿಗೆ ಇನ್ನಷ್ಟು ಜನರು ಇವರ ಹೆಸರಿಗೆ ಜೈ ಎಂದಿದ್ದಾರೆ. ಸೂರ್ಯಕುಮಾರ್ ಚುಟುಕು ಕ್ರಿಕೆಟ್‌ನ ನಾಯಕತ್ವ ಪಡೆದಿದ್ದು ಹೇಗೆ ಎಂಬ ಪ್ರಶ್ನೆಗೆ ಕಣ್ಣುಗಳು ಆ ಮೂವರು ವ್ಯಕ್ತಿಗಳ ಮೇಲೆ ಹೋಗುತ್ತವೆ.
ಟಿ20 ವಿಶ್ವಕಪ್ ಟಾರ್ಗೆಟ್
ಗೌತಮ್ ಗಂಭೀರ್ ಕೋಚ್ ಆದ ಮೇಲೆ ಅವರ ದೃಷ್ಟಿ ಪಕ್ಕಾ ಆಗಿದೆ. ತಾನು ಏನೇ ಮಾಡಿದ್ರೂ ದೊಡ್ಡ ವಿಜನ್ ಇಟ್ಟುಕೊಂಡೇ ಮಾಡುವವನು ಎಂದು ಹೇಳುತ್ತಾರೆ. ಅದರಂತೆ ಗೌತಿ ಅವರು ಮುಂದಿನ ಟಿ20 ವಿಶ್ವಕಪ್‌ಗೆ ತಂಡವನ್ನು ಮುನ್ನಡೆಸುವ ಆಟಗಾರನಿಗೆ ಈ ಪ್ರವಾಸದಲ್ಲಿ ಮನ್ನಣೆ ನೀಡಲಾಗುವುದು ಎಂದಿದ್ದಾರೆ. ಅದರಂತೆ ತಂಡವನ್ನು ಸಮರ್ಥವಾಗಿ ಮುಂದಾಳತ್ವ ಮಾಡಬಹುದಾದ ಕ್ವಾಲಿಟಿಗಳಲ್ಲಿ ಸೂರ್ಯಕುಮಾರ್ ಹೆಚ್ಚು ಸೂಕ್ತ ಎಂದು ಗೌತಿ ಇವರ ಹೆಸರನ್ನು ಪ್ರಸ್ತಾಪಿಸಿದರು. ಇದಕ್ಕೆ ಮ್ಯಾನೇಜ್ಮೆಂಟ್ ಹಾಗೂ ಆಯ್ಕೆದಾರರು ಮನ್ನಣೆ ನೀಡಿದರು.

ಹಿಟ್ ಮ್ಯಾನ್ ನೆರಳು
ಸೂರ್ಯಕುಮಾರ್ ಯಾದವ್ ಹಾಗೂ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರ ನೆರಳಲ್ಲೇ ಬೆಳದವರು. ಇಬ್ಬರೂ ಮುಂಬೈ ತಂಡದ ರಣಜಿ ತಂಡದ ಪರ ಆಡುತ್ತಾರೆ. ಅಲ್ಲದೆ ಮುಂಬೈ ಇಂಡಿಯನ್ಸ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಇಬ್ಬರೂ ಒಟ್ಟಾಗಿ ಸಮಯ ಕಳೆದಿದ್ದಾರೆ. ಹೀಗಾಗಿ ಇಬ್ಬರಲ್ಲೂ ಕೆಲವು ಸಾಮ್ಯತೆಗಳು ಕಾಣುತ್ತವೆ. ಗೌತಮ್ ಸ್ಕೈ ಹೆಸರೂ ನಾಯಕತ್ವಕ್ಕೆ ಸೂಚಿಸುತ್ತಿದ್ದಂತೆ ರೋಹಿತ್ ಗ್ರೀನ್ ಸಿಗ್ನಲ್ ನೀಡಿದರು.
ಆಯ್ಕೆದಾರರಿಗೂ ಸುಲಭ
ಅಜಿತ್ ಅಗರ್ಕರ್ ಮುಂದಾಳತ್ವದ ಆಯ್ಕೆ ಸಮಿತಿಯ ಮುಂದೂ ಹಲವು ಗೊಂದಲಗಳು ಇದ್ದವು. ಆಗ ಗೌತಮ್ ಕ್ಲೀಯರ್ ಪಿಚ್ಚರ್‌ನೊಂದಿಗೆ ಸೂರ್ಯಕುಮಾರ್ ಯಾದವ್ ಅವರ ಹೆಸರನ್ನು ಪ್ರಸ್ತಾಪಿಸಿದಾಗ ಅಜಿತ್ ಅಗರ್ಕರ್ ಸಹ ನಗು ಮೊಗದಿಂದಲೇ ಎಸ್ ಅಂದು ಬಿಟ್ಟರು. ಇನ್ನು ಅಂದು ಕೆಕೆಆರ್ ತಂಡದ ಗೌತಮ್ ನಾಯಕನಾಗಿದ್ದಾಗ, ಸೂರ್ಯ ತಂಡದ ಉಪನಯಾಕನಾಗಿದ್ದರು. ಇಬ್ಬರ ನಡುವ ಹೊಂದಾಣಿಕೆ ಚೆನ್ನಾಗಿದೆ ಎಂದು ಆಯ್ಕೆದಾರರು ಜೈ ಎಂದಿದ್ದಾರೆ.

ಗೌತಮ್ ಗಂಭೀರ್ ಅವರ ದೃಷ್ಟಿಯನ್ನು ನೋಡಿದರೆ, ಸ್ಕೈ ಮುಂದಿನ ಬಾರಿ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎಂಬುದನ್ನು ಖಚಿತ ಪಡಿಸಿದಂತೆ ಇದೆ. ಹೀಗಾಗಿ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ಆರಂಭಿಕ ಹಿನ್ನಡೆ ಆಗಿದ್ದಂತೂ ಸುಳ್ಳಲ್ಲ.












Click it and Unblock the Notifications