‘ಕುಡುಕ ಮ್ಯಾಕ್ಸ್‌ವೆಲ್ & ಸೋಮಾರಿ ಲಿವಿಂಗ್‌ಸ್ಟೋನ್ ಮಜಾ ಮಾಡುವುದು ಬಿಟ್ಟು ಕ್ರಿಕೆಟ್ ಆಡಲಿ...’ Virender Sehwag
ನಮಸ್ಕಾರ ಕನ್ನಡಿಗರೇ... ಐಪಿಎಲ್ ಹವಾ ಜೋರಾಗಿದೆ & ಅದರಲ್ಲೂ ಕನ್ನಡಿಗರ ತಂಡ ಆರ್‌ಸಿಬಿ 2025ರ ಐಪಿಎಲ್ ಟ್ರೋಫಿ ಗೆದ್ದು ಕಪ್ ಎತ್ತಿ ಹಿಡಿಯುವುದು ಕನ್ಫರ್ಮ್ ಆಗುತ್ತಿದೆ. ಇಂತಹ ಸಮಯಕ್ಕಾಗಿ ಕಾಯುತ್ತಿದ್ದ ಕೋಟಿ ಕೋಟಿ ಕನ್ನಡಿಗರಿಗೆ ಕೂಡ ಖುಷಿಯಾಗುತ್ತಿದೆ. ಆದರೆ ಇದೇ ಸಮಯದಲ್ಲಿ, 'ಕುಡುಕ ಮ್ಯಾಕ್ಸ್‌ವೆಲ್ & ಸೋಮಾರಿ ಲಿವಿಂಗ್‌ಸ್ಟೋನ್ ಮಜಾ ಮಾಡುವುದು ಬಿಟ್ಟು ಕ್ರಿಕೆಟ್ ಆಡಲಿ...' ಅಂತಿದ್ದಾರೆ ಕನ್ನಡಿಗರು!
ಹೌದು, ಕ್ರಿಕೆಟ್ ಆಟಕ್ಕೆ ಹೊಸ ತಿರುವು ನೀಡಿದ್ದೇ ನಮ್ಮ ಐಪಿಎಲ್ ಎನ್ನಬಹುದು. ಸುಮಾರು 1,00,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯ ಹೊಂದಿರುವ ಐಪಿಎಲ್ ಟೂರ್ನಿಯಲ್ಲಿ ಆಡುವುದಕ್ಕೆ ಪುಣ್ಯ ಮಾಡಿರಬೇಕು ಅಂತಾರೆ ಕ್ರಿಕೆಟ್ ಆಟಗಾರರು. ಆದರೆ ಇಂತಹ ಪುಣ್ಯ ಇದ್ದರೂ, ಕೆಲವರು ಮಾತ್ರ ಸೋಮಾರಿಗಳ ರೀತಿ ಮಜಾ ಮಾಡುತ್ತಿದ್ದಾರೆ. ಇಂತಹ ಕೆಲವು ಆಟಗಾರರಿಂದ ಐಪಿಎಲ್ ಟೂರ್ನಿಗೆ ಕೆಟ್ಟ ಹೆಸರು ಬಂದಿದೆ ಎಂಬ ಗಂಭೀರ ಆರೋಪ ಕೂಡ ಇದೆ. ಹೀಗಿದ್ದಾಗಲೇ, 'ಕುಡುಕ ಮ್ಯಾಕ್ಸ್‌ವೆಲ್ & ಸೋಮಾರಿ ಲಿವಿಂಗ್‌ಸ್ಟೋನ್ ಮಜಾ ಮಾಡುವುದು ಬಿಟ್ಟು ಕ್ರಿಕೆಟ್ ಆಡಲಿ...' ಅಂತಾ...

'ಕುಡುಕ ಮ್ಯಾಕ್ಸ್‌ವೆಲ್ & ಸೋಮಾರಿ ಲಿವಿಂಗ್‌ಸ್ಟೋನ್...'
ಕ್ರಿಕೆಟ್ ಲೋಕದ ಹಬ್ಬ ಐಪಿಎಲ್ ಟೂರ್ನಿಗೆ ಆಡುವುದಕ್ಕೆ ಒಬ್ಬೊಬ್ಬ ಆಟಗಾರನಿಗೆ ಕೂಡ ಕೋಟಿ ಕೋಟಿ ರೂಪಾಯಿ ಹಣ ನೀಡಲಾಗುತ್ತದೆ. ಹರಾಜು ಪ್ರಕ್ರಿಯೆಯ ಮೂಲಕ ಈ ರೀತಿ ಕೋಟಿ ಕೋಟಿ ರೂಪಾಯಿ ಕೊಟ್ಟು ಆಟಗಾರರನ್ನು ಖರೀದಿ ಮಾಡಲಾಗುತ್ತದೆ. ಆದ್ರೆ ಹೀಗೆಲ್ಲಾ ಕೋಟಿ ಕೋಟಿ ರೂಪಾಯಿ ಹಣ ಪಡೆದು ಬರುವ ಆಟಗಾರರು ಸರಿಯಾಗಿ ಆಟ ಆಡುವುದು ಬಿಟ್ಟು ಮಜಾ ಮಾಡಿದರೆ ಹೇಗೆ ಇರಬೇಡ ಹೇಳಿ? ಹೀಗಿದ್ದಾಗಲೇ, 'ಕುಡುಕ ಮ್ಯಾಕ್ಸ್‌ವೆಲ್ & ಸೋಮಾರಿ ಲಿವಿಂಗ್‌ಸ್ಟೋನ್ ಮಜಾ ಮಾಡುವುದು ಬಿಟ್ಟು ಕ್ರಿಕೆಟ್ ಆಡಲಿ...' ಅಂತಾ...
ಹೌದು, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಆಗಿದ್ದ ವೀರೇಂದ್ರ ಸೆಹ್ವಾಗ್ ಅವರು ಇದೀಗ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ವಿರುದ್ಧ ಗರಂ ಆಗಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರು ಇಷ್ಟು ಕೋಪ ಮಾಡಿಕೊಳ್ಳೋದಕ್ಕೆ ಕಾರಣ ಆಗಿರುವುದು ಮ್ಯಾಕ್ಸ್‌ವೆಲ್ ಹಾಗೂ ಲಿವಿಂಗ್ಸ್ಟೋನ್ ಅವರ ಆಟ. ಇಬ್ಬರೂ ಸೇರಿ ಕೋಟಿ ಕೋಟಿ ರೂಪಾಯಿ ಮೊತ್ತಕ್ಕೆ ಐಪಿಎಲ್ ಅಖಾಡದಲ್ಲಿ ಹರಾಜು ಆಗಿದ್ದಾರೆ. ಆದ್ರೆ, ಈ ಇಬ್ಬರೂ ಆಟಗಾರರು ಸರಿಯಾಗಿ ಆಡುತ್ತಿಲ್ಲ. ತಮ್ಮ ತಂಡಕ್ಕೆ ಬೇಕಾದ ಕೊಡುಗೆಯನ್ನೇ ನೀಡುತ್ತಿಲ್ಲ ಎಂದು ವೀರೇಂದ್ರ ಸೆಹ್ವಾಗ್ ಅವರು ಗರಂ ಆಗಿ ಮಾತನಾಡಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರು ಖಾಸಗಿ ಸಂದರ್ಶನದಲ್ಲಿ ಈ ಮಾತು ಹೇಳಿದ್ದಾರೆ.
ಅಭಿಮಾನಿಗಳಲ್ಲಿ ಹೆಚ್ಚಾಯ್ತು ಆಕ್ರೋಶ!
ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ರಜಾ ದಿನಗಳಲ್ಲಿ ಬಂದ ರೀತಿಯೇ ಐಪಿಎಲ್ ಆಡುತ್ತಾರೆ. ಅವರಿಗೆ ಟ್ರೋಫಿ ಗೆಲ್ಲಬೇಕು ಎಂಬ ಬದ್ಧತೆ ಇಲ್ಲದಂತೆ ಕಾಣುತ್ತಿದ್ದು, ಹೀಗಾಗಿ ಇಂತಹ ವರ್ತನೆ ಬದಲಾವಣೆ ಆಗಬೇಕು ಎಂದು ಕೂಡ ವೀರೇಂದ್ರ ಸೆಹ್ವಾಗ್ ಅವರು ಗುಡುಗಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಈ ಹಿಂದೆ ಆರ್‌ಸಿಬಿ ತಂಡದಲ್ಲೇ ಇದ್ದರು, ಆದರೆ ಕೆಟ್ಟ ಆಟದ ಕಾರಣಕ್ಕೆ ಮ್ಯಾಕ್ಸ್‌ವೆಲ್ ಅವರನ್ನ ಆರ್‌ಸಿಬಿ ತಂಡ ಕೈಬಿಟ್ಟಿತ್ತು. ಆ ನಂತರ ಪಂಜಾಬ್ ಪರವಾಗಿ ಮ್ಯಾಕ್ಸ್‌ವೆಲ್ ಆಡುತ್ತಿದ್ದರೂ ಕಳಪೆ ಆಟ ಮುಂದುವರಿದಿದೆ. ಇನ್ನೊಂದು ಕಡೆಯಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ ಇದೀಗ ಆರ್‌ಸಿಬಿ ಬೆಂಗಳೂರು ತಂಡಕ್ಕೆ ಆಡುತ್ತಿದ್ದಾರೆ. ಆದರೂ ಲಿಯಾಮ್ ಲಿವಿಂಗ್ಸ್ಟೋನ್ ಆಟ ಕೂಡ ಕಳಪೆಯಾಗಿರುವುದು ಅಭಿಮಾನಿಗಳಲ್ಲಿ ಆಕ್ರೋಶ ಹೆಚ್ಚಿಸಿದೆ.












Click it and Unblock the Notifications