ವಿರಾಟ್ ಮನೆಯಲ್ಲಿ ಸಿದ್ಧವಾಯ್ತು ಇಂಗ್ಲೆಂಡ್ ಸೋಲಿಸುವ ಗೇಮ್ ಪ್ಲ್ಯಾನ್
ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಇಂಗ್ಲೆಂಡ್ ತಂಡದ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ಅನುಭವಿ ಬ್ಯಾಟರ್‌ಗಳ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಲಿದೆ. ಟೀಮ್ ಇಂಡಿಯಾದ ಯುವ ತಂಡವನ್ನು ಶುಭಮನ್ ಗಿಲ್ ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ ಅವರಿಂದ ತೆರವಾದ ನಾಯಕತ್ವ ಸ್ಥಾನವನ್ನು ಯುವ ಆಟಗಾರ ಗಿಲ್ ತುಂಬಿದ್ದಾರೆ. ಇನ್ನು ತಂಡದ ಉಪನಾಯಕತ್ವದ ಸ್ಥಾನವನ್ನು ರಿಷಭ್ ಪಂತ್ ಅವರಿಗೆ ನೀಡಲಾಗಿದೆ.
ಐಪಿಎಲ್ ವೇಳೆ ರೋಹಿತ್ ಶರ್ಮಾ ಮೊದಲು ವಿದಾಯ ಹೇಳಿದರು. ಇವರು ವಿದಾಯ ಹೇಳಿದ ಐದೇ ದಿನದಲ್ಲಿ ವಿರಾಟ್ ಕೊಹ್ಲಿ ಸಹ ನಿವೃತ್ತಿ ಘೋಷಿಸಿದರು. ಇನ್ನು ಬಾರ್ಡರ್ ಗವಾಸ್ಕರ್ ಸರಣಿಯ ವೇಳೆ ಸ್ಪಿನ್ ಬೌಲರ್ ಅಶ್ವಿನ್ ಸಹ ನಿವೃತ್ತರಾಗಿದ್ದರು. ಹೀಗಾಗಿ ಟೀಮ್ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ಹೇಗೆ ಪ್ರದರ್ಶನ ನೀಡುತ್ತದೆ ಎಂಬ ಪ್ರಶ್ನೆಗಳು ಎದ್ದಿವೆ. ಇಂಗ್ಲೆಂಡ್ ಸವಾಲಿಗೆ ಮುನ್ನ ವಿರಾಟ್ ಕೊಹ್ಲಿ ಅವರ ಇಂಗ್ಲೆಂಡ್ ಮನೆಯಲ್ಲಿ ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ ಸಭೆ ನಡೆಸಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಈಗಾಗಲೇ ಇಂಟ್ರಾ-ಸ್ಕ್ವಾಡ್ ಪಂದ್ಯಗಳನ್ನು ಸಹ ಆಡಿದೆ. ವಿರಾಟ್ ಕೊಹ್ಲಿ ಅವರು ಐಪಿಎಲ್ ಮುಗಿದ ಬಳಿಕ ಕುಟುಂಬಸ್ಥರ ಜೊತೆ ಇಂಗ್ಲೆಂಡ್‌ಗೆ ತೆರಳಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾದ ಹಿರಿಯ ಆಟಗಾರ ವಿರಾಟ್ ಕೊಹ್ಲಿ, ತಂಡದ ಸಹ ಆಟಗಾರರನ್ನು ಕರೆದು ಗೇಮ್ ಪ್ಲ್ಯಾನ್ ನಡೆಸಿದ್ದಾರೆ. ಇದೇ ವೇಳೆ ಎರಡು ಗಂಟೆಯಲ್ಲಿ ಸಭೆ ನಡೆಸಿತು. ಆದರೆ ಈ ವೇಳೆ ಏನೆಲ್ಲಾ ಚರ್ಚಿಸಲಾಯಿತು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಭಾರತ ತಂಡವು ಮಂಗಳವಾರ ಲೀಡ್ಸ್ ತಲುಪುವ ನಿರೀಕ್ಷೆಯಿದೆ, ಅಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ತಂಡವನ್ನು ಭೇಟಿಯಾಗಲಿದ್ದಾರೆ.
ವಿರಾಟ್ ಮನೆಯಲ್ಲಿ ಸಭೆ
ಈ ಭೇಟೆಯ ವೇಳೆ ಇಂಗ್ಲೆಂಡ್ ತಂಡದ ರಣ ತಂತ್ರಕ್ಕೆ ಹೇಗೆ ಪ್ರತಿ ತಂತ್ರ ರೂಪಿಸಬಹುದು ಎಂಬ ಬಗ್ಗೆ ಮಾತುಕುತೆ ನಡೆದಿರುವ ಸಾಧ್ಯತೆ ಇದೆ. ಅಲ್ಲದೆ ಪಿಚ್ ಹಾಗೂ ಕಂಡೀಷನ್ ಬಳಸಿಕೊಂಡು ಹೇಗೆ ತಂಡವನ್ನು ಕಟ್ಟಬೇಕು ಎಂಬುದರ ಬಗ್ಗೆ ವಿರಾಟ್ ಕಿವಿ ಮಾತು ಸಹ ಹೇಳಿರಬಹುದಾಗಿದೆ. ಆದರೆ ವಿರಾಟ್ ಅವರ ಮನೆಯಲ್ಲಿ ಯಾವ ವಿಷಯದ ಬಗ್ಗೆ ಮಾತುಕತೆ ನಡೆದಿದೆ ಎಂಬ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಇಲ್ಲ.

ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ ಹೆಡೆಂಗ್ಲಿಯಲ್ಲಿ ಶುಕ್ರವಾರದಿಂದ ಆರಂಭವಾಗಲಿದೆ. ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ವಿರಾಟ್ ಕೊಹ್ಲಿ ಅವರಿಂದ ತೆರವಾದ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡುತ್ತಾರೆ? ಎಷ್ಟು ಸ್ಪಿನ್ ಹಾಗೂ ವೇಗದ ಬೌಲರ್‌ಗಳ ಸಂಯೋಜನೆಯಲ್ಲಿ ಟೀಮ್ ಇಂಡಿಯಾ ಅಖಾಡಕ್ಕೆ ಇಳಿಯಲಿದೆ ಎಂಬೆಲ್ಲಾ ಪ್ರಶ್ನೆಗಳಿಗೆ ಜೂನ್ 20 ರಂದೇ ಉತ್ತರ ಸಿಗಲಿದೆ.












Click it and Unblock the Notifications