Get Updates
Get notified of breaking news, exclusive insights, and must-see stories!

ಫುಟ್ಬಾಲ್ ತಾರೆ ಮೆಸ್ಸಿಗೆ 35ನೇ ಜನ್ಮದಿನ ಸಂಭ್ರಮ: ಅಭಿಮಾನಿಗಳಿಂದ ಶುಭಾಶಯ

ನವದೆಹಲಿ, ಜೂನ್ 24: ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಅಸಂಖ್ಯ ಅಭಿಮಾನಿಗಳು ಅರ್ಜೆಂಟಿನಾದ ನೆಚ್ಚಿನ ಫುಟ್ಬಾಲ್ ತಾರೆಗೆ ಶುಭಾಶಗಳನ್ನು ತಿಳಿಸಿದ್ದಾರೆ.

ಮೆಸ್ಸಿಯು ಪಿಎಸ್‌ಜಿ ಪ್ರಾಂಚೈಸಿಯೊಂದಿಗೆ ತನ್ನ ವೃತ್ತಿಜೀವನದಲ್ಲಿ ಅತ್ಯಂತ ಕೆಟ್ಟ ಋತುವನ್ನು ಹೊಂದಿದ್ದನೆಂದು ಹೇಳಲಾಗುತ್ತದೆ, ಆದರೆ ಅರ್ಜೆಂಟಿನಾದ ಪರವಾಗಿ ಮೆಸ್ಸಿ ಕಳೆದ ಒಂದು ವರ್ಷದಲ್ಲಿ ಹಲವು ಅಂತರಾಷ್ಟ್ರೀಯ ಟ್ರೋಫಿಗಳನ್ನು ಗೆದ್ದಿದ್ದಾರೆ.

24 ಜೂನ್, 1987 ರಂದು ಅರ್ಜೆಂಟಿನಾದ ರೊಸಾರಿಯೊದಲ್ಲಿ ಜನಿಸಿದ ಮೆಸ್ಸಿ 13ನೇ ವಯಸ್ಸಿನಲ್ಲಿ ಸ್ಪ್ಯಾನಿಷ್ ದೈತ್ಯ ಎಫ್‌ಸಿ ಬಾರ್ಸಿಲೋನಾದೊಂದಿಗೆ ಸಹಿ ಹಾಕಿದರು. ಈಗ ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಲಿಯೋನೆಲ್ ಮೆಸ್ಸಿ ಫುಟ್ಬಾಲ್ ಲೀಗ್‌ವೊಂದರಲ್ಲಿ ಗರಿಷ್ಟ ಗೋಲು ಬಾರಿಸಿದ ಸಾಧನೆ ಮಾಡಿದ್ದಾರೆ. ಲಾ ಲಿಗಾ ಫುಟ್ಬಾಲ್ ಲೀಗ್‌ನಲ್ಲಿ ಮೆಸ್ಸಿ ಬರೋಬ್ಬರಿ 474 ಗೋಲುಗಳನ್ನು ಬಾರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಇಂಗ್ಲೆಂಡ್‌ ಅಲನ್‌ ಶೆರಾರ್‌ ಎರಡನೇ ಸ್ಥಾನದಲ್ಲಿದ್ದು, ಇಂಗ್ಲೀಷ್ ಪ್ರೀಮಿಯರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಅವರು 260 ಗೋಲು ಬಾರಿಸಿದ್ದಾರೆ.

ಟ್ವಿಟರ್ ನಲ್ಲಿ ಅಭಿಮಾನಿಗಳ ಶುಭಾಶಯ

ಟ್ವಿಟರ್ ನಲ್ಲಿ ಫುಟ್ಬಾಲ್ ಅಭಿಮಾನಿಗಳು ನೆಚ್ಚಿನ ಆಟಗಾರನಿಗೆ ಶುಭಾಶಯಗಳನ್ನು ಕೋರಿದ್ದಾರೆ. ಓರ್ವ ಅಭಿಮಾನಿ "ಹುಟ್ಟು ಹಬ್ಬದ ಶುಭಾಶಯಗಳು ಲಿಯೋನಲ್ ಮೆಸ್ಸಿ, ದೇವರು ನಿಮಗೆ ಕೊನೆಯವರೆಗೂ ಉತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಫುಟ್ಬಾಲ್‌ನ ಶ್ರೇಷ್ಟ ಆಟಗಾರನಿಗೆ ಈ ವರ್ಷ ಉತ್ತಮವಾಗಿರಲಿ, ಅರ್ಜೆಂಟಿನಾ ವಿಶ್ವಕಪ್ ಗೆಲ್ಲಲಿ" ಎಂದು ಹಾರೈಸಿದ್ದಾರೆ.

ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದು ಅಭಿಮಾನಿಗಳು ಹೇಳಿದ್ದಾರೆ. ನೀನೊಬ್ಬ ಜಾದೂಗಾರ, ನಿಮ್ಮ ಪಂದ್ಯದ ವೇಳೆ ನಾನು ಕೆಲಸಕ್ಕೂ ಹೋಗದೆ ಪಂದ್ಯವನ್ನು ವೀಕ್ಷಿಸುತ್ತೇನೆ ಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾನೆ.

7 ಬಾರಿ ಬಾಲನ್ ಡಿ ಓರ್ ಪ್ರಶಸ್ತಿ ಗೆಲುವು

7 ಬಾರಿ ಬಾಲನ್ ಡಿ ಓರ್ ಪ್ರಶಸ್ತಿ ಗೆಲುವು

ಅರ್ಜೆಂಟೀನಾದ ಫುಟ್ಬಾಲ್ ಲೆಜೆಂಡ್‌, ಫುಟ್ಬಾಲ್‌ ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿರುವ ಬಾಲನ್ ಡಿ ಓರ್ ಪ್ರಶಸ್ತಿಯನ್ನು ಏಳು ಬಾರಿ ಜಯಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮತ್ತೊಬ್ಬ ಶ್ರೇಷ್ಠ ಪುಟ್ಬಾಲ್ ಆಟಗಾರ ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ 5 ಬಾಲನ್ ಡಿ ಓರ್ ಪ್ರಶಸ್ತಿ ಜಯಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ವರ್ಷವೊಂದರಲ್ಲಿ ಗರಿಷ್ಟ ಗೋಲು ಬಾರಿಸಿದ ದಾಖಲೆ ಲಿಯೋನೆಲ್ ಮೆಸ್ಸಿ ಹೆಸರಿನಲ್ಲಿದೆ. 2012ರ ವರ್ಷವೊಂದರಲ್ಲಿ ಮೆಸ್ಸಿ 91 ಗೋಲು ಬಾರಿಸುವ ಮೂಲಕ ವರ್ಷವೊಂದರಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಫುಟ್ಬಾಲ್ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಇನ್ನು ಜರ್ಮನಿಯ ಗೆರ್ಡ್‌ ಮುಲ್ಲರ್ ವರ್ಷವೊಂದರಲ್ಲಿ 85 ಗೋಲು ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ಬಾರ್ಸಿಲೋನಾ ಕ್ಲಬ್ ಪರ ದಾಖಲೆಯ ಗೋಲು

ಬಾರ್ಸಿಲೋನಾ ಕ್ಲಬ್ ಪರ ದಾಖಲೆಯ ಗೋಲು

ದಶಕಗಳ ಕಾಲ ಬಾರ್ಸಿಲೋನಾ ತಂಡದ ಪರವಾಗಿ ಆಡಿರುವ ಲಿಯೋನೆಲ್ ಮೆಸ್ಸಿ, ಒಂದೇ ಫುಟ್ಬಾಲ್ ಕ್ಲಬ್ ಪರ ಅತಿಹೆಚ್ಚು ಗೋಲು ಬಾರಿಸಿದ ಆಟಗಾರ ಎನಿಸಿಕೊಂಡಿರುವ ಕೀರ್ತಿಗೆ ಪಾತ್ರರಾಗಿದ್ದಾರೆ. ಬಾರ್ಸಿಲೋನಾ ಕ್ಲಬ್ ಪರ ಲಿಯೋನೆಲ್ ಮೆಸ್ಸಿ ದಾಖಲೆಯ 672 ಗೋಲು ಗಳಿಸಿದ್ದಾರೆ.

ಚಾಂಪಿಯನ್‌ ಲೀಗ್‌ನಲ್ಲಿ ಅತಿಹೆಚ್ಚು ಗೋಲು

ಚಾಂಪಿಯನ್‌ ಲೀಗ್‌ನಲ್ಲಿ ಅತಿಹೆಚ್ಚು ಗೋಲು

ಫುಟ್ಬಾಲ್‌ ಕ್ರೀಡೆಯಲ್ಲಿ ಪ್ರತಿಷ್ಠಿತ ಟೂರ್ನಿಯಾಗಿರುವ ಯೂರೋಪಿಯನ್ ಫುಟ್ಬಾಲ್ ಲೀಗ್‌ (UEFA ಚಾಂಪಿಯನ್‌ ಲೀಗ್‌)ನಲ್ಲಿ ಅತಿಹೆಚ್ಚು ಗೋಲು ಬಾರಿಸಿರುವ ದಾಖಲೆ ಲಿಯೋನೆಲ್ ಮೆಸ್ಸಿ ಹೆಸರಿನಲ್ಲಿದೆ. ಚಾಂಪಿಯನ್‌ ಲೀಗ್‌ನಲ್ಲಿ 76 ಗೋಲು ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೋ 73 ಗೋಲು ದಾಖಲಿಸುವ ಮೂಲಕ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+