• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೀಫಾ ವಿಶ್ವಕಪ್ 2026: ಯುಎಸ್ಎ, ಕೆನಡಾ, ಮೆಕ್ಸಿಕೋದ 16 ನಗರಗಳಲ್ಲಿ ಆತಿಥ್ಯ

|
Google Oneindia Kannada News

ನ್ಯೂಯಾರ್ಕ್, ಜೂನ್ 18: ವಿಶ್ವದ ಅತ್ಯಂತ ಪ್ರೀತಿಪಾತ್ರವಾದ ಕ್ರೀಡೆ ಫುಟ್ಬಾಲ್‌ನ ಜಾಗತಿಕ ಹಬ್ಬಕ್ಕೆ ಇದೇ ಮೊದಲ ಬಾರಿಗೆ ಮೂರು ದೇಶಗಳ ಆತಿಥ್ಯ ವಹಿಸಲಿವೆ. 2026ರ ವಿಶ್ವಕಪ್ ಪಂದ್ಯಾವಳಿ ಈ ಬಾರಿ ಯುಎಸ್ಎ, ಕೆನಡಾ ಹಾಗೂ ಮೆಕ್ಸಿಕೋದ ನಗರಗಳಲ್ಲಿ ಆಯೋಜನೆಗೊಳ್ಳಲಿದೆ ಎಂದು ಫೀಫಾ ಪ್ರಕಟಿಸಿದೆ.

ಯುಎಸ್ಎ, ಕೆನಡಾ ಹಾಗೂ ಮೆಕ್ಸಿಕೋದ 16 ನಗರಗಳಲ್ಲಿ ಫುಟ್ಬಾಲ್ ಹಬ್ಬ ಆಚರಣೆಗೆ ಸಿದ್ಧತೆ ನಡೆದಿದೆ ಎಂದು ಫೀಫಾ ಹೇಳಿದೆ. ಜೊತೆಗೆ ಯಾವೆಲ್ಲ ನಗರಗಳಲ್ಲಿ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಲಾಗಿದೆ ಎಂಬುದನ್ನು ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

23ನೇ ಆವೃತ್ತಿಯ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗಳು 16 ನಗರಗಳಲ್ಲಿ ನಡೆಯಲಿದೆ. ಅಟ್ಲಾಂಟಾ, ಬೋಸ್ಟನ್, ಡಲ್ಲಾಸ್, ಗ್ವಾಡಲಾಜರ್, ಹೋಸ್ಟನ್, ಕ್ಯಾನ್ಸನ್, ಲಾಸ್ ಏಂಜಲೀಸ್, ಮೆಕ್ಸಿಕೋ ನಗರ, ಮಿಯಾಮಿ, ಮೊಂಟೆರಿ, ನ್ಯೂಯಾರ್ಕ್/ನ್ಯೂಜೆರ್ಸಿ, ಫಿಲಡೆಲ್ಫಿಯಾ, ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ, ಸಿಯಾಟೆಲ್, ವ್ಯಾಂಕುವರ್ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

ಸುಮಾರು 40 ವರ್ಷ ಹಾಗೂ ಯುಎಸ್ಎ 32 ವರ್ಷಗಳ ಬಳಿಕ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುತ್ತಿದೆ. ಕೆನಡಾ ಇದೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯವನ್ನು ಆಯೋಜಿಸುವ ಅವಕಾಶ ಪಡೆದುಕೊಂಡಿದೆ. ಒಟ್ಟಾರೆ ಮೂರು ದಶಕಗಳ ಬಳಿಕ ಜಾಗತಿಕ ಫುಟ್ಬಾಲ್ ಸಮರವು ಉತ್ತರ ಅಮೆರಿಕಕ್ಕೆ ಕಾಲಿಡುತ್ತಿದೆ.

ಉತ್ತರ ಅಮೆರಿಕ ಖಂಡ ಜನಪ್ರಿಯ ಹಾಗೂ ಐತಿಹಾಸಿಕ ಸ್ಟೇಡಿಯಂಗಳಾದ ಎಸ್ಟಾಡಿಯೋ ಅಜ್ಟೆಕಾ, ಮೆಟ್ ಲೈಫ್ ಸ್ಟೇಡಿಯಂ, ಎಟಿ ಅಂಡ್ ಟಿ ಸ್ಟೇಡಿಯಂ, ಮರ್ಸಿಡೀಸ್ ಬೆಂಜ್ ಸ್ಟೇಡಿಯಂ ಹಾಗೂ ಲೆವಿಸ್ ಸ್ಟೇಡಿಯಂನಲ್ಲಿ ನೆಚ್ಚಿನ ತಾರೆಗಳ ಕಾಲ್ಚೆಂಡು ಆಟದ ವೈಖರಿ ಕಣ್ತುಂಬಿಸಿಕೊಳ್ಳಬಹುದು.

23ನೇ ಆವೃತ್ತಿಯಲ್ಲಿ ಸುಮಾರು 48 ಪಂದ್ಯಗಳು ಸೆಣೆಸಲಿದ್ದು, 60 ಪಂದ್ಯಗಳನ್ನಾಡುವ ನಿರೀಕ್ಷೆಯಿದೆ. 2026ರ ವಿಶ್ವಕಪ್ ಪಂದ್ಯಾವಳಿ ಆಯೋಜನೆಗಾಗಿ ಮೊರೊಕ್ಕೋ ಜೊತೆ ಯುಎಸ್ಎ ಭಾರಿ ಪೈಪೋಟಿ ನಡೆಸಿ, ಬಿಡ್ ಗೆದ್ದುಕೊಂಡಿದೆ.

ಮೊರಾಕ್ಕೊವನ್ನು 134 ರಿಂದ 65 ಮತಗಳಿಂದ ಉತ್ತರ-ಅಮೆರಿಕನ್ ಮೂರು ರಾಷ್ಟ್ರಗಳು ಆರಾಮವಾಗಿ ಸೋಲಿಸಿ, ಪಂದ್ಯ ಆಯೋಜನೆಯ ಬಿಡ್ ಗೆದ್ದುಗೊಂಡವು. FIFA ಗಾಗಿ £11bn (£8.24bn) ಲಾಭದ ಭರವಸೆಯನ್ನು ಮೂಡಿಸಲಾಗಿದೆ.

FIFA Announces 16 Host Cities For 2026 World Cup Across USA, Canada, Mexico

ಅರ್ಹತೆ ಇಲ್ಲ:

ಯುಎಸ್ 60 ಪಂದ್ಯಗಳನ್ನು ಆಯೋಜಿಸುತ್ತದೆ, ಬಹುಶಃ ನ್ಯೂಜೆರ್ಸಿಯ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ಫೈನಲ್ ಸೇರಿದಂತೆ, ಮೆಕ್ಸಿಕೊ ಮತ್ತು ಕೆನಡಾ ತಲಾ 10 ಪಂದ್ಯಗಳನ್ನು ಹೊಂದಿರುತ್ತದೆ. ಈ ಬಾರಿ ಒಂದು ಪ್ರಮುಖ ಬದಲಾವಣೆಯೆಂದರೆ ಸ್ವಯಂಚಾಲಿತ ಅರ್ಹತಾ ಸೌಲಭ್ಯ ಎನ್ನಬಹುದು.

ವಿಶ್ವಕಪ್‌ಗೆ ಆತಿಥೇಯ ರಾಷ್ಟ್ರಗಳು ಸ್ಪರ್ಧೆಯ ಗುಂಪು ಹಂತಗಳಿಗೆ ನೇರ ಅರ್ಹತೆಯನ್ನು ಪಡೆಯುತ್ತಾ ಬಂದಿವೆ. ಮಿಕ್ಕ ರಾಷ್ಟ್ರಗಳಂತೆ ಪ್ರಾದೇಶಿಕ ಅರ್ಹತಾ ಪಂದ್ಯಗಳನ್ನು ಆಡುವುದಿಲ್ಲ. ಆದರೆ, FIFA 2026 ವಿಶ್ವಕಪ್‌ಗೆ ಸ್ವಯಂಚಾಲಿತ ಅರ್ಹತೆಯನ್ನು ತೆಗೆದುಹಾಕಲು ಪರಿಗಣಿಸುತ್ತಿದೆ.

English summary
The world football governing body FIFA has announced a total of 16 host cities for the FIFA World Cup 2026 which will be held across USA, Mexico and Canada. This will be for the first time three nations will be co-hosting the biggest stage of football.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X