Virat Kohli: ರೋಹಿತ್‌ರನ್ನು ಹೊಗಳಿ ಕೊಹ್ಲಿಯನ್ನು ಟೀಕಿಸಿದ ಗವಾಸ್ಕರ್; ಸಿಟ್ಟಿಗೆದ್ದ ಅಭಿಮಾನಿಗಳು
ಬಾಂಗ್ಲಾದೇಶ ವಿರುದ್ಧದ 2024 ರ ಟಿ 20 ವಿಶ್ವಕಪ್ ಪಂದ್ಯದ ವೇಳೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಔಟಾದ ಬಗ್ಗೆ ವ್ಯತಿರಿಕ್ತ ವಿಶ್ಲೇಷಣೆ ಮಾಡಿದ ದಿಗ್ಗಜ ಬ್ಯಾಟರ್ ಸುನೀಲ್ ಗವಾಸ್ಕರ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ 11 ಎಸೆತಗಳಲ್ಲಿ 23 ರನ್ ಗಳಿಸಿ ಪವರ್‌ಪ್ಲೇನಲ್ಲಿ ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದ್ದರು. ಮತ್ತೊಂದೆಡೆ, ಕೊಹ್ಲಿ 28 ಎಸೆತಗಳಲ್ಲಿ 37 ರನ್ ಗಳಿಸಿದರು. ಗವಾಸ್ಕರ್, ರೋಹಿತ್ ಅವರ ನಿಸ್ವಾರ್ಥತೆಯನ್ನು ಹೊಗಳಿದರೆ, ವಿರಾಟ್ ಔಟಾಗಿದ್ದನ್ನು ಕಟುವಾಗಿ ಟೀಕಿಸಿದರು. ಇದು ಕೊಹ್ಲಿ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಶಾಕಿಬ್ ಬೌಲಿಂಗ್‌ನಲ್ಲಿ ರೋಹಿತ್ ಸಿಕ್ಸರ್ ಬಾರಿಸಲು ಯತ್ನಿಸಿ ಔಟಾದರು. ಆದರೆ ಅದಕ್ಕೂ ಮುನ್ನ ಅವರು ಒಂದೇ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ್ದರು. ಗವಾಸ್ಕರ್ ಅವರು ರೋಹಿತ್ ಉದ್ದೇಶ ಮತ್ತು ಆಕ್ರಮಣಕಾರಿ ವಿಧಾನವನ್ನು ಶ್ಲಾಘಿಸಿದರು.
ಎರಡು ಎಸೆತಗಳಲ್ಲಿ 10 ರನ್ ಹೊಡೆದ ಯಾರಾದರೂ ದೊಡ್ಡ ಹೊಡೆತಕ್ಕೆ ಹೋಗುವುದಿಲ್ಲ, ಆದರೆ ರೋಹಿತ್ ಶರ್ಮಾಗೆ ತಂಡದ ಬಗ್ಗೆ ಯೋಚಿಸುತ್ತಾರೆ ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.
ರೋಹಿತ್ ಶರ್ಮಾ ಅವರ ಔಟಾಗುವಿಕೆಯು ಭಾರತೀಯ ಅಭಿಮಾನಿಗಳ ಮನಸ್ಸಿಗೆ 2023 ರ ವಿಶ್ವಕಪ್ ಫೈನಲ್‌ನ ನೆನಪುಗಳನ್ನು ಮರಳಿ ತರುವುದರಲ್ಲಿ ಸಂದೇಹವಿಲ್ಲ, ಆ ಸಂದರ್ಭದಲ್ಲಿಯೂ ಸಹ, ರೋಹಿತ್ ಈಗಾಗಲೇ ಅದೇ ಓವರ್‌ನಲ್ಲಿ ಉತ್ತಮ ರನ್ ಗಳಿಸಿದ ಬಳಿಕ ಔಟಾಗಿದ್ದರು.
ವಿರಾಟ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ 37 ರನ್ ಗಳಿಸಿದರು. ಆದರೆ, ಬಾಂಗ್ಲಾದೇಶದ ವೇಗಿ ತಂಜಿಮ್ ಹಸನ್ ಸಾಕಿಬ್ ಅವರ ಅಪರೂಪದ ನಿಧಾನಗತಿಯ ಎಸೆತದಲ್ಲಿ ಕೊಹ್ಲಿ ಕ್ಲೀನ್ ಬೌಲ್ಡ್ ಆದರು.
ಕೊಹ್ಲಿ ಔಟಾಗುತ್ತಿದ್ದಂತೆ ಗವಾಸ್ಕರ್, ಆತ ಏನು ಯೋಚನೆ ಮಾಡುತ್ತಿದ್ದ? ಇನ್ ಅಂಡ್ ಔಟ್ ಶಾಟ್ ಆಡಬೇಕಿತ್ತು ಎಂದು ಗವಾಸ್ಕರ್ ಹೇಳಿದರು.
ಅಭಿಮಾನಿಗಳ ಆಕ್ರೋಶ
ರೋಹಿತ್ ಮತ್ತು ಕೊಹ್ಲಿಯ ಔಟಾದ ಬಗ್ಗೆ ಗವಾಸ್ಕರ್ ಪ್ರತಿಕ್ರಿಯೆ ನಿಡುವಲ್ಲಿ ಪಕ್ಷಪಾತ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಯಿತು. ಸುನಿಲ್ ಗವಾಸ್ಕರ್ ಅವರನ್ನು ಪಕ್ಷಪಾತಿ, ಕಪಟಿ ಎಂದು ಜರಿದಿದ್ದಾರೆ.
"ಸುನಿಲ್ ಗವಾಸ್ಕರ್ ಅವರಂತಹ ಕಾಮೆಂಟೇಟರ್‌ಗಳು ಅಭಿಮಾನಿಗಳು ಮತ್ತು ಆಟಗಾರರ ನಡುವೆ ವ್ಯತ್ಯಾಸವನ್ನು ಸೃಷ್ಟಿಸುತ್ತಾರೆ" ಎಂದು ಒಬ್ಬ ಬಳಕೆದಾರರು ಗವಾಸ್ಕರ್ ಅವರ ಅಭಿಪ್ರಾಯವನ್ನು ಟೀಕಿಸಿದರು.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications