Get Updates
Get notified of breaking news, exclusive insights, and must-see stories!

Vinesh Phogat: ವಿನೇಶ್ ಫೋಗಟ್‌ಗೆ ಪದಕ ಕೈ ತಪ್ಪಲು 100 ಗ್ರಾಂ ತೂಕ ಕಾರಣ! ಏನಿದು ನಿಯಮ?

ವಿನೇಶ್ ಫೋಗಟ್ ಮಾತ್ರವಲ್ಲ ಇಡೀ ಭಾರತೀಯರ ಒಲಿಂಪಿಕ್ಸ್ ಆಸೆಗೆ ಕೊಳ್ಳಿಯಿಟ್ಟಿದ್ದು ಬರೀ 100 ಗ್ರಾಂ ತೂಕ. ವಿನೇಶ್ ಫೋಗಟ್‌ ಮಿತಿಗಿಂತ ಸುಮಾರು 100 ಗ್ರಾಂ ತೂಕ ಹೆಚ್ಚಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಒಲಿಂಪಿಕ್ ಫೈನಲ್‌ ಪಂದ್ಯದಿಂದ ಅನರ್ಹಗೊಳಿಸಲಾಗಿದೆ. ಇದರಿಂದ ವಿನೇಶ್ ಫೋಗಟ್ ಚಿನ್ನದ ಪದಕ ಗೆದ್ದು ಬರಲಿ ಎಂದು ಹಾರೈಸಿದ್ದ ಕೋಟ್ಯಂತರ ಮಂದಿಗೂ ಈ ಕೆಟ್ಟ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ 50 ಕೆಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದರು. ಹಾಲಿ ವಿಶ್ವಚಾಂಪಿಯನ್ ಜಪಾನ್‌ನ ಯುಯಿ ಸುಸಾಕಿಯನ್ನು ಸೋಲಿಸಿದ್ದ ವಿನೇಶ್ ಫೋಗಟ್‌, ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದರು. ಬಳಿಕ ಎಂಟನೇ ಶ್ರೇಯಾಂಕದ ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಸೆಮಿಫೈನಲ್‌ನಲ್ಲಿ ರೋಚಕವಾಗಿ ಕಾದಾಡಿದ್ದ ವಿನೇಶ್ ಫೋಗಟ್‌ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು ಸೋಲಿಸಿ ಫೈನಲ್ ತಲುಪಿದ್ದರು. ಫೈನಲ್‌ನಲ್ಲಿ ಯುಎಸ್‌ಎಯ ಆನ್ ಸಾರಾ ಹಿಲ್ಡೆಬ್ರೆಂಟ್ ವಿರುದ್ಧ ಸೆಣೆಸಬೇಕಿತ್ತು.

Exploring Olympic Wrestling Weigh-Ins The Case of Vinesh Phogat

ಒಲಿಂಪಿಕ್ಸ್ ಇತಿಹಾಸದಲ್ಲಿ ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿ ಮೊದಲ ಮಹಿಳಾ ಕುಸ್ತಿಪಟುವಾಗಿದ್ದರು. ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿತ್ತು, ಆದರೂ ಭಾರತದ ಹೆಮ್ಮೆಯ ಮಗಳು, ಚಿನ್ನದ ಪದಕ ಗೆದ್ದು ಬರಲಿ ಎಂದು ಕೋಟ್ಯಂತರ ಮಂದಿ ಹಾರೈಸಿದ್ದರು. ಈಗ ಕೋಟ್ಯಂತರ ಮಂದಿಯ ನಿರೀಕ್ಷೆಗಳಿಗೆ ಸಿಡಿಲು ಬಡಿದಂತಾಗಿದೆ.

ಒಲಿಂಪಿಕ್ ನಿಯಮ ಹೇಳುವುದೇನು?

ಒಲಿಂಪಿಕ್ ನಿಯಮಗಳ ಪ್ರಕಾರ, ಸ್ಪರ್ಧೆಯಲ್ಲಿ ಭಾಗವಹಿಸು ಎಲ್ಲಾ ಬಾಕ್ಸರ್ ಮತ್ತು ಕುಸ್ತಿಪಟುಗಳಿಗೆ ವೈದ್ಯಕೀಯ ಪರೀಕ್ಷೆ ಕಡ್ಡಾಯವಾಗಿರುತ್ತದೆ. ಸ್ಪರ್ಧೆ ಇರುವ ಪ್ರತಿ ದಿನ ಅವರಿಗೆ ತೂಕದ ಪರೀಕ್ಷೆ ಮಾಡಲಾಗುತ್ತದೆ. ಬಳಿಕ, ಸ್ಪರ್ಧಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ನ್ಯಾಯಯುತ ಸ್ಪರ್ಧೆ ಮತ್ತು ಕ್ರೀಡಾಪಟುಗಳ ಯೋಗಕ್ಷೇಮವನ್ನು ನೋಡಿಕೊಳ್ಳಲು ಈ ಕಠಿಣ ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ.

ಮಂಗಳವಾರ ಮೂರು ಪಂದ್ಯಗಳನ್ನು ಗೆದ್ದಿದ್ದ ವಿನೇಶ್ ಫೋಗಟ್‌ ನಿಯಮಕ್ಕೆ ತಕ್ಕಹಾಗೆ ತೂಕವನ್ನು ಹೊಂದಿದ್ದರು. ಆದರೆ ಬುಧವಾರ ಫೈನಲ್ ಪಂದ್ಯ ಇದ್ದ ಕಾರಣ ಮತ್ತೆ ತೂಕ ಪರೀಕ್ಷೆಗೆ ಒಳಗಾದಾಗ ಅವರ ತೂಕ ನಿಯಮಕ್ಕಿಂತ 100 ಗ್ರಾಂ ಹೆಚ್ಚಾಗಿತ್ತು. ಇದರಿಂದಲೇ ಅವರು ಫೈನಲ್‌ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡಿದ್ದಲ್ಲದೆ, ಒಲಿಂಪಿಕ್ಸ್‌ನಿಂದಲೇ ಹೊರಬಿದ್ದಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದ ವಿನೇಶ್ ಫೋಗಟ್‌ ಈ ಬಾರಿ ಒಲಿಂಪಿಕ್‌ನಲ್ಲಿ 50 ಕೆಜಿ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದರು. ಕಳೆದ ವರ್ಷ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ, ಕಠಿಣ ಪರಿಶ್ರಮದ ಮೂಲಕ ತೂಕ ಕಡಿಮೆ ಮಾಡಿಕೊಂಡಿದ್ದರು.

ನಿಯಮಗಳ ಪ್ರಕಾರ ಸ್ಪರ್ಧೆ ಮಾಡುವ ದಿನ ನಿಗದಿಪಡಿಸಿದ ತೂಕ ಹೊಂದಿರಲೇಬೇಕು. ಇದು ವಿನೇಶ್ ಅವರಿಗೆ ಹಿನ್ನಡೆಯಾಗಲು ಪ್ರಮುಖ ಕಾರಣ. ಅವರು ಅನರ್ಹಗೊಂಡ ಕಾರಣ ಈಗ ಬೆಳ್ಳಿ ಪದಕ ಯಾರಿಗೂ ಸಿಗುವುದಿಲ್ಲ, ಫೈನಲ್ ಪ್ರವೇಶಿಸಿದ್ದ ಆನ್ ಸಾರಾ ಹಿಲ್ಡೆಬ್ರೆಂಟ್ ಅವರಿಗೆ ಚಿನ್ನದ ಪದಕ ಸಿಗಲಿದ್ದು, ಕಂಚಿನ ಪದಕಕ್ಕಾಗಿ ಪಂದ್ಯ ನಡೆಯಲಿದೆ.

ವಿನೇಶ್ ಮಂಗಳವಾರ ಇಡೀ ರಾತ್ರಿ ತೂಕವನ್ನು ಕಾಪಾಡಿಕೊಳ್ಳಲು ಕಸರತ್ತು ಮಾಡಿದ್ದರು. ಎಲ್ಲಾ ಪ್ರಯತ್ನಗಳ ಬಳಿಕವೂ ಅವರು ಅರ್ಹತೆ ಪಡೆಯಲು ಆಗಲಿಲ್ಲ. ವಿನೇಶ್ ಅಥವಾ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+